ಬೆಲೆ ಸಮರ LED TV ಬೆಲೆಯಲ್ಲಿ ಭಾರಿ ಇಳಿಕೆ: TV ಕೊಳ್ಳಲು ಇದು ಸರಿಯಾದ ಸಮಯ

ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ನಡೆಯುತ್ತಿರುವಂತೆ LED TVಗಳ ತಯಾರಿಕರ ನಡುವೆಯೂ ಸ್ಪರ್ಧೆ ಆರಂಭವಾಗಿದ್ದು, TV ಗಳ ಬೆಲೆಯಲ್ಲಿ ಸಾಕಷ್ಟು ಕಡಿಮೆಯಾಗಿದೆ.

|

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ಗಳ ಅಬ್ಬರವೂ ಜೋರಾಗಿದೆ. ಒಂದು ಕಾಲದಲ್ಲಿ LED ಮತ್ತು LCD TVಗಳು ಇದೇ ಮಾದರಿಯಲ್ಲಿ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡಿ, ತಣ್ಣಗಾಗಿದ್ದವು. ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ನಡೆಯುತ್ತಿರುವಂತೆ LED TVಗಳ ತಯಾರಿಕರ ನಡುವೆಯೂ ಸ್ಪರ್ಧೆ ಆರಂಭವಾಗಿದ್ದು, TV ಗಳ ಬೆಲೆಯಲ್ಲಿ ಸಾಕಷ್ಟು ಕಡಿಮೆಯಾಗಿದೆ.

ಬೆಲೆ ಸಮರ LED TV ಬೆಲೆಯಲ್ಲಿ ಭಾರಿ ಇಳಿಕೆ: TV ಕೊಳ್ಳಲು ಇದು ಸರಿಯಾದ ಸಮಯ

ಓದಿರಿ: ಜಿಯೋ ಆಯ್ತು, ಈಗ ಏರ್‌ಟೆಲ್ ನಿಂದ 4G VoLTE: ಶುರುವಾಗಲಿದೆ ಉಚಿತ ಸೇವೆಗಳ ಸುರಿಮಳೆ..!

ಟಿವಿಗಳ ಬೆಲೆಯಲ್ಲಿ ಇಳಕೆ ಕಂಡು ಬಂದಿರುವುದರಿಂದ ಖರೀದಿಗೆ ಇದು ಹೇಳಿ ಮಾಡಿಸಿದ ಸಮಯ ಎನ್ನಲಾಗಿದೆ. LED TVಗಳ ತಯಾರಿಕೆಯಲ್ಲಿ ಮುಂಚುಣಿಯಲ್ಲಿರುವ LG, ಸ್ಯಾಮ್‌ಸಂಗ್ ಮತ್ತು ಸೋನಿ ಕಂಪನಿಗಳು ಶೇ.15 ರಷ್ಟು ಟಿವಿಗಳ ಬೆಲೆಯನ್ನು ಕಡಿಮೆ ಮಾಡಿವೆ ಎನ್ನಲಾಗಿದೆ.

ಇದಕ್ಕೆ ಕಾರಣ ಭಾರತೀಯ ಮಾರುಕಟ್ಟೆಗೆ ಕಾಲಿಟ್ಟಿರುವ ಸಣ್ಣ ತಯಾರಕರಾದ ಮೈಕ್ರೋಮಾಕ್ಸ್, ಇನ್‌ಟೆಕ್ಸ್, ಟಿಸಿಎಲ್, ಬಿಪಿಎಲ್ ಮತ್ತು ಸಾನ್‌ಸುಯ್ ಕಂಪನಿಗಳು LED TVಗಳನ್ನು ಕಡಿಮೆ ಬೆಲೆ ನೀಡುತ್ತಿದ್ದು, ಇದರಿಂದ ಇಂಟರ್‌ನ್ಯಾಷಿನಲ್ ಬ್ರಾಂಡ್‌ಗಳಾದ LG, ಸ್ಯಾಮ್‌ಸಂಗ್ ಮತ್ತು ಸೋನಿ ಕಂಪನಿಗಳು ತಮ್ಮ ಜನಪ್ರಿಯತೆಯನ್ನು ಕಳೆದುಕೊಂಡಿದ್ದವು, ಹಾಗಾಗಿ ತಮ್ಮ ಟಿವಿಗಳ ಬೆಲೆಯಲ್ಲಿ ಭಾರೀ ಕಡಿಮೆ ಮಾಡಿವೆ.

ಬೆಲೆ ಸಮರ LED TV ಬೆಲೆಯಲ್ಲಿ ಭಾರಿ ಇಳಿಕೆ: TV ಕೊಳ್ಳಲು ಇದು ಸರಿಯಾದ ಸಮಯ

ಓದಿರಿ: ಡ್ರೈವಿಂಗ್ ಲೈಸೆನ್ಸ್ ಮಾಡಿಸಲು ಲಂಚ ನೀಡಬೇಕಾಗಿಲ್ಲ: ಅದಕ್ಕಾಗಿ ಇಲ್ಲಿದೇ ಸುಲಭ ಉಪಾಯ..!!

ಮೈಕ್ರೋಮಾಕ್ಸ್, ಇನ್‌ಟೆಕ್ಸ್, ಟಿಸಿಎಲ್, ಬಿಪಿಎಲ್ ಮತ್ತು ಸಾನ್‌ಸುಯ್ ಕಂಪನಿಗಳು ಕಡಿಮೆ ಬೆಲೆಗೆ ಎಂದರೆ ರೂ.2.000 ದಿಂದ 10,000 ರೂ. ಒಳಗೆ LED TVಗಳನ್ನು ಮಾರಾಟ ಮಾಡುತ್ತಿವೆ. ಇದರಿಂದ ಹೆಚ್ಚಿನ ಬೆಲೆಯ LG, ಸ್ಯಾಮ್‌ಸಂಗ್ ಮತ್ತು ಸೋನಿ ಕಡೆಗೆ ಯಾರು ತಿರುಗಿ ನೋಡುತ್ತಿರಲಿಲ್ಲ. ಇದಕ್ಕಾಗಿ ಈ ಕಂಪನಿಗಳು ಗ್ರಾಹಕರನ್ನು ಸೆಳೆಯಲು ಬೆಲೆಗಳಲ್ಲಿ ಭಾರಿ ಇಳಿಕೆ ಮಾಡಿವೆ.

ಸದ್ಯ ಮಾರುಕಟ್ಟೆಯಲ್ಲಿ 32-42 ಇಂಚಿನ LED TVಗಳು ಹೆಚ್ಚಿನ ಬೇಡಿಕೆಯನ್ನು ಉಳಿಸಿಕೊಂಡಿವೆ. ಸುಮಾರು 25ಕ್ಕೂ ಹೆಚ್ಚಿನ ಬ್ರಾಂಡ್‌ಗಳು ಸದ್ಯ ಮಾರುಕಟ್ಟೆಯಲ್ಲಿ ಸ್ಪರ್ಧೆ ನಡೆಸುತ್ತಿದ್ದು, ದರ ಸಮರದಿಂದ ಗ್ರಾಹಕರಿಗೆ ಹೆಚ್ಚಿನ ಲಾಭವಾಗುತ್ತಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

Best Mobiles in India

Read more about:
English summary
Big brands like LG, Samsung and Sony reduce prices of LED television sets by 15 per cent to beat competition. to konw more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X