ವಿಂಡೋಸ್‌ 7 ಆಪರೇಟಿಂಗ್‌ ಸಿಸ್ಟಂನಲ್ಲಿ ವಾಯ್ಸ ಟೆಕ್ಸ್ಟ್ ಮಾಡುವುದು ಹೇಗೆ?

Posted By: Staff
ವಿಂಡೋಸ್‌ 7 ಆಪರೇಟಿಂಗ್‌ ಸಿಸ್ಟಂನಲ್ಲಿ ವಾಯ್ಸ ಟೆಕ್ಸ್ಟ್ ಮಾಡುವುದು ಹೇಗೆ?
ಸಾಮಾನ್ಯಾವಾಗಿ ಗಮನಿಸಿದಲ್ಲಿ ಒಬ್ಬ ವ್ಯಕ್ತಿ ಪ್ರತಿ ಸರಾಸರಿ ನಿಮಿಶವೊಂದಕ್ಕೆ 120 ಪದಗಳನ್ನು ಮಾತನಾಡುತ್ತಾನೆ ಹಾಗೂ ಟೈಪಿಂಗ್‌ ಮಾಡುವುದಾದರೆ ಸರಾಸರಿ 40 ಪದಗಳನ್ನು ಮಾತ್ರ ಟೈಪ್‌ ಮಾಡುತ್ತಾನೆ. ಯೋಚಿಸಿ ನೀವು ಮಾತನಾಡುವ ವೇಗದಲ್ಲೇ ನೀವು ಟೈಪ್‌ ಮಾಡುವಂತಿದ್ದರೆ ಎಷ್ಟು ಅನುಕೂಲ ಆಗುತ್ತಿತ್ತಲ್ಲವೇ? ಇದಕ್ಕಾಗಿ ನೀವ ಮಾತನಾದುತ್ತಾ ಇದ್ದು ಕಂಪ್ಯೂಟರ್‌ ತಂತಾನೆಯೇ ಟೈಪ್‌ ಮಾಡಿಕೊಳ್ಳುವಂತಿದ್ದರಂತೂ ಕೆಲಸ ಕಾರ್ಯಗಳು ಎಷ್ಟು ಸುಲಭವಾಗಿ ಬಿಡುತ್ತದೆ ಅಲ್ಲವೆ. ಅಂದಹಾಗೆ ಈ ರೀತಿ ವಾಯ್ಸ ಮೂಲಕ ಟೆಕ್ಸಟಿಂಗ್‌ ಮಾಡಬಹುದು ಎಂದರೆ ನಿಮಗೆ ಅಚ್ಚರಿ ಆಗಬಹುದು.

ಇದೇನಪ್ಪ ಬಿಳಿ ಕಾಗೆ ಹಾರಿಸ್ತಾ ಇದಾರೆ ಅಂತ ಆಲೋಚಿಸ್ತಾ ಇದ್ದೀರಾ ಖಂಡಿತವಾಗಿಯೂ ಇಲ್ಲಾ, ನಿಮಗೆ ಬೇಕಿದ್ದಲ್ಲಿ ನಿಮ್ಮ ಲ್ಯಾಪ್‌ಟಾಪ್‌ ಅಥವಾ ಕಂಪ್ಯೂಟರ್‌ನಲ್ಲಿ ನಿಮ್ ಧ್ವನಿಯ ಮೂಲಕ ಪದಗಳನ್ನು ಟೈಪ್‌ ಆಗುವಂತೆ ಮಾಡಬಹುದಾಗಿದೆ. ಇದಕ್ಕಾಗಿ ನಿಮ್ಮ ಸಿಸ್ಟಂನಲ್ಲಿ ವಿಂಡೋಸ್‌ ವಿಸ್ಟಾ, ವಿಂಡೋಸ್‌ 7 ಹಾಗೂ ನಂತರ ಬಂದಂತಹ ಆಪರೇಟಿಂಗ್‌ ಸಿಸ್ಟಂ ಇದ್ದರೆ ಸಾಕು ನೀವು ನಿಮ್ಮ ಮೇಲ್‌ ಅಥವ ಇತರೆ ಟೆಕ್ಸ್ಟ್‌ ಸಂದೇಶಗಳನ್ನು ನಿಮ್ಮ ಮಾತುಗಳ ಮೂಲಕವೇ ಟೈಪ್‌ ಮಾಡಬಹುದಾಗಿದೆ.

ವಾಯ್ಸ್‌ ಟೆಕ್ಸ್ಟಿಂಗ್‌ ಮಾಡುವ ಮುನ್ನ

  • ಸ್ಟಾರ್ಟ್‌ > ಪ್ರೋಗ್ರಾಮ್ಸ್ > ಆಕ್ಸಸರೀಸ್‌ > ಏಸ್‌ ಆಫ್‌ ಆಕ್ಸಸರೀಸ್ > ನಂತರ ವಿಂಡೋಸ್‌ ಸ್ಪೀಕ್‌ ರೆಕಗ್ನಿಷನ್‌ ಆಪ್ಷನ್‌ ಆಯ್ಕೆ ಮಾಡಿಕೊಳ್ಳಿ.

  • ಆಪ್ಷನ್‌ ಆಯ್ಕೆ ಮಾಡಿದ ಬಳಿಕ ನೆಕ್ಸ್ಟ್ ಆಪ್ಷನ್‌ ಕ್ಲಿಕ್‌ ಮಾಡಿ ನಿಮ್ಮ ಧ್ವನಿಯನ್ನು ಕಂಪ್ಯೂಟರ್‌ ಗುರ್ತಿಸುತ್ತದೇ ಇಲ್ಲವೋ ಎಂದು ಪರೀಕ್ಷಿಸಿ ನೋಡಿ.

  • ಪರೀಕ್ಷೆ ಮಾಡುವ ಸಂದರ್ಭದಲ್ಲಿ ಕಂಪ್ಯೂಟರ್‌ ನಿಮ್ಮ ಧ್ವನಿಯನ್ನು ಗುರ್ತಿಸಿಕೊಳ್ಳುವ ಸಲುವಾಗಿ ಒಂದೇ ಪದವನ್ನು ಕನಿಷ್ಟ ಪಕ್ಷ ಮೂರು ಬಾರಿಯಾದರು ಉಚ್ಚರಿಸಿ.

  • ಒಮ್ಮೆ ಕಂಪ್ಯೂಟರ್‌ ನಿಮ್ಮ ಧ್ವನಿಯನ್ನು ಗುರ್ತಿಸಿಕೊಂಡಲ್ಲಿ ನಂತರ ನಿಮ್ಮ ಶಬ್ದಗಳನ್ನು ಸರಾಗವಾಗಿ ಅರ್ಥೈಸಿಕೊಳ್ಳುತ್ತದೆ.

ಡಿಫ್ರಾಗ್ಮೆಂಟೇಶನ್‌ ಮೂಲಕ ಕಂಪ್ಯೂಟರ್‌ನ ಸ್ಪೀಡ್‌ ಹೆಚ್ಚಿಸುವುದು ಹೇಗೆ?

ಡೌನ್ಲೋಡ್‌ ಸ್ಪೀಡ್‌ ಹೆಚ್ಚಿಸುವುದು ಹೇಗೆ?

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot