ಒನ್ ಆಗದ ವಿಂಡೊಸ್/ಮ್ಯಾಕ್‍ಬುಕ್ ಲ್ಯಾಪ್‍ಟಾಪ್ ಸ್ಕ್ರೀನ್ ಸರಿಪಡಿಸಲು 5 ತಂತ್ರಗಳು

By Prateeksha
|

ವಿಂಡೊಸ್ ಅಥವಾ ಮ್ಯಾಕ್‍ಬುಕ್ ಲ್ಯಾಪ್‍ಟಾಪ್ ಬೂಟಪ್ ಆಗದಿದ್ದರೆ ದುಃಖದ ಸನ್ನಿವೇಶ, ಅಂತಹ ಸಂಧರ್ಭದಲ್ಲಿ ನಿಮ್ಮ ಲ್ಯಾಪ್‍ಟಾಪ್ ಪರೀಕ್ಷಿಸಿ ಮತ್ತು ಯಾವ ತರಹದ ಸಮಸ್ಯೆ ಇರಬಹುದೆಂದು ಊಹಿಸಿ ಒಂದು ಪಟ್ಟಿ ಮಾಡಿ.

ಒನ್ ಆಗದ ವಿಂಡೊಸ್/ಮ್ಯಾಕ್‍ಬುಕ್ ಲ್ಯಾಪ್‍ಟಾಪ್ ಸ್ಕ್ರೀನ್ ಸರಿಪಡಿಸಲು 5 ತಂತ್ರಗಳು

ಇದರಿಂದ, ಬಹಳಷ್ಟು ಕೆಲಸ ಮಾಡುವುದರಿಂದ ತಪ್ಪಿಸಿಕೊಳ್ಳಬಹುದು ಒಂದು ವೇಳೆ ಸಮಸ್ಯೆ ಸರಳವಾಗಿದ್ದರೆ. ಹೀಗಾಗಿ, ಕೆಳಗಿನ ಪಟ್ಟಿಯನ್ನೊಮ್ಮೆ ಪರೀಕ್ಷಿಸಿ ನಿಮ್ಮ ಸಮಸ್ಯೆ ಬಗೆಹರಿಸಲು ಸರ್ವಿಸ್ ಸೆಂಟರ್‍ಗೆ ಹೋಗುವ ಮುಂಚೆ.

ಓದಿರಿ: ಪೇಟಿಎಮ್ ಬಳಸಿ 'IRCTC' ಇಂದ ರೈಲ್ವೆ ಟಿಕೆಟ್ ಬುಕ್‌ ಮಾಡಬಹುದು!

ಪವರ್ ಸಪ್ಲೈ ಪರೀಕ್ಷಿಸಿ

ಸಾಮಾನ್ಯ ಸಮಸ್ಯೆಯೆಂದರೆ ಪವರ್ ಸಪ್ಲೈ ನ ದುರುಪಯೋಗ. ಸಮಸ್ಯೆ ಶುರುವಾಗಬಹುದು ತಪ್ಪಾದ ಲ್ಯಾಪ್‍ಟಾಪ್ ಪವರ್ ಸಪ್ಲೈ ಉಪಯೋಗಿಸುವುದರಿಂದ ಹಿಡಿದು ಪ್ಲಗ್ ಒಳಗೆ ಬ್ಲೊನ್ ಫ್ಯುಸ್ ತನಕ. ತಯಾರಕರು ಒಂದೇ ರೀತಿಯ ಪ್ಲಗ್ ಸೈಜ್‍ಗಳನ್ನು ಪ್ರೊಡಕ್ಟ್ ಗಳಿಗಾಗಿ ಉಪಯೋಗಿಸುತ್ತಾರೆ ಆದರೆ ಕರೆಂಟ್ ಅಥವಾ ವೊಲ್ಟೆಜ್ ನಲ್ಲಿ ವ್ಯತ್ಯಾಸವಿರಬಹುದು. ಯಾವಾಗಲು ನಿಮ್ಮ ಲ್ಯಾಪ್‍ಟಾಪ್ ನ ಚಾರ್ಜರ್ ಬಳಸುತ್ತಿದ್ದಿರಾ ಎಂದು ಪರೀಕ್ಷಿಸಿ.

ಡಿಸ್ಪ್ಲೆ ಪರೀಕ್ಷಿಸಿ

ನಿಮ್ಮ ಲ್ಯಾಪ್‍ಟಾಪ್ ಅನ್ನು ಎಕ್ಸ್‍ಟರ್ನಲ್ ಪ್ರೊಜೆಕ್ಟರ್ಸ್ ಅಥವಾ ಮೊನಿಟರ್ಸ್ ಗೆ ಕನೆಕ್ಟ್ ಮಾಡಿದ್ದರೆ ಡಿಸ್‍ಕನೆಕ್ಟ್ ಮಾಡಿ, ಏಕೆಂದರೆ ಕೆಲವೊಮ್ಮೆ ಇದು ಬೂಟಿಂಗ್ ಆಗುವುದನ್ನು ತಡೆಯುತ್ತದೆ. ಹಾಗೆಯೇ, ನಿಮ್ಮ ಲ್ಯಾಪ್‍ಟಾಪ್ ಎಲ್‍ಇಡಿ ಲೈಟ್ ಇದ್ದು ಹಾರ್ಡ್‍ಡಿಸ್ಕ್ ರನ್ ಆಗುವ ಶಬ್ದ ಕೇಳುತ್ತಿದ್ದಲ್ಲಿ ಸಮಸ್ಯೆ ನಿಮ್ಮ ಸ್ಕ್ರೀನ್ ನಲ್ಲಿದೆ. ಒಂದು ವೇಳೆ ಮಸಕು ಚಿತ್ರ ಡಿಸ್ಪ್ಲೆ ಮೇಲೆ ಕಾಣುತ್ತಿದ್ದರೆ ಸ್ಕ್ರೀನ್ ಇನ್‍ವರ್ಟರ್ ನಲ್ಲಿ ಸಮಸ್ಯೆ ಇರಬಹುದು.

ಎಲ್ಲಾ ಡೊಕ್ಕಿಂಗ್ ಸ್ಟೇಶನ್ಸ್ ಮತ್ತು ಪೆರಿಫಿರಲ್ ಗಳನ್ನು ತೆಗೆಯಿರಿ

ಒಂದು ವೇಳೆ ನಿಮ್ಮ ಲ್ಯಾಪ್‍ಟಾಪನ್ನು ಯಾವುದಾದರು ಡೊಕ್ಕಿಂಗ್ ಸ್ಟೇಶನ್ಸ್ ಗೆ ಕನೆಕ್ಟ್ ಮಾಡಿದ್ದರೆ ಡಿಸ್‍ಕನೆಕ್ಟ್ ಮಾಡಿ ನೋಡಿ ಅದರಿಂದ ಸಮಸ್ಯೆಯಾಗಿದೆಯೆ ಎಂದು ತಿಳಿಯಲು. ನೀವು ಟ್ರಬಲ್‍ಶೂಟಿಂಗ್ ಮಾಡುತ್ತಿದ್ದಲ್ಲಿ ನಿಮ್ಮ ಲ್ಯಾಪ್‍ಟಾಪ್ ನಿಂದ ಎಲ್ಲಾ ಎಕ್ಸ್‍ಟರ್ನಲ್ ಡಿವೈಜ್‍ಗಳನ್ನು ತೆಗೆಯಿರಿ – ಮೌಸ್,ಪೆನ್ ಡ್ರೈವ್ ಮತ್ತು ಎಕ್ಸ್‍ಟರ್ನಲ್ ಹಾರ್ಡ್ ಡಿಸ್ಕ್ ಗಳನ್ನು ಸೇರಿಸಿ.

ಓದಿರಿ: ನಿಮ್ಮ ಆಂಡ್ರಾಯ್ಡ್, ಐಫೋನ್‌ಗಳು ಅಸಲಿಯೇ/ನಕಲಿಯೇ ಪತ್ತೆ ಹೇಗೆ?

ಬ್ಯಾಡ್ ಹಾರ್ಡ್‍ವೇರ್

ಮೇಲಿನ ಯಾವುದೇ ವಿಧ ಕೆಲಸ ಮಾಡದಿದ್ದಲ್ಲಿ, ಹಾರ್ಡ್‍ವೇರ್ ಕಾಂಪೊನೆಂಟ್ಸ್ ನಲ್ಲಿ ಸಮಸ್ಯೆ ಇರಬಹುದು. ಹಾಗಿದ್ದಲ್ಲಿ, ಹತ್ತಿರದ ಸರ್ವಿಸ್ ಸೆಂಟರ್ ಅಥವಾ ಬೇರಾವುದೆ ರಿಪೇರಿ ಶಾಪ್ ಗೆ ತೆಗೆದುಕೊಂಡು ಹೋಗಿ.

ಬ್ಯಾಟರಿ ಡ್ರೇನ್ ಮಾಡಿ

ಕೆಲವೊಮ್ಮೆ ಡಿವೈಜ್ ಒವರ್‍ಚಾರ್ಜ್ ಮಾಡಿದರೆ ರೆಸಿಡ್ಯುಯಲ್ ಎಲೆಕ್ಟ್ರಿಕ್ ಚಾರ್ಜ್ ನಿಮ್ಮ ಲ್ಯಾಪ್‍ಟಾಪ್ ಬೂಟ್ ಆಗದಂತೆ ತಡೆಯಬಹುದು. ಹೀಗಾಗಿ ಇದನ್ನು ತಡೆಯಲು ನೀವು ಕೆಳಗಿನ ವಿಧಾನ ಅನುಸರಿಸಿ.

ಹಂತ 1: ಎಸಿ ಅಡಾಪ್ಟರ್ ಡಿಸ್‍ಕನೆಕ್ಟ್ ಮಾಡಿ ಮತ್ತು ಬ್ಯಾಟರಿ ತೆಗೆಯಿರಿ.

ಹಂತ 2: ಪವರ್ ಬಟನ್ ಅನ್ನು 15 ಸೆಕೆಂಡುಗಳ ವರೆಗೆ ಒತ್ತಿ ಹಿಡಿಯಿರಿ

ಹಂತ 3: ಈಗ ಎಸಿ ಅಡಾಪ್ಟರ್ ಲ್ಯಾಪ್‍ಟಾಪ್ ಗೆ ಪ್ಲಗ್ ಮಾಡಿ.

ಹಂತ 4: ಮಾಡಿದ ಮೇಲೆ, ಪವರ್ ಬಟನ್ ಒತ್ತಿ ಲ್ಯಾಪ್‍ಟಾಪ್ ಆನ್ ಮಾಡಿ.

ಲ್ಯಾಪ್‍ಟಾಪ್ ನ ಉತ್ತಮ ಒನ್‍ಲೈನ್ ಡೀಲ್ಸ್ ಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Troubleshooting a Windows or MacBook laptop doesn't boot up is indeed a sad scenario! In this case, start diagnosing your laptop and make a checklist of possible problems.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X