ಸ್ಮಾರ್ಟ್‌ಫೋನ್‌ ಚಾರ್ಜ್ ಮಾಡಲು ನೀರು/ಬೆಂಕಿ ಸಾಕು

By Suneel
|

ದಿನದಿಂದ ದಿನಕ್ಕೆ ಟ್ರೆಂಡ್ ಅನ್ನೋದು ಎಷ್ಟು ವೇಗವಾಗಿ ಬದಲಾಗುತ್ತಿದೆಯೋ ಅದಕ್ಕಿಂತಲೂ ವೇಗವಾಗಿ ತಂತ್ರಜ್ಞಾನ ಅಭಿವೃದ್ದಿ ಹೊಂದುತ್ತಿದೆ. ಅಂದಹಾಗೆ ವಾಸ್ತವ ಅಂದ್ರೆ ಇಂದಿನ ಸ್ಮಾರ್ಟ್‌ಫೋನ್‌, ಐಫೋನ್ ಪ್ರಿಯರು ತಮ್ಮ ಮಧ್ಯಾಹ್ನದ ಊಟದ ಬಾಕ್ಸ್‌ ಮರೆತು ಹೋದ್ರೆ ಖಂಡಿತ ವಾಪಸ್ಸು ಬರೋಲ್ಲ. ಆದ್ರೆ ಅದೇ ಮೊಬೈಲ್‌ಗಳನ್ನ ಮರೆತು ಹೋದ್ರೆ ವಾಪಸ್ಸು ಬಂದು ತೆಗೆದುಹೋಗುತ್ತಾರೆ. ಸ್ಮಾರ್ಟ್‌ಫೋನ್‌ ಎಷ್ಟು ಮುಖ್ಯವೋ ಅಷ್ಡೇ ಮುಖ್ಯವಾದದು ಸ್ಮಾರ್ಟ್‌ಫೋನ್‌ಗೆ ಬ್ಯಾಟರಿ. ಇದನ್ನ ಯಾರು ಮರೆಯೋ ಹಾಗಿಲ್ಲ.

ಪ್ರವಾಸಕ್ಕೆ ಹೋಗಿ ಯಾವುದೋ ದೂರದ ಪ್ರದೇಶದಲ್ಲಿದ್ದೀರಿ, ಅಥವಾ ಅಮೆಜಾನ್‌ ಕಾಡಿನ ಮಧ್ಯದಲ್ಲೇ ಇದ್ದೀರಿ ಎಂದುಕೊಳ್ಳಿ. ಅಂತಹ ಪ್ರದೇಶದಲ್ಲಿ ಮೊಬೈಲ್‌ಗಳನ್ನ ಚಾರ್ಜ್‌ ಮಾಡುವುದಾದರೂ ಹೇಗೆ? ಇಂತಹ ಅನಿವಾರ್ಯ ಸಂಗತಿಗಳಲ್ಲಿ ಮೊಬೈಲ್‌ ಚಾರ್ಜ್‌ ಮಾಡಲು ವಿದ್ಯುತ್‌ ಇಲ್ಲದಿದ್ದರೂ ಪರವಾಗಿಲ್ಲ. ಆದರೆ ಮೂಲಭೂತ ವಸ್ತುಗಳಲ್ಲಿ ನೀರು ಮತ್ತು ಬೆಂಕಿ ಎರಡಿದ್ದರೇ ಸಾಕು ನಿಮ್ಮ ಮೊಬೈಲ್‌ ಅನ್ನು ಸುಲಭವಾಗಿ ಚಾರ್ಜ್‌ ಮಾಡಬಹುದಾಗಿದೆ. ಅದು ಹೇಗೆ ಎಂದು ತಿಳಿಯಲು ಲೇಖನದ ಸ್ಲೈಡರ್‌ ಓದಿ ತಿಳಿಯಿರಿ.

'ಮೆದುಳಿಗೆ ಜ್ಞಾನ ಅಪ್‌ಲೋಡ್‌' ಮಾಡುವುದನ್ನು ಕಂಡುಹಿಡಿದ ವಿಜ್ಞಾನಿಗಳು

1

1

ಅಂದಹಾಗೆ ಸ್ಮಾರ್ಟ್‌ಫೋನ್ ಅನ್ನು ಯಾವುದೇ ಕಾಡಿನ ಮಧ್ಯದಲ್ಲಿ ಇದ್ದರೂ ಸಹ ಚಾರ್ಜ್ ಮಾಡಬೇಕು ಎಂದರೆ ಕೇವಲ ನೀರು ಮತ್ತು ಬೆಂಕಿ ಸಾಕು. ಆದರೆ ಚಾರ್ಜ್ ಮಾಡಲು "ಫ್ಲೇಮ್‌ಸ್ಟೊವರ್‌ (FlameStower)" ಎಂಬ ಗ್ಯಾಜೆಟ್‌ ಅವಶ್ಯಕವಾಗಿದೆ. ಕಾಂಪ್ಯಾಕ್ಟ್ ಯುಎಸ್‌ಬಿ ಚಾರ್ಜರ್‌ ಸ್ಮಾರ್ಟ್‌ಫೋನ್‌ ಚಾರ್ಜ್‌ ಮಾಡಲು ಕೇವಲ ಬೆಂಕಿ ಮತ್ತು ನೀರನ್ನು ಬಳಸಿಕೊಳ್ಳುತ್ತದೆ.
ಚಿತ್ರ ಕೃಪೆ: Techbang

2

2

10 oz ಫ್ಲೇಮ್‌ಸ್ಟೊವರ್‌ (FlameStower) ಒಂದು ಚಾಚಿಕೊಂಡಿರುವ ಬ್ಲೇಡ್‌ ಹೊಂದಿದ್ದು ಅದಕ್ಕೆ ಬೆಂಕಿ ನೀಡಿದಾದ ಉಷ್ಣ ಶಕ್ತಿಯನ್ನು ಹೀರಿಕೊಳ್ಳಬಲ್ಲದು. 140 ml ನೀರನ್ನು ಹಿಡಿದಿಟ್ಟುಕೊಳ್ಳುವ ಒಂದು ಸಣ್ಣ ಬಟ್ಟಲು ಉಷ್ಣ ಶಕ್ತಿಯನ್ನು ಹೀರುತ್ತದೆ. ಅದು ಇಲೆಕ್ಟ್ರಿಕ್‌ ಜೆನೆರೇಟರ್ಗೆ ಕೂಲ್‌ ಆಗಿ ಪರಿವರ್ತನೆ ಹೊಂದಿ ಚಾರ್ಜ್‌ ಮಾಡಲು ಅನುಕೂಲವಾಗುತ್ತದೆ.
ಚಿತ್ರ ಕೃಪೆ: Techchee

3

3

ಅಂದಹಾಗೆ ಫ್ಲೇಮ್‌ಸ್ಟೊವರ್‌ಗೆ ಯುಎಸ್‌ಬಿ ಕೇಬಲ್‌ ಅನ್ನು ಚಾರ್ಜ್ ಮಾಡಲು ಕನೆಕ್ಟ್‌ ಮಾಡಲಾಗಿರುತ್ತದೆ. ಫ್ಲೇಮ್‌ಸ್ಟೊವರ್ ಕೈಯಲ್ಲಿ ಹಿಡಿದು ಸುಲಭವಾಗಿ ತೆಗೆದುಹೋಗಬಹುದಾದ ಸ್ಮಾರ್ಟ್‌ ಗ್ಯಾಜೆಟ್‌ ಆಗಿದೆ. ಅಲ್ಲದೇ ಕ್ಯಾಂಪ್‌ನಲ್ಲಿ ಬೆಂಕಿ ಹಚ್ಚಿದಾಗಲು ಇದರಿಂದ ಮೊಬೈಲ್‌ ಚಾರ್ಜ್ ಮಾಡಬಹುದಾಗಿದೆ.
ಚಿತ್ರ ಕೃಪೆ:Nashvillepublicmedia

4

4

ವಿಶೇಷ ಅಂದ್ರೆ ಫ್ಲೇಮ್‌ಸ್ಟೊವರ್‌ ಯಾವುದೇ ರೀತಿಯ ಬೆಂಕಿಯಲ್ಲಿಯೂ ಸಹ ಕಾರ್ಯನಿರ್ವಹಿಸುತ್ತದೆ. ಅಡುಗೆ ಮಾಡುವ ಬೆಂಕಿ, ಕ್ಯಾಂಪ್‌ನಲ್ಲಿನ ಬೆಂಕಿ, ತುರ್ತುಪರಿಸ್ಥಿತಿಯ ಕ್ಯಾಂಡಲ್‌ಗಳು ಇತರೆ ಆಗಿರಬಹುದು. ಒಮ್ಮೆ ಬ್ಲೇಡ್‌ ಬೆಂಕಿಯಲ್ಲಿ ಇದ್ದರೆ ಅದರ ಉಷ್ಣ ಶಕ್ತಿಯನ್ನು ಉಷ್ಣವಿದ್ಯುತ್‌ ಜೆನೆರೇಟರ್‌ಗೆ ವರ್ಗಾವಣೆ ಮಾಡುತ್ತದೆ. ಬ್ಲೇಡ್‌ನ ವಿರುದ್ಧ ಮೇಲ್ಮೈನಲ್ಲಿನ ನೀರಿನ ಬಟ್ಟಲು ಸಂಪರ್ಕ ಹೊಂದಿರುತ್ತದೆ ಆದರೂ ಸಹ ಉಷ್ಣದ ಭಾಗ ಉಷ್ಣ ಹೊಂದಿರುತ್ತದೆ, ತಂಪಾದ ಭಾಗ ತಂಪಾಗಿಯೇ ಇರುತ್ತದೆ. ಈ ತಾಪಮಾನ ವ್ಯತ್ಯಾಸ ಇಲೆಕ್ಟ್ರಿಕ್‌ ಅನ್ನು ಉತ್ಪಾದಿಸುತ್ತದೆ.

5

5

ದೂರದ ಪ್ರದೇಶಗಳಿಗೆ, ಪ್ರವಾಸಕ್ಕಾಗಿ ಅರಣ್ಯಗಳಿಗೆ ಭೇಟಿ ನೀಡುವವರಿಗೆ, ವಿದ್ಯುತ್‌ ಇಲ್ಲದ ಸಂಧರ್ಭದಲ್ಲಿ ಮೊಬೈಲ್‌ ಚಾರ್ಜ್‌ ಮಾಡಲು 'ಫ್ಲೇಮ್‌ಸ್ಟೊವರ್' ಸ್ಮಾರ್ಟ್‌ ಗ್ಯಾಜೆಟ್‌ ಅಭಿವೃದ್ದಿಪಡಿಸಿರುವವರು, "ಫ್ಲೇಮ್‌ಸ್ಟೊವರ್‌ನಿಂದ 20 ನಿಮಿಷ ಚಾರ್ಜ್‌ ಮಾಡಿದರೆ 40 ನಿಮಿಷ ಮಾತನಾಡಬಹುದು ಎಂದು ಹೇಳಿದ್ದಾರೆ.
ಫ್ಲೇಮ್‌ಸ್ಟೊವರ್‌ ಅಮೆಜಾನ್‌ನಲ್ಲಿ ಮಾರಾಟಕ್ಕಿದ್ದು, ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
http://amzn.to/1UNyPGp

6

ಫ್ಲೇಮ್‌ಸ್ಟೊವರ್‌ ಬಳಕೆ ಹೇಗೆ ಎಂದು ವೀಡಿಯೋ ನೋಡಿ
ವೀಡಿಯೋ ಕೃಪೆ: Jonathan Morrison

Best Mobiles in India

English summary
FlameStower Gadgets Charges Your Smartphone With Fire And Water. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X