Just In
- 7 hrs ago
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- 8 hrs ago
ತಿಮ್ಮಪ್ಪನ ಭಕ್ತರಿಗಾಗಿ ಹೊಸ ಆ್ಯಪ್ ಪರಿಚಯಿಸಿದ ಟಿಟಿಡಿ! ಏನೆಲ್ಲಾ ಸೇವೆಗಳು ಲಭ್ಯ!
- 8 hrs ago
ನೀವು ದಿನವೂ ಬಳಸುವ ಗೂಗಲ್ನ ಈ ಆಪ್ಗಳಲ್ಲಿ ಎಐ ಹೇಗೆ ಕೆಲಸ ಮಾಡಲಿದೆ!?; ಇಲ್ಲಿದೆ ವಿವರ
- 9 hrs ago
ಗೂಗಲ್ ಕ್ರೋಮ್ ಬಳಸುವವರಿಗೆ ಭಾರತ ಸರ್ಕಾರದಿಂದ ಖಡಕ್ ಎಚ್ಚರಿಕೆ! ಯಾಕೆ ? ಸಮಸ್ಯೆ ಏನು?
Don't Miss
- News
ಫಾರೆನ್ಸಿಕ್ ಕ್ಯಾಂಪಸ್ ಶಂಕುಸ್ಥಾಪನೆಗೆ ಆಗಮಿಸಲಿರುವ ಅಮಿತ್ ಶಾ: ಧಾರವಾಡದಲ್ಲಿ ಭಾರಿ ಬಿಗಿ ಭದ್ರತೆ
- Movies
ವಿಷ್ಣು ಸ್ಮಾರಕ ವಿಚಾರಕ್ಕೆ ಆಕ್ರೋಶ: ಫಿಲ್ಮ್ ಚೇಂಬರ್ ವಿರುದ್ಧ ಸಿಡಿದೆದ್ದ ವೀರಕಪುತ್ರ ಶ್ರೀನಿವಾಸ್
- Sports
Ind vs NZ1st T20: ವಾಶಿಂಗ್ಟನ್ 'ಸುಂದರ' ಆಟ ವ್ಯರ್ಥ: ಭಾರತಕ್ಕೆ ಮೊದಲ ಪಂದ್ಯದಲ್ಲೇ ಸೋಲಿನ ಆಘಾತ
- Lifestyle
2023ರಲ್ಲಿ ರಾಜಯೋಗದಿಂದಾಗಿ ಈ 4 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್
- Finance
7th Pay Commission: ನೌಕರರಿಗೆ ಸಿಹಿ ಸುದ್ದಿ: ಬಾಕಿ DA ಹಣ ನೀಡಲು ಕೇಂದ್ರ ಸರ್ಕಾರ ನಿರ್ಧಾರ, ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಆ್ಯಂಡ್ರಾಯ್ಡ್ ಫೋನಿನಲ್ಲಿ ವಾಟ್ಸಪ್ ಮೆಸೇಜುಗಳನ್ನು ಶೆಡ್ಯೂಲ್ ಮಾಡುವುದು ಹೇಗೆ?
ಮೆಸೇಜು ಕಳುಹಿಸಲು ಸ್ಮಾರ್ಟ್ ಫೋನ್ ಬಳಕೆದಾರರು ಉಪಯೋಗಿಸುವ ತಂತ್ರಾಂಶ ವಾಟ್ಸಪ್. ಬಳಕೆದಾರ ಸ್ನೇಹಿಯಾಗಲು ವಾಟ್ಸಪ್ ಅನೇಕ ಹೊಸ ವೈಶಿಷ್ಟ್ಯತೆಗಳನ್ನು ಹಾಗೂ ಅಪ್ ಡೇಟ್ ಗಳನ್ನು ನೀಡುತ್ತಲೇ ಇದೆ.

ವಾಟ್ಸಪ್ ಮೂಲಕ ವಾಯ್ಸ್ ಮೆಸೇಜುಗಳನ್ನು ಕಳುಹಿಸಬಹುದು, ಕಡತಗಳನ್ನು ಹಂಚಿಕೊಳ್ಳಬಹುದು, ಅನೇಕರಿಗೆ ಮೆಸೇಜು ಕಳುಹಿಸಬಹುದು, ಮೆಸೇಜುಗಳನ್ನು ಗುರುತು ಹಾಕಬಹುದು, ಹಲವು ಮೆಸೇಜುಗಳನ್ನು ಒಟ್ಟಿಗೇ ಡಿಲೀಟ್ ಮಾಡಬಹುದು. ಆದರೆ ಇಲ್ಲಿಯವರೆಗೂ ಬಳಕೆದಾರರು ಅವರ ಅನುಕೂಲಕ್ಕೆ ತಕ್ಕಂತೆ ಮೆಸೇಜುಗಳನ್ನು ಶೆಡ್ಯೂಲ್ ಮಾಡುವ ಸೌಕರ್ಯವನ್ನು ನೀಡಿರಲಿಲ್ಲ.
ಓದಿರಿ: ವಾಟ್ಸಾಪ್‌ನಲ್ಲಿ ಜಿಫ್ ಇಮೇಜ್ ಕ್ರಿಯೇಟ್ ಮತ್ತು ಸೆಂಡ್ ಹೇಗೆ?
ಫೇಸ್ ಬುಕ್ಕಿನ ರೀತಿಯಲ್ಲೇ, ವಾಟ್ಸಪ್ಪಿನ ಮೆಸೇಜುಗಳನ್ನು ಇನ್ನು ಮುಂದೆ ಮೆಸೇಜಿಗೊಂದು ಸಮಯ ಸೇರಿಸುವ ಮೂಲಕ ಶೆಡ್ಯೂಲ್ ಮಾಡಬಹುದು. ಇದನ್ನು ಸಾಧ್ಯವಾಗಿಸಲು ಆ್ಯಂಡ್ರಾಯ್ಡಿನಲ್ಲಿ ಲಭ್ಯವಿರುವ ಶೆಡ್ಯೂಲ್ ವಾಟ್ಸಪ್ ಮೆಸೇಜಸ್ ತಂತ್ರಾಂಶವನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು. ನಿಮ್ಮ ಸ್ಮಾರ್ಟ್ ಫೋನ್ ರೂಟ್ ಆಗಿದ್ದರೆ ಮಾತ್ರ ಇದು ಕೆಲಸ ಮಾಡುತ್ತದೆ ಎನ್ನುವುದನ್ನು ನೆನಪಿಡಿ.
ಓದಿರಿ: ರಿಲಾಯನ್ಸ್ ಜಿಯೋ ಸಿಮ್ ಬೆಂಬಲಿಸುವ 4ಜಿ ಸ್ಮಾರ್ಟ್‌ಫೋನ್‌ಗಳು
ವಾಟ್ಸಪ್ ಮೆಸೇಜುಗಳನ್ನು ಶೆಡ್ಯೂಲ್ ಮಾಡುವ ವಿಧಾನವನ್ನು ಅರಿಯಲು ಕೆಳಗಿನ ಸ್ಲೈಡರನ್ನು ನೋಡಿ.

ಹಂತ 1.
ಮೊದಲಿಗೆ, ನಿಮ್ಮ ಆ್ಯಂಡ್ರಾಯ್ಡ್ ಫೋನಿನಲ್ಲಿ ವಾಟ್ಸಪ್ ಶೆಡ್ಯೂಲಿಂಗ್ ಆ್ಯಪ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಿ.

ಹಂತ 2.
ಆ್ಯಪ್ ಅನ್ನು ತೆರೆದಾಗ, ಅದನ್ನು ಉಪಯೋಗಿಸಲು ಸೂಪರ್ ಯೂಸರ್ ಅನುಮತಿ ಅತ್ಯವಶ್ಯ. ಸೂಪರ್ ಯೂಸರ್ ಅನುಮತಿಯನ್ನು ನೀಡಿ.

ಹಂತ 3.
ನಂತರ, ಪೆಂಡಿಂಗ್ ಮೆಸೇಜಸ್ ಮೆನುವಿನ ಬಲ ಮೇಲ್ತುದಿಯಲ್ಲಿರುವ ಪೆನ್ಸಿಲ್ ಆಕಾರದ ಐಕಾನ್ ಮೇಲೆ ಕ್ಲಿಕ್ಕಿಸಿ ಮತ್ತು ನಿಮ್ಮ ಮೆಸೇಜನ್ನು ಯಾರಿಗೆ ಅಥವಾ ಯಾವ ಗುಂಪಿಗೆ ಕಳುಹಿಸಬೇಕೆಂಬುದನ್ನು ಆಯ್ಕೆ ಮಾಡಿ ಸಮಯವನ್ನು ನಿಗದಿಪಡಿಸಿ.

ಹಂತ 4.
ಈಗ, ಆ್ಯಡ್ ಬಟನ್ನಿನ ಮೇಲೆ ಕ್ಲಿಕ್ ಮಾಡಿ, ಸಂಪರ್ಕವನ್ನು ಆಯ್ಕೆ ಮಾಡಿ, ಮೆಸೇಜನ್ನು ಆಯ್ಕೆ ಮಾಡಿ. ನಿಮ್ಮ ಮೆಸೇಜು ಪೆಂಡಿಂಗ್ ಮೆಸೇಜ್ ಟ್ಯಾಬಿನಲ್ಲಿರುತ್ತದೆ, ನೀವು ನಿಗದಿಗೊಳಿಸಿದ ಸಮಯಕ್ಕೆ ಆ ಮೆಸೇಜು ಕಳುಹಿಸಲ್ಪಡುತ್ತದೆ.

ಹಂತ 5.
ಅಷ್ಟೇ! ನೀವೀಗಾಗಲೇ ವಾಟ್ಸಪ್ ಮೆಸೇಜನ್ನು ಶೆಡ್ಯೂಲ್ ಮಾಡಿದ್ದೀರ. ನೀವು ಶೆಡ್ಯೂಲ್ ಮಾಡಿರುವ ಎಲ್ಲಾ ಮೆಸೇಜುಗಳನ್ನು ಈ ಟ್ಯಾಬಿನಲ್ಲಿ ನೋಡಬಹುದು.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470