ಒಂದು ಕೀಟದಷ್ಟು ದಪ್ಪದ ರೋಬೊ ಮಾನವನನ್ನು ಹೊತ್ತು ಓಡುತ್ತದೆ!

|

ಮಾನವನ ರೀತಿ, ಪ್ರಾಣಿಗಳ ರೀತಿ ಮತ್ತು ದೊಡ್ಡ ಯಂತ್ರಗಳ ರೀತಿ ಸಾವಿರಾರು ಶಕ್ತಿಯುವ ರೋಬೊಗಳನ್ನು ತಯಾರಿಸಲಾಗಿದೆ. ಆದರೆ, ಇದೇ ಮೊದಲು ಬಾರಿಗೆ ಕೀಟದ ಗಾತ್ರದ ಹೊಸ ಶಕ್ತಿಯುತ ರೋಬೊವೊಂದನ್ನು ವಿಜ್ಞಾನಿಗಳು ಅಭಿವೃದ್ಧಿ‍ಪಡಿಸಿದ್ದಾರೆ. ಇದು ಸಣ್ಣ ಜಿರಳೆಯಷ್ಟೇ ವೇಗವಾಗಿ ನೆಲದ ಮೇಲೆ ಸಂಚರಿಸಬಲ್ಲದು. ಅದೂ ಕೂಡ ಮಾನವನಷ್ಟು ತೂಕವನ್ನು ಹೊತ್ತು.!

ಒಂದು ಕೀಟದಷ್ಟು ದಪ್ಪದ ರೋಬೊ ಮಾನವನನ್ನು ಹೊತ್ತು ಓಡುತ್ತದೆ!

ಹೌದು, ನೀವು ಕೇಳಿದ್ದು ನಿಜ. ಸಾಮಾನ್ಯವಾಗಿ ಈ ರೀತಿ ಸಣ್ಣ ಗಾತ್ರದ ಇತರೆ ರೋಬೊಗಳು ಹೆಚ್ಚು ಸೂಕ್ಷ್ಮವಾಗಿರುತ್ತವೆ. ಅವುಗಳ ಮೇಲೆ ಕಾಲಿರಿಸಿದರೆ ಬಹುತೇಕ ಅವು ಹಾಳಾದಂತೆಯೇ. ಆದರೆ, ಕೀಟದ ಗಾತ್ರದ ಈ ರೋಬೊ ಮಾನವನ ತೂಕವನ್ನು ಹೊತ್ತು ಸಣ್ಣ ಜಿರಳೆಯಷ್ಟೇ ವೇಗವಾಗಿ ನೆಲದ ಮೇಲೆ ಸಂಚರಿಸಬಲ್ಲ ಶಕ್ತಿಯನ್ನು ಹೊಂದಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಓದಿರಿ: ಬೆಂಗಳೂರಿನಲ್ಲಿ ಓದುತ್ತಿರುವ 'ಪ್ರತೀಕ್' ಸಾಧನೆಗೆ ತಲೆಬಾಗಿತು ಮೈಕ್ರೋಸಾಫ್ಟ್!

ನಾವು ಅಭಿವೃದ್ಧಿಪಡಿಸಿರುವ ರೋಬೊ ಅತ್ಯಂತ ಸದೃಢವಾಗಿದ್ದು, ಹೆಚ್ಚು ತೂಕ ಹಾಕಿದರೂ ಸರಿಯಾಗಿ ಕಾರ್ಯನಿರ್ವಹಿಸಲು ಸಮರ್ಥವಾಗಿದೆ. ನೋಡಲು ತುಂಬಾ ಸರಳವಾಗಿ ಕಾಣಿಸಿದರೂ ಸಹ ಇದು ಹಲವು ಗಮನಾರ್ಹ ಕಾರ್ಯಕ್ಷಮತೆಯನ್ನು ಹೊಂದಿದೆ ಎಂದು ಅಮೆರಿಕದ ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಲಿವೈ ಲಿನ್ ಅವರು ತಿಳಿಸಿದ್ದಾರೆ.

ಒಂದು ಕೀಟದಷ್ಟು ದಪ್ಪದ ರೋಬೊ ಮಾನವನನ್ನು ಹೊತ್ತು ಓಡುತ್ತದೆ!

ಈ ರೋಬೊ ಅನ್ನು ತೆಳುವಾದ ವೈರ್‌ಗೆ ಸುತ್ತಲಾಗಿದ್ದು, ಚಾಲನೆಗೆ ಎಲೆಕ್ಟ್ರಿಕ್ ವೋಲ್ಟೆಜ್ ಒದಗಿಸಲಾಗಿದೆ. ವೈರ್‌ ಬದಲಿಗೆ ಬ್ಯಾಟರಿ ಅಳವಡಿಸಲು ಪ್ರಯೋಗ ನಡೆಸಿ ರೋಬೊ ಸ್ವತಂತ್ರವಾಗಿ ಚಲಿಸುವಂತೆ ಮಾಡಲಾಗುತ್ತದೆ. ಎಲ್ಲಾ ಅಡೆತಡೆಗಳನ್ನು ಎದುರಿಸಿ ಮುಂದೆ ಸಂಚರಿಸುವ ರೀತಿ ಇದರ ವಿನ್ಯಾಸವನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಓದಿರಿ: ವಿಶ್ವವೇ ಎದುರುನೋಡುತ್ತಿರುವ 'ಗ್ಯಾಲಕ್ಸಿ ಫೋಲ್ಡ್' ಬಿಡುಗಡೆ ಸಮಯ ಫಿಕ್ಸ್!

ಮನುಷ್ಯರು ಹಾಗೂ ಶ್ವಾನಗಳು ಸಹ ಪ್ರವೇಶಿಸಲು ಸಾಧ್ಯವಾಗದಂತಹ ಇಕ್ಕಟ್ಟಾದ ಸ್ಥಳಗಳಲ್ಲಿ ಅಥವಾ ಅಪಾಯಕಾರಿ ಪ್ರದೇಶಗಳಲ್ಲಿ ಈ ರೋಬೊ ಬಳಕೆ ಸಾಧ್ಯವಿದೆ. ಭೂಕಂಪ ಸೇರಿದಂತೆ ಹಲವು ಪ್ರಕೃತಿ ವಿಕೋಪಗಳ ಸಮಯದಲ್ಲಿ ಸೂಕ್ಮ ಬಳಕೆಗೆ ರೋಬೊ ಬಳಕೆಯಾಬಹುದು. ಏಕೆಂದರೆ, ಅವಶೇಷಗಳ ಅಡಿಯಲ್ಲಿಗೆ ಪ್ರವೇಶಿಸಬಲ್ಲ ಸಾಮರ್ಥ್ಯವನ್ನು ಈ ರೋಬೊ ಹೊಂದಿದೆ.

Best Mobiles in India

English summary
Using remote-control technology, we would restrict the movement of the robots (biobots) to a defined area. That area would be defined by proximity to a beacon on a UAV. For example, the robots may be prevented from going more than 20 meters from the UAV.” to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X