Subscribe to Gizbot

ಒಂದೇ ಆಂಡ್ರಾಯ್ಡ್ ಫೋನ್‌ನಲ್ಲಿ ಎರಡು ಫೇಸ್‌ಬುಕ್ ಖಾತೆ ಬಳಸುವುದು ಹೇಗೆ?

Written By:

ಫೇಸ್‌ಬುಕ್ ಸಾಮಾಜಿಕ ಖಾತೆಯು ಇಂದು ಬಳಕೆದಾರರ ಅಚ್ಚುಮೆಚ್ಚಿನ ತಾಣವಾಗಿದೆ. ನೀವು ನಿಮ್ಮೆಲ್ಲಾ ಚಟುವಟಿಕೆಗಳನ್ನು ನಿಮ್ಮ ಸ್ನೇಹಿತರ ವಲಯದಲ್ಲಿ ಸಾರಿಕೊಳ್ಳಲು ಇದನ್ನೊಂದು ವೇದಿಕೆಯನ್ನಾಗಿ ಬಳಸಿಕೊಳ್ಳುತ್ತಿದ್ದೀರಿ. ಹೀಗೆಯೇ ವಿಶ್ವದ ಹೆಚ್ಚಿನ ವೃತ್ತಿಪರರು, ಕಲಾವಿದರು, ಸೆಲೆಬ್ರಿಟಿಗಳು, ಸಾಮಾನ್ಯ ಜನರು ತಾವು ಮಾಡುತ್ತಿರುವ ಸಾಧನೆಯನ್ನು ತಾಣದಲ್ಲಿ ಪಸರಿಸುವ ಇರಾದೆಯನ್ನಿಟ್ಟುಕೊಂಡು ಫೇಸ್‌ಬುಕ್ ಅನ್ನು ಬಳಸಿಕೊಳ್ಳುತ್ತಿದ್ದಾರೆ.

ಓದಿರಿ: ಮೊಬೈಲ್‌ಗಳ ಬ್ಯಾಟರಿ ಸ್ಫೋಟಗೊಳ್ಳುವುದನ್ನು ತಡೆಯುವುದು ಹೇಗೆ?

ನಿಮ್ಮೆಲ್ಲಾ ಪೋಸ್ಟ್‌ಗಳನ್ನು ಹಂಚಿಕೊಳ್ಳಲು ಒಂದು ಖಾತೆ ಸಾಲುತ್ತಿಲ್ಲ ಅಂತೆಯೇ ನೀವು ಎರಡು ಖಾತೆಗಳನ್ನು ಬಳಸಿಕೊಂಡು ಏನಾದರೂ ಕ್ರೇಜ್ ಮಾಡಲು ಹೊರಟಿದ್ದೀರಿ ಎಂದಿದ್ದಲ್ಲಿ ಇದನ್ನು ಮಾಡುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಸಿಕೊಡುತ್ತಿದ್ದೇವೆ. ಫೇಸ್‌ಬುಕ್ ಎರಡು ಖಾತೆಗಳನ್ನು ಬಳಸುವುದಕ್ಕೆ ತಡೆಯನ್ನು ಹಾಕಿದ್ದರೂ ಇದನ್ನು ಮಾಡಬಹುದಾಗಿದೆ. ಒಂದೇ ಆಂಡ್ರಾಯ್ಡ್ ಫೋನ್‌ನಲ್ಲಿ ಎರಡು ಫೇಸ್‌ಬುಕ್ ಖಾತೆಗಳನ್ನು ಬಳಸುವುದು ಹೇಗೆ ಎಂಬುದನ್ನು ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅಧಿಕೃತ ಅಪ್ಲಿಕೇಶನ್

ಅಧಿಕೃತ ಅಪ್ಲಿಕೇಶನ್

ಅಧಿಕೃತ ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಿ. ನಿರ್ದಿಷ್ಟವಾಗಿ ನಿಮ್ಮ ಪ್ರೈಮರಿ ಫೇಸ್‌ಬುಕ್ ಖಾತೆಯನ್ನು ಇದರೊಂದಿಗೆ ಬಳಸಿಕೊಳ್ಳಿ. ಇದಕ್ಕಾಗಿ ಅಪ್ಲಿಕೇಶನ್ ಇಲ್ಲಿ ಲಭ್ಯವಿದೆ.

ಫೇಸ್‌ಬುಕ್ ಲೈಟ್ ಅಪ್ಲಿಕೇಶನ್

ಫೇಸ್‌ಬುಕ್ ಲೈಟ್ ಅಪ್ಲಿಕೇಶನ್

ಪ್ಲೇ ಸ್ಟೋರ್‌ನಿಂದ ಫೇಸ್‌ಬುಕ್ ಲೈಟ್ ಅಪ್ಲಿಕೇಶನ್ ಇನ್‌ಸ್ಟಾಲ್ ಮಾಡಿಕೊಳ್ಳಿ.

2015

2015

2015 ರಂದು ಫೇಸ್‌ಬುಕ್ ಈ ಅಪ್ಲಿಕೇಶನ್ ಅನ್ನು ಲಾಂಚ್ ಮಾಡಿದ್ದು, ಫೇಸ್‌ಬುಕ್‌ನ ಕಡಿಮೆ ಡೇಟಾ ಆವೃತ್ತಿಯಾಗಿದೆ.

ಎರಡನೇ ಖಾತೆ

ಎರಡನೇ ಖಾತೆ

ನಿಮ್ಮ ಎರಡನೇ ಖಾತೆಯನ್ನು ಫೇಸ್‌ಬುಕ್ ಲೈಟ್‌ನೊಂದಿಗೆ ಬಳಸಿ. ಎರಡು ಖಾತೆಗಳನ್ನು ಬಳಸುವ ಅನುಭವ ಭಿನ್ನವಾಗಿರುತ್ತದೆ.

ಫೇಸ್‌ಬುಕ್ ಅಪ್ಲಿಕೇಶನ್‌ನ ಅನುಭವ

ಫೇಸ್‌ಬುಕ್ ಅಪ್ಲಿಕೇಶನ್‌ನ ಅನುಭವ

ಲೈಟ್ ಅಪ್ಲಿಕೇಶನ್ ನಿಮಗೆ ಮೂಲ ಫೇಸ್‌ಬುಕ್ ಅಪ್ಲಿಕೇಶನ್‌ನ ಅನುಭವವನ್ನು ನೀಡುವುದಿಲ್ಲ. ಇದು ಕಡಿಮೆ ಡೇಟಾವನ್ನು ಬಳಸಿಕೊಳ್ಳುತ್ತದೆ.

2ಜಿ ಸಂಪರ್ಕ

2ಜಿ ಸಂಪರ್ಕ

2ಜಿ ಸಂಪರ್ಕದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಹಾಗೂ ನೀವು ಪರಿಶ್ರಮವಿಲ್ಲದೆ ಎರಡೆರಡು ಖಾತೆಗಳನ್ನು ಒಂದೇ ಆಂಡ್ರಾಯ್ಡ್ ಫೋನ್‌ನಲ್ಲಿ ಬಳಸಿಕೊಳ್ಳಲೂಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In this article we are giving you some glimpse on How to use 2 Facebook accounts on 1 Android phone.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot