ನಿಮ್ಮ ಸ್ಮಾರ್ಟ್‌ಫೋನ್‌ ಸ್ಲೋ ಆಗಿದೆಯಾ?..ಸೂಪರ್ ಫಾಸ್ಟ್‌ ಮಾಡಲು ಹೀಗೆ ಮಾಡಿ!

|

ಪ್ರಸ್ತುತ ಆನ್‌ಲೈನ್‌ ಮೂಲಕ ಏನೇ ಕೆಲಸ ಮಾಡಿದರೂ ಸ್ಮಾರ್ಟ್‌ಫೋನ್ ಅಗತ್ಯ ಎನಿಸಿಕೊಂಡಿದೆ. ಬಳಕೆದಾರರು ತಮ್ಮ ದೈನಂದಿನ ಅನೇಕ ಕೆಲಸಗಳನ್ನು ಫೋನ್‌ ಮೂಲಕವೇ ಮಾಡಿ ಮುಗಿಸುತ್ತಾರೆ. ಅಗತ್ಯ ಸೇವೆಗಳನ್ನು ಸುಲಭವಾಗಿ ಮಾಡಲು ಉಪಯುಕ್ತ ಅಪ್ಲಿಕೇಶನ್‌ಗಳು ಇವೆ. ಹೀಗೆ ಹತ್ತು ಹಲವು ಕೆಲಸಗಳನ್ನು ನಿರ್ವಹಿಸುವ ಸ್ಮಾರ್ಟ್‌ಫೋನ್‌ ಕೆಲವೊಮ್ಮೆ ಕಾರ್ಯಕ್ಷಮತೆಯಲ್ಲಿ ನಿಧಾನವಾಗಿ ಬಿಡುತ್ತದೆ.

ಪ್ರತಿಯೊಬ್ಬರಿಗೂ

ಹೌದು, ಸ್ಮಾರ್ಟ್‌ಫೋನ್‌ ಡಿವೈಸ್ ಪ್ರತಿಯೊಬ್ಬರಿಗೂ ಅವಶ್ಯ ಡಿವೈಸ್ ಆಗಿದ್ದು, ಎಲ್ಲವೂ ಕೈ ಬೆರಳ ತುದಿಯಲ್ಲಿ ಎನ್ನುವಂತಾಗಿದೆ. ಫೋಟೊ ತೆಗೆಯುವುದರಿಂದ ಹಿಡಿದು, ವಾತಾವರಣದ ತಾಪಮಾನ, ಟ್ರೈನ್, ಬಸ್ಸು, ಸಿನಿಮಾ, ರೀಚಾರ್ಜ್‌ ಸೇರಿದಂತೆ ಇತರೆ ಹಲವು ಸೇವೆಗಳನ್ನು ಮಾಡಬಹುದಾಗಿದೆ. ಆದರೆ ಚುರುಕಾಗಿ ಕೆಲಸ ಮಾಡುವ ಸ್ಮಾರ್ಟ್‌ಫೋನ್‌ಗಳು ಒಮ್ಮೊಮ್ಮೆ ತಮ್ಮ ಕಾರ್ಯದಕ್ಷತೆಯಲ್ಲಿ ಕುಗ್ಗಿ ಬಿಡುತ್ತವೆ. ಹಾಗಾದರೇ ನಿಧಾನವಾಗಿರುವ ಸ್ಮಾರ್ಟ್‌ಫೋನಿನ ಕಾರ್ಯವೈಖರಿಯ ವೇಗ ಹೆಚ್ಚಿಸಲು ಏನು ಮಾಡಬೇಕು ಎನ್ನುವ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಅನಗತ್ಯ ಮತ್ತು ಹೇವಿ ಆಪ್ಸ್‌ಗಳಿಗೆ ಗೇಟ್‌ಪಾಸ್‌ ನೀಡಿ

ಅನಗತ್ಯ ಮತ್ತು ಹೇವಿ ಆಪ್ಸ್‌ಗಳಿಗೆ ಗೇಟ್‌ಪಾಸ್‌ ನೀಡಿ

ನಿಯಮಿತವಾಗಿ ಬಳಸದ ಹಾಗೂ ನಿಮಗೆ ಅಗತ್ಯ ಇರದ ಆಪ್‌ಗಳನ್ನು ಫೋನಿನಿಂದ ತೆಗೆದು ಹಾಕಿರಿ. ಹಾಗೆಯೇ ದೊಡ್ಡ ಗಾತ್ರದ (ಹೇವಿ) ಆಪ್ಸ್‌ಗಳು ಇದ್ದರೇ, ಅವುಗಳನ್ನು ತೆಗೆದು ಹಾಕುವುದು ಉತ್ತಮ. ಏಕೆಂದರೇ ದೊಡ್ಡ ಗಾತ್ರದ ಆಪ್‌ಗಳು ಅನಗತ್ಯ ಸ್ಥಳ ಕಬಳಿಸುತ್ತವೆ. ಇದರಿಂದಾಗಿ ಫೋನ್ ಕಾರ್ಯಕ್ಷಮತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹೀಗಾಗಿ ಅಂತಹ ಆಪ್‌ಗಳನ್ನು ಇಟ್ಟುಕೊಳ್ಳುವುದರಿಂದ ಫೋನ್ ತನ್ನ ಕಾರ್ಯ ನಿಧಾನಗೊಳಿಸುತ್ತದೆ.

Live ವಾಲ್‌ಪೇಪರ್ ಬಳಕೆ ಬಿಟ್ಟುಬಿಡಿ

Live ವಾಲ್‌ಪೇಪರ್ ಬಳಕೆ ಬಿಟ್ಟುಬಿಡಿ

ಸ್ಮಾರ್ಟ್‌ಫೋನ್‌ನಲ್ಲಿ ಕೆಲವು ಬಳಕೆದಾರರು ಲೈವ್ ವಾಲ್‌ಪೇಪರ್ ಬಳಕೆ ಮಾಡುತ್ತಾರೆ. ಫೋನಿನ ಹೋಮ್‌ಸ್ಕ್ರೀನ್, ಲಾಕ್‌ ಸ್ಕ್ರೀನ್‌ ಅತ್ಯುತ್ತಮವಾಗಿ ಕಾಣಿಸಿಕೊಳ್ಳಲಿ ಎಂದು ಲೈವ್‌ ವಾಲ್‌ಪೇಪರ್‌ ಇಡುತ್ತಾರೆ. ಆದರೆ ಲೈವ್‌ ವಾಲ್‌ಪೇಪರ್ ಗಳು ಫೋನಿನ ಬ್ಯಾಟರಿ ಖಾಲಿ ಮಾಡುವ ಜೊತೆಗೆ ಸ್ಮಾರ್ಟ್‌ಫೋನಿನ ವೇಗಕ್ಕೂ ಕುತ್ತು ತರುತ್ತವೆ. ಈ ರೀತಿಯ ಲೈವ್ ವಾಲ್‌ಪೇಪರ್ ಗಳಿಂದ ಫೋನ್‌ ಕೆಲಸದಲ್ಲಿ ನಿಧಾನ ಆಗುತ್ತವೆ. ಆದ್ದರಿಂದ ಫೋನಿನ ಕಾರ್ಯವೈಖರಿ ಸ್ಪೀಡ್ ಆಗಿ ಇರಲು, ಲೈವ್‌ ವಾಲ್‌ಪೇಪರ್ ಬಳಕೆ ಮಾಡಬೇಡಿ.

ಡೇಟಾ ಬಳಕೆಯನ್ನು ಕಡಿಮೆ ಮಾಡಿ

ಡೇಟಾ ಬಳಕೆಯನ್ನು ಕಡಿಮೆ ಮಾಡಿ

ಫೋನಿನಲ್ಲಿ ಇಂಟರ್ನೆಟ್ ಡೇಟಾವನ್ನು ನಿರಂತರವಾಗಿ ಬಳಸುವುದರಿಂದ ಫೋನ್ ಕೆಲಸದಲ್ಲಿ ನಿಧಾನ ಆಗುವ ಸಾಧ್ಯತೆಗಳಿವೆ. ಬಳಕೆದಾರರು ಫೋನ್‌ ಅನ್ನು ಎಷ್ಟು ಹೆಚ್ಚು ಬಳಸುತ್ತೀರೋ, ಅಷ್ಟು ಫೋನ್ ಹೆಚ್ಚು ತೊಡಗಿಸಿಕೊಳ್ಳುತ್ತದೆ. ಹೀಗಾಗಿ ಅಗತ್ಯವಿರುವಾಗ ಡೇಟಾವನ್ನು ಬಳಸಿ. ದಿನವಿಡೀ ನಿಮ್ಮ ಡೇಟಾ ಸಂಪರ್ಕವನ್ನು ಇಟ್ಟುಕೊಳ್ಳುವುದು ಸೂಕ್ತ ಅಲ್ಲ. ಇದರಿಂದ ಫೋನಿನ ಕಾರ್ಯವೈಖರಿಯಲ್ಲಿ ನಿಧಾನ ಆಗುವ ಸಾಧ್ಯತೆಗಳು ಅಧಿಕ.

ಬ್ಯಾಕ್‌ಗ್ರೌಂಡ್‌ ಆಪ್ಸ್‌ಗಳನ್ನು ಕ್ಲೋಸ್‌ ಮಾಡಿ

ಬ್ಯಾಕ್‌ಗ್ರೌಂಡ್‌ ಆಪ್ಸ್‌ಗಳನ್ನು ಕ್ಲೋಸ್‌ ಮಾಡಿ

ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಅನೇಕ ಆಪ್ಸ್‌ಗಳನ್ನು ಇನ್‌ಸ್ಟಾಲ್‌ ಮಾಡಿಕೊಂಡಿರುತ್ತಾರೆ. ಅವುಗಳಲ್ಲಿ ಕೆಲವು ಆಪ್ಸ್‌ಗಳನ್ನು ಬಳಕೆ ಮಾಡಿದ ನಂತರ ಮಿನಿಮೈಸ್‌ ಮಾಡಿರುತ್ತಾರೆ. ಆದ್ರೆ ಅವುಗಳು ಬ್ಯಾಕ್‌ ಗ್ರೌಂಡ್‌ನಲ್ಲಿ ರನ್ನ ಆಗುತ್ತಿರುತ್ತವೆ ಜೊತೆಗೆ ಬ್ಯಾಟರಿ ಖಾಲಿ ಮಾಡುತ್ತಿರುತ್ತವೆ. ಈ ಬ್ಯಾಕ್‌ಗ್ರೌಂಡ್‌ ರನ್ನ ಆಗುವ ಆಪ್ಸ್‌ಗಳಿಗೆ ಬ್ರೇಕ್‌ ಹಾಕುವುದರಿಂದಲೂ ಸಹ ಸ್ಮಾರ್ಟ್‌ಫೋನ್ ಕಾರ್ಯವೈಖರಿ ವೇಗ ಪಡೆದುಕೊಳ್ಳುತ್ತದೆ.

ಆಟೋ ಸಿಂಕ್ ಆಯ್ಕೆ ಆಫ್ ಮಾಡಿರಿ

ಆಟೋ ಸಿಂಕ್ ಆಯ್ಕೆ ಆಫ್ ಮಾಡಿರಿ

ಸಾಮಾನ್ಯವಾಗಿ ಸ್ಮಾರ್ಟ್‌ಫೋನ್‌ಗಳಲ್ಲಿ ಆಟೋ ಸಿಂಕ್ ಆಯ್ಕೆಯು ಸಕ್ರಿಯವಾಗಿರುತ್ತದೆ. ಇದು ಸಹ ಫೋನಿನ ವೇಗದ ಕುಂಠಿತಕ್ಕೆ ಕಾರಣವಾಗುವ ಸಾಧ್ಯತೆಗಳು ಹೆಚ್ಚು. ಹೀಗಾಗಿ ಬಳಕೆದಾರರು ಆಟೋ ಸಿಂಕ್ ಆಯ್ಕೆಯನ್ನು ಸ್ಟಾಪ್‌ ಮಾಡುವುದು ಒಳಿತು. ಸ್ಮಾರ್ಟ್‌ಫೋನ್‌ ಸೆಟ್ಟಿಂಗ್‌ನಲ್ಲಿ ಆಟೋ ಸಿಂಕ್ ಆಯ್ಕೆ ಸ್ಟಾಪ್‌ ಮಾಡಬಹುದಾಗಿದೆ. ಮುಖ್ಯವಾಗಿ ವಾಟ್ಸಾಪ್‌ ನಂತಹ ಆಪ್‌ಗಳ ಆಟೋ ಸಿಂಕ್ ಆಯ್ಕೆ ಆಫ್ ಮಾಡುವುದು ಉತ್ತಮ.

ಹೋಮ್‌ ಸ್ಕ್ರೀನ್‌ನಲ್ಲಿ widgets ಬಳಕೆ ಕಡಿಮೆ ಮಾಡಿ

ಹೋಮ್‌ ಸ್ಕ್ರೀನ್‌ನಲ್ಲಿ widgets ಬಳಕೆ ಕಡಿಮೆ ಮಾಡಿ

ಹೌದು, ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಕಂಟ್ರೋಲ್ ಸ್ಮಾರ್ಟ್‌ಫೋನ್‌ನಲ್ಲಿ ಕೆಲವರು ಹೆಚ್ಚಾಗಿ widgets ಗಳನ್ನು ಮತ್ತು ಲೈವ್ ವಾಲ್‌ಪೇಪರ್‌ಗಳನ್ನು ಬಳಕೆಮಾಡುತ್ತಿರುತ್ತಾರೆ ಆದರೆ ಖಂಡಿತಾವಾಗಿಯೂ ಇದು ಸ್ಮಾರ್ಟ್‌ಫೋನ್ ಬ್ಯಾಟರಿ ಕಬಳಿಸುವ ಜತೆಗೆ ಫೋನ್ ಸ್ಪೀಡ್ ಕುಗ್ಗಿಸುತ್ತದೆ. ಹೀಗಾಗಿ ಅನಗತ್ಯವಾಗಿ ಹೋಮ್‌ ಸ್ಕ್ರೀನ್ನಲ್ಲಿ ಹೆಚ್ಚು widgets ಗಳನ್ನು ಬಳಕೆ ಮಾಡಬೇಡಿ. ಇದರಿಂದ ಫೋನ್ ಕೆಲಸ ಸ್ಲೋ ಆಗಲಿದೆ.

Most Read Articles
Best Mobiles in India

English summary
How to Speed Up A Slow Working Smartphone. Follow These Steps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X