ಜಿಯೋ 4ಜಿ ಸಿಮ್‌ನ 'ನೊ ನೆಟ್‌ವರ್ಕ್' ಸಮಸ್ಯೆಗೆ ಪರಿಹಾರ ಹೇಗೆ?

By Shwetha
|

ರಿಲಾಯನ್ಸ್ ಜಿಯೋದ ಕಮರ್ಷಿಯಲ್ ಲಾಂಚ್‌ನೊಂದಿಗೆ, ಜನರು ಜಿಯೋ ಸೇವೆಯತ್ತ ದೂರುಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ನೆಟ್‌ವರ್ಕ್ ವೇಗದಲ್ಲಿ ನಿಧಾನ, ಆಕ್ಟಿವೇಶನ್‌ನಲ್ಲಿ ವಿಳಂಬ, ನೊ ನೆಟ್‌ವರ್ಕ್ ಸಮಸ್ಯೆ ಹೀಗೆ ಜಿಯೋದ ಸುತ್ತ ದೂರುಗಳ ಹುತ್ತವೇ ಬೆಳೆಯುತ್ತಿದೆ.

ಓದಿರಿ: ಎಚ್ಚರ: ರಿಲಾಯನ್ಸ್ ಜಿಯೋ ಮೇಲೆ ತೂಗುತ್ತಿದೆ ಅಪಾಯದ ತೂಗುಗತ್ತಿ!!!

4ಜಿ ವೇಗದಲ್ಲಿ ವೇಗವನ್ನು ಪಡೆದುಕೊಳ್ಳಲು ಕೆಲವೊಂದು ಪರಿಹಾರಗಳೊಂದಿಗೆ ನಾವು ಬಂದಿದ್ದು ಅಂತೆಯೇ ಜಿಯೋದ ಕೆಲವೊಂದು ಸಮಸ್ಯೆಗಳಿಗೆ ಸೂಕ್ತವಾದ ಕ್ರಮಗಳನ್ನು ಇಲ್ಲಿ ನಾವು ನೀಡುತ್ತಿದ್ದೇವೆ. ಜಿಯೋದಲ್ಲಿ ಸಿಗ್ನಲ್ ಸಮಸ್ಯೆಯನ್ನು ಹೆಚ್ಚಿನ ಬಳಕೆದಾರರು ಎದುರಿಸುತ್ತಿದ್ದು ಸಿಮ್ ಕಾರ್ಡ್‌ನ ಆಕ್ಟಿವೇಶನ್‌ಗೆ ಮುನ್ನವೇ ಸಿಗ್ನಲ್ ಸಮಸ್ಯೆಯನ್ನು ಬಳಕೆದಾರರು ಎದುರಿಸುತ್ತಿದ್ದಾರೆ. ಹಾಗಿದ್ದರೆ ಈ ಕೆಳಗಿನ ಪರಿಹಾರಗಳನ್ನು ಅರಿತುಕೊಂಡು ನಿಮ್ಮ ಜಿಯೋ ಸಮಸ್ಯೆಗೆ ಉತ್ತರ ಕಂಡುಕೊಳ್ಳಿ.

ಓದಿರಿ: ಎಲ್‌ಟಿಇ ನೆಟ್‌ವರ್ಕ್ ಲಾಕ್ ಮಾಡಿ ಜಿಯೋ 4ಜಿ ಸ್ಪೀಡ್ ವರ್ಧಿಸಿ

ಮೊದಲಿಗೆ ಟೆಲಿ ವೆರಿಫಿಕೇಶನ್ ಮಾಡಿ

ಮೊದಲಿಗೆ ಟೆಲಿ ವೆರಿಫಿಕೇಶನ್ ಮಾಡಿ

ಇದು ಪ್ರಥಮ ಹಂತವಾಗಿದೆ. ನಿಮ್ಮ ಟೆಲಿ ವರಿಫಿಕೇಶನ್ ನಡೆಸಲಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಆಗಿಲ್ಲದೇ ಇದ್ದರೆ, 1800-8901-977 ಗೆ ಪರ್ಯಾಯ ಸಂಖ್ಯೆಯಿಂದ ಕರೆ ಮಾಡಿ ಮತ್ತು ಭಾಷೆಯನ್ನು ಆಯ್ಕೆಮಾಡಿ. ನಿಮ್ಮ ಜಿಯೋ ಸಂಖ್ಯೆಯನ್ನು ನಮೂದಿಸಿ ಹಾಗೂ ಸ್ಟೇಟಸ್ ಪರಿಶೀಲಿಸಿ. ಟೆಲಿ ವೆರಿಫಿಕೇಶನ್ ನಂತರವಷ್ಟೇ, ನಿಮ್ಮ ಫೋನ್‌ನಲ್ಲಿ ಸಿಗ್ನಲ್ ಬಾರ್‌ಗಳನ್ನು ನೀವು ಕಂಡುಕೊಳ್ಳುತ್ತೀರಿ.

ನಿಮ್ಮ ಫೋನ್ ರಿಸ್ಟಾರ್ಟ್ ಮಾಡಿ

ನಿಮ್ಮ ಫೋನ್ ರಿಸ್ಟಾರ್ಟ್ ಮಾಡಿ

ಸಿಗ್ನಲ್ ಬಾರ್ ಸಮಸ್ಯೆಗಳಿಗೆ ನೀವು ಅನುಸರಿಸಬಹುದಾದ ಪರಿಹಾರ ವಿಧಾನಗಳಲ್ಲಿ ಇದೂ ಕೂಡ ಒಂದು. ಸಿಮ್ ಸ್ಲಾಟ್‌ಗೆ ಜಿಯೋ ಸಿಮ್ ಅನ್ನು ಅಳವಡಿಸಿದ ನಂತರ ಫೋನ್ ಅನ್ನು ರಿಸ್ಟಾರ್ಟ್ ಮಾಡಲು ಆರಂಭಿಸಿ. ಇದು ನಿಜಕ್ಕೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ಸಿಗ್ನಲ್ ಬಾರ್‌ಗಳನ್ನು ನೀವು ಕಂಡುಕೊಳ್ಳುತ್ತೀರಿ.

ಜಿಯೋ ಸಿಮ್ ಅನ್ನು ಸರಿಯಾದ ಸ್ಲಾಟ್‌ಗೆ ಅಳವಡಿಸಿ

ಜಿಯೋ ಸಿಮ್ ಅನ್ನು ಸರಿಯಾದ ಸ್ಲಾಟ್‌ಗೆ ಅಳವಡಿಸಿ

ಬಳಕೆದಾರರು ಮಾಡುವ ಸಾಮಾನ್ಯ ತಪ್ಪು ಇದಾಗಿದೆ. ನೀವು ಡ್ಯುಯಲ್ ಸಿಮ್ ಫೋನ್ ಅನ್ನು ಬಳಸುತ್ತಿದ್ದೀರಿ ಎಂದಾದಲ್ಲಿ, ಪ್ರಥಮ ಸ್ಲಾಟ್‌ಗೆ ಜಿಯೋ 4ಜಿ ಸಿಮ್ ಅನ್ನು ಇನ್‌ಸರ್ಟ್ ಮಾಡಿ. ಇದು ಎಲ್‌ಟಿಇ ಸಕ್ರಿಯಗೊಂಡಿರುತ್ತದೆ. ಇದು ಸಮಸ್ಯಯೆನ್ನು ತ್ವರಿತವಾಗಿ ಪರಿಹರಿಸುತ್ತದೆ.

ನೆಟ್‌ವರ್ಕ್ ಸೆಟ್ಟಿಂಗ್‌ಗಳನ್ನು ಪರಿಶೀಲಿಸಿ

ನೆಟ್‌ವರ್ಕ್ ಸೆಟ್ಟಿಂಗ್‌ಗಳನ್ನು ಪರಿಶೀಲಿಸಿ

ನೀವು ಆಂಡ್ರಾಯ್ಡ್ ಡಿವೈಸ್ ಅನ್ನು ಬಳಸುತ್ತಿದ್ದೀರಿ ಎಂದಾದಲ್ಲಿ, ನೆಟ್‌ವರ್ಕ್ ಸೆಟ್ಟಿಂಗ್‌ಗಳಲ್ಲಿ ನೀವು ಸಣ್ಣ ಬದಲಾವಣೆಯನ್ನು ಮಾಡಬೇಕಾಗುತ್ತದೆ. ಕೋಡ್ *#*#4636#*#* ಅನ್ನು ಎಂಟರ್ ಮಾಡಿ. ನಿಮ್ಮನ್ನು ಇದು ಫೋನ್ ಮಾಹಿತಿಗೆ ಕರೆದೊಯ್ಯುತ್ತದೆ ಹಾಗೂ ಇಲ್ಲಿ ನೀವು 'ರನ್ ಪಿಂಗ್ ಟೆಸ್ಟ್' ಆಪ್ಶನ್ ಮೇಲೆ ಸ್ಪರ್ಶಿಸಿ. ರೇಡಿಯೊ ಆಪ್ಶನ್ ಆನ್ ಆಗುತ್ತದೆ ಮತ್ತು ಡಿವೈಸ್ ಅನ್ನು ರಿಬೂಟ್ ಮಾಡಿ. ನಿಮ್ಮ ನೆಟ್‌ವರ್ಕ್ ಹಿಂತಿರುಗಿದೆ ಇಲ್ಲವೇ ಎಂಬುದನ್ನು ಹೀಗೆ ಕಂಡುಕೊಳ್ಳಿ.

ಐಫೋನ್ ಬಳಕೆದಾರರಿಗೆ ಈ ಟ್ರಿಕ್ಸ್

ಐಫೋನ್ ಬಳಕೆದಾರರಿಗೆ ಈ ಟ್ರಿಕ್ಸ್

ಸೆಟ್ಟಿಂಗ್ಸ್‌ಗೆ ಹೋಗಿ > ಸೆಲ್ಯುಲರ್ ಆಪ್ಶನ್ ಇಲ್ಲಿ ಸೆಲ್ಯುಲಾರ್ ಡೇಟಾ ಆನ್ ಆಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಸಿಗ್ನಲ್ ಬಾರ್ ತೋರುತ್ತಿಲ್ಲ ಎಂದಾದಲ್ಲಿ, ನೆಟ್‌ವರ್ಕ್ ಸೆಟ್ಟಿಂಗ್ಸ್ ರಿಸ್ಟೋರ್ ಮಾಡಿ. ಸೆಟ್ಟಿಂಗ್ಸ್‌ನಿಂದ ನೀವು ಎಲ್‌ಟಿಇ ನೆಟ್‌ವರ್ಕ್‌ನಲ್ಲಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ ಮತ್ತು ಸೆಟ್ಟಿಂಗ್ಸ್‌ನಲ್ಲಿ ಜಿಯೋ ಸೆಕ್ಯುರಿಟಿ ಸರ್ವೀಸ್ ಅನ್ನು ಆನ್ ಮಾಡಿ.

Best Mobiles in India

English summary
we at GizBot have come up with 5 possible fixes that will resolve the no network signal problem on your smartphone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X