ಏರ್‌ಟೆಲ್-ಜಿಯೋಗೆ ಸೆಡ್ಡು: BSNL ಕೊಟ್ಟ ಬಂಪರ್ ಆಫರ್ ಇದು..!

|

ಟೆಲಿಕಾಂ ವಲಯದಲ್ಲಿ ಖಾಸಗಿ ಮಾಲೀಕತ್ವದ ದೈತ್ಯ ಕಂಪನಿಗಳಿಗೆ ಸೆಡ್ಡು ಹೊಡೆಯುತ್ತಿರುವ ಸರ್ಕಾರಿ ಒಡೆತನದ ಟೆಲಿಕಾಂ ಕಂಪನಿ BSNL, ತನ್ನ ಬಳಕೆದಾರರಿಗೆ ಹೊಸ ಆಫರ್ ವೊಂದನ್ನು ನೀಡಲು ಮುಂದಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ದರ ಸಮರಕ್ಕೆ ತನ್ನ ಕೊಡುಗೆಯನ್ನು ಈ ಮೂಲಕ ನೀಡುತ್ತಿದೆ. ಜಿಯೋ-ಏರ್‌ಟೆಲ್ ಆಫರ್‌ಗಳಿಗೆ ಸೆಡ್ಡು ಹೊಡೆಯುವಂತಿದೆ BSNL ನೀಡಿರುವ ಹೊಸ ಆಫರ್.

ಏರ್‌ಟೆಲ್-ಜಿಯೋಗೆ ಸೆಡ್ಡು: BSNL ಕೊಟ್ಟ ಬಂಪರ್ ಆಫರ್ ಇದು..!

ಮಾರುಕಟ್ಟೆಯಲ್ಲಿ ಎಲ್ಲಾ ಟೆಲಿಕಾಂ ಕಂಪನಿಗಳು ಪ್ರೀಪೇಯ್ಡ್ ಬಳಕೆದಾರರನ್ನು ಸೆಳೆಯುವ ಸಲುವಾಗಿ ಹೊಸ ಆಕರ್ಷಕ ಆಫರ್ ನೀಡುತ್ತಿರುವ ಸಂದರ್ಭದಲ್ಲಿ BSNL, ಪೋಸ್ಟ್‌ಪೇಯ್ಡ್ ಬಳಕೆದಾರರನ್ನು ಸೆಳೆಯುವ ನಿಟ್ಟಿನಲ್ಲಿ ಹೊಸ ಆಫರ್ ವೊಂದನ್ನು ನೀಡಿದೆ. ಸದ್ಯ ಏರ್‌ಟೆಲ್ ಪೋಸ್ಟ್‌ಪೇಯ್ಡ್‌ ಗ್ರಾಹಕರಿಗೆ ನೀಡುವ ಆಫರ್ ಅನ್ನು ಮೀರಿಸುವಂತೆ ಇದೆ BSNL ನೀಡಿರುವ ರೂ.499 ಪ್ಲಾನ್.

ಓದಿರಿ: ಫಿಲಿಪ್ಸ್ LED ಬಲ್ಬ್ ಹಾಕಿಕೊಂಡರೆ ಸಾಕು: ವೈ-ಫೈ ಬೇಡ-ಮೊಬೈಲ್ ಡೇಟಾ ಬೇಡ.!

BNSL ಪೋಸ್ಟ್‌ಪೇಯ್ಡ್:

BNSL ಪೋಸ್ಟ್‌ಪೇಯ್ಡ್:

ಪೋಸ್ಟ್‌ಪೇಯ್ಡ್‌ ಬಳಕೆದಾರರು ನೆಟ್‌ವರ್ಕ್‌ ಬಿಟ್ಟು ಹೋಗುವದಿಲ್ಲ ಎನ್ನುವುದನ್ನು ತಿಳಿದಿರುವ ಟೆಲಿಕಾಂ ಕಂಪನಿಗಳು ಹೆಚ್ಚಾಗಿ ಪೋಸ್ಟ್‌ಪೇಯ್ಡ್ ಬಳಕೆದಾರರಿಗೆ ಆಫರ್‌ಗಳನ್ನು ನೀಡಲು ಮುಂದಾಗಿವೆ. ಇದೇ ಮಾದರಿಯಲ್ಲಿ BSNL ಪೋಸ್ಟ್‌ಪೇಯ್ಡ್ ಬಳಕೆದಾರರಿಗೆ ರೂ.499 ಪ್ಲಾನ್‌ ಘೋಷಣೆಯನ್ನು ಮಾಡಿದೆ. ಇದರಲ್ಲಿ ಬಳಕೆದಾರರಿಗೆ ಹೆಚ್ಚು ಡೇಟಾ- ಉಚಿತ ಕರೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ.

ಹೆಚ್ಚುವರಿ ಡೇಟಾ ಆಫರ್:

ಹೆಚ್ಚುವರಿ ಡೇಟಾ ಆಫರ್:

BSNL ತನ್ನ ಪೋಸ್ಟ್‌ಪೇಯ್ಡ್ ಬಳಕೆದಾರರಿಗೆ ನೀಡಿರುವ ಬೆಸ್ಟ್‌ ಆಫರ್ ಇದಾಗಿದ್ದು, ಇದರಲ್ಲಿ ಪ್ರತಿ ತಿಂಗಳು 45GB ಡೇಟಾವನ್ನು ಹೆಚ್ಚಿನ ವೇಗದಲ್ಲಿ ನೀಡಲಿದೆ. ಬೇರೆ ಯಾವುದೇ ನೆಟ್‌ವರ್ಕ್‌ಗಳು ಇಷ್ಟು ಪ್ರಮಾಣದ ಡೇಟಾವನ್ನು ಪೋಸ್ಟ್‌ಪೇಯ್ಡ್ ಬಳಕೆದಾರರಿಗೆ ನೀಡುತ್ತಿಲ್ಲ ಎನ್ನಬಹುದು.

ಕರೆ ಮಾಡಲು ಯಾವುದೇ ಮಿತಿಗಳಿಲ್ಲ:

ಕರೆ ಮಾಡಲು ಯಾವುದೇ ಮಿತಿಗಳಿಲ್ಲ:

BSNL ಪೋಸ್ಟ್‌ಪೇಯ್ಡ್ ಬಳಕೆದಾರರಿಗೆ ನೀಡುತ್ತಿರುವ ಈ ಹೊಸ ಆಫರ್ ನಲ್ಲಿ ಕರೆ ಮಾಡಲು ಯಾವುದೇ ಮಿತಿಗಳನ್ನು ನೀಡಿಲ್ಲ. ಬದಲಾಗಿ ಬಳಕೆದಾರರು ಯಾವುದೇ ಮಿತಿ ಇಲ್ಲದೇ ಕರೆಗಳನ್ನು ಉಚಿತವಾಗಿ ಮಾಡಬಹುದಾಗಿದೆ. ಅಲ್ಲದೇ ರೋಮಿಂಗ್ ಕರೆಗಳು ಸಹ ಉಚಿತವಾಗಿದೆ ಎನ್ನಲಾಗಿದೆ.

ಉಚಿತ SMS

ಉಚಿತ SMS

ಇದಲ್ಲದೇ ರೂ.499 ರಿಚಾರ್ಜ್ ಮಾಡಿಸಿಕೊಳ್ಳುವ BSNL ಪೋಸ್ಟ್‌ಪೇಯ್ಡ್ ಬಳಕೆದಾರರಿಗೆ ಪ್ರತಿ ನಿತ್ಯ 100 SMS ಗಳನ್ನು ಕಳುಹಿಸುವ ಅವಕಾಶವನ್ನು ಮಾಡಿಕೊಟ್ಟಿದೆ.

ಬೆಸ್ಟ್ ಆಫರ್:

ಬೆಸ್ಟ್ ಆಫರ್:

BSNL ಪೋಸ್ಟ್‌ಪೇಯ್ಡ್ ಬಳಕೆದಾರರಿಗೆ ನೀಡುತ್ತಿರುವ ಬೆಸ್ಟ್‌ ಆಫರ್ ಇದಾಗಿದೆ. ಇದರಲ್ಲಿ ಬಳೆಕದಾರರು ಹೆಚ್ಚು ಡೇಟಾವನ್ನು ಪಡೆಯುವ ಮತ್ತು ಉಚಿತವಾಗಿ ಕರೆ ಮಾಡುವ ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಬಳಕೆದಾರರು ಉತ್ತಮ ಆಫರ್‌ಗಾಗಿ ಬೇರೆ ನೆಟ್‌ವರ್ಕ್‌ಗಳನ್ನು ಹುಡುಕುವುದು ತಪ್ಪಲಿದೆ.

ವಾಟ್ಸ್ಆಪ್‌ನಲ್ಲಿ ಫುಲ್ ರೆಸಲ್ಯೂಶನ್ ಫೋಟೋ ಸೆಂಡ್ ಮಾಡುವುದು ಹೇಗೆ? GIZBOT

ಓದಿರಿ: ಜಿಯೋ ವಿರುದ್ಧ ಬೆಸ್ಟ್‌ ಆಫರ್ ಕೊಟ್ಟ ಏರ್‌ಟೆಲ್‌: ಮಾರುಕಟ್ಟೆಯಲ್ಲಿ ಈ ಮಾದರಿ ಆಫರ್ ಇಲ್ಲವೇ ಇಲ್ಲ.!

Most Read Articles
Best Mobiles in India

English summary
BSNL Coming Forward With Rs 499 Postpaid Plan Offering 45GB Data, Unlimited Calls. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X