Subscribe to Gizbot

ಗೂಗಲ್ ಮ್ಯಾಪ್ಸ್ ಅಳವಡಿಸಿ ರಸ್ತೆ ಪ್ರಯಾಣ ಸುಲಭಗೊಳಿಸಿ

Written By:

ನೀವು ಆದಷ್ಟು ಬೇಗನೇ ರಸ್ತೆ ಪ್ರಯಾಣವನ್ನು ಮಾಡುತ್ತಿದ್ದೀರಿ ಎಂದಾದಲ್ಲಿ, ಗೂಗಲ್ ಮ್ಯಾಪ್‌ನ ಅತ್ಯಾಧುನಿಕ ಅಪ್‌ಡೇಟ್‌ನೊಂದಿಗೆ ಆಂಡ್ರಾಯ್ಡ್ ಗೂಗಲ್ ಮ್ಯಾಪ್ಸ್‌ನಲ್ಲಿ ಮಲ್ಟಿ ಸ್ಟಾಪ್ ಡೈರೆಕ್ಶನ್‌ನೊಂದಿಗೆ ನೀವು ರಸ್ತೆ ಪ್ರಯಾಣವನ್ನು ಯೋಜಿಸಬಹುದಾಗಿದೆ.

ಓದಿರಿ: ಸ್ಮಾರ್ಟ್‌ಫೋನ್ ಬ್ಯಾಟರಿ ಸೇವ್ ಮಾಡಲು ಇಲ್ಲಿದೆ ಸೂಪರ್ ಟಿಪ್ಸ್

ಅಪ್ಲಿಕೇಶನ್ ತೆರೆಯಿರಿ, ಡೆಸ್ಟಿನೇಶನ್ ನಮೂದಿಸಿ, ಮೂಲೆಯಲ್ಲಿರುವ ಮೆನುವನ್ನು ಸ್ಪರ್ಶಿಸಿ ಮತ್ತು "ಸ್ಟಾಪ್ ಸೇರಿಸಿ" ಕ್ಲಿಕ್ ಮಾಡಿ. ನಿಮ್ಮ ಸ್ಟಾಪ್‌ಗಳ ಆರ್ಡರ್ ಅನ್ನು ರಿಅರೇಂಜ್ ಮಾಡಲು, "ಸ್ಟಾಪ್ ಸೇರಿಸಿ" ನ ಎಡದಲ್ಲಿರುವ ಮೂರು ಡಾಟ್ ಮೆನುವನ್ನು ಒತ್ತಿ ಹಿಡಿದುಕೊಳ್ಳಿ ಮತ್ತು ನಿಮಗೆ ಬೇಕಾದ ಸ್ಥಿತಿಗೆ ಎಳೆಯಿರಿ. ಇಲ್ಲಿ ಬಳಕೆದಾರರು ತಮಗೆ ಬೇಕಾದ ಸ್ಟಾಪ್‌ಗಳನ್ನು ಸೇರಿಸಿಕೊಳ್ಳಬಹುದಾಗಿದೆ.

ಓದಿರಿ: ಫೇಸ್‌ಬುಕ್‌ನಲ್ಲಿ ಶೇರ್‌ ಮಾಡಬಾರದ 8 ಪ್ರಮುಖ ಅಂಶಗಳು

ಸ್ಪರ್ಶಿಸುವುದನ್ನು ನೀವು ಮುಗಿಸಿದ ನಂತರ, ನಿಮ್ಮ ಮಲ್ಟಿ ಸ್ಟಾಪ್ ರೂಟಿಂಗ್ ಸಂಪೂರ್ಣಗೊಳ್ಳುತ್ತದೆ. ಪೆಟ್ರೋಲ್ ಪಂಪ್ಸ್, ಎಟಿಎಮ್ ಅಥವಾ ರೆಸ್ಟಾರೆಂಟ್‌ಗಳಿಗಾಗಿ ಮ್ಯಾಪ್‌ನಲ್ಲಿ ನಿಮಗೆ ಹುಡುಕಾಡಬಹುದಾಗಿದೆ. ಆಂಡ್ರಾಯ್ಡ್‌ನಲ್ಲಿ ಗೂಗಲ್ ಮ್ಯಾಪ್ಸ್ ಬಳಕೆದಾರರು ತಮ್ಮ ಪ್ರಯಾಣ ಸ್ಮರಣೆಗಳನ್ನು ನಿಮ್ಮ "ಟೈಮ್‌ಲೈನ್‌ನಲ್ಲಿ" ಸಂಗ್ರಹಿಸಿಟ್ಟುಕೊಳ್ಳಬಹುದಾಗಿದೆ. ಕೆಳಗಿನ ಸ್ಲೈಡರ್‌ಗಳಲ್ಲಿ ಗೂಗಲ್ ಮ್ಯಾಪ್ಸ್ ಆಫ್‌ಲೈನ್ ಬಳಕೆ ಹೇಗೆ ಎಂಬುದನ್ನು ತಿಳಿದುಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಇಂಟರ್ನೆಟ್ ಸಂಪರ್ಕ

ಇಂಟರ್ನೆಟ್ ಸಂಪರ್ಕ

ಮೊಬೈಲ್ ಡೇಟಾ ಅಥವಾ ವೈಫೈಯನ್ನು ಬಳಸಿಕೊಂಡು ನಿಮ್ಮ ಗೂಗಲ್ ಖಾತೆಗೆ ಸೈನ್ ಇನ್ ಆಗಿ ಆಗ ನೀವು ಇಂಟರ್ನೆಟ್ ಸಂಪರ್ಕದಲ್ಲಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ

ಗೂಗಲ್ ಖಾತೆಗೆ ಸೈನ್ ಇನ್ ಮಾಡಿ

ಗೂಗಲ್ ಖಾತೆಗೆ ಸೈನ್ ಇನ್ ಮಾಡಿ

ಇಂಟರ್ನೆಟ್‌ಗೆ ಒಮ್ಮೆ ನೀವು ಸಂಪರ್ಕವನ್ನು ಪಡೆದುಕೊಂಡ ನಂತರ ಗೂಗಲ್ ಖಾತೆಗೆ ಸೈನ್ ಇನ್ ಮಾಡಿ, ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್ ಮ್ಯಾಪ್ಸ್ ಅಪ್ಲಿಕೇಶನ್ ಅನ್ನು ಲಾಂಚ್ ಮಾಡಿ.

ಹುಡುಕಾಡಿ

ಹುಡುಕಾಡಿ

ಸ್ಯಾನ್ ಫ್ರಾನ್ಸಿಸ್ಕೊ ಮೊದಲಾದ ಸ್ಥಳವನ್ನು ಇದೀಗ ಹುಡುಕಾಡಿ ಹಾಗೂ ಸ್ಥಳವನ್ನು ಜೂಮ್ ಮತ್ತು ಪಿಂಚ್ ಮಾಡಿ ಆ ಪ್ರದೇಶವನ್ನು ಉಳಿಸಿ.

ನಕ್ಷೆ ಉಳಿಸಲು

ನಕ್ಷೆ ಉಳಿಸಲು

ವಲಯವನ್ನು ಆಯ್ಕೆಮಾಡಿದ ನಂತರ, ನಕ್ಷೆಯನ್ನು ಉಳಿಸಲು ಮೆನು ಸ್ಪರ್ಶಿಸಿ.

ಆಫ್‌ಲೈನ್ ಮ್ಯಾಪ್

ಆಫ್‌ಲೈನ್ ಮ್ಯಾಪ್

ಕೆಳಕ್ಕೆ ಸ್ಕ್ರಾಲ್ ಡೌನ್ ಮಾಡಿ ಮತ್ತು ಆಫ್‌ಲೈನ್ ಮ್ಯಾಪ್ ಆಪ್ಶನ್ ಅನ್ನು ಸೇವ್ ಮಾಡಿ ಹಾಗೂ ಆನ್‌ ಸ್ಕ್ರೀನ್ ವರದಿಗಳನ್ನು ಪಾಲಿಸಿ.

ಆಫ್‌ಲೈನ್ ಮ್ಯಾಪ್ ಅನ್ನು ವೀಕ್ಷಿಸಲು

ಆಫ್‌ಲೈನ್ ಮ್ಯಾಪ್ ಅನ್ನು ವೀಕ್ಷಿಸಲು

ನಿಮ್ಮ ಆಫ್‌ಲೈನ್ ಮ್ಯಾಪ್ ಅನ್ನು ವೀಕ್ಷಿಸಲು, ಗೂಗಲ್ ಮ್ಯಾಪ್ಸ್ ಅಪ್ಲಿಕೇಶನ್ ಲಾಂಚ್ ಮಾಡಿ > ಮೆನು ಸ್ಪರ್ಶಿಸಿ ಮತ್ತು ಸ್ಥಳಗಳನ್ನು ಆಯ್ಕೆಮಾಡಿ. ''ಆಫ್‌ಲೈನ್ ಮ್ಯಾಪ್ಸ್'' ಗೆ ಸ್ಕ್ರಾಲ್ ಡೌನ್ ಮಾಡಿ ಮತ್ತು ಎಲ್ಲವನ್ನೂ ವೀಕ್ಷಿಸಲು ಸ್ಪರ್ಶಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
If you are planning a road trip soon, update Google Maps on your smartphone now. With the latest update on Google Maps on Android (coming soon to iOS), you can now plan road trip with multi-stop directions.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot