Subscribe to Gizbot

150Mbps ವೇಗದ ನೂತನ ಜಿಯೋ ಫೈ ಹಾಟ್‌ಸ್ಪಾಟ್‌: ಬೆಲೆ ಕೇಳಿದ್ರೆ ಬುಕ್‌ ಮಾಡುವುದು ಗ್ಯಾರೆಂಟಿ..!

Written By:

ಡೇಟಾ ಕಾರ್ಡ್ ಮಾರುಕಟ್ಟೆಯಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ಪ್ರಮಾಣದ ಪಾಲನ್ನು ಹೊಂದಿರುವ ರಿಲಯನ್ಸ್ ಮಾಲೀಕತ್ವದ ಜಿಯೋ, ಮಾರುಕಟ್ಟೆಗೆ ಮತ್ತೊಂದು ಹೊಸ ಮಾದರಿಯ ಹಾಟ್‌ಸ್ಪಾಟ್ ಡಿವೈಸ್ ಅನ್ನು ಬಿಡುಗಡೆ ಮಾಡಿದೆ. ಕೇವಲ ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರವೇ ದೊರೆಯಲಿರುವ ಜಿಯೋ ಫೈ JMR815 ಹಾಟ್‌ಸ್ಪಾಟ್‌ ವಿನ್ಯಾಸದಂದಲೇ ಬಳಕೆದಾರರನ್ನು ಸೆಳೆಯುತ್ತಿದೆ ಎನ್ನಲಾಗಿದೆ.

 150Mbps ವೇಗದ ನೂತನ ಜಿಯೋ ಫೈ ಹಾಟ್‌ಸ್ಪಾಟ್‌

ಈ ಹಿಂದೆ ಜಿಯೋ ಲಾಂಚ್ ಮಾಡಿದ್ದ ಜಿಯೋ ಫೈ ಹಾಟ್‌ಸ್ಪಾಟ್‌ ಗಿಂತಲೂ ಇದು ಭಿನ್ನವಾಗಿದ್ದು, ವೃತ್ತಕಾರವಾಗಿರುವ ಜಿಯೋ ಫೈ JMR815 ಹಾಟ್‌ಸ್ಪಾಟ್‌, ಬ್ಲಾಕ್‌ ಬಣ್ಣದಲ್ಲಿ ದೊರೆಯುತ್ತಿದ್ದು, ಹೆಚ್ಚು ವೇಗವಾಗಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಒಂದೇ ಸಮಯದಲ್ಲಿ 30ಕ್ಕೂ ಹೆಚ್ಚು ಡಿವೈಸ್‌ಗಳಿಗೆ ಇಂಟರ್ನೆಟ್ ಸಂಪರ್ಕವನ್ನು ನೀಡಲು ಶಕ್ತವಾಗಿದೆ ಎನ್ನುವ ಮಾಹಿತಿಯನ್ನು ಕಂಪನಿಯೂ ನೀಡಿದೆ.

ಓದಿರಿ: ಏರ್‌ಟೆಲ್-ಜಿಯೋಗೆ ಸೆಡ್ಡು: BSNL ಕೊಟ್ಟ ಬಂಪರ್ ಆಫರ್ ಇದು..!

ರೂ.999ಕ್ಕೆ ಮಾರಾಟವಾಗಲಿರುವ ಜಿಯೋ ಫೈ JMR815 ಹಾಟ್‌ಸ್ಪಾಟ್‌ ನಲ್ಲಿ ದೊಡ್ಡದಾದ ಬ್ಯಾಟರಿಯನ್ನು ಕಾಣಬಹುದಾಗಿದೆ. 3000mAh ಬ್ಯಾಟರಿಯನ್ನು ಈ ಸ್ಮಾರ್ಟ್‌ಫೋನಿನಲ್ಲಿ ಅಳವಡಿಸಲಾಗಿದ್ದು, ಇದು ಹೆಚ್ಚು ಬ್ಯಾಟರಿ ಬ್ಯಾಕಪ್ ನೀಡಲಿದೆ. ವಿನ್ಯಾಸವೂ ಸಹ ಆಕರ್ಷಕವಾಗಿದೆ. ಪವರ್ ಬಟನ್, WPS ಬಟನ್ ಮತ್ತು ಇಂಡಿಕೇಟರ್ ಗಳನ್ನು ಒಳಗೊಂಡಿದೆ. ಬ್ಯಾಟರಿ, ಸಿಗ್ನಲ್ ತೋರಿಸುವ LED ಲೈಟ್‌ಗಳು ಇದರಲ್ಲಿದೆ.

 150Mbps ವೇಗದ ನೂತನ ಜಿಯೋ ಫೈ ಹಾಟ್‌ಸ್ಪಾಟ್‌

ಜಿಯೋ ಫೈ JMR815 ಹಾಟ್‌ಸ್ಪಾಟ್‌ ನಲ್ಲಿ USB ಮೂಲಕವೂ ಇಂಟರ್‌ನೆಟ್ ಕನೆಕ್ಷನ್ ಅನ್ನು ಪಡೆಯಬಹುದಾಗಿದೆ. ಇದು 150MBPS ವೇಗ ಡೌನ್‌ಲೋಡ್ ಸ್ಪೀಡ್ ಅನ್ನು ಹೊಂದಿದ್ದು, 50 MBPS ಆಪ್‌ಲೋಡ್ ವೇಗವನ್ನು ಹೊಂದಿದೆ. ಇದಕ್ಕಾಗಿ ಜಿಯೋ ಫೈ JMR815 ಹಾಟ್‌ಸ್ಪಾಟ್‌ ನಲ್ಲಿ ALT3800 ಪ್ರೋಸೆಸರ್ ಅನ್ನು ನೀಡಲಾಗಿದೆ. ಒಂದು ವರ್ಷದ ವ್ಯಾರೆಂಟಿಯೊಂದಿಗೆ ದೊರೆಯಲಿದೆ.

ಓದಿರಿ: ಸರ್ಕಾರದಿಂದ ಚೀನಾದ ಅಪಾಯಕಾರಿ ಆಪ್‌ಗಳ ಪಟ್ಟಿ: ಟ್ರೂಕಾಲರ್, ಶಿಯೋಮಿ ಆಪ್, ಶೇರ್‌ಇಟ್‌ ಪಟ್ಟಿಯಲ್ಲಿ.!

Jio Fi ಬಳಸಿ 2G ಮತ್ತು 3G ಗ್ರಾಹಕರು ಕಾಲ್ ಮಾಡುವುದು ಹೇಗೆ?

ಜಿಯೋ ಫೈ JMR815 ಹಾಟ್‌ಸ್ಪಾಟ್‌ ಮೂಲಕ ನೀವು ಟ್ಯಾಬ್ಲೆಟ್ ಕನೆಕ್ಟ್ ಮಾಡಿಕೊಳ್ಳಬಹುದು, 2G/3G ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್, CCTV ಕ್ಯಾಮೆರಾ ಮತ್ತು ಸ್ಮಾರ್ಟ್‌ ಟಿವಿಯನ್ನು ಕನೆಕ್ಟ್ ಮಾಡಿಕೊಳ್ಳಬಹುದಾಗಿದೆ. ಎಲ್ಲದವರಲ್ಲೂ ವೇಗವ ಇಂಟರ್ನೆಟ್ ಅನ್ನು ಪಡೆದುಕೊಳ್ಳಬಹುದಾಗಿದೆ.

English summary
Reliance JioFi JMR815 Variant With 3000mAh Battery Launched at Rs 999. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot