ವೇಗವಾಗಿ ಮೊಬೈಲ್‌ ಫೋನ್‌ ಚಾರ್ಜ್‌ ಮಾಡುವುದು ಹೇಗೆ?

Posted By: Staff
ವೇಗವಾಗಿ ಮೊಬೈಲ್‌ ಫೋನ್‌ ಚಾರ್ಜ್‌ ಮಾಡುವುದು ಹೇಗೆ?
ಇಂದಿನ ದೈನಂದಿನ ಚಟುವಟಿಕೆಗಳು ಎಷ್ಟು ವೇಗವಾಗಿರುತ್ತದೆ ಎಂದರೆ ನಮ್ಮ ಮೊಬೈಲ್‌ ಫೋನ್‌ ಚಾರ್ಜ್‌ ಮಾಡಿಕೊಳ್ಲಲು ಕೂಡಾ ನಮಗೆ ಸಮಯ ವಿರುವುದಿಲ್ಲ. ಬೆಳಗ್ಗೆ ಎದ್ದು ಅಯ್ಯೋ ಟೈಂ ಆಯ್ತಲ್ಲಪ್ಪಾ ಎಂದು ಬೇಗ ಬೇಗ ರೆಡಿ ಆಗಿ ಅರೆಬರೆ ತಿಂಡಿ ತಿಂದು ಆಫೀಸ್‌ಗೆ ಹೊರ್ಡೋ ಟೈಂ ಗೆ ಸರಿಯಾಗಿ ಪೋನ್‌ ತಗೊಂಡ್ರೆ ಚಾರ್ಜಿಂಗ್‌ ಕಡಿಮೆ ಇರುತ್ತದೆ ಈಗಿರುವಾಗ ಇಷ್ಟು ಕಡಿಮೆ ಸಮಯದಲ್ಲಿ ಹೇಗಪ್ಪ ಈ ಮೊಬೈಲ್‌ ಪೋನ್‌ ಚಾರ್ಜ್‌ ಮಾಡೋದು?... ಮೊಬೈಲ್‌ ಫೋನ್‌ ಇಲ್ಲದೆ ಬಹುತೇಕ ಕೆಲಸ ಕಾರ್ಯಗಳು ಪೂರ್ಣ ಗೊಳ್ಳುವದೇ ಇಲ್ಲ ಹೀಗಾಗಿ ಹಲವರಿಗೆ ಇದೊಂದು ತಲೆ ನೋವಿನ ಸಮಸ್ಯೆಯಾಗಿ ಬಿಟ್ಟಿರುತ್ತದೆ.

ಆದ್ದರಿಂದಲೇ ಗಿಜ್ಬಾಟ್‌ ಇಂದು ಕಡಿಮಡ ಸಮಯದಲ್ಲಿ ಮೊಬೈಲ್ ಫೋನ್ ಚಾರ್ಜ್‌ ಮಾಡುವುದು ಹೇಗೆ ಎಂಬುದರ ಕುರಿತಾಗಿ ಕೆಲ ಸರಳ ಟ್ರಿಕ್ಸ್‌ಗಳನ್ನು ತಂದಿದೆ ಓದಿ ನೋಡಿ. ಈ ಟ್ರಿಕ್ಸ್‌ಗಳನ್ನು ಪ್ರಯೋಗಿಸುವ ಮೂಲಕ ನೀವು ನಿಮ್ಮ ಮೊಬೈಲ್‌ ಫೋನ್‌ ಬಹು ಬೇಗನೆ ಚಾರ್ಜ್‌ ಮಾಡಿಕೊಳ್ಳಬಹುದಾಗಿದೆ.

  • ಮೊಬೈಲ್‌ ಫೋನ್‌ ಚಾರ್ಜ್‌ ಮಾಡಲು ನಿಮ್ಮ ಪಿಸಿ ಅಥವಾ ಲ್ಯಾಪ್‌ಟಾಪ್‌ಗೆ ಕನೆಕ್ಟ್‌ ಮಾಡುವುದರಿಂದ ಮಂದಗತಿಯಲ್ಲಿ ಚಾರ್ಜ್‌ ಆಗುತ್ತದೆ ಇದರ ಬದಲಾಗಿ ಡೈರೆಕ್ಟ್‌ ಸ್ವಿಚ್‌ ಬೋರ್ಡ್‌ಗೆ ಕನೆಕ್ಟ್‌ ಮಾಡಿ ನಿಮ್ಮ ಫೋನ್‌ ಬೇಗನೆ ಚಾರ್ಜ್‌ ಆಗುತ್ತದೆ.

  • ಫೋನ್‌ ಚಾರ್ಜ್‌ ಮಾಡುವ ಸಂದರ್ಭದಲ್ಲಿ ಬ್ಲೂಟೂತ್‌, ವೈ-ಫೈ ಅಥವಾ ಜಿಪಿಎಸ್‌ ನಂತಹ ಅಪ್ಲಿಕೇಷನ್‌ಗಳು ಆನ್‌ ಇದ್ದಲ್ಲಿ ಆಫ್‌ ಮಾಡಿಬಿಡಿ.

  • ಅಂದಹಾಗೆ ನಿಮ್ಮ ಫೋನ್‌ನ ಬ್ಯಾಟರಿ ಸಂಪೂರ್ಣ ಕಡಿಮೆಯಾಗಿದ್ದಲ್ಲಿ ಸ್ಕ್ರೀನ್‌ ಆಫ್‌ ಮಾಡಿಬಿಡಿ ಇದರಿಂದಾಗಿ ಫೋನ್‌ನಲ್ಲಿ ಖರ್ಚಾಗುವ ಎಕ್ಷ್ರಾ ಬ್ಯಾಟರಿ ಪವರ್‌ ಉಳಿಸ ಬಹುದಾಗಿದೆ.

  • ಫೋನ್‌ನಲ್ಲಿ ಹೆಚ್ಚಿನ ಶಬ್ದದ ರಿಂಗ್‌ ಟೋನ್‌ ಹಾಗೂ ವಿಡಿಯೋ ಟೋನ್‌ ಆನ್‌ ಮಾಡಿದ್ದಲ್ಲಿ ಅದನ್ನು ಬದಲಾಯಿಸಿ ಬಿಡಿ ಇದರಿಂದಾಗಿ ಬಹುಬೇಗನೆ ನಿಮ್ಮ ಮೊಬೈಲ್‌ ಫೋನ್‌ನ ಬ್ಯಾಟರಿ ಖಾಲಿಯಾಗಿಬಿಡುತ್ತದೆ.

  • ಲೋಕಲ್‌ ಚಾರ್ಜರ್‌ಗಳ ಬದಲಾಗಿ ಕಂಪನಿಯ ಸ್ಟ್ಯಾಂಡರ್ಡ್‌ ಚಾರ್ಜರ್‌ ಮೂಲಕವೇ ಮೊಬೈಲ್‌ ಚಾರ್ಜ್‌ ಮಾಡಿ ಇದರಿಂದಾಗಿ ನಿಮ್ಮ ಮೊಬೈಲ್‌ ಫೋನ್‌ನ ಬ್ಯಾಟರಿ ಸುರಕ್ಷಿತವಾಗಿರುತ್ತದೆ ಅಲ್ಲದೆ ಬಹುಬೇಗನೆ ಚಾರ್ಜ್‌ ಕೂಡಾ ಆಗುತ್ತದೆ.

  • ನಿಮ್ಮ ಮೊಬೈಲ್ ಫೋನ್‌ ಸ್ವಿಚ್‌ ಆಫ್‌ ಮಾಡಿ ಚಾರ್ಜಿಂಗ್‌ ಹಾಕಿದರೂ ಕೂಡ ಬಹುಬೇಗನೆ ಚಾರ್ಜ್‌ ಕಂಪ್ಲೀಟ್‌ ಆಗುತ್ತದೆ.

ಪವರ್‌ಕಟ್‌ ಆದಲ್ಲಿ ಫೋನ್‌ ಚಾರ್ಜ್‌ಮಾಡಲು ಕೆಲ ಸರಳ ಉಪಾಯ

ನೀರಿನಿಂದಲೇ ಮೊಬೈಲ್‌ ಪೋನ್‌ ಚಾರ್ಜ್‌ ಮಾಡಿಕೊಳ್ಳಿ!

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot