Subscribe to Gizbot

ಸ್ಮಾರ್ಟ್‌ಫೋನ್‌ನಲ್ಲಿ ಸ್ಕ್ರೀನ್ ಶಾಟ್ ತೆಗೆಯಲು ಸರಳ ವಿಧಾನಗಳು

Posted By:

ಇಂದಿನ ಕಾಲದಲ್ಲಿ ಸ್ಮಾರ್ಟ್‌ಫೋನ್‌ಗಳಿಂದ ಪ್ರಯೋಜನವನ್ನು ಪಡೆದುಕೊಳ್ಳದವರು ಯಾರಿದ್ದಾರೆ ಹೇಳಿ? ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು ನಮ್ಮ ಹೆಚ್ಚಿನ ಕೆಲಸವನ್ನು ಇಂದು ಸರಳವಾಗಿಸಿವೆ. ವೀಡಿಯೊ ಕರೆ, ವಾಟ್ಸಾಪ್, ಫೇಸ್‌ಬುಕ್, ಟ್ವಿಟ್ಟರ್‌ನಂತಹ ಸಾಮಾಜಿಕ ತಾಣಗಳ ಮಾಹಿತಿ ವೀಕ್ಷಿಸುವಿಕೆ, ಸುಂದರ 3ಡಿ ಚಿತ್ರಗಳ ವೀಕ್ಷಿಸುವಿಕೆ ಹೀಗೆ ಒಂದೇ ಎರಡೇ ಹೇಳುತ್ತಾ ಹೊರಟರೆ ಸ್ಮಾರ್ಟ್‌ಫೋನ್‌ಗಳ ಗುಣಗಾನಕ್ಕೆ ಮಿತಿಯೇ ಇರಲಿಕ್ಕಿಲ್ಲ.

ಇದನ್ನೂ ಓದಿ: ಆಂಡ್ರಾಯ್ಡ್ ಫೋನ್‌ ಬಳಕೆಗಾಗಿ ಟಾಪ್ 10 ಸಲಹೆಗಳು

ಇಂತಹುದೇ ಇನ್ನೊಂದು ಅದ್ಭುತ ಪ್ರಯೋಜನಗಳನ್ನು ನಿಮಗೆ ತಿಳಿಸಿಕೊಡಲು ನಾವಿಂದು ಬರುತ್ತಿದ್ದು ನಿಮ್ಮ ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್‌ನಲ್ಲಿ ಸ್ಕ್ರೀನ್ ಶಾಟ್ ಅನ್ನು ತೆಗೆಯುವುದು ಹೇಗೆಂಬ ಸರಳ ಸಲಹೆಯನ್ನು ಇಲ್ಲಿ ನೀಡುತ್ತಿದೆ.

ಇದನ್ನೂ ಓದಿ: ನಿಮ್ಮ ಜೀವನ ಶೈಲಿ ಬದಲಾಯಿಸುವ ಸರಳ ಕಂಪ್ಯೂಟರ್ ಯೋಗ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್ಸ್
  

ಆಂಡ್ರಾಯ್ಡ್‌ನ ಹಿಂದಿನ ಆವೃತ್ತಿ ನಿಮ್ಮ ಫೋನ್‌ನಲ್ಲಿ ಚಾಲನೆಯಾಗುತ್ತಿದೆ ಎಂದಾದಲ್ಲಿ, ಇದರಲ್ಲಿ ಸ್ಕ್ರೀನ್ ಶಾಟ್ ಅನ್ನು ತೆಗೆಯುವುದು ಅಷ್ಟೊಂದು ಸುಲಭವಲ್ಲ. ಹಾಗಿದ್ದರೆ ಈ ಸಮಸ್ಯೆಯನ್ನು ದೂರಮಾಡುವುದು ಹೇಗೆ
೧. ಪವರ್ ಬಟನ್ ಅನ್ನು ಸ್ವಲ್ಪ ಸೆಕೆಂಡುಗಳ ಕಾಲ ಹಿಡಿದುಕೊಳ್ಳಿ. ಆಗ " ಪವರ್ ಆಫ್ ದ ಡಿವೈಸ್" ಎಂಬ ಆಯ್ಕೆಯನ್ನು ತೋರಿಸುವುದರೊಂದಿಗೆ ಸಂದೇಶ ಪಾಪ್ ಅಪ್ ಕಂಡುಬರುತ್ತದೆ. "ರೀಸ್ಟಾರ್ಟ್ ದ ಡಿವೈಸ್" ಮತ್ತು "ಟೇಕ್ ಎ ಸ್ಕ್ರೀನ್‌ಶಾಟ್" ಹೀಗೆ ಮಾಡಿ. ನೀವು ಸಿಂಬಿಯನ್ ಫೋನ್ ಅನ್ನು ಬಳಸುತ್ತಿದ್ದೀರಿ ಎಂದಾದಲ್ಲಿ ಸಿಂಬಿಯನ್ ಓಎಸ್ ಬಳಸಿಕೊಂಡು ಸ್ಕ್ರೀನ್‌ಶಾಟ್ ಅನ್ನು ನಿಮಗೆ ತೆಗೆಯಬಹುದಾಗಿದೆ.

ಡೆಸ್ಕ್‌ಟಾಪ್ ಮತ್ತು ಲ್ಯಾಪ್‌ಟಾಪ್ಸ್
  

ಮೈಕ್ರೋಸಾಫ್ಟ್ ವಿಂಡೋಸ್‌ನ ಯಾವುದೇ ಆವೃತ್ತಿಯನ್ನು ನೀವು ಬಳಸುತ್ತಿದ್ದೀರಿ ಎಂದಾದಲ್ಲಿ, ಪೂರ್ಣ ಪರದೆಯ ಸ್ಕ್ರೀನ್‌ಶಾಟ್ ಅನ್ನು ತೆಗೆಯುವುದು ತುಂಬಾ ಸುಲಭವಾಗಿದೆ.
1. ಮುದ್ರಣ ಪರದೆ ಅಥವಾ ಪ್ರಿಂಟ್ ಸ್ಕ್ರಾಲ್ ಬಟನ್ ಅನ್ನು ನಿಮ್ಮ ಕೀಬೋರ್ಡ್‌ನಲ್ಲಿ ಒತ್ತಿ
2. ನಂತರ ಎಮ್‌ಎಸ್ ಪೈಂಟ್ ತೆರೆಯಿರಿ ಮತ್ತು ctrl+V ಅನ್ನು ಒತ್ತಿರಿ.

ಬ್ರೌಸರ್ ಏಡ್‌ಆನ್
  

ನಿಮ್ಮ ಬ್ರೌಸರ್ ವಿಂಡೋದಲ್ಲಿ ಕೆಲವು ವೆಬ್‌ಪುಟಗಳು ಮಾತ್ರ ಹೊಂದಿಕೆಯಾಗುತ್ತವೆ. ವೆಬ್‌ಪುಟದಲ್ಲಿರುವ ಎಲ್ಲಾ ವಿಷಯವನ್ನು ಓದಲು ಹೆಚ್ಚಿನ ಸಮಯದಲ್ಲಿ ನೀವು ಸ್ಕ್ರಾಲ್ ಡೌನ್ ಮಾಡಬೇಕಾಗುತ್ತದೆ. ಹಾಗಿದ್ದರೆ ಇದರಲ್ಲಿ ಸ್ಕ್ರೀನ್ ಶಾಟ್ ತೆಗೆಯುವುದು ಹೇಗೆ ನೋಡೋಣ
1. ನೀವು ಇದನ್ನು ಇನ್‌ಸ್ಟಾಲ್ ಮಾಡಿದ ನಂತರ, ಬ್ರೌಸರ್‌ನ ಬಲ ಮೇಲ್ಭಾಗದಲ್ಲಿರುವ ಕ್ಯಾಮೆರಾ ಐಕಾನ್ ಅನ್ನು ಕ್ಲಿಕ್ ಮಾಡಿ.
2. "ಕ್ಯಾಪ್ಚರ್ ಎಂಟೈರ್ ಪೇಜ್" (or press ctrl + shift + E) ಆಯ್ಕೆ ಮಾಡಿ.

ಮ್ಯಾಕ್‌ಬುಕ್‌ನಲ್ಲಿ ಸ್ಕ್ರೀನ್‌ಶಾಟ್ ತೆಗೆಯಲು
  

ನೀವು ಮ್ಯಾಕ್‌ಬುಕ್ ಅನ್ನು ಬಳಸುತ್ತಿದ್ದೀರಿ ಎಂದಾದಲ್ಲಿ ಇದರಲ್ಲಿ ಸ್ಕ್ರೀನ್ ಶಾಟ್ ತೆಗೆಯಲು cmd + shift + 3 ಬಟನ್ ಅನ್ನು ಜೊತೆಗೆ ಒತ್ತಬೇಕು ಇದರಿಂದ ಪೂರ್ತಿ ಸ್ಕ್ರೀನ್ ಶಾಟ್ ನಿಮಗೆ ದೊರೆಯುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
This article tells about How to Take Screenshot on Any Device.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot