Subscribe to Gizbot

ಬರೇ ರೂ 25 ಕ್ಕೆ ವೊಡಾಫೋನ್ ನೀಡಲಿದೆ 1ಜಿಬಿ 4ಜಿ ಡೇಟಾ

Written By:

ರಿಲಾಯನ್ಸ್ ಜಿಯೋ 4ಜಿ ಸೇವೆಗಳನ್ನು ಭಾರತದಲ್ಲಿ ಲಾಂಚ್ ಮಾಡಿದೊಂದಿಗೆ, ಇತರ ಟೆಲಿಕಾಮ್ ಸಂಸ್ಥೆಗಳೂ ಕೂಡ ಪ್ರಸ್ತುತ ಯೋಜನೆಗಳ ಮೇಲೆ ಆಫರ್‌ಗಳನ್ನು ನೀಡುತ್ತಿದೆ. ಈ ಆಕರ್ಷಕ ಯೋಜನೆಗಳು ಬಳಕೆದಾರರಿಗೆ ಪೂರಕವಾಗಿದ್ದು ಅವರುಗಳ ನಿತ್ಯದ ಜೀವನಕ್ಕೆ ಪ್ರಯೋಜವನ್ನು ಒದಗಿಸುವುದರ ಜೊತೆಗೆ ಖರ್ಚು ವೆಚ್ಚದ ಮೇಲೂ ನಿಯಂತ್ರಣವನ್ನು ಹೇರಲಿದೆ.

ಓದಿರಿ: ಜಿಯೋ ಕುರಿತ ಹತ್ತು ಸಂಗತಿಗಳು ನೀವು ತಿಳಿದಿದ್ದರೆ ಉತ್ತಮ

ಇತ್ತೀಚೆಗೆ ತಾನೇ ವೊಡಾಫೋನ್ ತನ್ನ 4ಜಿ ಪ್ಲಾನ್‌ಗಳ ಮೇಲೆ ಅದ್ಭುತ ಆಫರ್ ಅನ್ನು ತಂದಿದ್ದು 10 ಜಿಬಿಯ 4ಜಿ ಡೇಟಾವನ್ನು 1ಜಿಬಿ ದರದಲ್ಲಿ ನೀಡುತ್ತಿದೆ. ರೂ 25 ಕ್ಕೆ 1ಜಿಬಿ 4ಜಿಬಿ ಡೇಟಾವನ್ನು ಕಂಪೆನಿ ಬಳಕೆದಾರರಿಗೆ ನೀಡುತ್ತಿದೆ. ರೂ 25 ಎಂಬುದು ಜಿಯೋ ಯೋಜನೆಗಳಿಗಿಂತ ಹೆಚ್ಚು ಕಡಿಮೆ ಎಂದೆನಿಸಿದ್ದು ಇದು 1ಜಿಬಿ 4ಜಿ ಡೇಟಾವನ್ನು ರೂ 50 ಕ್ಕೆ ಒದಗಿಸುತ್ತಿದೆ. ಅದಾಗ್ಯೂ ವೊಡಾಫೋನ್ ಕೆಲವೊಂದು ಷರತ್ತುಗಳನ್ನು ವಿಧಿಸಿದ್ದು ಉಚಿತವಾಗಿ 4ಜಿ ಡೇಟಾದ 9ಜಿಬಿ ಪ್ಯಾಕ್ ಅನ್ನು ಪಡೆದುಕೊಳ್ಳುವುದು ಹೇಗೆ ಎಂಬುದನ್ನು ಅರಿತುಕೊಳ್ಳಿ.

ಓದಿರಿ: ಬಂಪರ್ ಆಫರ್! ಏರ್‌ಟೆಲ್‌ನ 5ಜಿಬಿ ಉಚಿತ 4ಜಿ ಇಂಟರ್ನೆಟ್ ಪಡೆಯುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
1 ಜಿಬಿ ದರದಲ್ಲಿ 10 ಜಿಬಿ 4ಜಿ ಡೇಟಾವನ್ನು ಪಡೆದುಕೊಳ್ಳಿ

1 ಜಿಬಿ ದರದಲ್ಲಿ 10 ಜಿಬಿ 4ಜಿ ಡೇಟಾವನ್ನು ಪಡೆದುಕೊಳ್ಳಿ

ಈ ಆಫರ್ ಪ್ರಕಾರವಾಗಿ, ರೂ 250 ಕ್ಕೆ 4ಜಿ ಡೇಟಾದ 1ಜಿಬಿಯನ್ನು ಪಡೆದುಕೊಳ್ಳುತ್ತಿದ್ದಲ್ಲಿ ಕಂಪೆನಿ ನೀಡುತ್ತಿರುವ 9ಜಿಬಿ ಡೇಟಾವನ್ನು ಉಚಿತವಾಗಿ ನಿಮಗೆ ಪಡೆದುಕೊಳ್ಳಬಹುದಾಗಿದೆ.

ಈ ವರ್ಷದ ಅಂತ್ಯದವರೆಗೆ ಆಫರ್ ಮಾನ್ಯವಾಗಿರುತ್ತದೆ

ಈ ವರ್ಷದ ಅಂತ್ಯದವರೆಗೆ ಆಫರ್ ಮಾನ್ಯವಾಗಿರುತ್ತದೆ

ಈ ಆಫರ್ ಡಿಸೆಂಬರ್ 31, 2016 ರವರೆಗೆ ಮಾನ್ಯವಾಗಿರುತ್ತದೆ. ಈ ಅವಧಿಯೊಳಗೆ 4ಜಿ ಡೇಟಾ 9ಜಿಬಿ ಪಡೆದುಕೊಳ್ಳಲು ನಿಮ್ಮ ಸಂಖ್ಯೆಯನ್ನು ಎಷ್ಟು ಬಾರಿ ಬೇಕಾದರೂ ರಿಚಾರ್ಜ್ ಮಾಡಬಹುದಾಗಿದೆ.

ಇಲ್ಲೂ ಒಂದು ತಂತ್ರವಿದೆ

ಇಲ್ಲೂ ಒಂದು ತಂತ್ರವಿದೆ

ನೀವು ಖರೀದಿ ಮಾಡುತ್ತಿರುವ 1 ಜಿಬಿ ಡೇಟಾದೊಂದಿಗೆ ವೊಡಾಫೋನ್ ಉಚಿತ 9ಜಿಬಿ 4ಜಿ ಡೇಟಾವನ್ನು ಒದಗಿಸುತ್ತಿದೆ. ಆದರೆ 9ಜಿಬಿ ಡೇಟಾವನ್ನು ನಿಮ್ಮ ಇಷ್ಟದ ಪ್ರಕಾರ ಬಳಸುವಂತಿಲ್ಲ. ಇದನ್ನು ಬೆಳಗ್ಗೆ 12 ರಿಂದ ಮರುದಿನ ಬೆಳಗ್ಗೆ 6 ರವರೆಗೆ ಪ್ರತೀ ದಿನ ಬಳಸಬಹುದು.

ಇತರ ವಿಷಯಗಳಿಗೆ ಉಚಿತ ಚಂದಾದಾರಿಕೆ ಪಡೆದುಕೊಳ್ಳಿ

ಇತರ ವಿಷಯಗಳಿಗೆ ಉಚಿತ ಚಂದಾದಾರಿಕೆ ಪಡೆದುಕೊಳ್ಳಿ

ಈ ಆಫರ್‌ನ ಅಂಗವಾಗಿ, ವೊಡಾಫೋನ್ ಚಂದಾದಾರರು ಚಲನ ಚಿತ್ರಗಳು, ಟಿವಿ ಮತ್ತು ವೊಡಾಫೋನ್ ಪ್ಲೇನಲ್ಲಿ ಮ್ಯೂಸಿಕ್‌ಗಾಗಿ ಉಚಿತ ಚಂದಾದಾರಿಕೆಯನ್ನು ಪಡೆಯಬಹುದಾಗಿದೆ. 4ಜಿ ಡೇಟಾದ ಉಚಿತ 9ಜಿಬಿ ಯೋಜನೆಯಲ್ಲಿ ಇದು ಒಳಗೊಂಡಿದೆ.

ಹೊಸ 4ಜಿ ಫೋನ್ ಅನ್ನು ಬಳಸಬೇಕು

ಹೊಸ 4ಜಿ ಫೋನ್ ಅನ್ನು ಬಳಸಬೇಕು

ನೀವು ರೂ 250 ಅನ್ನು ಪಾವತಿ ಮಾಡುವುದರ ಮೂಲಕ 9 ಜಿಬಿ 4ಜಿ ಡೇಟಾವನ್ನು ಪಡೆದುಕೊಳ್ಳಲು ನೀವು ಹೊಸ 4ಜಿ ಸ್ಮಾರ್ಟ್‌ಫೋನ್ ಅನ್ನು ಬಳಸಬೇಕು. ರೂ 25 ಕ್ಕೆ 1ಜಿಬಿ 4ಜಿ ಡೇಟಾವನ್ನು ಬಳಸಲು ನೀವು ಆರು ತಿಂಗಳವರೆಗೆ ವೊಡಾಫೋನ್ ಸಿಮ್ ಕಾರ್ಡ್ ಅನ್ನು ಬಳಸುವಂತಿಲ್ಲ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
You need to know these in order to make the most out of the plan and get 9 GB of 4G data for free. Take a look at the same from below.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot