'ಆಂಡ್ರಾಯ್ಡ್ 6.0'ದಲ್ಲಿ ಮಲ್ಟಿ ವಿಂಡೋ ಫೀಚರ್‌ ಎನೇಬಲ್ ಹೇಗೆ?

By Suneel
|

ಗೂಗಲ್‌ ಆಂಡ್ರಾಯ್ಡ್ 6.0 ಮಾರ್ಷ್‌ಮಲ್ಲೊ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಹಲವು ಫೀಚರ್‌ಗಳನ್ನು ಪ್ಯಾಕ್ ಮಾಡಿದೆ. ಆದರೆ ಕೆಲವು ಹೈಡ್‌ ಆಗಿದ್ದು, ಬಹುಸಂಖ್ಯಾತ ಬಳಕೆದಾರರು ಹೈಡ್‌ ಆಗಿರುವ ಉತ್ತಮ ಫೀಚರ್‌ಗಳನ್ನು ಓಪನ್‌ ಮಾಡಲು ಸಾಧ್ಯವಾಗುವುದಿಲ್ಲ. ಅಂತಹ ಫೀಚರ್‌ಗಳಲ್ಲಿ ಮಲ್ಟಿವಿಂಡೋ ಫೀಚರ್ ಸಹ ಒಂದು.

ಆಂಡ್ರಾಯ್ಡ್ 6.0 ಮಾರ್ಷ್‌ಮಲ್ಲೊ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಮಲ್ಟಿ ವಿಂಡೋ ಮೋಡ್‌ ಅನ್ನು ಎನೇಬಲ್‌ ಮಾಡುವುದು ತುಂಬ ಸರಳ. ರೂಟ್ ಆಕ್ಸೆಸ್ ಮತ್ತು ಒಂದು ಆಪ್‌ನಿಂದ ಮಲ್ಟಿವಿಂಡೋ ಫೀಚರ್‌ ಎನೇಬಲ್‌ ಮಾಡುವುದು ಹೇಗೆ ಎಂದು ಇಂದಿನ ಲೇಖನದಲ್ಲಿ ಓದಿ ತಿಳಿಯಿರಿ.

ಆಂಡ್ರಾಯ್ಡ್ 7.1 ನ್ಯೂಗಾ ಅಪ್‌ಡೇಟ್‌: ಟಾಪ್‌ 5 ಫೀಚರ್‌ಗಳು ಏನು ಗೊತ್ತೇ?

ಹಂತ 1

ಹಂತ 1

ಮೊದಲಿಗೆ ನಿಮ್ಮ ಆಂಡ್ರಾಯ್ಡ್ ಫೋನ್‌ ರೂಟ್‌ ಆಗಿರಬೇಕು. ನಿಮ್ಮ ಆಂಡ್ರಾಯ್ಡ್ ಫೋನ್‌ ರೂಟ್ ಮಾಡಲು ಈ ಲಿಂಕ್‌ ಅನ್ನು ಕ್ಲಿಕ್ ಮಾಡಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಂತ 2

ಹಂತ 2

ನಿಮ್ಮ ಆಂಡ್ರಾಯ್ಡ್ ರೂಟಿಂಗ್‌ ಆದ ನಂತರ, ಗೂಗಲ್‌ ಪ್ಲೇ ಸ್ಟೋರ್‌ನಿಂದ 'Root Explorer' ಅನ್ನು ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್ ಮಾಡಿ. ನಂತರ ಆಪ್‌ ಓಪನ್‌ ಮಾಡಿ, ಸೂಪರ್‌ ಯೂಸರ್‌ ಆಕ್ಸೆಸ್‌ ನೀಡಿ.

ಹಂತ 3

ಹಂತ 3

ಈ ಹಂತದಲ್ಲಿ 'Root Explorer'ನಲ್ಲಿ Directory/System ಗೆ ಹೋಗಿ

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಂತ 4

ಹಂತ 4

ಈಗ ಸಿಸ್ಟಮ್‌ನಲ್ಲಿ ನೀವು ಫೈಲ್‌ ಹೆಸರು Build.drop ಮೇಲೆ ಟ್ಯಾಪ್ ಮಾಡಿ ಓಪನ್ ಮಾಡಿ. ಓಪನ್‌ ಆದ ಫೈಲ್‌ನಲ್ಲಿ ಬಿಲ್ಡ್‌ ಟೈಪ್‌ ಅನ್ನು User ನಿಂದ Userdebug ಗೆ ಮೌಲ್ಯ ಬದಲಿಸಬೇಕು.

ಹಂತ 5

ಹಂತ 5

ಮೇಲಿನ ಪ್ರಕ್ರಿಯೆ ಮುಗಿದ ನಂತರ ಫೈಲ್ ಅನ್ನು ಸೇವ್‌ ಮಾಡಿ, ನಿಮ್ಮ ಆಂಡ್ರಾಯ್ಡ್ ಡಿವೈಸ್‌ ಅನ್ನು ರೀಬೂಟ್‌ ಮಾಡಿ.

ನಂತರ ಡೆವೆಲಪರ್ ಮೋಡ್ ಅನ್ನು ಎನೇಬಲ್ ಮಾಡಬೇಕು. ಎನೇಬಲ್‌ ಮಾಡಲು Settings -> About Phone -> Build Number ಗೆ ಹೊಗಿ ಬಿಲ್ಡ್‌ ನಂಬರ್‌ ಅನ್ನು 7-10 ಬಾರಿ ಟ್ಯಾಪ್ ಮಾಡಿ. ಡೆವೆಲಪರ್ ಆಪ್ಶನ್ ಆಕ್ಟಿವೇಟ್ ಆಗುತ್ತದೆ. ನಂತರ Settings >>Developer Option>>Multi-window ಆಪ್ಶನ್‌ ಎನೇಬಲ್‌ ಮಾಡಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
How to Enable Multi Window Feature In Android 6.0. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X