ಏರ್‌ಸೆಲ್ V/S ಬಿಎಸ್‌ಎನ್‌ಎಲ್ V/S ಟಾಟಾ ಡೊಕೊಮೊ ಟಾರಿಫ್ ಸ್ಪರ್ಧೆ: ಯಾವುದು ಉತ್ತಮ

By Shwetha
|

ಭಾರತದಲ್ಲಿ ಎಂಟು ವರ್ಷಗಳ ಹಿಂದೆಯೇ 3ಜಿ ನೆಟ್‌ವರ್ಕ್ ಆರಂಭವಾಗಿದ್ದು 2ಜಿ ಮತ್ತು ಜಿಪಿಆರ್‌ಎಸ್ ನೆಟ್‌ವರ್ಕ್‌ಗಳು ದುರ್ಬಲವಾಗಿ ಕಾರ್ಯನಿರ್ವಹಿಸುತ್ತಿದ್ದ ಸಮಯದಲ್ಲೇ 3ಜಿ ವರವಾಗಿ ಪರಿಣಮಿಸಿದೆ. ಇದರ ನಂತರ ನಾವು 4ಜಿ ಯತ್ತ ಹೆಜ್ಜೆ ಹಾಕಿದ್ದು ಇದು 3ಜಿ ಗೆ ಹೋಲಿಸಿದಾಗ ಇನ್ನಷ್ಟು ಅನುಕೂಲಕರ ರೀತಿಯಲ್ಲಿ ನಮಗೆ ಸಹಕಾರಿಯಾಗಿದೆ. ಇನ್ನು 5ಜಿ ಯತ್ತ ನಾವು ಆದಷ್ಟು ಬೇಗನೇ ಮುಖ ಮಾಡಲಿದ್ದು ಈ ಪ್ರಯುಕ್ತ ಕಾರ್ಯಗಳು ಪ್ರಗತಿಯಲ್ಲಿವೆ ಅಂದರೆ 2020 ಕ್ಕೆ ನಾವು 5ಜಿ ಯಲ್ಲಿರುತ್ತೇವೆ.

ಓದಿರಿ: ಜಿಯೋಗಿಂತಲೂ ಅಗ್ಗ, ಬಿಎಸ್‌ಎನ್‌ಎಲ್‌ನಿಂದ ಅನಿಯಮಿತ ವಾಯ್ಸ್ ಕರೆಗಳು

ಏರ್‌ಟೆಲ್, ರಿಲಾಯನ್ಸ್ ಜಿಯೋ, ವೊಡಾಫೋನ್ 4ಜಿ ಯನ್ನು ವಿತರಣೆ ಮಾಡುತ್ತಿದ್ದು ಡೊಕೊಮೊದಂತಹ ಆಪರೇಟರ್‌ಗಳು 3ಜಿ ನೆಟ್‌ವರ್ಕ್‌ನಲ್ಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಏರ್‌ಸೆಲ್, ಬಿಎಸ್‌ಎನ್‌ಎಲ್‌ಗಳು 4ಜಿ ನೆಟ್‌ವರ್ಕ್ ಅನ್ನು ಕವರ್ ಮಾಡಿವೆ. ಇಂದಿನ ಲೇಖನದಲ್ಲಿ ಏರ್‌ಸೆಲ್, ಬಿಎಸ್‌ಎನ್‌ಎಲ್ ಮತ್ತು ಟಾಟಾ ಡೊಕೊಮೆ ಉತ್ತಮ 3ಜಿ ಪ್ಯಾಕ್‌ಗಳೊಂದಿಗೆ ಬಂದಿದ್ದು 3ಜಿ ವಲಯಕ್ಕೆ ಇದು ಸೂಕ್ತವಾಗಿದೆ.

ಓದಿರಿ: ಜಿಯೋಗೆ ಪೈಪೋಟಿ ನೀಡಹೊರಟಿರುವ ಏರ್‌ಟೆಲ್ ಆಫರ್ಸ್

ಏರ್‌ಸೆಲ್

ಏರ್‌ಸೆಲ್

ಏರ್‌ಸೆಲ್ ನೆಟ್‌ವರ್ಕ್ ಅನ್ನು 1999 ರಲ್ಲಿ ಸ್ಥಾಪಿಸಲಾಗಿದೆ. ಆದರೆ ಇದರ ಸೀಮಿತ ಬಳಕೆಗೆ ತಕ್ಕಂತೆ ಬಳಕೆದಾರರು ಇದರತ್ತ ಹೆಚ್ಚು ಆಕರ್ಷಿತರಾಗಿರಲಿಲ್ಲ. ಕಂಪೆನಿ ಪ್ರಥಮವಾಗಿ ಭಾರತದಲ್ಲಿ 3ಜಿ ಸೇವೆಯನ್ನು ಆರಂಭಿಸಿತು. ರೂ 8 ಕ್ಕೆ ಟೆಲಿಕಾಮ್ ನೆಟ್‌ವರ್ಕ್ 3ಜಿ ಡೇಟಾವನ್ನು ನೀಡುತ್ತಿದೆ ಮತ್ತು 40 ಎಮ್‌ಬಿ ಇದು ಸೀಮಿತವಾಗಿದ್ದು ಒಂದು ದಿನಕ್ಕೆ ಸಮರ್ಥ. 2ಜಿ ಮತ್ತು 3ಜಿಯಲ್ಲೂ ಬಹು ಪ್ಯಾಕ್‌ಗಳನ್ನು ಇವುಗಳು ಒದಗಿಸುತ್ತಿದ್ದರೂ ಒಂದು ವಾರ, ಮೂರು ವಾರಗಳು ಮತ್ತು ಒಂದು ದಿನಕ್ಕೆ ಸೀಮಿತವಾಗಿವೆ.

ಉತ್ತಮ 3ಜಿ ಪ್ಯಾಕ್ ರೂ 175 ಕ್ಕೆ ಬರುತ್ತಿದ್ದು, ಇದು 28 ದಿನಗಳ ವ್ಯಾಲಿಡಿಯನ್ನು ಪಡೆದುಕೊಂಡಿದೆ ಮತ್ತು ಸಂಪೂರ್ಣ 1ಜಿಬಿ 3ಜಿಯನ್ನು ಹೊಂದಿದೆ. ಗರಿಷ್ಟ ಯೋಜನೆ ದರ ರೂ 1,697 ಆಗಿದ್ದು 20 ಜಿಬಿ ಡೇಟಾವನ್ನು ಇದು ಒದಗಿಸುತ್ತಿದ್ದು 28 ದಿನಗಳ ವ್ಯಾಲಿಡಿಯನ್ನು ಹೊಂದಿದೆ.

ಬಿಎಸ್‌ಎನ್‌ಎಲ್

ಬಿಎಸ್‌ಎನ್‌ಎಲ್

ಏರ್‌ಸೆಲ್ ನಂತರ ಬಿಎಸ್‌ಎನ್ಎಲ್ ಸ್ಥಾನವನ್ನು ಪಡೆದುಕೊಂಡಿದ್ದು, ಕಡಿಮೆ ಬೆಲೆಗಳಲ್ಲಿ ಉತ್ತಮ 3ಜಿ ಡೇಟಾವನ್ನು ಒದಗಿಸುತ್ತಿದೆ. ಕನಿಷ್ಟ ಪ್ಯಾಕೇಜ್ ರೂ 4 ರದ್ದಾಗಿದ್ದು 20 ಎಮ್‌ಬಿ 3ಜಿ ಡೇಟಾವನ್ನು ಒಂದು ದಿನಕ್ಕೆ ನೀಡುತ್ತಿದೆ. ಏರ್‌ಸೆಲ್‌ನಂತೆಯೇ ಸರಕಾರಿ ಅಧಿಕಾರದ ಕಂಪೆನಿ ಕೂಡ ಒಂದು ವಾರ, ಎರಡು ವಾರಗಳು, ಮೂರು ವಾರಗಳು ಮತ್ತು ಒಂದು ತಿಂಗಳಿಗೆ ಡೇಟಾ ಪ್ಯಾಕ್‌ಗಳನ್ನು ಒದಗಿಸುತ್ತಿದೆ.

ರೂ 198 ಡೇಟಾ ಪ್ಯಾಕ್‌ಗೆ ನೀವು ರಿಚಾರ್ಜ್ ಮಾಡುವುದು 1ಜಿಬಿ 3ಜಿ ಡೇಟಾವನ್ನು ಒದಗಿಸುತ್ತಿದ್ದು ಇದು 28 ದಿನಗಳ ವ್ಯಾಲಿಡಿಯನ್ನು ಪಡೆದುಕೊಂಡಿದೆ. ಗರಿಷ್ಟ ಪ್ಲಾನ್ ದರ ರೂ 3,099 ಆಗಿದ್ದು 15 ಜಿಬಿಯ 3ಜಿ ಡೇಟಾ 500 ನಿಮಿಷಗಳ ಟಾಕ್ ಟೈಮ್ ಅನ್ನು ಉಚಿತವಾಗಿ ಒದಗಿಸುತ್ತಿದೆ.

ಟಾಟಾ ಡೊಕೊಮೊ

ಟಾಟಾ ಡೊಕೊಮೊ

ಡೊಕೊಮೊ ಸಾಕಷ್ಟು ಆಫರ್‌ಗಳನ್ನು ನೀಡುತ್ತಿದೆ. ಇದು ಹೆಚ್ಚಿನ 3ಜಿ ಡೇಟಾ ಯೋಜನೆಗಳನ್ನು ಹೊಂದಿದ್ದು ಈ ಯೋಜನೆಗಳ ಆರಂಭ ರೂ 8 ರಿಂದ ತೊಡಗಿ 35 ಎಮ್‌ಬಿಯ 3ಜಿ ಡೇಟಾವನ್ನು ನೀಡುತ್ತಿದೆ. ಟಾಟಾ ಡೊಕೊಮೊದ ಗರಿಷ್ಟ ಯೋಜನೆಯು ರೂ. 1,299 ಅನ್ನು ಒದಗಿಸುತ್ತಿದ್ದು ಇದು 28 ದಿನಗಳ ವ್ಯಾಲಿಡಿಯನ್ನು ಪಡೆದುಕೊಂಡಿದೆ ಮತ್ತು ಅನಿಯಮಿತ 3ಜಿ ಡೇಟಾವನ್ನು ಒದಗಿಸುತ್ತಿದೆ.

ಆಕರ್ಷಕ ಡೇಟಾ ಪ್ಯಾಕ್‌ಗಳನ್ನು ಇದು ಒದಗಿಸುತ್ತಿದ್ದು ರೂ 359 ಕ್ಕೆ ನಿಮಗೆ 3ಜಿಬಿ 3ಜಿ ಡೇಟಾವನ್ನು 28 ದಿನಗಳಿಗಾಗಿ ಪಡೆದುಕೊಳ್ಳಬಹುದಾಗಿದೆ. ಟಾಟಾ ಡೊಕೊಮೊದ ಉತ್ತಮ ಯೋಜನೆ ಇದಾಗಿದೆ.

ವ್ಯತ್ಯಾಸ

ವ್ಯತ್ಯಾಸ

ಈ ಹೋಲಿಕೆಯ ಮೂಲಕ ಮೂರು ಆಪರೇಟರ್‌ಗಳು ಹೆಚ್ಚು ಸ್ಪರ್ಧಾತ್ಮಕವಾಗಿದ್ದು, ಟಾಟಾ ಡೊಕೊಮೊ ಸಾಕಷ್ಟು ಆಫರ್‌ಗಳನ್ನು ನೀಡುತ್ತಿದ್ದು ಬಿಎಸ್‌ಎನ್‌ಎಲ್, ಏರ್‌ಸೆಲ್‌ಗೆ ಹೋಲಿಸಿದಾಗ ಡೊಕೊಮೆ ಸಾಕಷ್ಟು ಮುಂದಿದೆ.

Best Mobiles in India

English summary
In this article, we will explain the Aircel, BSNL, and Tata Docomo offers better 3G packs and verdicts the winner in 3G arena.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X