ಏರ್‌ಟೆಲ್‌ನಲ್ಲಿ 5GB ಉಚಿತ ಇಂಟರ್ನೆಟ್ ಡಾಟಾ ಪಡೆಯುವುದು ಹೇಗೆ?

By Suneel
|

ರಿಲಾಯನ್ಸ್ ಜಿಯೋ ಲಾಂಚ್‌ ನಂತರದಲ್ಲಿ ಇಂಟರ್ನೆಟ್ ಮತ್ತು ಸ್ಮಾರ್ಟ್‌ಫೋನ್‌ ಪ್ರಿಯರು ಈ ವರ್ಷದ ಅಂತ್ಯದವರೆಗೆ ಉಚಿತ 4G ಡಾಟಾ ಮತ್ತು ವಾಯ್ಸ್ ಕರೆಗಳ ಆಫರ್‌ ಅನ್ನು ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಉನ್ನತ ಮಟ್ಟದ ಟ್ಯಾರಿಫ್‌ ಪ್ಲಾನ್‌ಗಳನ್ನು, ಅತಿ ಹೆಚ್ಚು ಬೆಲೆಗೆ ಡಾಟಾ ಪ್ಯಾಕ್‌ಗಳನ್ನು ನೀಡುತ್ತಿದ್ದ ಇತರೆ ಟೆಲಿಕಾಂಗಳು ಈಗ ಉಚಿತ ಡಾಟಾ ಮತ್ತು ಟಾಕ್‌ ಟೈಮ್‌ ಆಫರ್‌ ಅನ್ನು ನೀಡುತ್ತಿವೆ.

ಪ್ರಸ್ತುತದಲ್ಲಿ ಏರ್‌ಟೆಲ್‌ ಸಹ ತನ್ನ ಗ್ರಾಹಕರಿಗೆ 5GB ಉಚಿತ ಡಾಟಾ ಆಫರ್‌ ಅನ್ನು ತಂದಿದೆ. ಹೌದು, ಅನ್‌ಲಿಮಿಟೆಡ್‌ ಉಚಿತ ಡಾಟಾ ಆಫರ್ ಮತ್ತು ವಾಯ್ಸ್ ಕರೆ ಆಫರ್‌ಗಾಗಿ ರಿಲಾಯನ್ಸ್ ಜಿಯೋಗೆ ಹೋಗುವ ಗ್ರಾಹಕರಿಗೆ ಏರ್‌ಟೆಲ್‌ ಉಚಿತ 5GB ಡಾಟಾ ಆಫರ್‌ ನೀಡಿ ಆಕರ್ಷಿಸುತ್ತಿದೆ.

ನೀವು ಏರ್‌ಟೆಲ್‌ ಗ್ರಾಹಕರೇ ಆಗಿದ್ದಲ್ಲಿ ಏರ್‌ಟೆಲ್‌(airtel) ನೀಡುವ ಉಚಿತ 5GB ಡಾಟಾ ಆಫರ್‌ ಅನ್ನು ಪಡೆಯಲು ನಾವು ತಿಳಿಸುವ ಹಂತಗಳನ್ನು ಪಾಲಿಸಲೇಬೇಕು. ಆ ಹಂತಗಳು ಯಾವುವು ಎಂದು ಕೆಳಗಿನ ಸ್ಲೈಡರ್‌ ಓದಿ ತಿಳಿಯಿರಿ.

ರಿಲಾಯನ್ಸ್ ಜಿಯೋಗೆ ಮೊಬೈಲ್‌ ನಂಬರ್‌ ಪೋರ್ಟ್‌ ಮಾಡುವುದು ಹೇಗೆ?

ಯಾವುದೇ ಮೋಡ್‌ನಲ್ಲಿ ಬಳಸಿ

ಯಾವುದೇ ಮೋಡ್‌ನಲ್ಲಿ ಬಳಸಿ

ಏರ್‌ಟೆಲ್‌ನ 5GB ಉಚಿತ ಡಾಟಾವನ್ನು 2G, 3G, 4G ಯಾವುದೇ ನೆಟ್‌ವರ್ಕ್‌ನಲ್ಲಿ ಉಪಯೋಗಿಸಬಹುದಾಗಿದೆ. ನಿಮ್ಮ ಮೊಬೈಲ್‌ ಸೆಟ್ಟಿಂಗ್ಸ್‌ನಲ್ಲಿ UMTS ಮೋಡ್‌ಗೆ ಬದಲಾವಣೆ ಮಾಡಬೇಕು. UMTS ಮೋಡ್‌ಗೆ ಬದಲಿಸಲು Settings → Connections → More Networks → Mobile Networks → Network Mode ಫಾಲೋ ಮಾಡಿ.

ಸರಳವಾಗಿ 5GB ಉಚಿತ ಡಾಟಾ ಪಡೆಯಿರಿ

ಸರಳವಾಗಿ 5GB ಉಚಿತ ಡಾಟಾ ಪಡೆಯಿರಿ

ಏರ್‌ಟೆಲ್‌ನಲ್ಲಿ ಉಚಿತ 5GB ಡಾಟಾ ಪಡೆಯುವುದು ಸುಲಭದ ಕೆಲಸ. ಜಸ್ಟ್ ನಿಮ್ಮ ಸ್ಮಾರ್ಟ್‌ಫೋನ್‌ಗೆ myAirtel ಆಪ್‌ ಅನ್ನು ಡೌನ್‌ಲೋಡ್‌ ಮಾಡಿ ಇನ್‌ಸ್ಟಾಲ್‌ ಮಾಡಿ. ನಂತರ ಇದು ನಿಮ್ಮ ಏರ್‌ಟೆಲ್‌ ನಂಬರ್‌ನ 10 ಸಂಖ್ಯೆಗಳನ್ನು ಕೇಳುತ್ತದೆ. ನಂತರ ನೀವು ಪಡೆದ OTP(One Time Password) ಅನ್ನು ನೀಡಿ ಪರಿಶೀಲಿಸಿ. ನಂತರದಲ್ಲಿ ಉಚಿತ 5GB ಡಾಟಾ ಆಫರ್‌ ನಿಮಗೆ ಸಿಗುತ್ತದೆ. ಆದರೆ ಕೆಲವು ನಿಯಮಗಳು ಸಂಬಂಧಿಸಿವೆ.

ರಾತ್ರಿ ಡಾಟಾ ಮಾತ್ರ

ರಾತ್ರಿ ಡಾಟಾ ಮಾತ್ರ

ಏರ್‌ಟೆಲ್‌ ನಿಮಗೆ 5GB ಉಚಿತ ಡಾಟಾವನ್ನು ಖಂಡಿತ ನೀಡುತ್ತದೆ. ಆದರೆ 5GB ಉಚಿತ ಡಾಟಾವನ್ನು ನೀವು ಕೇವಲ ರಾತ್ರಿ ವೇಳೆ ಉಪಯೋಗಿಸಬಹುದು. ರಾತ್ರಿ ವೇಳೆ ಡಾಟಾ ಆಫರ್ ಸಮಯ 00:00 ಇಂದ ಬೆಳಗಿನ ೦6:00 ವರೆಗೆ.

ರೀಚಾರ್ಜ್‌ನಿಂದ 1GB ಉಚಿತ ಪಡೆಯಿರಿ

ರೀಚಾರ್ಜ್‌ನಿಂದ 1GB ಉಚಿತ ಪಡೆಯಿರಿ

ಮೊದಲಿಗೆ ನೀವು ನಿಮ್ಮ ಏರ್‌ಟೆಲ್‌ ನಂಬರ್‌ಗೆ ರೂ.200 ರೀಚಾರ್ಜ್‌ ಮಾಡಿಸಬೇಕು. ನಂತರ myAirtel ಆಪ್‌ನಿಂದ 1GB ಉಚಿತ ಡಾಟಾ ಪಡೆಯಬಹುದು.

ಏರ್‌ಟೆಲ್‌ ವಾಲೆಟ್‌ ಬಳಸಿ

ಏರ್‌ಟೆಲ್‌ ವಾಲೆಟ್‌ ಬಳಸಿ

myAirtel ಆಪ್‌ ಮೂಲಕ ಏರ್‌ಟೆಲ್‌ ವಾಲೆಟ್‌ನಲ್ಲಿ ರೂ.100 ಲೋಡ್ ಮಾಡುವುದರ ಮುಖಾಂತರ ಇತರೆ 500MB ಉಚಿತ ಡಾಟಾ ಪಡೆಯುತ್ತೀರಿ. ನಂತರದಲ್ಲಿ ರೂ.100 ಅಥವಾ ಅದಕ್ಕಿಂತ ಹೆಚ್ಚು ಹಣವನ್ನು ಇತರೆ myAirtel ಆಪ್‌ ಬಳಕೆದಾರರಿಗೆ ಸೆಂಡ್‌ ಮಾಡಿ. ಈ ಪ್ರಕ್ರಿಯೆಯಿಂದಲೂ 500MB ಉಚಿತ ಡಾಟಾವನ್ನು ನಿಮ್ಮ ನಂಬರ್‌ಗೆ ಪಡೆಯುತ್ತೀರಿ.

ವಿಂಕ್‌(Wynk) ಆಫರ್‌

ವಿಂಕ್‌(Wynk) ಆಫರ್‌

ವಿಂಕ್‌(Wynk) ಡೌನ್‌ಲೋಡ್ ಮಾಡಿ ರಿಜಿಸ್ಟಾರ್ ಮಾಡುವುದು ಮತ್ತು 10 ಹಾಡುಗಳನ್ನು ಪ್ಲೇ ಮಾಡುವುದರಿಂದ 500MB ಉಚಿತ ಡಾಟಾ ಪಡೆಯುತ್ತೀರಿ. ವಿಂಕ್‌ ಗೇಮ್‌ ಆಪ್‌ನಲ್ಲಿ apk ಡೌನ್‌ಲೋಡ್‌ ಮಾಡುವುದರಿಂದ ಮತ್ತು ಆಪ್‌ನಲ್ಲಿ ಯಾವುದೇ ಗೇಮ್‌ ಅನ್ನು ಲಾಂಚ್‌ ಮಾಡುವುದರಿಂದ 700MB ಉಚಿತ ಡಾಟಾ ಪಡೆಯುತ್ತೀರಿ. ವಿಂಕ್ ಮೂವಿ ಆಪ್‌ನಲ್ಲಿ 'Jazbaa ಮತ್ತು Bajarangi Bhaijan' ಸಿನಿಮಾ ನೋಡುವುದರಿಂದ 1GB ಉಚಿತ ಡಾಟಾ ಪಡೆಯಿರಿ. ವಿಂಕ್‌ ಆಪ್‌ನಲ್ಲಿ ಸಂಪೂರ್ಣವಾಗಿ ಒಂದು ಹಾಡಿನ ಆಲ್ಬಮ್‌ ಡೌನ್‌ಲೋಡ್‌ ಮಾಡಿ 200MB ಗಿಂತ ಹೆಚ್ಚಿನ ಡಾಟಾ ಉಚಿತವಾಗಿ ಪಡೆಯಿರಿ.

ನಿಮ್ಮ ಗೆಳೆಯರ ನಂಬರ್‌ ರೀಚಾರ್ಜ್‌ ಮಾಡಿ

ನಿಮ್ಮ ಗೆಳೆಯರ ನಂಬರ್‌ ರೀಚಾರ್ಜ್‌ ಮಾಡಿ

ನಿಮ್ಮ ಗೆಳೆಯರು ಏರ್‌ಟೆಲ್‌ ನಂಬರ್‌ ಹೊಂದಿದ್ದಲ್ಲಿ ಅವರಿಗೆ ಕನಿಷ್ಟ ರೂ.10 ರೀಚಾರ್ಜ್‌ ಅನ್ನು myAirtel ಆಪ್‌ನಿಂದ ಮಾಡಿರಿ. ಇದರಿಂದ ನಿಮ್ಮ ನಂಬರ್‌ಗೆ 500MB ಉಚಿತ ಡಾಟಾ ಸೇವ್‌ ಆಗುತ್ತದೆ.

ರೆಫರ್‌ ಮತ್ತು ಆಫರ್ ಗಳಿಗೆ

ರೆಫರ್‌ ಮತ್ತು ಆಫರ್ ಗಳಿಗೆ

ಏರ್‌ಟೆಲ್‌ ಗ್ರಾಹಕರಾದ ನಿಮ್ಮ ಗೆಳೆಯರಿಗೆ myAirtel ಆಪ್‌ ಲಿಂಕ್ ಅನ್ನು ಶೇರ್‌ ಮಾಡಿ 500MB ಉಚಿತ ಡಾಟಾ ಪಡೆಯಿರಿ. ಆಪ್‌ ಲಿಂಕ್ ಅನ್ನು ಸಾಮಾಜಿಕ ತಾಣ, ವಾಟ್ಸಾಪ್‌, ಇಮೇಲ್‌ ಅಥವಾ ಮೆಸೇಜ್‌ ಮೂಲಕ ಶೇರ್‌ ಮಾಡಬಹುದು. ಪ್ರತಿಯೊಬ್ಬ ಸ್ನೇಹಿತ myAirtel ಆಪ್‌ಗೆ ಸೇರ್ಪಡೆಯಾಗಿ ರೀಚಾರ್ಜ್‌ ಮಾಡಿದಲ್ಲಿ ನಿಮ್ಮ ಏರ್‌ಟೆಲ್‌ ನಂಬರ್‌ಗೆ 500 MB ಉಚಿತ ಡಾಟಾ ಬರುತ್ತದೆ.

Best Mobiles in India

Read more about:
English summary
How to Get 5 GB Data for FREE from Airtel: 7 Things to Know. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X