ಟ್ಯಾಬ್ಲೆಟ್‌ನಲ್ಲಿ ವೈ-ಫೈ ಬಳಸಲು ಕೆಲ ಸರಳ ವಿಧಾನಗಳು

Posted By: Staff
ಟ್ಯಾಬ್ಲೆಟ್‌ನಲ್ಲಿ ವೈ-ಫೈ ಬಳಸಲು ಕೆಲ ಸರಳ ವಿಧಾನಗಳು
ಕಡಿಮೆ ಬೆಲೆಯ ಟ್ಯಾಬ್ಲೆಟ್‌ಗಳಲ್ಲಿ ಅಂತ್ರರ್ಜಾಲದ ಬಳಕೆ ಮಾಡಲು ವೈ-ಫೈ ಆಪ್ಷನ್‌ ನೀಡಲಾಗಿರುತ್ತದೆ. ಆದರೆ ಭಾರತದಲ್ಲಿ ಇಂದು ವೈ-ಫೈ ಅಷ್ಟು ಜನಪ್ರಿಯತೆ ಪಡೆದುಕೊಂದಿಲ್ಲವಾಗಿದೆ. ಹಾಗಂತ ವೈ-ಫೈ ಇಲ್ಲದೆ ನಿಮ್ಮ ಟ್ಯಾಬ್ಲೆಟ್‌ ಕೆಲಸಕ್ಕೆ ಬಾರದು ಎಂದರ್ತವಲ್ಲ. ಏಕೆಂದರೆ ವೈ-ಫೈ ಇಲ್ಲದೇ ಕೂಡಾ ಟ್ಯಾಬ್ಲೆಟ್‌ನಲ್ಲಿ ಅಂತರ್ಜಾಲ ಬಳಸ ಬಹುದಾಗಿದೆ. ಅದಕ್ಕಾಗಿಯೇ ಗಿಜ್ಬಾಟ್‌ ಇಂದು ವೈ-ಫೈ ಬಳಸುವ ಅತ್ಯುತ್ತಮ ವಿಧಾನಗಳೊಂದಿಗೆ ವೈ-ಫೈ ಇಲ್ಲದೆ ಟ್ಯಾಬ್ಲೆಟ್‌ನಲ್ಲಿ ಅಂತರ್ಜಾಲ ಬಳಸುವ ವಿಧಾನ ಕರಿತಾಗಿ ಮಾಹಿತಿ ತಂದಿದೆ ಒಮ್ಮೆ ಓದಿ ನೋಡಿ.

ಟೀತ್ರಿಂಗ್‌ (Tether)

ಅಂದಹಾಗೆ ನಿಮ್ಮ ಬಳಿ ಲ್ಯಾಪ್‌ಟಾಪ್ ಅಥವಾ ನಿಮ್ಮ ಮೊಭೈಲ್‌ ಪೋನ್‌ನಲ್ಲಿ ಇಂಟರ್ನೆಟ್‌ ಕನೆಕ್ಷನ್‌ ಇದ್ದಲ್ಲಿ ಟ್ಯಾಬ್ಲೆಟ್‌ಗೆ ಸಂಪರ್ಕ ಕಲ್ಪಿಸಿ ಇಂಟರ್ನೆಟ್‌ ಬಳಸ ಬಹುದಾಗಿದೆ. ಡೇಟಾ ಕೇಬಲಗಗ ಮೂಲಕ ನಿಮ್ಮ ಟ್ಯಾಬ್ಲೆಟ್‌ ಅನ್ನು ಲ್ಯಾಪ್‌ಟಾಪ್‌ ಅಥವಾ ನಿಮ್ಮ ಮೊಬೈಲ್‌ ಫೋನ್‌ಗೆ ಸಂಪರ್ಕ ಕಲ್ಪಿಸಿದರೆ ಸಾಕು ಟ್ಯಾಬ್ಲೆಟ್‌ ಇಂಟರ್ನೆಟ್‌ ಬಳಸಲು ಸಿದ್ದವಾಗಿರುತ್ತದೆ ಈ ವಿಧಾನವನ್ನೇ ಟೀತ್ರಿಂಗ್‌ ಎಂದು ಕರೆಯುತ್ತಾರೆ. ಆದರೆ ಇದಕ್ಕೂ ಮುನ್ನ ನಿಮ್ ಟ್ಯಾಬ್ಲೆಟ್‌ನ ಸೆಟ್ಟಿಂಗ್ಸ ಆಪ್ಷನ್‌ಗೆ ತೆರಳಿಟೀತ್ರಿಂಗ್‌ ಆಪ್ಷನ್‌ ಆನ್‌ ಮಾಡಿಕೊಳ್ಳ ಬೇಕಾಗುತ್ತದೆ. ಈ ಮೂಲಕ ನೀವೂ ವೈ-ಫೈ ಇಲ್ಲದೇ ನಿಮ್ಮ ಟ್ಯಾಬ್ಲೆಟ್‌ನಲ್ಲಿ ಇಂಟರ್ನೆಟ್‌ ಬಳಸ ಬಹುದಾಗಿದೆ.

ಪ್ರಿ ಲೋಡೆಡ್‌ ಮ್ಯಾಗಜೀನ್‌ ಹಾಗೂ ಪುಸ್ತಕಗಳು (Preload Magazines and Books)

ಟ್ಯಾಬ್ಲೆಟ್‌ಗಳನ್ನು ಹಲವು ರೀತಿ ನಾವು ಬಳಸಿಕೊಳ್ಳ ಬಹುದಾಗಿದೆ ಉದಾಹರಣೆಗೆ ನೀವೂ ದೂರದಸ ಪ್ರವಾಸ ಕೈಗೊಂಡಿದ್ದಲ್ಲಿ ನಿಮ್ಮ ಟ್ಯಾಬ್ಲೆಟ್‌ನಲ್ಲಿ ನಿಮ್ಮ ನೆಚ್ಚಿನ ಮ್ಯಾಗಜೀನ್‌ಗಳನ್ನು ಸೇವ್‌ ಮಾಡಿಕೊಳ್ಳಬಹುದಾಗಿದೆ. ಹಾಗೂ ನಿಮ್ಮ ಬಿಡುವಿನ ವೇಳೆಯಲ್ಲಿ ಓದಬಹುದಾಗಿದೆ. ಹೀಗೆ ಮಾಡಿದಲ್ಲಿ ಟ್ಯಾಬ್ಲೆಟ್‌ ನಲ್ಲಿ ಆನ್‌ಲೈನ್‌ ಮ್ಯಾಗಜೀನ್‌ಗಳನ್ನು ಓದುವ ಅಗತ್ಯವಿರುವುದಿಲ್ಲ.

ಆಫ್‌ಲೈನ್‌ ಮ್ಯಾಪಿಂಗ್‌ ಆಪ್‌ ಬಳಸಿ (Use Offline Mapping Apps)

ಇಂದು ಅಂತರ್ಜಾಲದಲ್ಲಿ ಹಲವು ರೀತಿಯ ಆಪ್ಲಿಕೇಷನ್‌ಗಳು ಲಭ್ಯವಿದ್ದು ಇಂಟರ್ನೆಟ್‌ ಇಲ್ಲದೇ ಪ್ರಯೋಗಿಸಬಲ್ಲ ಆಪ್ಸಗಳನ್ನೂ ಕೂಡಾ ನೀವು ಬಳಸಿಕೊಳ್ಳ ಬಹುದಾಗಿದೆ. ಉದಾಹರಣೆಗೆ ಸಿಟಿ ಮ್ಯಾಪ್‌ 2 ಅಪ್ಲಿಕೇಷನ್‌ನ ನೆರವಿನಿಂದ ನಿಮ್ಮ ಟ್ಯಾಬ್ಲೆಟ್‌ನಲ್ಲಿ ಇಂಟರ್ನೆಟ್‌ ಇಲ್ಲದೆ ಮ್ಯಾಪಿಂಗ್‌ ಬಳಸ ಬಹುದಾಗಿದೆ.

ವೆಬ್‌ ಪೇಜ್‌ ಸೇವ್‌ ಮಾಡಿಕೊಳ್ಳಿ (save web page)

ನಿಮಗೆ ಯಾವುದಾದರು ಒಂದು ವೆಬ್‌ಸೈಟ್‌ನ ವೆಬ್‌ ಪೇಜ್‌ ಇಷ್ಟವಾಗಿದೆ ಎಂದು ಕೊಳ್ಳಿ ತಕ್ಷಣವೇ ವೆಬ್‌ ಸೈಟ್‌ ಓಪನ್‌ ಮಾಡಿ ಅದನ್ನು ನಿಮ್ಮ ಟ್ಯಾಬ್ಲೆಟ್‌ನಲ್ಲಿ ವೆಬ್‌ ಪೇಜ್‌ ಸೇವ್‌ ಮಾಡಿಕೋಳ್ಳಿ. ಇದರಿಂದಾಗಿ ನಂತರ ಇಂಟರ್‌ನೆಟ್‌ ಇಲ್ಲದೇಇದ್ದರೂ ಕೂಡಾ ವೆಬ್‌ ಪೇಜ್‌ ವೀಕ್ಷಿಸ ಬಹುದಾಗಿದೆ.

ಮೊಬೈಲ್‌ ಹಾಟ್‌ ಸ್ಪಾಟ್‌ ಬಳಸಿಕೊಳ್ಳಿ (Mobile hot spot)

ವೈ-ಫೈ ಇಲ್ಲದೇನೆ ನಿಮ್ಮ ಟ್ಯಾಬ್ಲೆಟ್‌ನಲ್ಲಿ ಮೊಬೈಲ್ ಹಾಟ್‌ ಸ್ಪಾಟ್‌ ನೆರವಿನಿಂದಾಗಿ ಅಂತರ್ಜಾಲ ಬಳಸಬಹುದಾಗಿದೆ. ಮೊಬೈಲ್ ಹಾಟ್‌ ಸ್ಪಾಟ್‌ ಬಳಸುವುದಾದದರೆ ಮೊದಲಿಗೆ ನಿಮ್ಮ ಮೊಬೈಲ್ ಪೋನ್‌ನ ಸೆಟ್ಟಿಂಗ್ಸ್‌ಗೆ ತೆರಳಿ ಮೊಬೈಲ್‌ ಹಾಟ್‌ಸ್ಪಾಟ್‌ ಆಪ್ಷನ್‌ ಆಯ್ಕೆಮಾಡಿಕೊಳ್ಳಿ ಹಾಗೂ ಅದರಲ್ಲಿ ಟಿಕ್‌ ಮಾರ್ಕ್‌ ಮಾಡಿಕೊಳ್ಳಿ ನಂತರ ನಿಮ್ಮ ಟ್ಯಾಬ್ಲೆಟ್‌ನಲ್ಲಿನ ಸೆಟ್ಟಿಂಗ್ಸ್‌ ಆಪ್ಷನ್‌ನಲ್ಲಿ ಹಾಟ್‌ ಸ್ಪಾಟ್‌ ಆಪ್ಷನ್‌ ಹುಡುಕಿ ಆನ್‌ಮಾಡಿ ನಿಮ್ಮ ಫೋನ್‌ ಮೂಲಕ ಟ್ಯಾಬ್ಲೆಟ್‌ಗೆ ಇಂಟರ್ನೆಟ್‌ ಸಂಪರ್ಕ ಕಲ್ಪಿಸ ಬಹುದಾಗಿದೆ.

ಡೌನ್ಲೋಡ್‌ ಸ್ಪೀಡ್‌ ಹೆಚ್ಚಿಸುವುದು ಹೇಗೆ?

ಪವರ್‌ಕಟ್‌ ಆದಲ್ಲಿ ಫೋನ್‌ ಚಾರ್ಜ್‌ಮಾಡಲು ಕೆಲ ಸರಳ ಉಪಾಯ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot