ಫೋನ್ ಚಾರ್ಜಿಂಗ್: ಬೆನ್ನು ಬಿಡದ ತಪ್ಪು ತಿಳುವಳಿಕೆಗಳು

By Shwetha
|

ಹೆಚ್ಚಿನ ಸ್ಮಾರ್ಟ್‌ಫೋನ್‌ ಬಳಕೆದಾರರು ಫೋನ್ ಚಾರ್ಜ್‌ನಲ್ಲಿರುವಾಗ ಅದನ್ನು ಬಳಸುವುದು ಸರಿ ಎಂದೇ ಭಾವಿಸಿರುತ್ತಾರೆ. ನೀವು ಈ ಸಮಯದಲ್ಲಿ ಫೋನ್ ಬಳಕೆ ಮಾಡುವುದರಿಂದ ಡಿವೈಸ್‌ಗೆ ಯಾವುದೇ ಹಾನಿ ಉಂಟಾಗದೇ ಇದ್ದರೂ ಚಾರ್ಜ್ ಆಗುವುದರಲ್ಲಿ ನಿಧಾನ ಗತಿಯನ್ನು ನೀವು ಅನುಭವಿಸಬಹುದು. ಇಂತಹುದೇ ಸಾಕಷ್ಟು ಚಾರ್ಜಿಂಗ್ ಕ್ರಮದ ತಪ್ಪು ತಿಳುವಳಿಕೆಗಳು ಇದ್ದು ಇಂದಿನ ಲೇಖನದಲ್ಲಿ ಇದರ ಕುರಿತೇ ನಾವು ಚರ್ಚಿಸಲಿದ್ದೇವೆ.

ಓದಿರಿ: ಈ ಟ್ರಿಕ್ಸ್‌ಗಳನ್ನು ಬಳಸಿ ಶರವೇಗದಲ್ಲಿ ಫೋನ್ ಚಾರ್ಜ್ ಮಾಡಿ

ಯಾವಾಗಲೂ ಸ್ಮಾರ್ಟ್‌ಫೋನ್ ಅನ್ನು ಪೂರ್ಣವಾಗಿ ಚಾರ್ಜ್ ಮಾಡಿ

ಯಾವಾಗಲೂ ಸ್ಮಾರ್ಟ್‌ಫೋನ್ ಅನ್ನು ಪೂರ್ಣವಾಗಿ ಚಾರ್ಜ್ ಮಾಡಿ

ಈ ಹಿಂದೆ ಬ್ಯಾಟರಿ ಸ್ಥಿತಿಯಲ್ಲಿ ಬಹಳಷ್ಟು ಹಿನ್ನಡೆಗಳಿದ್ದು ಅವುಗಳನ್ನು ನಿರ್ವಹಿಸುವುದಕ್ಕಾಗಿ ಪೂರ್ಣವಾಗಿ ಚಾರ್ಜ್ ಮಾಡಬೇಕು ಎಂಬುದಾಗಿ ತಿಳಿಸುತ್ತಿದ್ದರು. ಇಂದು ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು ಲಿಥಿಯಮ್-ಐಯಾನ್ ರಿಚಾರ್ಜೇಬಲ್ ಬ್ಯಾಟರಿಗಳನ್ನು ಪಡೆದುಕೊಂಡು ಬಂದಿವೆ, ಇವುಗಳ ಬ್ಯಾಟರಿ ಡ್ರೈನ್ ಮಾಡದೇ ಇದ್ದರೂ ಅವುಗಳು ಉತ್ತಮವಾಗಿಯೇ ಕಾರ್ಯನಿರ್ವಹಿಸಲಿವೆ.

ಓಇಎಮ್ ಚಾರ್ಜರ್‌ಗಳೇ ಹೆಚ್ಚು ಸೂಕ್ತ

ಓಇಎಮ್ ಚಾರ್ಜರ್‌ಗಳೇ ಹೆಚ್ಚು ಸೂಕ್ತ

ನಿಮ್ಮದೇ ಸ್ಮಾರ್ಟ್‌ಫೋನ್ ಚಾರ್ಜರ್‌ಗಳನ್ನು ಬಳಸುವುದೇ ಹೆಚ್ಚು ಸೂಕ್ತ ಎಂಬುದಕ್ಕೆ ನಾವಿಲ್ಲಿ ಒತ್ತು ಕೊಡುತ್ತಿದ್ದೇವೆ. ಬ್ರ್ಯಾಂಡ್ ಅಲ್ಲದ ಚಾರ್ಜರ್‌ಗಳನ್ನು ನಿಮ್ಮ ಫೋನ್‌ಗೆ ಬಳಸುವ ಸಮಯದಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿ ಅಂತೆಯೇ ಇಂತಹ ಚಾರ್ಜರ್‌ಗಳನ್ನು ಬಳಸದಿರಿ ಎಂಬುದಾಗಿ ನಾವು ಸಲಹೆ ನೀಡುತ್ತೇವೆ.

ರಾತ್ರಿ ಪೂರ್ತಿ ಫೋನ್ ಚಾರ್ಜ್ ಮಾಡದಿರಿ

ರಾತ್ರಿ ಪೂರ್ತಿ ಫೋನ್ ಚಾರ್ಜ್ ಮಾಡದಿರಿ

ನೀವು ಮಲಗುವಾಗ ರಾತ್ರಿ ಪೂರ್ತಿ ಫೋನ್ ಚಾರ್ಜ್ ಮಾಡುವುದು ಅಪಾಯಕಾರಿ ಎಂಬುದು ಹಲವರ ನಂಬಿಕೆಯಾಗಿದೆ. ಅಂತೆಯೇ ಫೋನ್ ಪೂರ್ತಿ ಚಾರ್ಜ್ ಆದ ನಂತರ ಕೂಡ ಚಾರ್ಜರ್‌ನಲ್ಲಿಯೇ ಇದನ್ನು ಪ್ಲಗಿನ್ ಮಾಡುವುದು ಅಪಾಯಕಾರಿ ಎಂಬುದು ಕೂಡ ಹಲವಾರು ಬಳಕೆದಾರರ ಭಯವಾಗಿದೆ. ಇದರರ್ಥ ನೀವು ಎಲ್ಲಾ ಸಮಯವೂ ಚಾರ್ಜರ್‌ನಲ್ಲಿಯೇ ಫೋನ್ ಅನ್ನು ಬಿಟ್ಟು ಬಿಡಿ ಎಂದಲ್ಲ. ಎಲ್ಲಿಯಾದರೂ ನಿಮ್ಮ ಫೋನ್ ಚಾರ್ಜರ್‌ನಲ್ಲಿ ಸ್ವಲ್ಪ ಹೊತ್ತು ಇದೆ ಎಂದಾದಲ್ಲಿ ಗಾಬರಿಯಾಗಬೇಡಿ ಎಂಬುದಾಗಿ ತಿಳಿಸುತ್ತಿದ್ದೇವೆ.

ಟಾಸ್ಕ್ ಮ್ಯಾನೇಜರ್‌ಗಳು ಮತ್ತು ಮೆಮೊರಿ ಟೂಲ್ಸ್‌ನಿಂದ ಬ್ಯಾಟರಿ ವೃದ್ಧಿ

ಟಾಸ್ಕ್ ಮ್ಯಾನೇಜರ್‌ಗಳು ಮತ್ತು ಮೆಮೊರಿ ಟೂಲ್ಸ್‌ನಿಂದ ಬ್ಯಾಟರಿ ವೃದ್ಧಿ

ಟಾಸ್ಕ್ ಮ್ಯಾನೇಜರ್‌ಗಳು ಮತ್ತು ಟಾಸ್ಕ್ ಕಿಲ್ಲರ್ ಅಪ್ಲಿಕೇಶನ್‌ಗಳು ಸಿಸ್ಟಮ್ ಮೆಮೊರಿಯನ್ನು ಮುಕ್ತಗೊಳಿಸಲಿವೆ ಮತ್ತು ಬ್ಯಾಟರಿ ಜೀವನವನ್ನು ಉತ್ತಮಗೊಳಿಸಲಿವೆ ಎಂಬುದು ಎಷ್ಟು ನಿಜ ಎಂಬುದು ಯಾರಿಗೂ ತಿಳಿದಿಲ್ಲ. ಆಂಡ್ರಾಯ್ಡ್ ಮತ್ತು ಐಓಎಸ್‌ಗಳನ್ನು ಹೆಚ್ಚು ಉತ್ತಮವಾಗಿಯೇ ನಿರ್ಮಾಣ ಮಾಡಲಾಗಿದ್ದು ಇವುಗಳು ಹೆಚ್ಚು RAM ಅನ್ನು ಬಳಸಿಕೊಳ್ಳುತ್ತವೆ. ಹೀಗೆ ವಿನಿಯೋಗಗೊಂಡ RAM ಬಳಕೆಗೆ ಹೆಚ್ಚು ಉಪಯೋಗವಲ್ಲ.

ಅನಿರ್ದಿಷ್ಟವಾಗಿ ನಿಮ್ಮ ಡಿವೈಸ್ ಅನ್ನು ಹಾಗೆಯೇ ಬಿಡುವುದು ಉತ್ತಮವಲ್ಲ

ಅನಿರ್ದಿಷ್ಟವಾಗಿ ನಿಮ್ಮ ಡಿವೈಸ್ ಅನ್ನು ಹಾಗೆಯೇ ಬಿಡುವುದು ಉತ್ತಮವಲ್ಲ

ಆದರೆ ನಿಮ್ಮ ಡಿವೈಸ್ ಅನ್ನು ನೀವು ಹೆಚ್ಚು ಬಳಸಿದಷ್ಟು ಅದರ ಕಾರ್ಯಕ್ಷಮತೆ ಇನ್ನಷ್ಟು ವೃದ್ಧಿಯಾಗುತ್ತದೆ ಎಂಬುದನ್ನೇ ನಾವಿಲ್ಲಿ ತಿಳಿಸುತ್ತಿದ್ದೇವೆ. ಅದಾಗ್ಯೂ ನಿಮ್ಮ ಫೋನ್ ಅನ್ನು ಬಳಕೆಯಲ್ಲಿಲ್ಲದ ಸಂದರ್ಭದಲ್ಲಿ ಆಫ್ ಮಾಡಿ.

Best Mobiles in India

English summary
There are a lot of misconceptions about modern rechargeable batteries that we think need to be cleared up. That’s why we’re going to talk about 5 common myths related to rechargeable batteries.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X