ಜಿಯೋ ಆಯ್ತು, ಈಗ ಏರ್‌ಟೆಲ್ ನಿಂದ 4G VoLTE: ಶುರುವಾಗಲಿದೆ ಉಚಿತ ಸೇವೆಗಳ ಸುರಿಮಳೆ..!

Written By:

ದೇಶದಲ್ಲಿ ಮೊದಲ ಬಾರಿಗೆ 4G VoLTE ಸೇವೆ ಆರಂಭಿಸಿದ ರಿಲಯನ್ಸ್ ಮಾಲೀಕತ್ವದ ಜಿಯೋ, ಭಾರತೀಯ ಟೆಲಿಕಾಮ್ ಇತಿಹಾಸದಲ್ಲೇ ಹೊಸದೊಂದು ಅಧ್ಯಾಯವನ್ನು ಆರಂಭಿಸಿತು. ಸದ್ಯ ಇದೇ ಹಾದಿಯಲ್ಲಿ ಸಾಗಲು ಮುಂದಾಗಿರುವ ಏರ್‌ಟೆಲ್ ಪ್ರಾಯೋಗಿಕ 4G VoLTE ಸೇವೆಯನ್ನು ಆರಂಭಿಸಲು ಮುಂದಾಗಿದೆ.

ಜಿಯೋ ಆಯ್ತು, ಈಗ ಏರ್‌ಟೆಲ್ ನಿಂದ 4G VoLTE: ಶುರುವಾಗಲಿದೆ ಉಚಿತ ಸೇವೆಗಳ ಸುರಿಮಳೆ

ಓದಿರಿ: ಡ್ರೈವಿಂಗ್ ಲೈಸೆನ್ಸ್ ಮಾಡಿಸಲು ಲಂಚ ನೀಡಬೇಕಾಗಿಲ್ಲ: ಅದಕ್ಕಾಗಿ ಇಲ್ಲಿದೇ ಸುಲಭ ಉಪಾಯ..!!

VoLTE ಎಂದರೆ ದೀರ್ಘಾವಧಿಯ ವಾಯ್ಸ್ ಓವರ್ ಇವಲ್ಯೂಶನ್ (Voice over Long-Term Evolution). ಅಂದರೆ ಧ್ವನಿಯನ್ನು ಡೇಟಾವನ್ನಾಗಿ ಪರಿವರ್ತಿಸಿ 4G ನೆಟ್‌ವರ್ಕ್ ಮೂಲಕ ಸಂಪರ್ಕಿಸುವ ತಂತ್ರಜ್ಞಾನವಾಗಿದೆ.

ಓದಿರಿ: 5,999 ರೂ. ಸ್ಮಾರ್ಟ್‌ಪೋನ್‌ ಖರೀದಿಸಿದರೆ 1 ವರ್ಷ ಅನ್‌ಲಿಮಿಟೆಡ್ ಉಚಿತ ಇಂಟರ್ನೆಟ್...!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜಿಯೋ 4G VoLTE:

ಜಿಯೋ 4G VoLTE:

ದೇಶದಲ್ಲಿ ಮೊದಲ ಬಾರಿಗೆ 4G VoLTE ಸೇವೆಯನ್ನು ಜಿಯೋ ಆರಂಭಿಸಿ ಜನರಿಗೆ ಉಚಿತ ಕರೆ ಮಾಡುವ ಸೇವೆಯನ್ನು ನೀಡಿತ್ತು, ಈಗ ಏರ್‌ಟೆಲ್ ಅದೇ ಹಾದಿಯಲ್ಲಿ ಸಾಗಿ ಕೇವಲ ಡೇಟಾಗೆ ಮಾತ್ರ ದುಡ್ಡು ನೀಡಿ ಉಚಿತ ಕರೆ ಮಾಡುವ ಸೇವೆಯನ್ನು ನೀಡಲಿದೆ.

 HD ವಾಯ್ಸ್ ಕಾಲಿಂಗ್

HD ವಾಯ್ಸ್ ಕಾಲಿಂಗ್

4G VoLTE ಸೇವೆ ಬಹುಮುಖ್ಯ ಅಂಶವೆಂದರೆ HD ವಿಡಿಯೋ ಕಾಲಿಂಗ್ ಮಾದರಿಯಲ್ಲಿ HD ವಾಯ್ಸ್ ಕಾಲಿಂಗ್. 3G ಮತ್ತು 2G ಸೇವೆಗಳಲ್ಲಿ ಸರಿಯಾಗಿ ವಾಯ್ಸ್ ಕೇಳುವುದಿಲ್ಲ ಆದರೆ, ಉತ್ತಮ ಗುಣಮಟ್ಟದ ನೆಟ್‌ವರ್ಕ್ ಇದ್ದ ಸಂದರ್ಭದಲ್ಲಿ 4G VoLTE ಅತ್ಯುತ್ತಮವಾಗಿ ಕೇಳಿಸಲಿದ್ದು, ಯಾವುದೇ ಅಡೆತಡೆಗಳು ಇರುವುದಿಲ್ಲ.

ಬ್ಯಾಟರಿ ಕಡಿಮೆ ಬಳಕೆ:

ಬ್ಯಾಟರಿ ಕಡಿಮೆ ಬಳಕೆ:

4G VoLTE ಸೇವೆಯಲ್ಲಿ ಸ್ಮಾರ್ಟ್‌ಫೋನಿನ ಬ್ಯಾಟರಿಯೂ ಉತ್ತಮ ಬ್ಯಾಕಪ್ ನೀಡಲಿದ್ದು, ಕರೆ ಮಾಡುವ ಸಂದರ್ಭದಲ್ಲಿ ಕಡಿಮೆ ಬ್ಯಾಟರಿ ಬಳಕೆ ಮಾಡಿಕೊಳ್ಳಲಿದೆ. 4G VoLTE ಸಪೋರ್ಟ್ ಸ್ಮಾರ್ಟ್‌ಫೋನಿನಿಂದ ಬೇರೆ 3G ಮತ್ತು 2G ಫೋನ್‌ಗಳಿಗೆ ಕರೆ ಮಾಡಿದರೆ ಕಿರಿ-ಕಿರಿ ಎನ್ನಿಸಬಹುದು ಆದರೆ ಅದೇ 4G VoLTEನಿಂದ 4G VoLTEಗೆ ಕರೆ ಮಾಡಿದರೆ ಉತ್ತಮವಾಗಿ ಧ್ವನಿಯನ್ನು ಕೇಳಬಹುದಾಗಿದೆ.

4G VoLTEನಿಂದ ಕರೆ:

4G VoLTEನಿಂದ ಕರೆ:

ಈ ತಂತ್ರಜ್ಞಾನದ ಸಹಾಯದಿಂದಲೇ ಜಿಯೋ ಲೈಫ್‌ಟೈಮ್ ಉಚಿತ ಕರೆ ಮಾಡುವ ಸೇವೆಯನ್ನು ತನ್ನ ಗ್ರಾಹಕರಿಗೆ ನೀಡಿದೆ. ಕಾರಣ ಈ ತಂತ್ರಜ್ಞಾನವನ್ನು ಬಳಸಿಕೊಂಡು ಕರೆ ಮಾಡಬೇಕಾದರೆ ಡೇಟಾ ಮಾತ್ರ ಬಳಕೆಯಾಗಲಿದ್ದು, ಇದರಿಂದ ಡೇಟಾಗೆ ದರ ವಿಧಿಸಿದರೆ ಕರೆಗಳಿಗೆ ದರ ವಿಧಿಸುವ ಅವಶ್ಯಕತೆ ಇರುವುದಿಲ್ಲ. ಆದರೆ ಡೇಟಾ ಸೇವೆ ಇಲ್ಲದೇ 4G VoLTEನಿಂದ ಕರೆ ಮಾಡಲು ತೊಂದರೆಯಾಗಲಿದೆ.

ಉಚಿತ ಸೇವೆಗಳ ಸುರಿಮಳೆ

ಉಚಿತ ಸೇವೆಗಳ ಸುರಿಮಳೆ

ಸದ್ಯ ಈ 4G VoLTE ತಂತ್ರಜ್ಞಾನವನ್ನು ಬಳಸಿಕೊಳ್ಳಲು ಮುಂದಾಗಿರುವ ಏರ್‌ಟೆಲ್ ಶೀಘ್ರವೇ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಸೃಷ್ಟಿಸಲಿದೆ, ಆ ಮೂಲಕ ಜಿಯೋ ಪಾಳಯಕ್ಕೆ ಸೇರಿರುವ ತನ್ನ ಗ್ರಾಹಕರನ್ನು ಮತ್ತೆ ತನ್ನತ್ತ ಸೆಳೆಯಲಿದೆ. ಇದಕ್ಕಾಗಿ ಉಚಿತ ಸೇವೆಗಳ ಸುರಿಮಳೆ ಸುರಿಸಲಿದೆ. ಉಚಿತ ಕರೆ ಸೇವೆ, ಉಚಿತ ಡೇಟಾ ಏರ್‌ಟೆಲ್‌ನಿಂದಲೂ ಘೋಷಣೆಯಾದರೆ ಆಶ್ಚರ್ಯವೇನಿಲ್ಲ.

ಪ್ರಪಂಚದಲ್ಲಿ ನಿಮ್ಮಂತೆಯೇ ಇರುವ 7 ಜನರನ್ನು ಹುಡುಕಬೇಕೆ? ಈ ಆಪ್ ಡೌನ್‌ಲೋಡ್ ಮಾಡಿ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Reliance Jio is the only telecom operator who offers free calls over VoLTE (Voice over LTE) technology. Airtel reportedly all set to provide VoLTE to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot