ಕೇವಲ 1,000ರೂ. ಒಳಗೆ ಲಭ್ಯವಿರುವ ಬೆಸ್ಟ್‌ ಇಯರ್‌ಫೋನ್‌ಗಳು!

|

ಸ್ಮಾರ್ಟ್‌ಫೋನ್‌ನಲ್ಲಿ ಮ್ಯೂಸಿಕ್ ಕೇಳುವುದು ಎಂದರೇ ಎಲ್ಲರಿಗೂ ಇಷ್ಟ. ಅದರಲ್ಲಿಯೂ ಇಯರ್‌ಫೋನ್‌ ಧರಿಸಿಕೊಂಡು ನೆಚ್ಚಿನ ಹಾಡುಗಳನ್ನು ಗುನುಗುವುದು ಮತ್ತಷ್ಟು ಖುಷಿ ನೀಡುತ್ತದೆ. ಅದಕ್ಕಾಗಿ ಸ್ಮಾರ್ಟ್‌ಫೋನ್‌ ಜೊತೆಗೆ ಒಂದು ಇಯರ್‌ಫೋನ್‌ ಇರಲಿ ಎಂದು ಬಯಸುತ್ತಾರೆ. ಸಾಮಾನ್ಯವಾಗಿ ಬಜೆಟ್‌ ಬೆಲೆಯಲ್ಲಿ ಲಭ್ಯವಾಗುವ ಇಯರ್‌ಫೋನ್‌ಗಳಿಗೆನೇ ಅತೀ ಹೆಚ್ಚಿನ ಬೇಡಿಕೆ ಇರುತ್ತದೆ.

ಇಯರ್‌ಫೋನ್‌ಗಳು

ಹೌದು, ಸದ್ಯ ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಯಿಂದ ದುಬಾರಿ ಬೆಲೆಯವರೆಗೂ ಅನೇಕ ತರಹೇವಾರಿ ಇಯರ್‌ಫೋನ್‌ಗಳು ಸಿಗುತ್ತವೆ. ಅವುಗಳಲ್ಲಿ ಬ್ರ್ಯಾಂಡೆಡ್‌ ಕಂಪನಿಯಗಳ ಇಯರ್‌ಫೋನ್‌ಗಳು ಸಹ ಸೇರಿವೆ. ಕೇವಲ ಒಂದು ಸಾವಿರ ರೂಪಾಯಿ ಒಳಗೂ ಅತ್ಯುತ್ತಮ ಇಯರ್‌ಫೋನ್‌ ಸಿಗುತ್ತವೆ. ಆದರೆ ಖರೀದಿಸುವ ಗ್ರಾಹಕರು ಮಾತ್ರ ಬೆಲೆಯ ಜೊತೆಗೆ ಗುಣಮಟ್ಟಕ್ಕೂ ಆದ್ಯತೆ ನೀಡುವುದಂತು ಸುಳ್ಳಲ್ಲ. ಹಾಗಾದರೇ 1000ರೂ ಪ್ರೈಸ್‌ಟ್ಯಾಗ್‌ ರೇಂಜ್‌ನಲ್ಲಿರುವ 5 ಬೆಸ್ಟ್‌ ಇಯರ್‌ಫೋನ್‌ಗಳು ಯಾವುವು ಎಂಬುದನ್ನು ನೋಡೋಣ ಬನ್ನಿರಿ.

ಒನ್‌ಮೋರ್‌ ಪಿಸ್ಟನ್ ಫಿಟ್ (1More Piston Fit)

ಒನ್‌ಮೋರ್‌ ಪಿಸ್ಟನ್ ಫಿಟ್ (1More Piston Fit)

ಒನ್‌ಮೋರ್‌ ಕಂಪನಿಯ ಈ ಪಿಸ್ಟನ್ ಫಿಟ್‌ ಇಯರ್‌ಫೋನ್ ಅತ್ಯುತ್ತಮವಾಗಿದ್ದು, 45 ಡಿಗ್ರಿ ಆಕಾರದಲ್ಲಿ ಕಿವಿಯ ಬಡ್ಸ್‌ ಗ್ರೀಮ್ ಪಡೆದಿದೆ. ಅಲ್ಯೂಮಿನಿಯಮ್ ಅಲೋಯ್ ಚೇಂಬರ್‌ ರಚನೆಯೊಂದಿಗೆ ಮೆಟಲ್ ಡಯಾಫ್ರಾಮ್ ಹೊಂದಿದೆ. ಹಾಗೆಯೇ ಆಡಿಯೊ ಕಂಟ್ರೋಲ್‌ಗಾಗಿ 'ಸ್ಮಾರ್ಟ್‌ ಬರ್ನ್ ಇನ್' ಆಪ್‌ ಸಹ ಒಳಗೊಂಡಿದ್ದು, ಮಾರುಕಟ್ಟೆಯಲ್ಲಿ ಇದರ ಬೆಲೆಯು 699ರೂ.ಗಳಾಗಿವೆ.

ಸೋನಿ MDR AS210AP

ಸೋನಿ MDR AS210AP

ಸೋನಿಯು ಸಹ ಅಗ್ಗದ ಬೆಲೆಯಲ್ಲಿ ಈ ಇಯರ್‌ಫೋನ್‌ ಹೊಂದಿದ್ದು, ಕಿವಿ ಧರಿಸಿದಾಗ ಕಂಫರ್ಟ್‌ ಗ್ರೀಪ್ ಕೂಡುವ ರಚನೆಯನ್ನು ಪಡೆದಿದೆ. ಫಿಜಿಕಲ್ ಆಕ್ಟಿವಿಟಿ ಮಾಡುವಾಗ ಕಿವಿಯಿಂದ ಜಾರುವುದಿಲ್ಲ. 13.5mm ಆಡಿಯೋ ಡ್ರೈವರ್‌ಗಳ ಬೆಂಬಲವನ್ನು ಹೊಂದಿದ್ದು, ಅತ್ಯುತ್ತಮ ಸೌಂಡ್‌ ಹೊರಹಾಕಲಿದೆ. ಸ್ಮಾರ್ಟ್‌ ಕೀ ಮೂಲಕ ನಿಯಂತ್ರಿಸಬಹುದಾಗಿದೆ. ಬೆಲೆಯು 999ರೂ.ಗಳು ಆಗಿದೆ.

ಜೆಬಿಎಲ್‌(JBL T210)

ಜೆಬಿಎಲ್‌(JBL T210)

ಜನಪ್ರಿಯ ಆಡಿಯೊ ಕಂಪನಿಯ ಜೆಬಿಎಲ್‌ನ ಈ ಇಯರ್‌ಫೋನ್ 8.7mm ಆಡಿಯೋ ಡ್ರೈವರ್‌ ಸಾಮರ್ಥ್ಯವನ್ನು ಪಡೆದಿದ್ದು, Neodymium ಮ್ಯಾಗ್ನೆಟ್‌ ಬೆಂಬಲದೊಂದಿಗೆ ಸೌಂಡ್‌ ಉತ್ತಮಗೊಳಿಸುತ್ತದೆ. ಫ್ಲಾಟ್‌ ಮಾದರಿಯ ಕೇಬಲ ರಚನೆಯನ್ನು ಈ ಇಯರ್‌ಫೋನ್ ಹೊಂದಿದ್ದು, ಧರಿಸಲು ಕಂಫರ್ಟ್‌ ಎನಿಸಲಿದೆ. ಮಾರುಕಟ್ಟೆಯಲ್ಲಿ ಇದರ ಬೆಲೆಯು 899ರೂ.ಗಳಾಗಿದೆ.

ರಿಯಲ್‌ ಮಿ ಬಡ್ಸ್‌ 2

ರಿಯಲ್‌ ಮಿ ಬಡ್ಸ್‌ 2

ಚೀನಾ ಮೂಲದ 'ರಿಯಲ್‌ ಮಿ' ಕಂಪನಿಯ ರಿಯಲ್‌ ಮಿ ಬಡ್ಸ್‌ 2 ಇಯರ್‌ಫೋನ್‌ಗಳು ಹಗುರವಾದ ರಚನೆಯನ್ನು ಪಡೆದಿದ್ದು, ಅತ್ಯುತ್ತಮ ಹಿತಕರ ಸೌಂಡ್‌ ಹೊಎಸೂಸಲಿವೆ. ಇನ್‌ಬಿಲ್ಟ್‌ ಮೈಕ್ರೋಫೋನ್‌ ಒಳಗೊಂಡಿದ್ದು, ಆಡಿಯೊ ಡ್ರೈವರ್ಸ್‌ಗಳು ಸಹ ಉತ್ತಮ ಬೆಂಬಲ ನೀಡಲಿವೆ. ಮಾರುಕಟ್ಟೆಯಲ್ಲಿ ಈ ಇಯರ್‌ಫೋನ್ ಬೆಲೆಯು 599ರೂ.ಗಳು ಆಗಿದೆ.

ಸೋನಿ MDR EX155

ಸೋನಿ MDR EX155

ಸೋನಿಯು ಈ ಇಯರ್‌ಫೋನ್‌ 9mm ಆಡಿಯೋ ಡ್ರೈವರ್ಸ್‌ಗಳನ್ನು ಹೊಂದಿದ್ದು, ಬೆಸ್ಟ್‌ ಇನ್‌ ಕ್ಲಾಸ್‌ ಸೌಂಡ್‌ ಔಟ್‌ಪುಟ್‌ ನೀಡಲಿವೆ. ಕಂಫರ್ಟ್‌ ಗ್ರೀಪ್ ರಚನೆಯನ್ನು ಪಡೆದಿದ್ದು, ಸೌಂಡ್‌ ಉತ್ತಮಗೊಳಿಸಲು Neodymium ಹೊಂದಿದೆ. ಇದರೊಂದಿಗೆ ನಾಲ್ಕು ವಿಭಿನ್ನ ಗಾತ್ರದ ಟಿಪ್ಸ್‌ಗಳ ಆಯ್ಕೆಯನ್ನು ನೀಡಲಿದೆ. ಆನ್‌ಲೈನ್‌ ಮಾರುಕಟ್ಟೆಯಲ್ಲಿ ಈ ಡಿವೈಸ್‌ ಬೆಲೆಯು 899 ರೂ.ಗಳು ಆಗಿದೆ.

ಓದಿರಿ : ಏರ್‌ಟೆಲ್‌ನ ಈ ಹೊಸ ಸೆಟ್‌ಅಪ್‌ ಬಾಕ್ಸ್‌ ಬಗ್ಗೆ ತಿಳಿದ್ರೆ, 'ಜಿಯೋ' ಬೇಡ ಅಂತಿರಿ!ಓದಿರಿ : ಏರ್‌ಟೆಲ್‌ನ ಈ ಹೊಸ ಸೆಟ್‌ಅಪ್‌ ಬಾಕ್ಸ್‌ ಬಗ್ಗೆ ತಿಳಿದ್ರೆ, 'ಜಿಯೋ' ಬೇಡ ಅಂತಿರಿ!

Best Mobiles in India

English summary
Most buyers are only looking for a decent pair in an already-crowded mobile-accessory market. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X