Subscribe to Gizbot

ಏರ್‌ಟೆಲ್‌ನ ಅತ್ಯುತ್ತಮ ಆಫರ್‌ಗಳನ್ನು ಆನ್‌ಲೈನ್‌ನಲ್ಲಿ ಪಡೆಯುವುದು ಹೇಗೆ?

Written By:

ಇತ್ತೀಚಿನ ದಿನಗಳಲ್ಲಿ ಏರ್‌ಟೆಲ್ ಹೆಚ್ಚಿನ ಆಫರ್‌ಗಳು ಮತ್ತು ವಿನಾಯಿತಿಗಳೊಂದಿಗೆ ಬಂದಿದ್ದು ಜಿಯೋದೊಂದಿಗೆ ಪೈಪೋಟಿಯನ್ನು ಮಾಡಲು ಕಂಪೆನಿ ಅತ್ಯುತ್ತಮ ಅವಕಾಶಗಳನ್ನೇ ಎದುರು ನೋಡುತ್ತಿದೆ.

ಓದಿರಿ: ನವರಾತ್ರಿ ಆಫರ್: ಏರ್‌ಟೆಲ್‌ನಿಂದ 10ಜಿಬಿ, 4ಜಿ ಡೇಟಾ

ಏರ್‌ಟೆಲ್ ಪ್ರಸ್ತುತ 30 ಜಿಬಿ ಯ 4ಜಿ ಡೇಟಾವನ್ನು ಒದಗಿಸುತ್ತಿದ್ದು ಇದು 90 ದಿನಗಳ ವ್ಯಾಲಿಡಿಟಿಯನ್ನು ಪಡೆದುಕೊಂಡಿದೆ. ಇದನ್ನು ನಿಮಗೆ ರೂ 1,495 ಕ್ಕೆ ಪಡೆದುಕೊಳ್ಳಬಹುದಾಗಿದೆ ಅಂತೆಯೇ ರೂ 249 ಕ್ಕೆ 10 ಜಿಬಿ ಡೇಟಾ ಆಫರ್ ಅನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ. ಇನ್ನಷ್ಟು ಆಫರ್‌ಗಳ ಸುರಿಮಳೆಯನ್ನೇ ಕಂಪೆನಿ ತನ್ನ ಚಂದಾದಾರರಿಗೆ ಒದಗಿಸುತ್ತಿದ್ದು ನಿಮಗೆ ಈ ಎಲ್ಲಾ ಆಫರ್‌ಗಳನ್ನು ಹೇಗೆ ಪಡೆದುಕೊಳ್ಳಬಹುದು ಎಂಬುದನ್ನು ಇಂದಿಲ್ಲಿ ತಿಳಿಸುತ್ತಿದ್ದೇವೆ.

ಓದಿರಿ: ಟೆಲಿಕಾಮ್ ಪೈಪೋಟಿ, ಜಿಯೋಗೆ ಸೋಲು ಕಟ್ಟಿಟ್ಟ ಬುತ್ತಿಯೇ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎಲ್ಲವನ್ನು ಆನ್‌ಲೈನ್‌ನಲ್ಲಿ ಪಡೆದುಕೊಳ್ಳಿ

ಎಲ್ಲವನ್ನು ಆನ್‌ಲೈನ್‌ನಲ್ಲಿ ಪಡೆದುಕೊಳ್ಳಿ

ಟಾರಿಫ್ ಯೋಜನೆಗಳು ಮತ್ತು ಬಿಲ್ ಪಾವತಿ ಸೌಲಭ್ಯಗಳನ್ನು ಆನ್‌ಲೈನ್‌ನಲ್ಲೇ ಒದಗಿಸುವ ಕಂಪೆನಿ ಏರ್‌ಟೆಲ್ ಆಗಿದೆ. ಎಲ್ಲಾ ಸರ್ವೀಸ್ ಪ್ರೊವೈಡರ್‌ಗಳು ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ನಲ್ಲೇ ಆಫರ್‌ಗಳನ್ನು ಒದಗಿಸುತ್ತಿದ್ದು ಇದರಿಂದ ನಿಮಗೆ ಕ್ಷಿಪ್ರ ಗತಿಯಲ್ಲಿ ಆಫರ್‌ಗಳ ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಸ್ಟಮರ್ ಕೇರ್ ಮತ್ತು ಅಪ್ಲಿಕೇಶನ್ ಅಗತ್ಯವಿಲ್ಲ

ಕಸ್ಟಮರ್ ಕೇರ್ ಮತ್ತು ಅಪ್ಲಿಕೇಶನ್ ಅಗತ್ಯವಿಲ್ಲ

ಕಸ್ಟಮರ್ ಕೇರ್ ಅಥವಾ ಮೈ ಏರ್‌ಟೆಲ್ ಅಪ್ಲಿಕೇಶನ್‌ಗಳ ನೆರವಿಲ್ಲದೆ ಆಫರ್‌ಗಳು ಮತ್ತು ವಿನಾಯಿತಿಗಳ ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ. ಇದರಿಂದ ಅಪ್ಲಿಕೇಶನ್ ಡೌನ್‌ಲೋಡ್‌ಗಾಗಿ ಡೇಟಾ ಖರ್ಚು ಮಾಡುವುದು ಮತ್ತು ಆಫರ್‌ಗಳಿಗಾಗಿ ಹುಡುಕಾಡುವ ಸಮಯವನ್ನು ಹಾಳು ಮಾಡದೇ ಇರುವುದು ಮೊದಲಾದ ಕಾರ್ಯಗಳನ್ನು ನಡೆಸಿಕೊಳ್ಳಬಹುದಾಗಿದೆ.

ಅಧಿಕೃತ ಏರ್‌ಟೆಲ್ ಪುಟಕ್ಕೆ ಭೇಟಿ ನೀಡಿ

ಅಧಿಕೃತ ಏರ್‌ಟೆಲ್ ಪುಟಕ್ಕೆ ಭೇಟಿ ನೀಡಿ

ನೀವು ಪೋಸ್ಟ್ ಪೇಡ್ ಅಥವಾ ಪ್ರಿಪೇಡ್ ಸಿಮ್ ಅನ್ನು ಬಳಸಿಕೊಳ್ಳುತ್ತಿದ್ದೀರಿ ಎಂಬುದನ್ನು ಆಧರಿಸಿ ಲಿಂಕ್‌ಗೆ ಹೋಗಿ. ನಿಮ್ಮದು ಪ್ರಿಪೇಡ್ ಸಿಮ್ ಆಗಿದೆ ಎಂದಾದಲ್ಲಿ, ಏರ್‌ಟೆಲ್ ಪ್ರಿಪೈಡ್ ರಿಚಾರ್ಜ್ ಪುಟಕ್ಕೆ ಹೋಗಿ. ನೀವು ಪೋಸ್ಟ್ ಪೇಡ್ ಬಳಕೆದಾರರು ಎಂದಾದಲ್ಲಿ ಬಿಲ್ ಪಾವತಿ ಪುಟಕ್ಕೆ ಹೋಗಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಏರ್‌ಟೆಲ್ ಸಂಖ್ಯೆ ಕಡ್ಡಾಯ

ನಿಮ್ಮ ಏರ್‌ಟೆಲ್ ಸಂಖ್ಯೆ ಕಡ್ಡಾಯ

ನಿಮ್ಮ ಏರ್‌ಟೆಲ್ ಸಂಖ್ಯೆಯನ್ನು ದಾಖಲಿಸಿ ಮತ್ತು ಮುಂದಕ್ಕೆ ಹೋಗಲು ಕೆಂಪು ಬಟನ್ ಒತ್ತಿರಿ. ನಿಮಗೆ ಬೇಕಾದ ಪ್ಲಾನ್ಸ್, ಪ್ಯಾಕ್ಸ್, ಆನ್‌ಲೈನ್ ರಿಚಾರ್ಜ್ ಆಫರ್, ಪೂರ್ಣ ಟಾಕ್ ಟೈಮ್ ಆಫರ್‌ಗಳು ಅದೂ ಕೂಡ 2ಜಿ, 3ಜಿ ಮತ್ತು 4ಜಿ ನೆಟ್‌ವರ್ಕ್‌ಗಳಲ್ಲಿ ನಿಮ್ಮದಾಗಿಸಿಕೊಳ್ಳಬಹುದಾಗಿದೆ.

ಸೂಕ್ತವಾದುದನ್ನು ಆಯ್ಕೆಮಾಡಿ

ಸೂಕ್ತವಾದುದನ್ನು ಆಯ್ಕೆಮಾಡಿ

ಲಭ್ಯವಿರುವ ಎಲ್ಲಾ ಯೋಜನೆಗಳನ್ನು ಪಡೆದುಕೊಂಡ ನಂತರ, ನಿಮಗೆ ಸೂಕ್ತ ಎಂದೆನಿಸುವ ಒಂದನ್ನು ಆಯ್ಕೆಮಾಡಿಕೊಳ್ಳಿ. ಪಾವತಿ ವಿವರಗಳನ್ನು ಪಡೆದುಕೊಳ್ಳುವ ಮತ್ತು ನಿಮಗೆ ಸೂಕ್ತ ಎಂದೆನಿಸುವ ಆಫರ್ ಅನ್ನು ಆಯ್ಕೆಮಾಡಿ. ಕೆಲವೇ ನಿಮಿಷಗಳಲ್ಲಿ ಇದನ್ನು ನಿಮಗೆ ಮಾಡಬಹುದಾಗಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Airtel in just 2 simple clicks without visiting the nearest Airtel store. To know more about how you can get the offers at your convenience, you can check out below.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot