ಅಪ್ಲಿಕೇಶನ್ ಬ್ಲಾಕ್ ಮಾಡಿ ಮೊಬೈಲ್ ಡೇಟಾ ಉಳಿಸುವುದು ಹೇಗೆ?

By Shwetha
|

ಹೆಚ್ಚಿನ ಸ್ಮಾರ್ಟ್‌ಫೋನ್ ಬಳಕೆದಾರರು ಹಿನ್ನಲೆಯಲ್ಲಿ ಚಾಲನೆಯಲ್ಲಿರುವ ಅಪ್ಲಿಕೇಶನ್‌ಗಳಿಂದ ಹೆಚ್ಚುವರಿ ಡೇಟಾ ನಷ್ಟಕ್ಕೆ ಒಳಗಾಗಿರುತ್ತಾರೆ. ನಾವು ಸೀಮಿತ ಡೇಟಾ ಮಿತಿಯನ್ನು ಪಡೆದುಕೊಂಡಿದ್ದೇವೆ ಎಂದಾದಲ್ಲಿ ಇದು ನಮಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ಹಾಗಿದ್ದರೆ ಇಂತಹ ಸಮಸ್ಯೆಯಿಂದ ಮುಕ್ತಿ ಪಡೆದುಕೊಳ್ಳುವುದು ಹೇಗೆ ಎಂಬುದನ್ನೇ ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದೇವೆ.

ಓದಿರಿ: ಫೋನ್‌ನಲ್ಲಿ ಜಿಯೋ ಸಿಮ್ ಬಳಸಿದ ಮೇಲೆ ಇತರ ಸಿಮ್ ಬಳಸಲಾಗುವುದಿಲ್ಲವೇ?

ನಾವು ಅಪ್ಲಿಕೇಶನ್‌ಗಳನ್ನು ಬಳಕೆ ಮಾಡದೆಯೇ ಹಿನ್ನಲೆಯಲ್ಲಿರುವ ಡೇಟಾ ಇಂಟರ್ನೆಟ್ ಅನ್ನು ನಷ್ಟ ಮಾಡಿರುತ್ತದೆ. ಹಾಗಿದ್ದರೆ ಈ ಸಂದರ್ಭದಲ್ಲಿ ಕೆಲವೊಂದು ಅಪ್ಲಿಕೇಶನ್‌ಗಳು ನಿಮ್ಮ ಸಹಾಯಕ್ಕೆ ಬರಲಿದ್ದು ಅವುಗಳ ವಿವರಗಳನ್ನೇ ಇಂದಿಲ್ಲಿ ನೀಡುತ್ತಿದ್ದೇವೆ.

ಓದಿರಿ: ಏರ್‌ಟೆಲ್ ಆಫರ್: 1ಜಿಬಿ ಡೇಟಾ ದರದಲ್ಲಿ ಪಡೆದುಕೊಳ್ಳಿ 15ಜಿಬಿ 3/4ಜಿ ಡೇಟಾ

ಅವಾಸ್ತ್ ಮೊಬೈಲ್ ಆಂಟಿವೈರಸ್ ಮತ್ತು ಮೊಬೈಲ್ ಸೆಕ್ಯುರಿಟಿ

ಅವಾಸ್ತ್ ಮೊಬೈಲ್ ಆಂಟಿವೈರಸ್ ಮತ್ತು ಮೊಬೈಲ್ ಸೆಕ್ಯುರಿಟಿ

ಇದು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಹಿನ್ನಲೆಯಲ್ಲಿ ಚಾಲನೆಯಾಗುತ್ತಿರುವ ಅಪ್ಲಿಕೇಶನ್‌ಗಳಿಗೆ ಕಡಿವಾಣ ಹಾಕುತ್ತದೆ. "ಫೈರ್‌ವಾಲ್" ಎಂಬುದಾಗಿ ಇದನ್ನು ಕರೆಯಲಾಗುತ್ತಿದ್ದು ಫೇಸ್‌ಬುಕ್, ಟ್ವಿಟ್ಟರ್, ಮತ್ತು ಇತರ ಅಪ್ಲಿಕೇಶನ್‌ಗಳ ಇಂಟರ್ನೆಟ್ ನುಂಗುವಿಕೆಯನ್ನು ಕಡಿತಗೊಳಿಸಬಹುದಾಗಿದೆ.

ನೊರೂಟ್ ಫೈರ್‌ವಾಲ್

ನೊರೂಟ್ ಫೈರ್‌ವಾಲ್

ಹೆಸರೇ ಸೂಚಿಸುವಂತೆ, ಅಪ್ಲಿಕೇಶನ್ ಹೋಮ್ ಸ್ಕ್ರೀನ್‌ನಲ್ಲಿ ಮೂರು ಆಪ್ಶನ್‌ಗಳು ನಿಮಗೆ ಲಭ್ಯವಾಗಲಿವೆ. ಹೋಮ್, ಪೆಂಡಿಂಗ್ ಆಕ್ಸೆಸ್ ಮತ್ತು ಆಪ್ಸ್ ಎಂಬುದಾಗಿ ಇವೆ. ಪೆಂಡಿಂಗ್ ಆಕ್ಸೆಸ್ ಇಂಟರ್ನೆಟ್ ಪ್ರವೇಶಕ್ಕೆ ನಿಮ್ಮ ಅನುಮತಿಯನ್ನು ಕಾಯುತ್ತವೆ ಮತ್ತು ಆಪ್ಸ್ ಟ್ಯಾಬ್ ಅಪ್ಲಿಕೇಶನ್‌ಗಳ ಪಟ್ಟಿಯನ್ನು ತೋರಿಸುತ್ತದೆ ನಿಮಗೆ ಹೇಗೇ ಬೇಕೂ ಅಂತೆಯೇ ಇಲ್ಲಿ ಟ್ಯಾಬ್‌ಗಳನ್ನು ಆಯ್ಕೆಮಾಡಿಕೊಳ್ಳಬಹುದಾಗಿದೆ.

ನೊರೂಟ್ ಡೇಟಾ ಫೈರ್‌ವಾಲ್

ನೊರೂಟ್ ಡೇಟಾ ಫೈರ್‌ವಾಲ್

ಇದು ಇನ್ನೊಂದು ಅಪ್ಲಿಕೇಶನ್ ಆಗಿದ್ದು ರೂಟಿಂಗ್ ಮಾಡದೆಯೇ ಅಪ್ಲಿಕೇಶನ್‌ಗಳಿಗೆ ಇಂಟರ್ನೆಟ್ ಆಕ್ಸೆಸ್ ಅನ್ನು ಬ್ಲಾಕ್ ಮಾಡಲು ಇದು ಸಹಕಾರಿಯಾಗಲಿದೆ. ಬ್ಯಾಕ್‌ಗ್ರೌಂಡ್ ಡೇಟಾವನ್ನು ಮಾತ್ರ ನಿಮಗಿಲ್ಲಿ ಬ್ಲಾಕ್ ಮಾಡಬಹುದಾಗಿದೆ ಅಂತೆಯೇ ಫಾರ್‌ಗ್ರೌಂಡ್‌ನದ್ದಲ್ಲ. ಅಪ್ಲಿಕೇಶನ್‌ನ ಡೇಟಾ ಬಳಕೆಯನ್ನು ಇಲ್ಲಿ ಪರಿಶೀಲಿಸಿಕೊಳ್ಳಬಹುದಾಗಿದೆ.

ಡ್ರಾಯ್ಡ್‌ವಾಲ್ - ಆಂಡ್ರಾಯ್ಡ್ ಫೈರ್‌ವಾಲ್

ಡ್ರಾಯ್ಡ್‌ವಾಲ್ - ಆಂಡ್ರಾಯ್ಡ್ ಫೈರ್‌ವಾಲ್

ನೀವು ಅನಿಯಮಿತ ಡೇಟಾ ಪ್ಲಾನ್ ಅನ್ನು ಪಡೆದುಕೊಂಡಿಲ್ಲ ಎಂದಾದಲ್ಲಿ ಇದು ಸೂಕ್ತ ಪರಿಹಾರವನ್ನು ನೀಡುತ್ತದೆ. ಇದನ್ನು ಅನ್‌ರೂಟೆಡ್ ಫೋನ್‌ಗಳಿಗಾಗಿ ಸಿದ್ಧಪಡಿಸಲಾಗಿದ್ದು ವೈಫೈ ಅಥವಾ ಸೆಲ್ಯುಲಾರ್ ಡೇಟಾವನ್ನು ಬಳಸಿಕೊಳ್ಳಲು ಅಪ್ಲಿಕೇಶನ್ ಮಿತಿಯನ್ನು ಇದು ಸೂಚಿಸುತ್ತದೆ.

Best Mobiles in India

English summary
Here, we have listed down 4 such helpful apps that will certainly help you to save your mobile data.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X