ನೀವು ಖರೀದಿಸಿದ ಜಿಯೋ ಸಿಮ್ ಆಕ್ಟಿವೇಟ್ ಆಗಿದೆಯೇ? ಪರಿಶೀಲನೆ ಹೇಗೆ?

By Shwetha
|

ಜಿಯೋ ತನ್ನ ಆಫರ್‌ಗಳನ್ನು 3 ತಿಂಗಳುಗಳ ಕಾಲ ಜನತೆಗಾಗಿ ಮುಡಿಪಾಗಿರಿಸಿದ್ದು ತದನಂತರ ಆಯಾ ಸೇವೆಗೆ ಸಂಬಂಧ ಪಟ್ಟ ದರಗಳು ಅನ್ವಯವಾಗುವ ಸಾಧ್ಯತೆ ಇದೆ. ಉಚಿತ ವಾಯ್ಸ್ ಕರೆ, ಎಸ್‌ಎಮ್‌ಎಸ್, ಅನಿಯಮಿತ ಇಂಟರ್ನೆಟ್ ಬಳಕೆ ಹೀಗೆ ಬಳಕೆದಾರರಿಗೆ ಪ್ರಯೋಜನವಾಗುವ ಮಾದರಿಯಲ್ಲಿಯೇ ಜಿಯೋ ತನ್ನ ಆಫರ್‌ಗಳನ್ನು ಪ್ರಸ್ತುತಪಡಿಸಿದೆ.

ಓದಿರಿ: ಜಿಯೋ ಸಿಮ್ ಬೆಂಗಳೂರಿನಲ್ಲಿ ಆಕ್ಟಿವೇಶನ್‌ಗೊಳ್ಳಲು ತಗುಲುವ ಸಮಯವೆಷ್ಟು?

ಅದಾಗ್ಯೂ ಸಿಮ್ ವಿಚಾರದಲ್ಲಿ ಹೆಚ್ಚಿನವರು ಕೆಲವೊಂದು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಈ ಪ್ರಯುಕ್ತ ಕಂಪೆನಿ ಕೂಡ ಕೆಲವೊಂದು ಪರಿಹಾರ ಕ್ರಮಗಳನ್ನು ಅನುಸರಿಸುತ್ತಿದೆ. ಸಿಮ್ ಆಕ್ಟಿವೇಶನ್ ವಿಳಂಬ, ಫೋನ್ ಬಿಸಿಯಾವುದು, ಬ್ಯಾಟರಿ ಡ್ರೈನಿಂಗ್ ಹೀಗೆ ಜಿಯೋಗೆ ಸಂಕಷ್ಟಗಳ ಸರಮಾಲೆಯೇ ಬಂದೊದಗಿದೆ. ಹಾಗಿದ್ದರೂ ನೀವು ಖರೀದಿಸಿರುವ ಜಿಯೋ ಸಿಮ್ ಆಕ್ಟಿವೇಟ್ ಆಗಿದೆಯೋ ಇಲ್ಲವೇ ಎಂಬುದನ್ನು ಪರಿಶೀಲಿಸಲು ನೆರವಾಗುವ ಕೆಲವೊಂದು ಅಂಶಗಳನ್ನು ಇಲ್ಲಿ ತಿಳಿಸುತ್ತಿದ್ದೇವೆ.

ಓದಿರಿ: ನಿಮ್ಮದೇ ಫೋನ್ ಸಂಖ್ಯೆಗೆ ಜಿಯೋ ಕನೆಕ್ಷನ್ ಪಡೆದುಕೊಳ್ಳುವುದು ಹೇಗೆ?

ಸಿಗ್ನಲ್‌ ಪರಿಶೀಲಿಸಿ

ಸಿಗ್ನಲ್‌ ಪರಿಶೀಲಿಸಿ

ಸಿಮ್ ಆಕ್ಟಿವೇಟ್ ಆಗಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸುವ ಸರಳ ವಿಧಾನ ಇದಾಗಿದೆ. ನಿಮ್ಮ ಸಿಮ್ ಆಕ್ಟಿವೇಟ್ ಆಗಿದೆಯೇ ಇಲ್ಲವೇ ಎಂಬುದನ್ನು ನೋಡಲು ಮೊಬೈಲ್ ಸಿಗ್ನಲ್‌ಗಳನ್ನು ಟ್ರ್ಯಾಕ್ ಮಾಡಿ.

ಮೊಬೈಲ್ ಡೇಟಾ ಕಾರ್ಯನಿರ್ವಹಣೆ

ಮೊಬೈಲ್ ಡೇಟಾ ಕಾರ್ಯನಿರ್ವಹಣೆ

ಎರಡನೆಯದಾಗಿ ನಿಮ್ಮ ಇಂಟರ್ನೆಟ್ ಸಂಪರ್ಕವನ್ನು ಪರಿಶೀಲಿಸಿ. ನಿಮ್ಮ ವೈಫೈ ಸಂಪರ್ಕವನ್ನು ನಿಷ್ಕ್ರಿಯಗೊಳಿಸಿ ಮತ್ತು ಕೆಲವೊಂದು ವೆಬ್ ಪುಟಗಳನ್ನು ತೆರೆಯಿರಿ ಈಗ ಸಿಮ್ ಕಾರ್ಯನಿರ್ವಹಿಸುತ್ತಿದೆಯೇ ಇಲ್ಲವೇ ಎಂಬುದನ್ನು ನೋಡಬಹುದಾಗಿದೆ.

ಪರ್ಯಾಯ ಸಂಖ್ಯೆಗೆ ಆಕ್ಟಿವೇಶನ್ ಸಂದೇಶ

ಪರ್ಯಾಯ ಸಂಖ್ಯೆಗೆ ಆಕ್ಟಿವೇಶನ್ ಸಂದೇಶ

ನಿಮ್ಮ ಸಿಮ್ ಕಾರ್ಡ್ ಅನ್ನು ನೀವು ಪಡೆದುಕೊಳ್ಳುವಾಗ, ಸ್ಟೋರ್ ಅಧಿಕಾರಿಗಳು ನಿಮ್ಮ ಪರ್ಯಾಯ ಮೊಬೈಲ್ ಸಂಖ್ಯೆಯನ್ನು ಕೇಳಿರುತ್ತಾರೆ. ಆದ್ದರಿಂದ ನಿಮ್ಮ ಸಿಮ್ ಕಾರ್ಡ್ ಆಕ್ಟಿವೇಟ್ ಆದಾಗ, ನಿಮ್ಮ ಸಿಮ್ ಕಾರ್ಡ್ ಆಕ್ಟಿವೇಟ್ ಆಗಿದೆ ಎಂಬ ಸಂದೇಶವನ್ನು ನೀವು ಸ್ವೀಕರಿಸುತ್ತೀರಿ.

ಮೈಜಿಯೋ ಅಪ್ಲಿಕೇಶನ್ ತೆರೆಯಲು ಪ್ರಯತ್ನಿಸಿ

ಮೈಜಿಯೋ ಅಪ್ಲಿಕೇಶನ್ ತೆರೆಯಲು ಪ್ರಯತ್ನಿಸಿ

ಗೂಗಲ್ ಪ್ಲೇ ಸ್ಟೋರ್‌ನಿಂದ ಯಾವುದೇ ಜಿಯೋ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಂಡು ಸಿಮ್ ಕಾರ್ಡ್ ಆಕ್ಟಿವೇಶನ್ ಸ್ಥಿತಿಯನ್ನು ಪರಿಶೀಲಿಸಿಕೊಳ್ಳಬಹುದಾಗಿದೆ. ಸೈನ್ ಇನ್ ಬಟನ್ ಸ್ಪರ್ಶಿಸಿ ಮತ್ತು ಅಪ್ಲಿಕೇಶನ್ ಸ್ವಯಂಚಾಲಿತವಾಗಿ ಸೈನ್ ಇನ್ ಆದಾಗ ನಿಮ್ಮ ಸಿಮ್ ಕಾರ್ಡ್ ಆಕ್ಟಿವೇಟ್ ಆಗಿದೆ ಎಂದೇ ಅರ್ಥವಾಗಿದೆ.

ಟೆಲಿ ವೆರಿಫಿಕೇಶನ್‌ಗಾಗಿ 1977 ಗೆ ಕರೆಮಾಡಿ

ಟೆಲಿ ವೆರಿಫಿಕೇಶನ್‌ಗಾಗಿ 1977 ಗೆ ಕರೆಮಾಡಿ

ಟೆಲಿ ವೆರಿಫಿಕೇಶನ್‌ಗಾಗಿ 1977 ಗೆ ಕರೆಮಾಡುವಂತೆ ನಿಮ್ಮ ಪರ್ಯಾಯ ಮೊಬೈಲ್ ಸಂಖ್ಯೆಯಲ್ಲಿ ಸಂದೇಶವನ್ನು ನೀವು ಪಡೆದುಕೊಳ್ಳುತ್ತೀರಿ. ನಿಮ್ಮ ಸಿಮ್ ಆಕ್ಟಿವೇಶನ್‌ಗೆ ಸಿದ್ಧವಾಗಿದೆ ಎಂಬುದನ್ನು ಇದು ಸೂಚಿಸುತ್ತದೆ. ಪೋಸ್ಟ್ ಟೆಲಿ ವೆರಿಫಿಕೇಶನ್‌ನಲ್ಲಿ ರಿಲಾಯನ್ಸ್ ಜಿಯೋ ಸಿಮ್ ಕಾರ್ಡ್‌ನ ಉಚಿತ ಪ್ರಯೋಜನಗಳನ್ನು ನಿಮಗೆ ಆನಂದಿಸಬಹುದಾಗಿದೆ.

Best Mobiles in India

English summary
if you got the Reliance Jio SIM card but are still waiting for the activation to be done? Here are the five signs, which shows your Jio SIM is activated.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X