Subscribe to Gizbot

ಫೇಸ್‌ಬುಕ್ ಆಪ್ ಬಳಸಿಕೊಂಡು ಫೋಟೋ ಎಡಿಟ್ ಮಾಡುವುದು ಹೇಗೆ?

Written By:

ಫೇಸ್‌ಬುಕ್ ಎಂಬ ಜಾಲತಾಣದಲ್ಲಿ ನೀವು ಲೆಕ್ಕವಿಲ್ಲದಷ್ಟು ಅಸಂಖ್ಯ ಕೆಲಸಗಳನ್ನು ನಿರ್ವಹಿಸಬಹುದಾಗಿದೆ. ನಿಮ್ಮ ಫೋಟೋಗಳನ್ನು, ವೀಡಿಯೊಗಳನ್ನು ಶೇರ್ ಮಾಡಿಕೊಳ್ಳುತ್ತಾ ಗೆಳೆತನದ ಸವಿನೆನಪುಗಳನ್ನು ಹಂಚಿಕೊಳ್ಳುತ್ತಾ ಹೀಗೆ ಸುಂದರ ಅನುಭೂತಿಯನ್ನು ಫೇಸ್‌ಬುಕ್ ನಿಮಗೆ ದಯಪಾಲಿಸುತ್ತದೆ. ಆದರೆ ಫೇಸ್‌ಬುಕ್‌ನಲ್ಲಿ ಫೋಟೋಗಳನ್ನು ಎಡಿಟ್ ಮಾಡುವ ಕ್ರಮ ಹೇಗೆ ಎಂಬುದನ್ನು ನೀವು ಅರಿತಿದ್ದೀರಾ?

ಓದಿರಿ: ವಾಟ್ಸಾಪ್ ಗ್ರೂಪ್ ಅಡ್ಮಿನ್‌ಗಾಗಿ ಟಿಪ್ಸ್ ಮತ್ತು ಟ್ರಿಕ್ಸ್

ಫೇಸ್‌ಬುಕ್‌ ಅಪ್ಲಿಕೇಶನ್‌ನ ಇತ್ತೀಚಿನ ಆವೃತ್ತಿಯೊಂದಿಗೆ ನಿಮಗೆ ಫೋಟೋಗಳನ್ನು ಎಡಿಟ್ ಮಾಡಬಹುದಾಗಿದೆ. ಇದಕ್ಕಾಗಿ ನೀವು ಹೆಚ್ಚುವರಿ ಫೋಟೋ ಎಡಿಟಿಂಗ್ ಅಪ್ಲಿಕೇಶನ್‌ನ ಸಹಾಯವನ್ನು ಪಡೆಯಬೇಕಾಗಿಲ್ಲ. ಈ ಸರಳ ಹಂತಗಳನ್ನು ಪಾಲಿಸಿ ಫೋಟೋ ಎಡಿಟಿಂಗ್ ಅನ್ನು ನಿಮಗೆ ನಿರ್ವಹಿಸಿಕೊಳ್ಳಬಹುದಾಗಿದೆ.

ಓದಿರಿ: ನಿಮ್ಮದೇ ಏರ್‌ಟೆಲ್ ಸಂಖ್ಯೆಗೆ 3ಜಿಬಿ "ಫ್ರಿ" ಇಂಟರ್ನೆಟ್ ಪಡೆದುಕೊಳ್ಳಲು ಹೀಗೆ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹಂತ: 1

ಫೇಸ್‌ಬುಕ್ ವೆಬ್‌ಸೈಟ್ ಬಳಸಿಕೊಂಡು

ಫೋಟೋ ಅಪ್‌ಲೋಡ್ ಮಾಡಿ
ಪೋಸ್ಟ್ ಮಾಡುವ ಮುನ್ನ ಫೋಟೋ ಅಪ್‌ಲೋಡ್ ಮಾಡಿ. ಅದು ಲೋಡ್ ಆಗುವವರೆಗೂ ಕಾಯಿರಿ.

ಫೋಟೋ ಎಡಿಟ್ ವಿಜಾರ್ಡ್‌ಗೆ ಹೋಗಿ

ಹಂತ: 2

ಅಪ್‌ಲೋಡ್ ಮಾಡಿರುವ ಫೋಟೋದಲ್ಲಿ 'ಎಡಿಟ್' ಆಪ್ಶನ್ ಅನ್ನು ನೀವು ಕಾಣುತ್ತೀರಿ. ಫೇಸ್‌ಬುಕ್ ವೆಬ್‌ಸೈಟ್‌ನಲ್ಲಿ ಫೋಟೋ ಎಡಿಟ್ ವಿಜಾರ್ಡ್ ತೆರೆದುಕೊಳ್ಳಲು ಆಪ್ಶನ್ ಮೇಲೆ ಕ್ಲಿಕ್ ಮಾಡಿ.

ಬೇಕಾದ ಇಫೆಕ್ಟ್‌ಗಳನ್ನು ಆರಿಸಿ

ಹಂತ: 3

ಎಡಿಟ್ ಪ್ಯಾನಲ್‌ನ ಎಡಭಾಗದಲ್ಲಿ ಫಿಲ್ಟರ್ ಆಪ್ಶನ್ ಅನ್ನು ನೀವು ಕಾಣುತ್ತೀರಿ. ಇಲ್ಲಿ ಬೇಕಾದ ಇಫೆಕ್ಟ್ ಆರಿಸಿ. ಫೋಟೋಗೆ ಸ್ಟಿಕ್ಕರ್ ಕೂಡ ಅಂಟಿಸಬಹುದು. ಈಗ ಎಡಿಟ್ ಮಾಡಿರುವ ಚಿತ್ರ ಮತ್ತು ಪೋಸ್ಟ್ ಮತ್ತು ಇಮೇಜ್ ಅನ್ನು ಸೇವ್ ಮಾಡಿ

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಫೇಸ್‌ಬುಕ್ ಅಪ್ಲಿಕೇಶನ್ ಬಳಸಿಕೊಂಡು

ಫೇಸ್‌ಬುಕ್ ಅಪ್ಲಿಕೇಶನ್ ಬಳಸಿಕೊಂಡು

ನೀವು ಫೇಸ್‌ಬುಕ್ ಅಪ್ಲಿಕೇಶನ್‌ನ ಇತ್ತೀಚಿನ ಆವೃತ್ತಿಯನ್ನು ಹೊಂದಿದ್ದೀರಿ ಎಂದಾದಲ್ಲಿ ನಿಮ್ಮ ಅಪ್ಲಿಕೇಶನ್ ಅನ್ನು ನವೀಕರಣಗೊಳಿಸಿ.

ಹಂತ: 1

ಹಂತ: 1

ಇಮೇಜ್ ಲೋಡ್ ಮಾಡಿ
ಪರದೆಯ ಮೇಲ್ಭಾಗದಿಂದ 'ಫೋಟೋ' ಆಪ್ಶನ್ ಅನ್ನು ಕ್ಲಿಕ್ ಮಾಡುವ ಮೂಲಕ ನೀವು ಪೋಸ್ಟ್ ಮಾಡಲು ಬಯಸುವ ಇಮೇಜ್ ಅನ್ನು ಲೋಡ್ ಮಾಡಿ.

ಹಂತ: 2

ಹಂತ: 2

ಎಡಿಟ್ ಸ್ಕ್ರೀನ್‌ಗೆ ಲ್ಯಾಂಡ್ ಆಗಿ
ಒಮ್ಮೆ ನೀವು ಇಮೇಜ್ ಅನ್ನು ಅಪ್‌ಲೋಡ್ ಮಾಡಿದ ನಂತರ ಚಿತ್ರದ ಎಡಮೂಲೆಯಲ್ಲಿ ಅದೇ ಮಾದರಿಯ 'ಎಡಿಟ್' ಆಪ್ಶನ್ ಅನ್ನು ನೀವು ಕಾಣುತ್ತೀರಿ. ಇದರ ಮೇಲೆ ಕ್ಲಿಕ್ ಮಾಡಿ ಮತ್ತು ಎಡಿಟ್ ಸ್ಕ್ರೀನ್‌ಗೆ ನೀವು ಹೋಗುತ್ತೀರಿ.

ಹಂತ: 3

ಹಂತ: 3

ಫಿಲ್ಟರ್‌ಗಳನ್ನು ಸೇರಿಸಿ ಮತ್ತು ಸೇವ್ ಮಾಡಿ
ಚಿತ್ರದ ಮೇಲೆ ಅಪ್ಲೈ ಮಾಡಲು ಬೇಕಾದ ಇಫೆಕ್ಟ್‌ಗಳನ್ನು ನೀವು ಆರಿಸಬಹುದಾಗಿದೆ. ಒಮ್ಮೆ ಎಡಿಟ್ ಪೂರ್ಣಗೊಂಡಿದೆ ಎಂದಾದಲ್ಲಿ 'ಸೇವ್' ಆಪ್ಶನ್ ಮೇಲೆ ಕ್ಲಿಕ್ ಮಾಡಿ ಮತ್ತು ಪೋಸ್ಟ್ ಮಾಡಿ ನಿಮ್ಮ ಕೆಲಸ ಮುಗಿದಂತೆಯೇ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Now you don't need to have an extra photo editing app. The method is quite simple and easy. You just need to follow this simple guide.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot