ಡಿವಿಡಿ ಪ್ಲೇಯರ್‌ನ ಲೆನ್ಸ್‌ ಕ್ಲೀನ್‌ ಮಾಡುವುದು ಹೇಗೆ?

Posted By: Staff
ಡಿವಿಡಿ ಪ್ಲೇಯರ್‌ನ ಲೆನ್ಸ್‌ ಕ್ಲೀನ್‌ ಮಾಡುವುದು ಹೇಗೆ?
ಡಿವಿಡಿ ಪ್ಲೇಯರ್‌ಗಳ ಬದಲಾಗಿ ಇಂದು ನಿಧಾನವಾಗಿ ಬ್ಲೂರೇ ಪ್ಲೇಯರ್‌ಗಳು ಮಾರುಕಟ್ಟೆಯನ್ನು ಪ್ರವೇಶಿಸುತ್ತಿವೆ ಆದರೇ ಇಂದು ಬಹುತೇಕ ಮಂದಿ ಡಿವಿಡಿ ಪ್ಲೇಯರ್‌ಗಳನ್ನೇ ಬಳಸುತ್ತಿದ್ದಾರೆ. ಭಾನುವಾರ ಅಥವಾ ರಜೆ ದಿನಗಳಂದು ಮನೆ ಮಂದಿಯೆಲ್ಲಾ ಕುಳಿತು ಡಿವಿಡಿ ಪ್ಲೇಯರ್‌ ನಲ್ಲಿ ಸಿನಿಮಾ ನೋಡುವುದೆಂದರೆ ಅದರ ಸಂತೋಷವೆ ಬೇರೆ ಅಲ್ಲವೆ ಆದರೆ ಇಂತಹ ಸಂದರ್ಭಗಳಲ್ಲಿ ಡಿವಿಡಿಯಲ್ಲಿನ ಕೆಲ ದೋಶಗಳಿಂದಾಗಿ ಸಿನಿಮಾ ಅರ್ಧಕ್ಕೆ ನಿಂತು ಹೋಯಿತೆಂದರೆ ಎಲ್ಲಾ ಸಂತೋಷ ಕ್ಷಣ ಮಾತ್ರದಲ್ಲಿ ಇಳಿದು ಹೋಗುತ್ತದೆ.

ಅದಕ್ಕಾಗಿಯೇ ನೀವು ನಿಮ್ಮ ಡಿವಿಡಿ ಪ್ಲೇಯರ್‌ನ ಸುರಕ್ಷತೆ ಹಾಗೂ ಸ್ವಚ್ಚತೆ ಕಡೆಗೆ ಕೊಂಚ ಗಮನ ಹರಿಸಬೇಕು ಅದರಲ್ಲಿಯೂ ದೇಟಾ ರೇಡ್‌ ಮಾಡುವ ಡಿವಿಡಿಯಲ್ಲಿನ ಲೆನ್ಸ್‌ನ ಕಡೆಗೆ ಹೆಚ್ಚು ಗಮನ ನೀಡ ಬೇಕಾಗುತ್ತದೆ. ಒಂದು ಅಂಶ ನೆನಪಿನಲ್ಲಿಡಿ ಲೆನ್ಸ್‌ ಕ್ಲೀನ್‌ ಮಾಡುವುದು ಅತ್ಯಂತ ಸೂಕ್ಷ್ಮ ಹಾಗೂ ನಾಜೂಕಿನ ಕೆಲಸವಾಗಿದೆ ಅದಕ್ಕಾಗಿಯೇ ಲೆನ್ಸ್‌ ಸ್ವಚ್ಚಗೊಳಿಸುವಾಗ ಹೆಚ್ಚು ಜಾಗರೂಕತೆಯಿಂದ ಮಾಡಬೇಕಾಗುತ್ತದೆ.

ಅಂದಹಾಗೆ ಲೆನ್ಸ್‌ ಹೇಗೆ ಕ್ಲೀನ್‌ ಮಾಡೋದು ಅಂತಾ ಯೋಚಿಸ್ತಾ ಇದೀರಾ ಇದಕ್ಕಾಗಿ ಹಲವಾರು ಮಾರ್ಗಗಳಿವೆ ಆದರೆ ಈ ಕೆಲಸಕ್ಕೆಂದೇ ಮಾರುಕಟ್ಟೆಯಲ್ಲಿ ಲೆನ್ಸ್‌ ಕ್ಲೀನರ್‌ ಸಿಡಿ ಲಭ್ಯವಿದ್ದು ಅದನ್ನು ಬಳಸಿ ಸುಲಭವಾಗಿ ನಿಮ್ಮ್ ಡಿವಿಡಿಯ ಲೆನ್ಸ್‌ ಕ್ಲೀನ್‌ ಮಾಡಬಹುದಲ್ಲದೆ ಸುರಕ್ಷಿತವಾಗಿಯೂ ಕಾಪಾಡಿಕೊಳ್ಳ ಬಹುದಾಗಿದೆ.

  • ಲೆನ್ಸ್‌ ಕ್ಲೀನ್‌ ಮಾಡುವುದಕ್ಕಿಂತಲೂ ಮೊದಲು ಡಿವಿಡಿಯನ್ನು ಸರ್ಕ್ಯೂಟ್‌ ಬೋರ್ಡ್‌ ನಿಂದ ಪಿನ್‌ ಕಳಚಿರಿ ನಂತರ ಟಿವಿಗೆ ನೀಡಲಾಗಿರುವ ಕನೆಕ್ಟರ್‌ ಕೂಡಾ ಕಳಚಿರಿ.

  • ನಂತರ ಸ್ವಚ್ಚವಾದ ಬಟ್ಟೆಯಿಂದ ಡಿವಿಡಿಯ ಹೊರಭಾಗದಲ್ಲಿನ ಧೂಳನ್ನು ಕ್ಲೀನ್‌ ಮಾಡಿಕೊಳ್ಳಿ. ಈ ರೀತಿ ಮಾಡುವಾಗ ಎಂದಿಗೂ ಡಿವಿಡಿ ಪ್ಲೇಯರ್‌ ಅನ್ನು ಉಲ್ಟಾ ಹಿಡಿದು ಕ್ಲೀನ್‌ ಮಾಡಲು ಪ್ರಯತ್ನಿಸ ಬೇಡಿ.

  • ನಂತರ ಪ್ಲೇಯರ್‌ ಸರ್ಕ್ಯೂಟ್‌ ಬೋರ್ಡ್‌ಗೆ ಕನೆಕ್ಟ್‌ ಮಾಡಿ ಅದರಲ್ಲಿರುವ ಡಿಸ್ಕ್‌ ತೆಗೆದು ಲೆನ್ಸ್‌ ಕ್ಲೀನರ್‌ ಸಿಡಿ ಹಾಕಿ ಪ್ಲೇ ಮಾಡಿ.

  • ಲೆನ್ಸ್‌ ಸಿಡಿ ಚಾಲನೆಯಾದಂತೆ ಅದರಮೇಲಿನ ಧೂಳು ಕ್ಲೀನ್‌ ಆಗುತ್ತಾ ಹೋಗುತ್ತದೆ.

  • ಸಿಡಿ ಸಂಪೂರ್ಣವಾಗಿ ರನ್‌ ಆದ ಮೇಲೆ ಹೊರತೆಗೆಯಿರಿ.

  • ಈಗ ನಿಮ್ಮ ಡಿವಿಡಿ ಪ್ಲೇಯರ್‌ನ ಲೆನ್ಸ್‌ ಸಂಪೂರ್ಣವಾಗಿ ಕ್ಲೀನ್‌ ಆಗಿರುತ್ತದೆ. ಈಗ ನಿಮಗಿಷ್ಟದ ಯಾವುದೇ ಸಿನಿಮಾದ ಸಿಡಿ ಅಥವಾ ಡಿವಿಡಿ ಹಾಕಿ ಯಾವುದೇ ಅಡೆ ತಡೆಗಳಿಲ್ಲದೆ ನೆಮ್ಮದಿಯಿಂದ ಸಿನಿಮಾ ನೋಡಿರಿ.

ಟೂತ್‌ಪೇಸ್ಟ್‌ನಿಂದ ಸಿಡಿ ಮೇಲಿನ ಸ್ಕ್ರಾಚ್‌ ತೆಗೆಯೋದು ಹೇಗೆ?

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot