ಟ್ರುಕಾಲರ್ ನಿಂದ ನಿಮ್ಮ ನಂಬರ್ ಅನ್ನು ತೆಗೆಯಲು ಸರಳ ಉಪಾಯ

By Prateeksha
|

ನಮ್ಮಲ್ಲಿ ಬಹಳಷ್ಟು ಜನ ಸ್ಮಾರ್ಟ್‍ಫೋನಿನಲ್ಲಿ ಟ್ರುಕಾಲರ್ ಆಪ್ ಹೊಂದಿರುವರು ಯಾರು ಕಾಲ್ ಮಾಡಿದ್ದು ಎಂದು ತಿಳಿಯಲು. ಟ್ರುಕಾಲರ್ ಆಪ್ ಮೊಬೈಲ್ ಪ್ಲಾಟ್‍ಫಾರ್ಮ್ ಮತ್ತು ಡೆಸ್ಕ್‍ಟಾಪ್ ನಲ್ಲಿ ಕೂಡ ಲಭ್ಯವಿದೆ ಮತ್ತು ಇದು ಅಪರಿಚಿತ ನಂಬರಿನಿಂದ ಬರುವ ಕಾಲ್ ನ ವಿವರಣೆ ಕೂಡ ಕೊಡುತ್ತದೆ.

ಟ್ರುಕಾಲರ್ ನಿಂದ ನಿಮ್ಮ ನಂಬರ್ ಅನ್ನು ತೆಗೆಯಲು ಸರಳ ಉಪಾಯ

ಈ ಆಪ್ ಪ್ರಪಂಚಾದ್ಯಂತ ಇರುವ ಕೊನ್ಟಾಕ್ಟ್ ನಂಬರ್‍ಗಳ ದೊಡ್ಡ ಡಾಟಾಬೇಸ್ ಹೊಂದಿದೆ, ಜಗತ್ತಿನೆಲ್ಲೆಡೆಯ ಮಿಲಿಯನ್ ಗಟ್ಟಲೆ ಸ್ಮಾರ್ಟ್‍ಫೋನ್‍ಗಳಿಂದ ಸಂಗ್ರಹಿಸಲ್ಪಟ್ಟಿದ್ದು. ನಿಮ್ಮ ಬಳಿ ಆಪ್ ಇಲ್ಲದಿದ್ದರೂ ಕೂಡ ನಿಮ್ಮ ಹೆಸರು ಮತ್ತು ನಂಬರ್ ಕೂಡ ಟ್ರುಕಾಲರ್ ಡಾಟಾಬೇಸ್ ನಲ್ಲಿ ಇರಬಹುದು. ಇದಕ್ಕೆ ಕಾರಣ ನಿಮ್ಮ ಪರಿಚಯದ ಯಾರಾದರು ನಿಮ್ಮ ನಂಬರ್ ಸ್ಟೋರ್ ಮಾಡಿದ್ದು ಆಪ್ ಗೆ ಅದನ್ನು ಪಡೆಯಲು ಅನುಮತಿ ನೀಡಿರಬಹುದು.

ಓದಿರಿ: ಭಾರತದಲ್ಲಿ 'ಐಫೋನ್‌ 7' ಖರೀದಿ ಬೆಲೆ: ಅತಿ ಕಡಿಮೆ ಬೆಲೆಗೆ ಎಲ್ಲಿ ಲಭ್ಯ?

ಈ ಆಪ್ ನಿಂದಿರುವ ತೊಂದರೆ ಎಂದರೆ ಇದು ಸ್ವಲ್ಪ ಜಾಸ್ತಿಯೇ ತಲೆಕೆಡಿಸುವಂತದ್ದು. ಈ ಆಪ್ ನಿಂದ ನಿಮ್ಮ ವಿಳಾಸವನ್ನು ಸಾರ್ವಜನಿಕವಾಗಿ ಪಡೆಯಬಹುದಾಗಿದೆ. ನಿಮ್ಮ ನಂಬರ್ ಅನ್ನು ಟ್ರುಕಾಲರ್ ಡಾಟಾಬೇಸ್ ನಿಂದ ತೆಗೆಯುವ ದಾರಿಯಿದೆ. ಆದರೆ ನೀವು ಆಪ್ ಉಪಯೋಗಿಸುತ್ತಿದ್ದಲ್ಲಿ ನಿಮ್ಮ ನಂಬರ್ ಸೇವೆಯಿಂದ ತೆಗೆಯಲಾಗುವುದಿಲ್ಲಾ.

ಓದಿರಿ: 4ಜಿ ವೋಲ್ಟ್ ಬೆಂಬಲಿಸುವ ಟಾಪ್ 10 ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ಸ್

ನಿಮ್ಮ ನಂಬರ್ ತೆಗೆಯಲು ನಿಮ್ಮ ಸ್ವಂತ ಅಕೌಂಟನ್ನು ಡಿಆಕ್ಟೀವ್ ಮಾಡಬೇಕಾಗುತ್ತದೆ. ನಿಮ್ಮ ನಂಬರ್ ಅನ್ನು ಈ ಕೆಳಗಿನ ಕ್ರಮ ಉಪಯೋಗಿಸಿ ತೆಗೆಯಬಹುದು.

ನಿಮ್ಮ ಟ್ರುಕಾಲರ್ ಅಕೌಂಟ್ ಡಿಆಕ್ಟೀವ್ ಮಾಡಿ

ಕ್ರಮ 1: ಆಪ್ ತೆರೆಯಿರಿ

ಕ್ರಮ 2: ಮೇಲೆ ಎಡಗಡೆ ಮೂಲೆಯಲ್ಲಿರುವ 3 ಅಡ್ಡ ಗೆರೆಯನ್ನು ಒತ್ತಿ

ಕ್ರಮ 3: ಸೆಟ್ಟಿಂಗ್ಸ್ ಗೆ ಹೋಗಿ > ಅಬೌಟ್

ಕ್ರಮ 4: ಡಿಆಕ್ಟೀವ್ ಆಯ್ಕೆ ಮಾಡಿ ಮತ್ತು ಯೆಸ್ ಒತ್ತಿ

ಟ್ರುಕಾಲರ್ ನಿಂದ ನಿಮ್ಮ ನಂಬರ್ ತೆಗೆಯಿರಿ

ಕ್ರಮ 1: ಟ್ರುಕಾಲರ್ ನ ಅನ್‍ಲಿಸ್ಟ್ ಪೇಜ್ ಗೆ ಹೋಗಿ

ಕ್ರಮ 2: ನಿಮ್ಮ ಮೊಬೈಲ್ ನಂಬರ್ ಅನ್ನು ಕಂಟ್ರಿ ಕೋಡ್ ನೊಂದಿಗೆ ಎಂಟರ್ ಮಾಡಿ.

ಉದಾಹರಣೆಗೆ +91 1234567890

ಕ್ರಮ 3: ಯಾವುದಾದರು ಆಯ್ಕೆಯನ್ನು ಆರಿಸಿ ಅನ್‍ಲಿಸ್ಟ್ ಮಾಡಲು

ಕ್ರಮ 4: ಅಕ್ಷರ/ನಂಬರ್ ಗಳನ್ನು ಟೈಪ್ ಮಾಡಿ ವೆರಿಫಿಕೆಷನ್ ಬೊಕ್ಸ್ ನಲ್ಲಿ

ಕ್ರಮ 5: ಅನ್‍ಲಿಸ್ಟ್ ಕ್ಲಿಕ್ ಮಾಡಿ.

ಹೊಸ ಸ್ಮಾರ್ಟ್‍ಫೋನ್ಸ್ ಗಳ ಉತ್ತಮ ಒನ್‍ಲೈನ್ ಡೀಲ್ಸ್‍ಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
Most of us have Truecaller app on our smartphone, which is used to check or identify the caller, spam and much more. For the uninitiated, Truecaller is the app available in most of the mobile platform and desktop as well that shows you the contact details of unknown number calling you.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X