ಇಂಟರ್‌ನೆಟ್‌ನಲ್ಲಿ ಎಲ್ಲಾ ಸಿಗುತ್ತೆ ಅಂತ ಏನೇನು ಹುಡಕಬೇಡಿ!

By Ashwath
|

ಇನ್ನು ಮುಂದೆ 'bomb','blast','attack' ಅಥವಾ'kill' ಈ ಪದಗಳನ್ನು ಇಮೇಲ್‌‌,ಟ್ವೀಟರ್‌‌‌,ಫೇಸ್‌ಬುಕ್‌,ಬ್ಲಾಗ್‌ನಲ್ಲಿ ಟೈಪ್‌ ಮಾಡುವಾಗ ಇರಲಿ ಎಚ್ಚರ. ಇಂಟರ್‌ನೆಟ್‌‌ನಲ್ಲಿ ಬಳಸುವ ಪ್ರತಿಯೊಂದು ವಿಚಾರದ ಮೇಲೂ ಕಣ್ಣಿಡಲು ಕೇಂದ್ರ ಸರ್ಕಾರ ಸದ್ಯದಲ್ಲೇ ಹೊಸ ಇಂಟರ್‌ನೆಟ್‌ ಬೇಹುಗಾರಿಕಾ ವ್ಯವಸ್ಥೆಯನ್ನು ಜಾರಿಗೆ ತರಲು ಮುಂದಾಗುತ್ತಿದೆ.

ವಿದೇಶದಲ್ಲಿ ಈಗಾಗಲೇ ಇರುವ ಚಾಲ್ತಿಯಲ್ಲಿರುವ ಇಂಟರ್‌ನೆಟ್‌ ಬೇಹುಗಾರಿಕಾ ವ್ಯವಸ್ಥೆಯಂತೆ, ಕೇಂದ್ರ ಸರ್ಕಾರ 'ನೇತ್ರಾ' ಹೆಸರಿನ ಬೇಹುಗಾರಿಕಾ ವ್ಯವಸ್ಥೆಯನ್ನು ಸ್ಥಾಪಿಸಲು ಉದ್ದೇಶಿಸಿದೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(Defence Research and Development Organization) ಅಡಿಯಲ್ಲಿ ಕೃತಕ ಗುಪ್ತಚರ ಮತ್ತು ರೊಬೊಟಿಕ್ಸ್‌ (Artificial Intelligence and Robotics) ಲ್ಯಾಬ್‌‌ ಈ 'ನೇತ್ರ' ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಿದೆ.

ಕೇಂದ್ರ ಗೃಹ ಇಲಾಖೆ ನೇತ್ರಾ ವಸ್ಥೆಯ ಅಂತಿಮ ಹಂತದ ತಯಾರಿ ನಡೆಸುತ್ತಿದೆ.ಇದು ಪೂರ್ಣವಾದ ಬಳಿಕ ಭದ್ರತಾ ಸಂಸ್ಥೆಗಳಲ್ಲಿ ಬಳಕೆ ಮಾಡಲಾಗುತ್ತದೆ.

ಕೇಂದ್ರ ಸರ್ಕಾರ ಈ ವ್ಯವಸ್ಥೆಯ ಮೂಲಕ ಬೇಹುಗಾರಿಕೆ ನಡೆಸುವುದರ ಜೊತೆಯಲ್ಲೇ ಸಂಶಯಾಸ್ಪದ ವ್ಯಕ್ತಿಗಳ ಮೇಲೆ ಇನ್ನುವಿವಿಧ ರೀತಿಯಲ್ಲಿ ಬೇಹುಗಾರಿಕೆ ನಡೆಸುತ್ತದೆ. ಜೊತೆಗೆ ಕೆಲವು ಖಾಸಗಿ ಗುಪ್ತಚರ ಸಂಸ್ಥೆಗಳು ಹಣಕ್ಕಾಗಿ ವ್ಯಕ್ತಿಗಳ ಮೇಲೆ ಅಕ್ರಮವಾಗಿ ಬೇಹುಗಾರಿಕೆ ನಡೆಸುತ್ತಿವೆ. ಮುಂದಿನ ಪುಟದಲ್ಲಿ ಹೇಗೆಲ್ಲಾ ನಿಮ್ಮ ಮೇಲೆ ಸರ್ಕಾರ ಮತ್ತು ಖಾಸಗಿ ಗುಪ್ತಚರ ಸಂಸ್ಥೆಗಳು ಬೇಹುಗಾರಿಕೆ ನಡೆಸಬಹುದು ಎನ್ನುವ ವಿವರ ನೀಡಲಾಗಿದೆ.

ನಿಮ್ಮ ಮೇಲೆ ಬೇಹುಗಾರಿಕೆ ಈ ರೀತಿ ನಡೆಯಬಹುದು!

ನಿಮ್ಮ ಮೇಲೆ ಬೇಹುಗಾರಿಕೆ ಈ ರೀತಿ ನಡೆಯಬಹುದು!


ಇಮೇಲ್‌ ಹೊಂದಿದ ಪ್ರತಿಯೊಬ್ಬರ ಮೇಲ್‌ ಚಟುವಟಿಕೆ ಸರ್ವರ್‌ನಲ್ಲಿ ದಾಖಲಾಗುತ್ತದೆ. ಇಮೇಲ್‌ ಸೇವೆಗಳನ್ನು ಬಹುತೇಕ ಅಮೆರಿಕ ಮೂಲದ ಕಂಪೆನಿಗಳು ನೀಡುತ್ತಿದ್ದು ಈ ಕಂಪೆನಿಗಳು ಸರ್ಕಾರ ಕೇಳಿದ ವ್ಯಕ್ತಿಯ ಇಮೇಲ್‌‌ ವ್ಯವಹಾರದ ದಾಖಲೆಗಳನ್ನು ನೀಡುತ್ತದೆ.

 ಗೂಗಲ್‌ನಲ್ಲಿ 2,691 ಬಳಕೆದಾರರ ಡೇಟಾವನ್ನುಕೇಳಿದ ಭಾರತ</a><br />ಇದನ್ನೂ ಓದಿ:<a href= ಗೂಗಲ್‌ ನಿಮ್ಮ ಮಾಹಿತಿಯನ್ನು ಎಲ್ಲಿ ರಕ್ಷಿಸುತ್ತಿರುತ್ತದೆ?" title=" ಗೂಗಲ್‌ನಲ್ಲಿ 2,691 ಬಳಕೆದಾರರ ಡೇಟಾವನ್ನುಕೇಳಿದ ಭಾರತ
ಇದನ್ನೂ ಓದಿ: ಗೂಗಲ್‌ ನಿಮ್ಮ ಮಾಹಿತಿಯನ್ನು ಎಲ್ಲಿ ರಕ್ಷಿಸುತ್ತಿರುತ್ತದೆ?" loading="lazy" width="100" height="56" /> ಗೂಗಲ್‌ನಲ್ಲಿ 2,691 ಬಳಕೆದಾರರ ಡೇಟಾವನ್ನುಕೇಳಿದ ಭಾರತ
ಇದನ್ನೂ ಓದಿ: ಗೂಗಲ್‌ ನಿಮ್ಮ ಮಾಹಿತಿಯನ್ನು ಎಲ್ಲಿ ರಕ್ಷಿಸುತ್ತಿರುತ್ತದೆ?

 ನಿಮ್ಮ ಮೇಲೆ ಬೇಹುಗಾರಿಕೆ ಈ ರೀತಿ ನಡೆಯಬಹುದು!

ನಿಮ್ಮ ಮೇಲೆ ಬೇಹುಗಾರಿಕೆ ಈ ರೀತಿ ನಡೆಯಬಹುದು!


ಮೊಬೈಲ್‌ ಕಂಪೆನಿ ಸರ್ವರ್‌ನಲ್ಲಿಗ್ರಾಹಕರು ಸ್ವೀಕರಿಸಿದ,ಹೊರ ಹೋದ ಕರೆಯ ಎಲ್ಲಾ ಮಾಹಿತಿಗಳು ದಾಖಲೆಯಾಗುತ್ತದೆ. ವ್ಯಕ್ತಿಯ ಮೇಲೆ ಸಂಶಯ ಬಂದಲ್ಲಿ ಸರ್ಕಾರ ಕಂಪೆನಿಯ ಮೂಲಕ ಬಳಕೆದಾರರ ಎಲ್ಲಾ ಮಾಹಿತಿಗಳನ್ನು ಪಡೆದುಕೊಳ್ಳಬಹುದು.

 ನಿಮ್ಮ ಮೇಲೆ ಬೇಹುಗಾರಿಕೆ ಈ ರೀತಿ ನಡೆಯಬಹುದು!

ನಿಮ್ಮ ಮೇಲೆ ಬೇಹುಗಾರಿಕೆ ಈ ರೀತಿ ನಡೆಯಬಹುದು!


ವಿಶೇಷ ಎಲೆಕ್ಟ್ರಾನಿಕ್‌ ಸಾಧನಗಳ ನೆರವಿನಿಂದ ಇಬ್ಬರು ಮಾತನಾಡುತ್ತಿರುವುದನ್ನು ಮೂರನೇಯವರು ಕದ್ದಾಲಿಸುವುದು ಫೋನ್‌ ಕದ್ದಾಲಿಕೆ. ಸರ್ಕಾರ ಹೊರತಾಗಿ ಕೆಲವು ಗುಪ್ತಚರ ಸಂಸ್ಥೆಗಳು ಈಗ ಖಾಸಗಿ ವ್ಯಕ್ತಿಗಳ ಫೋನ್‌ ಟ್ಯಾಪಿಂಗ್‌ ಅಕ್ರಮವಾಗಿ ನಡೆಸಿ ಅವರ ವೈಯಕ್ತಿ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಫೋನ್‌ ಟ್ಯಾಪಿಂಗ್‌ ಯಾಕೆ?ಹೇಗೆ?ಯಾರು ಮಾಡಬಹುದು?ಫೋನ್‌ ಟ್ಯಾಪಿಂಗ್‌ ಯಾಕೆ?ಹೇಗೆ?ಯಾರು ಮಾಡಬಹುದು?

 ನಿಮ್ಮ ಮೇಲೆ ಬೇಹುಗಾರಿಕೆ ಈ ರೀತಿ ನಡೆಯಬಹುದು!

ನಿಮ್ಮ ಮೇಲೆ ಬೇಹುಗಾರಿಕೆ ಈ ರೀತಿ ನಡೆಯಬಹುದು!


ಮೊಬೈಲ್‌‌ಗಳಿಗೆ ಬೇಹುಗಾರಿಕಾ ಸಾಫ್ಟ್‌ವೇರ್ ಅಳವಡಿಸಿ ಕರೆ, ಸಂದೇಶ, ಫೋಟೋವನ್ನು ಇಂದು ಕದಿಯಬಹುದಾಗಿದೆ.ನಿಷೇಧಿತ ಸ್ಪೈ ಸಾಫ್ಟ್‌ವೇರ್ ಬಳಸಿ ಸ್ಮಾರ್ಟ್‌ಫೋನಲ್ಲಿ ಆಪ್‌ ಇನ್‌ಸ್ಟಾಲ್‌ ಮಾಡಿ ವ್ಯಕ್ತಿಗಳ ಖಾಸಗಿ ಮಾಹಿತಿಯನ್ನು ಕದಿಯುವ ಸಂಸ್ಥೆಗಳು ಭಾರತದಲ್ಲಿವೆ.

ಮೊಬೈಲ್‌ ಬೇಹುಗಾರಿಕೆ:ಇಬ್ಬರು ಟೆಕ್ಕಿಗಳ ಬಂಧನಮೊಬೈಲ್‌ ಬೇಹುಗಾರಿಕೆ:ಇಬ್ಬರು ಟೆಕ್ಕಿಗಳ ಬಂಧನ

 ನಿಮ್ಮ ಮೇಲೆ ಬೇಹುಗಾರಿಕೆ ಈ ರೀತಿ ನಡೆಯಬಹುದು!

ನಿಮ್ಮ ಮೇಲೆ ಬೇಹುಗಾರಿಕೆ ಈ ರೀತಿ ನಡೆಯಬಹುದು!


ಸೋಶಿಯಲ್‌ ಮೀಡಿಯಾದಲ್ಲಿ ಬಳಕೆದಾರರ ಫೋಟೋ, ಸ್ನೇಹಿತರ ಪರಿಚಯ ಸಂಪೂರ್ಣ‌ ವಿವರವನ್ನು ವೀಕ್ಷಿಸಲು ಸಾಧ್ಯ.ವಿಶೇಷವಾಗಿ ಫೇಸ್‌‌ಬುಕ್‌ನಲ್ಲಿ ಗ್ರಾಫ್‌ ಸರ್ಚ್ ಇದ್ದು ಈ ಮೂಲಕ ಬಳಕೆದಾರರ ಇದುವರೆಗಿನ ಲೈಕ್‌,ಕಾಮೆಂಟ್‌ಗಳ ವಿವರವನ್ನು ನೋಡಬಹುದಾಗಿದೆ.ಈ ಮೂಲಕ ಬಳಕೆದಾರ ಯಾರ ಜೊತೆ ಹೆಚ್ಚು ಆತ್ಮೀಯವಾಗಿದ್ದಾನೆ,ಆಸಕ್ತಿಯ ವಿವರಗಳು ಸುಲಭವಾಗಿ ಪತ್ತೆಯಾಗುತ್ತದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X