ಏರ್‌ಟೆಲ್ ಡಾಂಗಲ್‌ನಲ್ಲಿ ಜಿಯೋ ಸಿಮ್ ಕಾರ್ಡ್ ಬಳಸುವುದು ಹೇಗೆ?

By Shwetha
|

ಜಿಯೋ ತನ್ನ ಪ್ರಭಾವವನ್ನು ಜನಸಾಮಾನ್ಯರ ಮೇಲೆ ಹೇಗೆ ಬೀರುತ್ತಿದೆ ಎಂಬ ಅಂಶವನ್ನು ಬಳಕೆದಾರರು ತಿಳಿದುಕೊಂಡಿರುತ್ತಾರೆ. ರಿಲಾಯನ್ಸ್ ಶೋರೂಮ್‌ನ ಮುಂದೆ ಸಾಲಾಗಿ ನಿಂತಿರುವ ಜನರು, ಸಿಮ್‌ಗಾಗಿ ನಡೆಯುತ್ತಿರುವ ನೂಕು ನುಗ್ಗಲು, ಜಿಯೋ ಆಫರ್ ಮಾಡುತ್ತಿರುವ ಮನಮೋಹಕ ಆಫರ್‌ಗಳು ಹೀಗಾಗಿ ಜಿಯೋ ಹವಾ ದೇಶದಲ್ಲಿ ಒಂದುಚೂರು ಹೆಚ್ಚಾಗಿಯೇ ನಡೆಯುತ್ತಿದೆ.

ಏರ್‌ಟೆಲ್ ಡಾಂಗಲ್‌ನಲ್ಲಿ ಜಿಯೋ ಸಿಮ್ ಕಾರ್ಡ್ ಬಳಸುವುದು ಹೇಗೆ?

ಸಿಮ್ ಅನ್ನು ನಿಮ್ಮ 4ಜಿ ಫೋನ್‌ನಲ್ಲಿ ಇಲ್ಲವೇ ಎಲ್‌ವೈಎಫ್ ಡಿವೈಸ್‌ಗಳಲ್ಲಿ ಮಾತ್ರವೇ ಬಳಸಬಹುದು ಎಂಬ ಸುದ್ದಿ ಕೂಡ ಇದ್ದು ಇದಕ್ಕೆ ಅನುಗುಣವಾಗಿ ಬಳಕೆದಾರರು ಅಂತಹ ಸೆಟ್‌ಗಳನ್ನೇ ಬಳಸಿಕೊಳ್ಳುತ್ತಿದ್ದಾರೆ .ಇದಕ್ಕೆ ಜೊತೆಯಾಗಿ ಹಲವಾರು ಬಳಕೆದಾರರು ಸಿಮ್ ಅನ್ನು 2,3 ಜಿ ಸೆಟ್‌ಗಳಲ್ಲಿ, ಬಳಸಿ ಅನ್ವೇಷಣೆಗಳನ್ನು ನಡೆಸುತ್ತಲೂ ಇದ್ದಾರೆ. ಇಂತಹುದೇ ಒಂದು ಅನ್ವೇಷಣೆಯಾಗಿದೆ ಏರ್‌ಟೆಲ್ ಡಾಂಗಲ್‌ನಲ್ಲಿ ಈ ಸಿಮ್ ಅನ್ನು ಬಳಸುವುದು ಹೇಗೆ ಎಂಬುದಕ್ಕೆ ಇಂದಿನ ಲೇಖನದಲ್ಲಿರುವ ದೃಷ್ಟಾಂತ.

ಓದಿರಿ: ರಿಲಾಯನ್ಸ್ ಜಿಯೋ ಪ್ರಭಾವ: ಐಡಿಯಾದಿಂದ 9ಜಿಬಿ ಹೆಚ್ಚುವರಿ 4ಜಿ ಡೇಟಾ

ಏರ್‌ಟೆಲ್ ಡಾಂಗಲ್‌ನಲ್ಲಿ ಜಿಯೋ ಸಿಮ್ ಕಾರ್ಡ್ ಬಳಸುವುದು ಹೇಗೆ?

ಬೆಂಬಲಿಸುವ ಜಿಯೋ ಸಿಮ್ ಕಾರ್ಡ್‌ಗಳು
ಜಿಯೋ ಸಿಮ್ ಅನ್ನು ಪಡೆದುಕೊಳ್ಳಲು ಹಲವಾರು ವಿಧಾನಗಳಿವೆ. ಸಿಮ್ ಕಾರ್ಡ್ ಅನ್ನು ಹೇಗೆ ಪಡೆದುಕೊಳ್ಳಬಹುದು ಎಂಬ ಪಟ್ಟಿಯನ್ನು ನಾವು ಈಗಾಗಲೇ ನೀಡಿದ್ದೇವೆ. ಮೊದಲಿಗೆ ಬರಿಯ ಉದ್ಯೋಗಿಗಳು ಮತ್ತು ಎಲ್‌ವೈಎಫ್ ಸ್ಮಾರ್ಟ್‌ಫೋನ್‌ಗಳಿಗೆ ಮಾತ್ರವೇ ಸಿಮ್ ದೊರೆಯುತ್ತಿತ್ತು. ಈಗ ಕೆಲವೊಂದು ಸೆಟ್‌ಗಳಿಗೂ ಸಿಮ್ ಬೆಂಬಲವನ್ನು ನೀಡುತ್ತಿದೆ. ಸ್ಯಾಮ್‌ಸಂಗ್ ಅಥವಾ ಯಾವುದೇ ಇತರ 4ಜಿ ಸಕ್ರಿಯಗೊಂಡಿರುವ ಸ್ಮಾರ್ಟ್‌ಫೋನ್‌ನಿಂದ ಸಿಮ್ ಅನ್ನು ನೀವು ಪಡೆದಿದ್ದೀರಿ ಎಂದಾದಲ್ಲಿ, ಇದನ್ನು ಸುಲಭವಾಗಿ ಡಾಂಗಲ್‌ನಲ್ಲಿ ಕೂಡ ಬಳಸಬಹುದಾಗಿದೆ.

ಓದಿರಿ: ಜಿಯೋ ಕುರಿತಾದ ದೂರು ಸಲ್ಲಿಸಲು ಟಾಲ್ ಫ್ರಿ, ಕಸ್ಟಮರ್ ಕೇರ್ ವಿವರಗಳು

ಏರ್‌ಟೆಲ್ ಡಾಂಗಲ್‌ನಲ್ಲಿ ಜಿಯೋ ಸಿಮ್ ಕಾರ್ಡ್ ಬಳಸುವುದು ಹೇಗೆ?

ಡಾಂಗಲ್‌ಗೆ ಸಿಮ್ ಇನ್‌ಸರ್ಟ್ ಮಾಡಿ
ನಿಮ್ಮ ಏರ್‌ಟೆಲ್ ಡಾಂಗಲ್‌ಗೆ ಸಿಮ್ ಅನ್ನು ಇನ್‌ಸರ್ಟ್ ಮಾಡುವುದು ಮೊದಲ ಹಂತವಾಗಿದೆ. ನಿಮ್ಮ ಏರ್‌ಟೆಲ್ ಡಾಂಗಲ್ 4ಜಿ ಬೆಂಬಲವನ್ನು ಒದಗಿಸುತ್ತಿರಬೇಕು. ನಿಮ್ಮ ಪಿಸಿ ಅಥವಾ ಲ್ಯಾಪ್‌ಟಾಪ್‌ಗೆ ಡಾಂಗಲ್ ಕನೆಕ್ಟ್ ಮಾಡಿ ಮತ್ತು ಸಂಪರ್ಕ ಸ್ಥಾಪನೆಯಾಗುವವರೆಗೆ ಕಾಯಿರಿ.

ಏರ್‌ಟೆಲ್ ಡಾಂಗಲ್‌ನಲ್ಲಿ ಜಿಯೋ ಸಿಮ್ ಕಾರ್ಡ್ ಬಳಸುವುದು ಹೇಗೆ?

ಎಪಿಎನ್ ಹೊಂದಿಸಿ
ನಿಮ್ಮ ಡಾಂಗಲ್ ಅನ್ನು ಒಮ್ಮೆ ಸಂಪರ್ಕಪಡಿಸಿದ ನಂತರ, ಕನೆಕ್ಶನ್ ಬರುವವರೆಗೆ ಕಾಯಿರಿ. ಇದು ಆಗಿಲ್ಲ ಎಂದಾದಲ್ಲಿ, ನಿಮ್ಮ ಡಾಂಗಲ್ ಸೆಟ್ಟಿಂಗ್ಸ್‌ಗೆ ಹೋಗಿ. ವಿಂಡೋಸ್ 8 ಅಥವಾ ಮೇಲ್ಮಟ್ಟದ ಆವೃತ್ತಿಯನ್ನು ಬಳಸುತ್ತಿದ್ದೀರಿ ಎಂದಾದಲ್ಲಿ ನೋಟಿಫಿಕೇಶನ್ ಪ್ಯಾನಲ್‌ಗೆ ಹೋಗಿ ಮತ್ತು ಎಪಿಎನ್ ಸೆಟ್ಟಿಂಗ್‌ಗಳನ್ನು ಈ ಕೆಳಗಿನಂತೆ ಹೊಂದಿಸಿ
ಆಕ್ಸೆಸ್ ಪಾಯಿಂಟ್ ಹೆಸರು: Jionet
ಆಕ್ಸೆಸ್ ಪಾಯಿಂಟ್ ಅನ್ನು ಒಮ್ಮೆ ಹೊಂದಿಸಿದ ನಂತರ, ಎಲ್ಲಾ ಕಾಲಮ್‌ಗಳನ್ನು ಖಾಲಿಬಿಡಿ ಮತ್ತು ಓಕೆ ಕ್ಲಿಕ್ ಮಾಡಿ

ಓದಿರಿ: ಬರೇ ರೂ 25 ಕ್ಕೆ ವೊಡಾಫೋನ್ ನೀಡಲಿದೆ 1ಜಿಬಿ 4ಜಿ ಡೇಟಾ

ವಿಂಡೋಸ್ 7 ಸ್ವಯಂಚಾಲಿತವಾಗಿ ಎಪಿಎನ್ ಆರಿಸುತ್ತದೆ
ನೀವು ವಿಂಡೋಸ್ 7 ಅಥವಾ ಕೆಳಮಟ್ಟದ ಆವೃತ್ತಿಯನ್ನು ರನ್ ಮಾಡುತ್ತಿದ್ದೀರಿ ಎಂದಾದಲ್ಲಿ, ಎಪಿಎನ್ ಸೆಟ್ಟಿಂಗ್ಸ್ ಅನ್ನು ನಿಮ್ಮ ಡಾಂಗಲ್ ಸ್ವಯಂಚಾಲಿತವಾಗಿ ಆರಿಸುತ್ತದೆ. ಅಮದರೆ ಎಪಿಎನ್ ಸೆಟ್ಟಿಂಗ್ ಅನ್ನು ನೀವು ಬದಲಾಯಿಸುವಂತಿಲ್ಲ.

ಏರ್‌ಟೆಲ್ ಡಾಂಗಲ್‌ನಲ್ಲಿ ಜಿಯೋ ಸಿಮ್ ಕಾರ್ಡ್ ಬಳಸುವುದು ಹೇಗೆ?

ನಿಮ್ಮ ಇಂಟರ್ನೆಟ್ ಸಂಪರ್ಕ ಪರಿಶೀಲಿಸಿ
ಯಾವುದೇ ವೆಬ್ ಪುಟಗಳನ್ನು ತೆರೆಯಲು ಪ್ರಯತ್ನಿಸಿ ಇಂಟರ್ನೆಟ್ ಚೆನ್ನಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಮನನ ಮಾಡಿಕೊಳ್ಳಿ. ಜಿಯೋ 4ಜಿ ಸಿಮ್ ಕಾರ್ಡ್‌ ಮೂಲಕ ನೀವು ಯಶಸ್ವಿಯಾಗಿ ಇಂಟರ್ನೆರ್ಟ್‌ಗೆ ಸಂಪರ್ಕಗೊಂಡಿದ್ದೀರಿ ಎಂದಾಗಿದೆ.

Best Mobiles in India

English summary
You can use the Jio 4G SIM in an Airtel dongle. Follow the procedure below to use a Jio 4G SIM card in a dongle.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X