ಮಕ್ಕಳು ಇಂಟರ್‌ನೆಟ್‌ ಬಳಸುವಾಗ ಎಚ್ಚರದಿಂದಿರಿ

Posted By:

ಇಂಟರ್‌ನೆಟ್‌ ಬಳಕೆದಾರರ ಸಂಖ್ಯೆಯು ಹೆಚ್ಚಿದಂತೆ, ಇಂಟರ್‌ನೆಟ್‌ನಲ್ಲಿ ಅಶ್ಲೀಲ ತಾಣಗಳ ಸಂಖ್ಯೆಯು ಹೆಚ್ಚಾಗುತ್ತಿದೆ. ಸಾಮಾಜಿಕ ತಾಣ, ಇಮೇಲ್‌ಗಳಲ್ಲಿ ಇವುಗಳ ಜಾಹೀರಾತು ನೋಡಿ ಏನು ತಿಳಿಯದ ಎಳೆಯ ಮಕ್ಕಳು ಈ ತಾಣಗಳತ್ತ ಆಕರ್ಷಿತರಾಗುತ್ತಿದ್ದಾರೆ. ವೆಬ್‌ಸೈಟ್ ಜಾಲಾಡುವಾಗ ತಮಗೇ ಅರಿವಿಲ್ಲದೆ ಅಶ್ಲೀಲ ಹಾಗೂ ವಯಸ್ಕ ಸಂಬಂಧಿ ವಿಷಯಗಳನ್ನು ನೋಡಿರುವುದಾಗಿ ಮಕ್ಕಳು ಈಗಾಗಲೇ ಒಪ್ಪಿಕೊಂಡಿದ್ದಾರೆ. ದೇಶದಲ್ಲಿ ಈ ಪ್ರಮಾಣ ಎಷ್ಟಿದೆ ಎಂದರೆ, ಮೊದಲ ಸ್ಥಾನದಲ್ಲಿರುವ ಮುಂಬೈ ನಗರದಲ್ಲಿ ಶೇ 40ರಷ್ಟು ಮಕ್ಕಳು ಹಾಗೂ ದ್ವಿತೀಯ ಸ್ಥಾನದಲ್ಲಿರುವ ಬೆಂಗಳೂರಿನಲ್ಲಿ ಶೇ 28ರಷ್ಟು ಮಕ್ಕಳು ವಯಸ್ಕ ಸಂಬಂಧಿ ವಿಷಯಗಳನ್ನು ನೋಡಿದ್ದಾರಂತೆ.

ಇಂಥ ಆಘಾತಕಾರಿ ಸಂಗತಿಯನ್ನು ಕಂಪ್ಯೂಟರ್ ಆ್ಯಂಟಿವೈರಸ್ ಸಂಸ್ಥೆ ಮೆಕ್‌ಕೆಫೆ ನಡೆಸಿದ ಸಮೀಕ್ಷೆ ಬಹಿರಂಗಗೊಳಿಸಿದೆ.ದೇಶದ ಶೇ.86 ರಷ್ಟು ಮಕ್ಕಳು ಫೇಸ್‌ಬುಕ್‌ನಲ್ಲೇ ಕಳೆಯುತ್ತಿದ್ದಾರೆ. ಇಷ್ಟೇ ಅಲ್ಲದೆ, ಶೇ 55 ರಷ್ಟು ಮಕ್ಕಳು ತಮ್ಮ ಅಂತರ್ಜಾಲ ಬಳಕೆ ಕುರಿತು ಪೋಷಕರೊಂದಿಗೆ ಮುಕ್ತವಾಗಿ ಹಂಚಿಕೊಳ್ಳಲು ಹಿಂಜರಿಯುತ್ತಾರೆ. ಇವರಲ್ಲಿ 13ರಿಂದ 17 ವಯೋಮಾನದವರ ಪ್ರಮಾಣವೇ ಹೆಚ್ಚು ಎಂದು ಸಮೀಕ್ಷೆ ತಿಳಿಸಿದೆ.

ಎಳೆಯ ಮಕ್ಕಳು ಈ ಸೋಶಿಯಲ್‌ ನೆಟ್‌ವರ್ಕ‌ ಬಳಸುವುದರಿಂದ ಅವರನ್ನು ಲೈಂಗಿಕವಾಗಿ ಶೋಷಣೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ.ಈಗಾಗಲೇ ಮಕ್ಕಳ ಶೋಷಣೆಗೆ ಒಳಗಾಗದಂತೆ ತಪ್ಪಿಸಲು ಯಾವೆಲ್ಲ ಕ್ರಮಗಳನ್ನು ಕೈಗೊಂಡಿದ್ದೀರಿ ಎಂಬುದರ ಬಗ್ಗೆ ಮಾಹಿತಿ ನೀಡಿ ಎಂದು ದೆಹಲಿ ಹೈಕೋರ್ಟ‌ ಫೇಸ್‌ಬುಕ್‌ ಮತ್ತು ಗೂಗಲ್‌ ನ್ನು ಪ್ರಶ್ನಿಸಿದೆ. ಈ ಹಿನ್ನೆಲೆಯಲ್ಲಿ ಇಂದು ಮಕ್ಕಳು ಇಂಟರ್‌ನೆಟ್‌ ಬಳಸುವಾಗ ಪೋಷಕರ ತೆಗೆದುಕೊಳ್ಳಲೇಬೇಕಾದ ಸುರಕ್ಷ ಕ್ರಮಗಳ ಬಗ್ಗೆ ಮಾಹಿತಿ ಇಲ್ಲಿದೆ. ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಇದನ್ನೂ ಓದಿ : ವ್ಯಾಕರಣ ದೋಷ ಪತ್ತೆ ಹಚ್ಚುತ್ತೆ ಪೆನ್ನು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮಕ್ಕಳು ಇಂಟರ್‌ನೆಟ್‌ ಬಳಸುವಾಗ ತೆಗೆದುಕೊಳ್ಳಬೇಕಾದ ಸುರಕ್ಷ ಕ್ರಮಗಳು

ಮಕ್ಕಳು ಇಂಟರ್‌ನೆಟ್‌ ಬಳಸುವಾಗ ತೆಗೆದುಕೊಳ್ಳಬೇಕಾದ ಸುರಕ್ಷ ಕ್ರಮಗಳು

ಸೋಶಿಯಲ್‌ ನೆಟ್‌ವರ್ಕ‌ನಲ್ಲಿ ಯಾವುದೇ ಕಾರಣಕ್ಕೂ ಮಕ್ಕಳ ವಿದ್ಯಾಭ್ಯಾಸದ ಶಾಲೆಯ ಮಾಹಿತಿಯನ್ನು ಪಬ್ಲಿಕಾಗಿ ಪೋಸ್ಟ್‌ ಮಾಡದಿರಿ.

ಮಕ್ಕಳು ಇಂಟರ್‌ನೆಟ್‌ ಬಳಸುವಾಗ ತೆಗೆದುಕೊಳ್ಳಬೇಕಾದ ಸುರಕ್ಷ ಕ್ರಮಗಳು

ಮಕ್ಕಳು ಇಂಟರ್‌ನೆಟ್‌ ಬಳಸುವಾಗ ತೆಗೆದುಕೊಳ್ಳಬೇಕಾದ ಸುರಕ್ಷ ಕ್ರಮಗಳು

ಮಕ್ಕಳು ಇಂಟರ್‌ನೆಟ್‌ನ್ನು ಹೆಚ್ಚಾಗಿ ಗೇಮ್ಸ್‌ ಆಡಲು ಬಳಸುತ್ತಿರುತ್ತಾರೆ.ಹೀಗಾಗಿ ಮಕ್ಕಳು ಹೆಚ್ಚು ಆಡುತ್ತಿರುವ ಆನ್‌ಲೈನ್‌ ಗೇಮಿಂಗ್‌ ವೆಬ್‌ಸೈಟ್‌ಗಳ ಮೇಲೆ ಗಮನವಿರಲಿ.

ಮಕ್ಕಳು ಇಂಟರ್‌ನೆಟ್‌ ಬಳಸುವಾಗ ತೆಗೆದುಕೊಳ್ಳಬೇಕಾದ ಸುರಕ್ಷ ಕ್ರಮಗಳು

ಮಕ್ಕಳು ಇಂಟರ್‌ನೆಟ್‌ ಬಳಸುವಾಗ ತೆಗೆದುಕೊಳ್ಳಬೇಕಾದ ಸುರಕ್ಷ ಕ್ರಮಗಳು

ಮಕ್ಕಳು ಬೇರೆ ಯಾವುದೇ ಸೈಟ್‌ಗಳಿಗೆ ಲಾಗಿನ್‌ ಆಗುವ ಪೋಷಕರ ಅನುಮತಿ ಪಡೆದು ಲಾಗಿನ್‌ ಆಗಬೇಕು ಎಂಬುದನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡಿ.

ಮಕ್ಕಳು ಇಂಟರ್‌ನೆಟ್‌ ಬಳಸುವಾಗ ತೆಗೆದುಕೊಳ್ಳಬೇಕಾದ ಸುರಕ್ಷ ಕ್ರಮಗಳು

ಮಕ್ಕಳು ಇಂಟರ್‌ನೆಟ್‌ ಬಳಸುವಾಗ ತೆಗೆದುಕೊಳ್ಳಬೇಕಾದ ಸುರಕ್ಷ ಕ್ರಮಗಳು

ಮಕ್ಕಳು ಹೆಚ್ಚು ಹೊತ್ತು ಚಾಟ್‌ ರೂಮ್‌ನಲ್ಲಿ ಮೆಸೇಜ್‌ ಮಾಡಿ ಕಾಲ ಕಳೆಯುತ್ತಿದ್ದರೆ ಅವರ ಪ್ರೊಫೈಲ್‌ನ್ನು ವೀಕ್ಷಿಸಿ ಮತ್ತು ಯಾರೆಲ್ಲ ಸ್ನೇಹಿತರಾಗಿದ್ದಾರೆ ಎಂಬುದನ್ನು ಚೆಕ್‌ ಮಾಡಿಕೊಳ್ಳಿ.

ಮಕ್ಕಳು ಇಂಟರ್‌ನೆಟ್‌ ಬಳಸುವಾಗ ತೆಗೆದುಕೊಳ್ಳಬೇಕಾದ ಸುರಕ್ಷ ಕ್ರಮಗಳು

ಮಕ್ಕಳು ಇಂಟರ್‌ನೆಟ್‌ ಬಳಸುವಾಗ ತೆಗೆದುಕೊಳ್ಳಬೇಕಾದ ಸುರಕ್ಷ ಕ್ರಮಗಳು

ಕಂಪ್ಯೂಟರ್‌ ಅಥವಾ ಮೊಬೈಲ್‌ನಲ್ಲಿ ಸೇಫ್‌ ಸರ್ಚ‌ ಆಯ್ಕೆ ಆರಿಸಿ ಫಿಲ್ಟರ್‌ ಮಾಡಿಕೊಳ್ಳಿ.

ಮಕ್ಕಳು ಇಂಟರ್‌ನೆಟ್‌ ಬಳಸುವಾಗ ತೆಗೆದುಕೊಳ್ಳಬೇಕಾದ ಸುರಕ್ಷ ಕ್ರಮಗಳು

ಮಕ್ಕಳು ಇಂಟರ್‌ನೆಟ್‌ ಬಳಸುವಾಗ ತೆಗೆದುಕೊಳ್ಳಬೇಕಾದ ಸುರಕ್ಷ ಕ್ರಮಗಳು

ದೂರದಿಂದ ನೋಡಿದಾಗಲೂ ಕಂಪ್ಯೂಟರ್‌ನಲ್ಲಿ ಮಕ್ಕಳು ಏನು ಮಾಡುತ್ತಿದ್ದಾರೆ ಎಂಬುದನ್ನು ಕಾಣುವಂತೆ ಒಪನ್‌ ಜಾಗದಲ್ಲಿ ಕಂಪ್ಯೂಟರ್‌ ಇಡಿ.

ಮಕ್ಕಳು ಇಂಟರ್‌ನೆಟ್‌ ಬಳಸುವಾಗ ತೆಗೆದುಕೊಳ್ಳಬೇಕಾದ ಸುರಕ್ಷ ಕ್ರಮಗಳು

ಮಕ್ಕಳು ಇಂಟರ್‌ನೆಟ್‌ ಬಳಸುವಾಗ ತೆಗೆದುಕೊಳ್ಳಬೇಕಾದ ಸುರಕ್ಷ ಕ್ರಮಗಳು

ಮಕ್ಕಳು ಯಾಕೆ ಇಂಟರ್‌ನೆಟ್‌ ಬಳಸುತ್ತಾರೆ, ಆ ಸಂದರ್ಭದಲ್ಲಿ ಇಂಟೆರ್‌ನೆಟ್ ಅಗತ್ಯವಿದೆಯೋ ಎಂಬುದನ್ನು ತಿಳಿದು ಇಂಟರ್‌ನೆಟ್‌ ಬಳಸಲು ಅವಕಾಶ ನೀಡಿ.

ಮಕ್ಕಳು ಇಂಟರ್‌ನೆಟ್‌ ಬಳಸುವಾಗ ತೆಗೆದುಕೊಳ್ಳಬೇಕಾದ ಸುರಕ್ಷ ಕ್ರಮಗಳು

ಮಕ್ಕಳು ಇಂಟರ್‌ನೆಟ್‌ ಬಳಸುವಾಗ ತೆಗೆದುಕೊಳ್ಳಬೇಕಾದ ಸುರಕ್ಷ ಕ್ರಮಗಳು

ಬ್ಲ್ಯಾಕ್‌ಮೇಲ್‌ ಮಾಡಿ ಮಕ್ಕಳನ್ನು ತಮ್ಮ ಲಾಭಕ್ಕೆ ಉಪಯೋಗಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಮಕ್ಕಳಿಗೆ ಈ ರೀತಿ ಬ್ಲ್ಯಾಕ್‌ಮೇಲ್‌ ಸಂದೇಶ ಬಂದಲ್ಲಿ ಕೂಡಲೇ ತಮಗೆ ತಿಳಿಸುವಂತೆ ಮಕ್ಕಳಿಗೆ ಪೋಷಕರು ಹೇಳುವುದು ಉತ್ತಮ.

ಮಕ್ಕಳು ಇಂಟರ್‌ನೆಟ್‌ ಬಳಸುವಾಗ ತೆಗೆದುಕೊಳ್ಳಬೇಕಾದ ಸುರಕ್ಷ ಕ್ರಮಗಳು

ಮಕ್ಕಳು ಇಂಟರ್‌ನೆಟ್‌ ಬಳಸುವಾಗ ತೆಗೆದುಕೊಳ್ಳಬೇಕಾದ ಸುರಕ್ಷ ಕ್ರಮಗಳು

ಬೇಡದ ವೆಬ್‌ಸೈಟ್‌ಗಳನ್ನು ನೀವು ಬ್ಲಾಕ್‌ ಮಾಡುವ ಸಾಫ್ಟ್‌ವೇರ್‌ಗಳಿದ್ದು ಈ ಸಾಫ್ಟ್‌ವೇರ್‌ಗಳನ್ನು ಡೌನ್‌ ಲೋಡ್‌ ಮಾಡಿ ಇನ್‌ಸ್ಟಾಲ್‌ ಮಾಡಿಕೊಂಡು ಅಶ್ಲೀಲ ವೆಬ್‌ಸೈಟ್‌ಗಳನ್ನು ಬ್ಲಾಕ್‌ ಮಾಡಬಹುದು.

ಮಕ್ಕಳು ಇಂಟರ್‌ನೆಟ್‌ ಬಳಸುವಾಗ ತೆಗೆದುಕೊಳ್ಳಬೇಕಾದ ಸುರಕ್ಷ ಕ್ರಮಗಳು

ಮಕ್ಕಳು ಇಂಟರ್‌ನೆಟ್‌ ಬಳಸುವಾಗ ತೆಗೆದುಕೊಳ್ಳಬೇಕಾದ ಸುರಕ್ಷ ಕ್ರಮಗಳು

ಪೋಷಕರು ಪ್ರತಿದಿನ ಇಂತಿಷ್ಟು ಗಂಟೆ ಮಕ್ಕಳಿಗಾಗಿ ಎಂದು ನಿಗದಿ ಮಾಡಿಕೊಂಡು ಅವರೊಂದಿಗೆ ಸಂತೋಷದಿಂದ ಆಟ ಆಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot