ನಿಮ್ಮ ಸ್ಮಾರ್ಟ್‍ಫೋನಿನಲ್ಲಿ ಹೆಚ್ಚಿನ ಇನ್ಸ್ಟಾಗ್ರಾಮ್ ಅಕೌಂಟ್‍ಗಳನ್ನು ಉಪಯೋಗಿಸುವುದು/ ನಿರ್ವಹಿಸುವುದು ಹೇಗೆ
ಈ ವರ್ಷದ ಫೆಬ್ರವರಿಯಲ್ಲಿ ಮೊದಲ ಬಾರಿಗೆ ಇನ್ಸ್ಟಾಗ್ರಾಮ್ ಒಂದಕ್ಕಿಂತ ಹೆಚ್ಚಿನ ಅಕೌಂಟ್‍ನ್ನು ಹೊಂದಲು ಅನುವುಮಾಡಿದೆ. ಈಗ ಬಳಕೆದಾರರು 5 ಅಕೌಂಟ್‍ಗಳನ್ನು ಹೊಂದಬಹುದು – ವಯಕ್ತಿಕ, ಒಫಿಷಿಯಲ್, ನಿಮ್ಮ ನಾಯಿಗಾಗಿ ಮತ್ತು ಇನ್ನೂ ಇತ್ಯಾದಿ.

ಮೊದಲೆಲ್ಲಾ, ಬಳಕೆದಾರರು ಒಂದು ಅಕೌಂಟ್‍ನಿಂದ ಲೊಗೌಟ್ ಆಗಿ ಮತ್ತೊಂದಕ್ಕೆ ಲೊಗಿನ್ ಆಗಬೇಕಿತ್ತು. ಈಗ ಈ ಫೀಚರ್ ಆಂಡ್ರೊಯಿಡ್ ಮತ್ತು ಐಒಎಸ್ ಎರಡರಲ್ಲೂ ಲಭ್ಯವಿದೆ ಮತ್ತು ವೈಯಕ್ತಿಕ ಹಾಗೂ ಒಫಿಷಿಯಲ್ ಇನ್ಸ್ಟಾಗ್ರಾಮ್ ಅಕೌಂಟ್ ಅನ್ನು ಒಂದೇ ಡಿವೈಜ್ ನಲ್ಲಿ ಸುಲಭವಾಗಿ ನಿರ್ವಹಿಸಬಹುದು.
ಓದಿರಿ: ರಿಲಾಯನ್ಸ್ ಜಿಯೋ 4ಜಿ ಟ್ರಯಲ್ ಸೇವೆ ಇಂದಿನಿಂದ ಆರಂಭ
ಈ ಕೆಳಗಿನಂತೆ ನೀವು ಹೆಚ್ಚಿನ ಇನ್ಸ್ಟಾಗ್ರಾಮ್ ಅಕೌಂಟನ್ನು ಸೇರಿಸಬಹುದು
ಹೆಜ್ಜೆ 1: ನಿಮ್ಮ ಸ್ಮಾರ್ಟ್‍ಫೋನಿನಲ್ಲಿ(ಐಒಎಸ್/ಆಂಡ್ರೊಯಿಡ್) ಇನ್ಸ್ಟಾಗ್ರಾಮ್ ಆಪ್ ಒಪನ್ ಮಾಡಿ ಮತ್ತು ನಿಮ್ಮ ಪ್ರೊಫೈಲ್ ನತ್ತ ಹೋಗಿ ಕೆಳಗಡೆ ಬಲಗಡೆ ಮೂಲೆಯಲ್ಲಿರುವ ಡಿಪಿ ಯನ್ನು ಕ್ಲಿಕ್ ಮಾಡಿ.
ಹೆಜ್ಜೆ 2: ಈಗ 'ಗೇರ್’ ಆಯ್ಕೆ ಮಾಡಿ ಅಥವಾ ಸ್ಕ್ರೀನಿನ ಮೇಲೆ ಬಲಗಡೆ ಮೂಲೆಯಲ್ಲಿ ಉದ್ದ ಕ್ಕೂ ಇರುವ 3 ಚುಕ್ಕೆಯನ್ನು.
ಹೆಜ್ಜೆ 3: ನಂತರ, ಕೆಳಗಿನ ತನಕ ಸ್ಕ್ರೊಲ್ ಮಾಡಿ ಮತ್ತು 'ಆಡ್ ಅಕೌಂಟ್’ ಆಯ್ಕೆ ಮಾಡಿ
ಹೆಜ್ಜೆ 4: ಬಳಕೆದಾರರ ಹೆಸರು ಮತ್ತು ಪಾಸ್‍ವರ್ಡ್ ಟೈಪ್ ಮಾಡಿ ಅಥವಾ ಫೇಸ್ಬುಕ್ ಅಕೌಂಟ್ ಮೂಲಕ ಲೊಗಿನ್ ಆಗಿ.
ಓದಿರಿ: ಜಿಯೋಮನಿ ವ್ಯಾಲೆಟ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡಿಲ್ಲವೇ?
ಅಕೌಂಟ್ಸ್ ಗಳನ್ನು ಹೇಗೆ ಸ್ವಿಚ್ ಮಾಡುವುದು?
ಹೆಜ್ಜೆ 1: ಆಪ್ ಓಪನ್ ಮಾಡಿದ ಮೇಲೆ , ನಿಮ್ಮ ಪ್ರೊಫೈಲ್ ಪೇಜ್ ಗೆ ಹೋಗಿ ಮತ್ತು ಮೇಲೆ ಎಡಗಡೆ ಮೂಲೆಯಲ್ಲಿನ ನಿಮ್ಮ ಯುಸರ್ ನೇಮ್ ಮೇಲೆ ಒತ್ತಿರಿ
ಹೆಜ್ಜೆ 2: ಈಗ ನಿಮಗೆ ಬೇಕಾದ ಅಕೌಂಟ್ ಆಯ್ಕೆ ಮಾಡಿ.
ಓದಿರಿ: ಭಾರತದ ಮಾರುಕಟ್ಟೆಯಲ್ಲಿ ಈ ವಾರ ಬಿಡುಗಡೆಯಾದ ಅತ್ಯುತ್ತಮ 11 ಸ್ಮಾರ್ಟ್ ಫೋನುಗಳು
ಅಕೌಂಟ್ ಡೆಲಿಟ್ ಮಾಡುವುದು ಹೇಗೆ !
ಹೆಜ್ಜೆ 1: ಮೊದಲನೆಯದು ಮೊದಲು. ನಿಮ್ಮ ಪ್ರೊಫೈಲ್ ಪೇಜ್ ಗೆ ಹೋಗಿ ಮತ್ತು 'ಗೇರ್’ಐಕೊನ್ ಆಯ್ಕೆ ಮಾಡಿ ಇಲ್ಲಾ ಮೇಲೆ ಬಲಗಡೆ ಮೂಲೆಯ ಉದ್ದಕ್ಕೆ ಇರುವ 3 ಚುಕ್ಕೆಗಳನ್ನು ಒತ್ತಿರಿ.
ಹೆಜ್ಜೆ 2: ಈಗ ಕೆಳಗೆ ಸ್ಕ್ರೊಲ್ ಡೌನ್ ಮಾಡಿ ಮತ್ತು ಆಡ್ ಅಕೌಂಟ್ ಆಯ್ಕೆ ಕೆಳಗಿರುವ ಲೊಗೌಟ್ ಆಯ್ಕೆ ಒತ್ತಿರಿ.
ಹೆಜ್ಜೆ 3: ನಿಮಗೆ ಎಲ್ಲಾ ಅಕೌಂಟ್ಸ್ ತೆಗೆಯಬೇಕೆಂದಿದ್ದರೆ,’ ಲೊಗೌಟ್ ಆಫ್ ಆಲ್ ಅಕೌಂಟ್ಸ್’ ಒತ್ತಿರಿ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications








