ಆಂಟಿವೈರಸ್‌ ಇಲ್ಲದೇ ಕಂಪ್ಯೂಟರ್‌ನಲ್ಲಿ ವೈರಸ್‌ ರಿಮೂವ್‌ ಹೇಗೆ?

Written By:

ಕಂಪ್ಯೂಟರ್‌ಗಳಲ್ಲಿ ವೈರಸ್‌ ಹೋಗಲಾಡಿಸಲು ಆಂಟಿವೈರಸ್ ಸಾಫ್ಟ್‌ವೇರ್‌ ಬೇಕೆ ಬೇಕು. ಆದ್ರೆ ಕೆಲವರು ವೈರಸ್‌ ಹೋಗಲಾಡಿಸಲು ಲೈಸನ್ಸ್‌ ಇರುವ ಆಂಟಿವೈರಸ್ ಪಡೆಯದೇ, ಉಚಿತ ಆಂಟಿವೈರಸ್‌ ಸಾಫ್ಟ್‌ವೇರ್‌ಗಳನ್ನು ಇನ್‌ಸ್ಟಾಲ್ ಮಾಡುತ್ತಾರೆ. ಇದರಿಂದ ವೈರಸ್‌ಗಳು ಸಿಸ್ಟಮ್‌ನಲ್ಲಿ ಹೆಚ್ಚಾಗುತ್ತದೆಯೇ ಹೊರತು ಕಡಿಮೆಯಂತು ಆಗೋದಿಲ್ಲ.

ಅಂದಹಾಗೆ ವೈರಸ್‌ಗಳು ಇಂಟರ್ನೆಟ್‌ ಬ್ರೌಸಿಂಗ್‌ ಮುಖಾಂತರ, ಯುಎಸ್‌ಬಿ ಡಿವೈಸ್‌ ಮೂಲಕ ಹಾಗೂ ಕೆಲವು ಸಾಫ್ಟ್‌ವೇರ್‌ಗಳನ್ನು ಅಧಿಕೃತ ವೆಬ್‌ಸೈಟ್‌ಗಳನ್ನು ಬಿಟ್ಟು ಇತರೆ ವೆಬ್‌ಸೈಟ್‌ಗಳಿಂದ ಇನ್‌ಸ್ಟಾಲ್ ಮಾಡಿಕೊಳ್ಳುವುದರಿಂದ ಹೆಚ್ಚಾಗುತ್ತದೆ.

ಹಲವರು ಆಂಟಿವೈರಸ್ ಸಾಫ್ಟ್‌ವೇರ್‌ಗಳನ್ನು ಇನ್‌ಸ್ಟಾಲ್‌ ಮಾಡದೆ ಕಂಪ್ಯೂಟರ್‌ನಲ್ಲಿನ ವೈರಸ್‌ ರಿಮೂವ್‌ ಮಾಡಲು ಆಗುವುದಿಲ್ಲವೇ ಎಂದು ಪ್ರಶ್ನೆ ಕೇಳಿದ್ದರು. ಅದಕ್ಕೆ ಉತ್ತರವನ್ನು ಇಂದಿನ ಲೇಖನದಲ್ಲಿ ನೀಡುತ್ತಿದ್ದೇವೆ. ಯಾವುದೇ ಆಂಟಿವೈರಸ್‌ ಸಾಫ್ಟ್‌ವೇರ್‌ಗಳಿಲ್ಲದೇ ಕಂಪ್ಯೂಟರ್‌ನಲ್ಲಿನ ವೈರಸ್‌ ರೀಮೂವ್‌ ಮಾಡುವುದು ಹೇಗೆ ಎಂಬುದನ್ನು ಸ್ಲೈಡರ್‌ ಕ್ಲಿಕ್ಕಿಸಿ ತಿಳಿಯಿರಿ.

ಯೂಟ್ಯೂಬ್‌ ಬಗ್ಗೆ ತಿಳಿಯಲೇಬೇಕಾದ 5 ಸತ್ಯಾಂಶಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹಂತ 1

ಹಂತ 1

1

ಕಮ್ಯಾಂಡ್‌ ಪ್ರಾಂಮ್ಟ್‌ ಬಳಸಿ ವೈರಸ್‌ ರಿಮೂವ್‌

ಮೊದಲಿಗೆ 'Start' ಮೆನು ಕ್ಲಿಕ್ ಮಾಡಿ 'cmd' ಎಂದು ಟೈಪಿಸಿ. 'cmd' ಐಕಾನ್‌ ಮೇಲೆ ರೈಟ್‌ ಬಟನ್‌ ಕ್ಲಿಕ್‌ ಮಾಡಿ 'run as administrator' ಆಯ್ಕೆ ಮಾಡಿ. ನಂತರ ವೈರಸ್‌ ರಿಮೂವ್‌ ಮಾಡಬೇಕಾಗಿರುವ ಡ್ರೈವ್‌ ಅನ್ನು ಸೆಲೆಕ್ಟ್ ಮಾಡಿ.

ಹಂತ 2

ಹಂತ 2

2

'd' ಡ್ರೈವ್‌ ಎಂದು ತೆಗೆದುಕೊಂಡಲ್ಲಿ "dir D: attrib -s -h /s /d *.*" ಟೈಪಿಸಿ ಎಂಟರ್‌ ಪ್ರೆಸ್‌ ಮಾಡಿ.
D ಎಂಬುದು ಇಲ್ಲಿ ಡ್ರೈವ್‌ ಆಗಿದೆ. ಇದೇ ರೀತಿಯಲ್ಲಿ ಇತರೆ ಡ್ರೈವ್‌ಗಳನ್ನು ಇಂಗ್ಲೀಷ್‌ ದೊಡ್ಡ ಅಕ್ಷರಗಳಲ್ಲಿ ಟೈಪಿಸಬೇಕಾಗುತ್ತದೆ.

ಹಂತ 3

ಹಂತ 3

3

ಕಮ್ಯಾಂಡ್‌ ಪ್ರಾಂಮ್ಟ್‌ ನೀವು ಆಯ್ಕೆ ಮಾಡಿದ ಡ್ರೈವ್‌ ಅನ್ನು ಅನ್ವೇಷಿಸುತ್ತದೆ.

ಹಂತ 4

ಹಂತ 4

4

ಈ ಹಂತದಲ್ಲಿ ನೀವೇನಾದರೂ ಸಿಸ್ಟಮ್‌ನಲ್ಲಿನ ಅನುಪಯುಕ್ತ ಉಚಿತ ಫೈಲ್‌ಗಳನ್ನು ಮತ್ತು autoru.inf ಎಂಬುದನ್ನು ಕಂಡಲ್ಲಿ ಅವುಗಳಿಗೆ ಕಮ್ಯಾಂಡ್‌ ಸಹಿತ ಇತರೆ ಹೆಸರು ನೀಡಿ.
ಈ ವಿಧಾನದಿಂದ ಡ್ರೈವ್‌ನಲ್ಲಿ ಯಾವುದೇ ವೈರಸ್‌ ಇಲ್ಲದಂತೆ ಆಕ್ಸೆಸ್‌ ಮಾಡಬಹುದಾಗಿದೆ.

ಆನ್‌ಲೈನ್‌ ಸ್ಕ್ಯಾನರ್‌ ಬಳಸಿ ವೈರಸ್‌ ರಿಮೂವ್‌

ಆನ್‌ಲೈನ್‌ ಸ್ಕ್ಯಾನರ್‌ ಬಳಸಿ ವೈರಸ್‌ ರಿಮೂವ್‌

5

ಆನ್‌ಲೈನ್‌ ಸ್ಕ್ಯಾನರ್‌ ಬಳಸಿ ಸಹ ವೈರಸ್ ರಿಮೂವ್‌ ಮಾಡಬಹುದಾಗಿದೆ. www.virustotal.com ನಿಮ್ಮ ಬ್ರೌಸರ್‌ ಮೂಲಕ ಹೋಗಿ.

ಸ್ಕ್ಯಾನ್‌ ಮಾಡಿ

ಸ್ಕ್ಯಾನ್‌ ಮಾಡಿ

6

ನೀವು ವೈರಸ್ ಸ್ಕ್ಯಾನ್‌ ಮಾಡಬೇಕು ಎಂದು ಕೊಂಡ ಫೈಲ್‌ಗಳನ್ನು virustotal ಮೂಲಕ ಸ್ಕ್ಯಾನ್‌ ಮಾಡಿ. ಆದರೆ ಫೈಲ್‌ ಸೈಜ್‌ 128MB ಗಿಂತ ಹೆಚ್ಚಾಗಿರಬಾರದು.

URL ಸ್ಕ್ಯಾನ್‌

URL ಸ್ಕ್ಯಾನ್‌

7

ಕೇವಲ ಫೈಲ್‌ಗಳು ಮಾತ್ರವಲ್ಲದೇ url ಅನ್ನು ಸಹ ಸ್ಕ್ಯಾನ್‌ ಮಾಡಬಹುದಾಗಿದ್ದು, url ನೀಡಿ 'Scan it' ಬಟನ್‌ ಕ್ಲಿಕ್‌ ಮಾಡಿ.

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಟೆಕ್ನಾಲಜಿ ಬಗೆಗಿನ ನಿರಂತರ ಸುದ್ದಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
How to Remove Virus from Computer without any Antivirus. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot