Subscribe to Gizbot

ಸ್ಮಾರ್ಟ್‌ಟಿವಿ, ಸ್ಮಾರ್ಟ್‌ಸ್ಪೀಕರ್‌ಗಳನ್ನು ಖರೀದಿಸುವ ಮುನ್ನ ಇರಲಿ ಎಚ್ಚರ!!

Written By:

ಸ್ಮಾರ್ಟ್ಫೋನ್ ಕಂಪ್ಯೂಟರ್ ಕಾಲದಲ್ಲಿ ಗೃಹ ಬಳಕೆ ಉಪಕರಣಗಳು ಕೂಡ ಸ್ಮಾರ್ಟ್ ಆಗುತ್ತಿರುವುದು ನಿಮಗೆಲ್ಲಾ ಗೊತ್ತಿದೆ. ಗೃಹಬಳಕೆ ವಸ್ತುಗಳು ಸ್ಮಾರ್ಟ್‌ ಆದಷ್ಟೂ ಇವುಗಳನ್ನು ಹ್ಯಾಕರ್‌ಗಳು ದೊಡ್ಡ ಗುರಿಯಾಗಿರಿಸಿಕೊಳ್ಳುತ್ತಾರೆ. ಹಾಗಾಗಿ, ಸ್ಮಾರ್ಟ್‌ ಆಗಿರುವ ಗೃಹಬಳಕೆ ವಸ್ತುಗಳೂ ಕೂಡ ಭವಿಷ್ಯದಲ್ಲಿ ತೊಂದರೆ ತರಬಹುದು ಎಂದು ಹೇಳಬಹುದಾಗಿದೆ.

ಹಾಗಾಗಿ, ಅಂತರ್ಜಾಲ ಸಂಪರ್ಕದ ಗೃಹ ಬಳಕೆ ಸಾಧನಗಳಾದ ಸ್ಮಾರ್ಟ್ ಸ್ಪೀಕರ್‌, ಬೆಳಕಿನ ಉಪಕರಣಗಳು, ಟಿ.ವಿ ಮುಂತಾದ ವುಗಳನ್ನು ಕೊಳ್ಳುವ ಮೊದಲು ಅಧ್ಯಯನ ನಡೆಸುವುದು ಒಳ್ಳೆಯದು. ಮನೆಗೆ ತರುವ ಈ ಸ್ಮಾರ್ಟ್ ಸಾಧನಗಳನ್ನು ಸುರಕ್ಷಿತವಾಗಿ ಇರಿಸಿಕೊಳ್ಳಬೇಕಾದರೆ ಅವುಗಳ ಬಗ್ಗೆ ಭದ್ರತಾ ತಜ್ಞರಿಂದ ಮಾಹಿತಿ ಪಡೆದುಕೊಳ್ಳಬೇಕಿದೆ.

ಸ್ಮಾರ್ಟ್‌ಟಿವಿ, ಸ್ಮಾರ್ಟ್‌ಸ್ಪೀಕರ್‌ಗಳನ್ನು ಖರೀದಿಸುವ ಮುನ್ನ ಇರಲಿ ಎಚ್ಚರ!!

ಸ್ಮಾರ್ಟ್ ಆಗಿರುವ ಗೃಹಬಳಕೆ ರೀತಿಯ ಸಾಧನಗಳನ್ನು ಕೊಳ್ಳುವ ಮೊದಲು ಅಂತರ್ಜಾಲ ತಾಣದಲ್ಲಿ ಮಾಹಿತಿ ಹುಡುಕಾಟ ನಡೆಸಬೇಕು. ಉಪಕರಣ ತಯಾರಿಸಿದ ಕಂಪೆನಿ ಸಾಫ್ಟ್‌ವೇರ್ ಅನ್ನು ಅಪ್‌ಡೇಟ್ ಮಾಡುತ್ತದೆಯೇ ಇಲ್ಲವೇ, ಅದಕ್ಕೆ ಸುರಕ್ಷತೆಯನ್ನು ಒದಗಿಸಲಿದೆಯೇ ಎಂಬುದನ್ನು ನೋಡಿ ಅವುಗಳನ್ನು ಖರೀದಿಸಿದರೆ ಭವಿಷ್ಯದಲ್ಲಿ ತೊಂದರೆಯಿಂದ ಪಾರಾಗಬಹುದು.

ಮಾರುಕಟ್ಟೆಯಲ್ಲಿ ಹವಾ ಎಬ್ಬಿಸಿರುವ Truvison TX408Z 40' Smart LED TV ಹೇಗಿದೆ..?

ಸ್ಮಾರ್ಟ್ ಸಾಧನಗಳಿಂದ ಕೆಲವು ಖ್ಯಾತಿ ಪಡೆದ ಬ್ರ್ಯಾಂಡ್‌ಗಳ ಉತ್ಪನ್ನಗಳು ಕೂಡ ನಮ್ಮನ್ನು ಮೋಸಗೊಳಿಸಿರುವ ಉದಾಹರಣೆಯಿದೆ. ಗ್ರಾಹಕರ ವೀಕ್ಷಣಾ ಹವ್ಯಾಸಗಳನ್ನು ಇದು ದಾಖಲು ಮಾಡಿಕೊಂಡು ಅದನ್ನು ಜಾಹೀರಾತುದಾರರೊಂದಿಗೆ ಹಂಚಿಕೊಂಡಿದ್ದ ಟಿ.ವಿ ತಯಾರಕಾ ಕಂಪೆನಿ ವಿಜಿಯೊ (Vizio) ಕೆಲ ದಿನಗಳ ಹಿಂದೆ ಸುದ್ದಿಯಾಗಿದ್ದನ್ನು ನಾವು ಗಮನಿಸಬಹುದು.

ಸ್ಮಾರ್ಟ್‌ಟಿವಿ, ಸ್ಮಾರ್ಟ್‌ಸ್ಪೀಕರ್‌ಗಳನ್ನು ಖರೀದಿಸುವ ಮುನ್ನ ಇರಲಿ ಎಚ್ಚರ!!

ಹಾಗಾಗಿ, ಕಂಪೆನಿಗಳೇ ಹ್ಯಾಕರ್‌ಗಳಿಗೆ ನೆರವು ನೀಡದಂತೆ ಇವೆಯೇ ಇಲ್ಲವೇ ಎಂಬುದನ್ನು ರಹಸ್ಯವಾಗಿ ತಿಳಿದುಕೊಂಡಿರಬೇಕು. ಅಮೆಜಾನ್ ಮತ್ತು ಗೂಗಲ್ನಂತಹ ಒಳ್ಳೆಯ ಹೆಸರು ಪಡೆದಿರುವ ಕಂಪೆನಿಗಳು ಭದ್ರತೆಯನ್ನು ಗಮನದಲ್ಲಿ ಸ್ಮಾರ್ಟ್‌ ಉಪಕರಣಗಳನ್ನು ತಯಾರು ಮಾಡಿರುವುದರಿಂದ ಅಮೆಜಾನ್‌ ಮತ್ತು ಗೂಗಲ್‌ನ ಸ್ಮಾರ್ಟ್‌ ಸ್ಪೀಕರ್‌ಗಳೇ ಉತ್ತಮವಾಗಿವೆ.

ಅಮೆಜಾನ್‌ನಲ್ಲಿ ಅಲೆಕ್ಸಾ ಸ್ಮಾರ್ಟ್‌ ಅಸಿಸ್ಟೆಂಟ್ ಎಂಬುದನ್ನು ಎಕೊ ಸ್ಪೀಕರ್‌ಗಳಲ್ಲಿ ಬಳಸಲಾಗುತ್ತದೆ. ಇದು ಸ್ವಯಂಚಾಲಿತವಾಗಿ ಸಾಫ್ಟ್‌ವೇರ್‌ ಅನ್ನು ಮೇಲ್ದರ್ಜೆಗೇರಿಸಿ ಕೊಂಡು ಯಾವುದೇ ಭದ್ರತಾ ಬೆದರಿಕೆಯನ್ನು ತಡೆದುಕೊಳ್ಳುತ್ತದೆ. ಈ ಮಾಹಿತಿ ಅಮೆಜಾನ್‌ನ ಸರ್ವರ್‌ಗಳಲ್ಲಿ ಸಂಗ್ರಹವಾಗುತ್ತದೆ ಎಂದರೆ ಅದು ಉತ್ತಮ ಎಂದು ಹೇಳಬಹುದು.

ಓದಿರಿ: ಉಚಿತವಾಗಿ ಅಂತರಾಷ್ಟ್ರೀಯ ಕರೆ ಮಾಡಲು ಇರುವ ಟಾಪ್ 5 ಬೆಸ್ಟ್ ಆಂಡ್ರಾಯ್ಡ್ ಆಪ್ಸ್!!

ಓದಿರಿ: ತಿಳಿಯದೂರಿಗೆ ಪ್ರವಾಸಕ್ಕೆ ಹೋದರೆ ಬೇಕೆಬೇಕು ''ಇನ್‌ಸ್ಟಾ ಗೈಡ್'' ಆಪ್!!

English summary
Think long-term This isn't always possible for gift recipients, but as best as you can, to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot