Subscribe to Gizbot

ವಾಟ್ಸಾಪ್ ಕರೆಯಲ್ಲಿ ಇಂಟರ್ನೆಟ್ ಬಿಲ್‌ ಸೇವ್‌ ಮಾಡಲು ಈ ಹಂತಗಳನ್ನು ಪಾಲಿಸಿ

Written By:

ಇಂಟರ್ನೆಟ್‌ ಬಳಸುವ ಪ್ರತಿಯೊಬ್ಬರೂ ಸಹ ಡಾಟಾ ಬಿಲ್‌ ಕಡಿತಗೊಳಿಸಲು ಪ್ರಯತ್ನಿಸುತ್ತಿರುತ್ತಾರೆ. ಈ ಕಾರಣದಿಂದಲೇ ಜಿಯೋ ಸಿಮ್‌ಗೆ ಜನರು ಮುಗಿಬೀಳುತ್ತಿರುವುದು ಗೊತ್ತೇ ಇದೆ. ವಾಟ್ಸಾಪ್‌ನಲ್ಲಿ ಚಾಟಿಂಗ್‌ ಮಾಡಿದರೆ ಅಷ್ಟೊಂದು ಡಾಟಾ ಏನು ಕಾಲಿಯಾಗುವುದಿಲ್ಲ. ಆದರೆ ವಾಟ್ಸಾಪ್‌ ಕರೆ ವಿಷಯಕ್ಕೆ ಬಂದರೆ ಮಾತ್ರ ಹೆಚ್ಚು ಡಾಟಾ ಖಾಲಿಯಾಗುತ್ತದೆ.

ವಾಟ್ಸಾಪ್ ಕರೆಯಲ್ಲಿ ಇಂಟರ್ನೆಟ್ ಬಿಲ್‌ ಸೇವ್‌ ಮಾಡಲು ಈ ಹಂತಗಳನ್ನು ಪಾಲಿಸಿ

ವಾಟ್ಸಾಪ್ ಕರೆ ಮಾಡಿದಾಗ ಕಡಿಮೆ ಡಾಟಾ ಬಳಕೆ ಆಗುವಂತೆ ನಿಯಂತ್ರಿಸುವುದು ಕಷ್ಟಸಾಧ್ಯ ಕೆಲಸವಾಗಿದೆ. ಆದ್ದರಿಂದಲೇ ಕೆಲವರು ವಾಟ್ಸಾಪ್‌ ಕರೆ ಮಾಡುವಾಗ ವೈಫೈ ಕನೆಕ್ಟ್ ಆಗಿ ಕರೆ ಮಾಡಿದರೆ ಡಾಟಾ ಬಿಲ್‌ ಉಳಿಸಬಹುದು ಎಂದು ಸಲಹೆ ನೀಡುತ್ತಾರೆ. ಅಂದಹಾಗೆ ಇಂದಿನ ಲೇಖನದಲ್ಲಿ ವಾಟ್ಸಾಪ್ ಕರೆ ಮಾಡಿದಾಗ ಡಾಟಾ ಸೇವ್ ಮಾಡುವುದು ಹೇಗೆ ಎಂದು ತಿಳಿಸುತ್ತಿದ್ದೇವೆ.

ಇತರರ ವಾಟ್ಸಾಪ್‌ನಲ್ಲಿ, ನಿಮ್ಮನ್ನು ನೀವೇ ಅನ್‌ಬ್ಲಾಕ್‌ ಮಾಡುವುದು ಹೇಗೆ?

ವಾಟ್ಸಾಪ್ ಕರೆಯಲ್ಲಿ ಇಂಟರ್ನೆಟ್ ಬಿಲ್‌ ಸೇವ್‌ ಮಾಡಲು ಈ ಹಂತಗಳನ್ನು ಪಾಲಿಸಿ

ವಾಟ್ಸಾಪ್‌ ಕರೆಯಲ್ಲಿನ ಸಮಸ್ಯೆ
ವಾಟ್ಸಾಪ್ ಬಳಕೆದಾರರಿಗೆ ಆಕರ್ಷಕವಾಗುವಂತೆಯೇ, ವಾಟ್ಸಾಪ್ ಕರೆ ಆಪ್ಶನ್ ಅನ್ನು ಪರಿಚಯಿಸಿದೆ. ಬಳಕೆದಾರರು ಸಹ ಬ್ಯಾಲೆನ್ಸ್ ಉಳಿಸಲು ವಾಟ್ಸಾಪ್‌ನಲ್ಲಿ ಟೆಲಿಫೋನಿಕ್ ಕರೆ ಮಾಡುತ್ತಾರೆ. ಆದರೆ ವಾಟ್ಸಾಪ್‌ ಕರೆ ಫೀಚರ್‌ ಹೆಚ್ಚಿನ ಡಾಟಾ ಬಳಕೆ ಮಾಡಿಕೊಳ್ಳುತ್ತಿದೆ.

ಆದ್ದರಿಂದಲೇ ಗಿಜ್‌ಬಾಟ್ ವಾಟ್ಸಾಪ್‌ ಕರೆ ಮಾಡಿದಾಗ ಡಾಟಾ ಉಳಿಸುವುದು ಹೇಗೆ ಎಂದು ತಿಳಿಸುತ್ತಿದೆ. ಮುಂದೆ ಓದಿರಿ.

ವಾಟ್ಸಾಪ್ ಕರೆಯಲ್ಲಿ ಇಂಟರ್ನೆಟ್ ಬಿಲ್‌ ಸೇವ್‌ ಮಾಡಲು ಈ ಹಂತಗಳನ್ನು ಪಾಲಿಸಿ

#1 ವಾಟ್ಸಾಪ್ ಇನ್‌ಸ್ಟಾಲ್‌ ಮಾಡಿ ಸೈನಪ್‌ ಆಗಿರಿ
ಮೊದಲಿಗೆ ವಾಟ್ಸಾಪ್ ಇನ್‌ಸ್ಟಾಲ್‌ ಮಾಡಿ, ಸೈನಪ್ ಆಗಿ ಮತ್ತು ವಾಟ್ಸಾಪ್‌ ಖಾತೆ ಓಪನ್‌ ಮಾಡಿ. OTP ನೀಡಿದ ನಂತರ ನೀವು ವಾಟ್ಸಾಪ್‌ ಬಳಸಬಹುದು.

ವಾಟ್ಸಾಪ್ ಕರೆಯಲ್ಲಿ ಇಂಟರ್ನೆಟ್ ಬಿಲ್‌ ಸೇವ್‌ ಮಾಡಲು ಈ ಹಂತಗಳನ್ನು ಪಾಲಿಸಿ

#2 ಸೆಟ್ಟಿಂಗ್ಸ್ ಚೇಂಜ್‌ ಮಾಡಿ ಮತ್ತು ಚಾಟ್‌ ಅಂಡ್‌ ಕಾಲ್ಸ್ ಕ್ಲಿಕ್ ಮಾಡಿ
ವಾಟ್ಸಾಪ್‌ ಖಾತೆ ಓಪನ್‌ ಮಾಡಿದ ನಂತರ ಸೆಟ್ಟಿಂಗ್ಸ್‌ಗೆ ಹೋಗಿ, Chats and calls ಅಥವಾ data usage option ಗೆ ಹೋಗಿ. ಈ ಆಪ್ಶನ್‌ ನಿಮಗೆ ಡಾಟಾ ಸೇವ್‌ ಮಾಡಲು ಸಹಾಯಕವಾಗಿದೆ. ಆದರೆ ಡಾಟಾ ಉಳಿತಾಯ ವರ್ಸನ್ ಆಧಾರಿತವಾಗಿರುತ್ತದೆ.

ವಾಟ್ಸಾಪ್ ಕರೆಯಲ್ಲಿ ಇಂಟರ್ನೆಟ್ ಬಿಲ್‌ ಸೇವ್‌ ಮಾಡಲು ಈ ಹಂತಗಳನ್ನು ಪಾಲಿಸಿ

#3 Low Data Usage ಅಪ್ಶನ್ ಆನ್‌ ಮಾಡಿ
Chats and calls ಅಥವಾ data usage option ಸೆಲೆಕ್ಟ್ ಮಾಡಿದ ನಂತರ ಹಲವು ಆಪ್ಶನ್‌ಗಳ ಪಟ್ಟಿ ಕಾಣುತ್ತದೆ. ಅದರಲ್ಲಿ Low Data Usage ಅಪ್ಶನ್ ಎನೇಬಲ್‌ ಮಾಡಿ.

Low Data Usage ಅಪ್ಶನ್ ಕೆಳಗೆ, "Lower the amount of data used during a WhatsApp call" ಎಂದು ತೋರಿಸುತ್ತದೆ.

ವಾಟ್ಸಾಪ್ ಕರೆಯಲ್ಲಿ ಇಂಟರ್ನೆಟ್ ಬಿಲ್‌ ಸೇವ್‌ ಮಾಡಲು ಈ ಹಂತಗಳನ್ನು ಪಾಲಿಸಿ

ಕಡಿಮೆ ಡಾಟಾದಿಂದ ವಾಟ್ಸಾಪ್‌ ಕರೆ ಎಂಜಾಯ್‌ ಮಾಡಿ
ಮೇಲಿನ 3 ಹಂತಗಳನ್ನು ಫಾಲೋ ಮಾಡಿ ನಂತರ ವಾಟ್ಸಾಪ್‌ನಲ್ಲಿನ ನಿಮ್ಮ ಕಾಂಟ್ಯಾಕ್ಟ್‌ಗೆ ಕರೆ ಮಾಡಿ. ನಂತರ ರಿಸಲ್ಟ್ ನೋಡಿ.

English summary
3 ULTIMATE Steps to Save Internet Bill on WhatsApp Calls. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot