ಒಪ್ಪೋ F1s ಸ್ಮಾರ್ಟ್ ಫೋನಿನಲ್ಲಿ ಈ 8 ಸಲಹೆಗಳನ್ನು ಉಪಯೋಗಿಸಿ

|

ಚೀನಾದ ಸ್ಮಾರ್ಟ್ ಫೋನ್ ಕಂಪನಿ ಒಪ್ಪೋ ಕಳೆದ ವಾರ ಒಪ್ಪೋ F1s ಅನ್ನು ಬಿಡುಗಡೆಗೊಳಿಸಿತು. ಗಿಜ್ ಬಾಟ್ ನಲ್ಲಿ ಈಗಾಗಲೇ ಸ್ಮಾರ್ಟ್ ಫೋನಿನ ಗುಣವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಒಪ್ಪೋ F1sನಲ್ಲಿ ಮುಂಬದಿಯ 16 ಮೆಗಾಪಿಕ್ಸಲ್ಲಿನ ಕ್ಯಾಮೆರಾ ನಮಗೆ ಮೆಚ್ಚುಗೆಯಾಗಿತ್ತು.

ಒಪ್ಪೋ F1s ಸ್ಮಾರ್ಟ್ ಫೋನಿನಲ್ಲಿ ಈ 8 ಸಲಹೆಗಳನ್ನು ಉಪಯೋಗಿಸಿ

ಈ ಸ್ಮಾರ್ಟ್ ಫೋನಿನಲ್ಲಿ 5 ಇಂಚಿನ 720ಪಿಕ್ಸಿಲ್ಲಿನ ಪರದೆಯಿದೆ, 267ಪಿಪಿಐ ಪಿಕ್ಸೆಲ್ ಡೆನ್ಸಿಟಿ ಇದೆ. ಪರದೆಯನ್ನು ರಕ್ಷಿಸಲು 3 ಕಾರ್ನಿಂಗ್ ಗೊರಿಲ್ಲಾ ಗಾಜಿನ ತಂತ್ರಜ್ಞಾನವಿದೆ. 3ಜಿಬಿ ರ್ಯಾಮ್, 32 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ ಹೊಂದಿರುವ ಒಪ್ಪೋ F1s ಫೋನಿನಲ್ಲಿ ಮೀಡಿಯಾಟೆಕ್ MT6750 ಪ್ರೊಸೆಸರ್ ಇದೆ.

ಓದಿರಿ: ಸ್ಮಾರ್ಟ್‍ಫೋನ್ ಚಟದ 10 ಲಕ್ಷಣಗಳು ಮತ್ತು ಅದರಿಂದ ರಕ್ಷಿಸಿಕೊಳ್ಳುವುದು ಹೇಗೆ

ಮೊದಲೇ ಹೇಳಿದಂತೆ ಎಫ್/2.0 ಅಪರ್ಚರ್ರಿನ 16 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರಾ ಫೋನಿನಲ್ಲಿದೆ ಮತ್ತು ಎಫ್ 2.2 ಅಪರ್ಚರ್, ಎಲ್.ಇ.ಡಿ ಫ್ಲಾಷ್, ಪಿ.ಡಿ.ಎ.ಎಫ್ ಸೌಲಭ್ಯವಿರುವ 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರಾ ಇದೆ. ಒಪ್ಪೋದ ಕಲರ್ ಓ.ಎಸ್ ಮಾರ್ಪಾಟಿರುವ ಆ್ಯಂಡ್ರಾಯ್ಡ್ 5.1 ಲಾಲಿಪಪ್ ಫೋನಿನಲ್ಲಿದೆ.
ಒಪ್ಪೋದ ಕಲರ್ ಓ.ಎಸ್ ಆ್ಯಪಲ್ಲಿನ ಐ.ಓಎಸ್ ರೀತಿಯಲ್ಲಿಯೇ ಇದೆ. ಆ್ಯಪ್ ಗಳ ಐಕಾನುಗಳು, ಸಿಸ್ಟಮ್ ಯುಐ ಐ.ಓಎಸ್ ನಂತೆಯೇ ಕಾಣುತ್ತದೆ. ಆ್ಯಂಡ್ರಾಯ್ಡಿನ ಸಾಫ್ಟ್ ವೇರನ್ನು ಒಪ್ಪೋದ ಕಲರ್ ಓಎಸ್ ತುಂಬಾ ಪರಿಣಾಮಕಾರಿಯಾಗಿ ಮಾರ್ಪಡಿಸಿಕೊಂಡಿದೆ.

ಓದಿರಿ: ಆಂಡ್ರಾಯ್ಡ್‌ನಲ್ಲಿ ಆಟೋಮೆಟಿಕಲಿ ಸಿನಿಮಾ ಸಬ್‌ಟೈಟಲ್‌ ಡೌನ್‌ಲೋಡ್‌ ಹೇಗೆ?

ನಾವು ಉಪಯೋಗಿಸಿದ ಸಮಯದಲ್ಲಿ ಕಂಡುಕೊಂಡು ಟಿಪ್ಸ್ ಮತ್ತು ಟ್ರಿಕ್ಸ್ ಗಳನ್ನು ಇಲ್ಲಿ ನೀಡುತ್ತಿದ್ದೇವೆ.
ಅಪ್ ಡೇಟ್: ಒಪ್ಪೋ ತನ್ನ ಇತ್ತೀಚಿನ ಪತ್ರಿಕಾ ಹೇಳಿಕೆಯಲ್ಲಿ ಒಪ್ಪೋ F1s ಆಗಷ್ಟ್ 11ರಿಂದ ಅಂತರ್ಜಾಲದಲ್ಲಿ ಮತ್ತು ಆಫ್ಲೈನ್ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತದೆ ಎಂದು ತಿಳಿಸಿದೆ. ಸ್ಮಾರ್ಟ್ ಫೋನ್ ಮೊದಲು ದೆಹಲಿ, ಮುಂಬೈ, ಬೆಂಗಳೂರು ಹಾಗೂ ಕೊಲ್ಕೊತ್ತಾದಲ್ಲಿ ಮಾರಾಟವಾಗುತ್ತದೆ, ನಂತರ ದೇಶದ ಇನ್ನೂ ಎಂಟು ಪ್ರಮುಖ ನಗರಗಳಲ್ಲಿ ಲಭ್ಯವಾಗುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮೂರು ಬೆರಳುಗಳಿಂದ ಡ್ರ್ಯಾಗ್ ಮಾಡಿ ಸ್ಕ್ರೀನ್ ಶಾಟ್ ತೆಗೆಯಿರಿ.

ಮೂರು ಬೆರಳುಗಳಿಂದ ಡ್ರ್ಯಾಗ್ ಮಾಡಿ ಸ್ಕ್ರೀನ್ ಶಾಟ್ ತೆಗೆಯಿರಿ.

ಉಪಯೋಗವಾಗುವಂತಹ ಫೀಚರ್ರುಗಳನ್ನು ಕಲರ್ ಓಎಸ್ ನಲ್ಲಿ ಕಾಣಬಹುದು. ಒಪ್ಪೋ F1sನಲ್ಲಿ ಸ್ಕ್ರೀನ್ ಶಾಟ್ ತೆಗೆಯುವುದು ಬಹಳ ಸುಲಭ. ನಿಮ್ಮ ಪರದೆಯ ಮೇಲೆ ಮೂರು ಬೆರಳುಗಳನ್ನು ಡ್ರ್ಯಾಗ್ ಮಾಡಿದರೆ ಸಾಕು ಸ್ಕ್ರೀನ್ ಶಾಟ್ ತೆಗೆಯಬಹುದು. ಈ ಸೌಲಭ್ಯ ನೀವು ಯಾವುದೇ ಆ್ಯಪ್ ಅನ್ನು ತೆರೆದಿದ್ದಾಗಲೂ ಉಪಯೋಗಿಸಬಹುದು. ವಾಲ್ಯೂಮ್ ಮತ್ತು ಪವರ್ ಬಟನ್ ಅನ್ನು ಏಕಕಾಲದಲ್ಲಿ ಒತ್ತುವ ಮೂಲಕವೂ ಸ್ಕ್ರೀನ್ ಶಾಟ್ ತೆಗೆಯಬಹುದೆಂದು ನೆನಪಿಡಿ.

ಈ ಸೌಕರ್ಯವನ್ನು ನೀವು ಮ್ಯಾನುಯಲ್ ಆಗಿ ಎನೇಬಲ್ ಮಾಡಲು ಸೆಟ್ಟಿಂಗ್ಸ್ ಗೆ ಹೋಗಿ > ಗೆಸ್ಚರ್ & ಮೋಷನ್ಸ್ > ಕ್ವಿಕ್ ಗೆಸ್ಚರ್ > ಎನೇಬಲ್ ಮಾಡಿ.

ಬ್ಯಾಟರಿ ಉಳಿಸಲು ಸಿಂಪಲ್ ಮೋಡ್.

ಬ್ಯಾಟರಿ ಉಳಿಸಲು ಸಿಂಪಲ್ ಮೋಡ್.

ಒಪ್ಪೋ F1sನಲ್ಲಿ ಬ್ಯಾಟರಿ ಉಳಿಸಲು ಸಿಂಪಲ್ ಮೋಡ್ ಸೌಕರ್ಯವಿದೆ. ಸೆಟ್ಟಿಂಗ್ಸ್ ನಲ್ಲಿ ಸಿಂಪಲ್ ಮೋಡನ್ನು ಆಯ್ದುಕೊಂಡರೆ ನೀವು ಫೋಟೋ, ಫೇವರೇಟ್ಸ್(ಆ್ಯಪ್), ಕಾಂಟಾಕ್ಟ್ಸ್, ಎಮರ್ಜೆನ್ಸಿ ಕರೆ, ಫೋನ್ ಮತ್ತು ಮೆಸೇಜುಗಳನ್ನು ಮಾತ್ರ ಉಪಯೋಗಿಸಬಹುದು. ಮುಖಪರದೆಯ ಮೇಲೆ ಎಡಕ್ಕೆ ಸ್ವೈಪ್ ಮಾಡುವ ಮೂಲಕ ಸಿಂಪಲ್ ಮೋಡ್ ನಿಂದ ಹೊರಬರಬಹುದು.

ಅನಾಮಿಕ ನಂಬರುಗಳನ್ನು ಸುಲಭವಾಗಿ ಬ್ಲಾಕ್ ಮಾಡಿ.

ಅನಾಮಿಕ ನಂಬರುಗಳನ್ನು ಸುಲಭವಾಗಿ ಬ್ಲಾಕ್ ಮಾಡಿ.

ಕಲರ್ ಓಎಸ್ ಉಪಯೋಗಿಸಿಕೊಂಡು ಅನಾಮಿಕ ನಂಬರುಗಳನ್ನು ಬ್ಲಾಕ್ ಮಾಡಬಹುದು. ಸೆಟ್ಟಿಂಗ್ಸ್ ಗೆ ಹೋಗಿ > ಕಾಲ್ > ಅನಾಮಿಕ ನಂಬರುಗಳನ್ನು ಬ್ಲಾಕ್ ಮಾಡುವ ಆಯ್ಕೆಯನ್ನು ಆಯ್ದುಕೊಳ್ಳಿ. ಅನಾಮಿಕ ನಂಬರುಗಳಿಂದ ನಿಮಗೆ ಯಾವುದೇ ಫೋನುಗಳು ಬರುವುದಿಲ್ಲ.

ಉತ್ತಮ ಬಳಕೆಗಾಗಿ ಸ್ಕ್ರೀನ್ ಆಫ್ ಗೆಸ್ಚರ್ಸ್.

ಉತ್ತಮ ಬಳಕೆಗಾಗಿ ಸ್ಕ್ರೀನ್ ಆಫ್ ಗೆಸ್ಚರ್ಸ್.

ಇದು ಆ್ಯಂಡ್ರಾಯ್ಡ್ ಫೋನಿನ ಹೊಸ ವಿಶಿಷ್ಟತೆಯೇನಲ್ಲ, ಆದರೆ ಇದು ತುಂಬಾ ಉಪಯೋಗಕಾರಿ. ಸ್ಕ್ರೀನ್ ಆಫ್ ಗೆಸ್ಚರ್ಸುಗಳು ನಿಮ್ಮ ಫೋನ್ ಸ್ಲೀಪ್ ಮೋಡ್ ನಲ್ಲಿದ್ದಾಗ ಕೆಲಸ ಮಾಡುತ್ತದೆ. ಫೋನನ್ನು ಎಚ್ಚರಿಸಲು ಡಬಲ್ ಟ್ಯಾಪ್ ಮಾಡುವುದು, ಕ್ಯಾಮೆರಾ ಚಾಲೂ ಮಾಡಲು 'O' ಅಕ್ಷರ ಬರೆಯುವುದು, ಫ್ಲಾಷ್ ಲೈಟ್ ಆನ್ ಮಾಡಲು 'V' ಅಕ್ಷರ ಬರೆಯುವುದೆಲ್ಲವೂ ಸ್ಕ್ರೀನ್ ಆಫ್ ಗೆಸ್ಚರ್ಸ್.

ಇದರ ಜೊತೆಗೆ ನಿಮಗಿಷ್ಟವಾದ ಸ್ಕ್ರೀನ್ ಆಫ್ ಗೆಸ್ಚರನ್ನೂ ನೀವು ಸೇರಿಸಿಕೊಳ್ಳಬಹುದು. ಸೆಟ್ಟಿಂಗ್ಸ್ ಗೆ ಹೋಗಿ >ಗೆಸ್ಚರ್ & ಮೋಷನ್ > ಸ್ಕ್ರೀನ್ ಆಫ್ ಆಯ್ಕೆಯನ್ನು ಆನ್ ಮಾಡಿ.

'ಕ್ವೈಟ್ ಸಮಯವನ್ನು' ಉಪಯೋಗಿಸಿ.

'ಕ್ವೈಟ್ ಸಮಯವನ್ನು' ಉಪಯೋಗಿಸಿ.

ಆ್ಯಂಡ್ರಾಯ್ಡ್ 5.0 ನಲ್ಲಿರುವ ಡಿ.ಎನ್.ಡಿಯಂತೆಯೇ ಕ್ವೈಟ್ ಟೈಮ್ ಕೆಲಸ ನಿರ್ವಹಿಸುತ್ತದೆ. ಒಪ್ಪೋ ಇದನ್ನು ಮತ್ತಷ್ಟು ಮಾರ್ಪಡಿಸಿ ಮ್ಯಾನುಯಲ್ ಆಗಿ ಅಥವಾ ನಾವು ಆಯ್ದ ಸಮಯಕ್ಕೆ ತಕ್ಕಂತೆ ಸ್ವಯಂಚಾಲಿತವಾಗಿ ಎನೇಬಲ್ ಆಗುವಂತಹ ಆಯ್ಕೆಯನ್ನು ನೀಡಿದೆ.
ನೋಟಿಫಿಕೇಷನ್ನುಗಳು, ಒಳಬರುವ ಕರೆಗಳು ಮತ್ತು ಮೆಸೇಜುಗಳನ್ನು ಯಾವಾಗ ಪಡೆಯುಬೇಕೆಂದು ನೀವು ಆಯ್ಕೆ ಮಾಡಬಹುದು. ಸೆಟ್ಟಿಂಗ್ಸ್ ಗೆ ಹೋಗಿ >ಕ್ವೈಟ್ ಟೈಮನ್ನು ಆಯ್ಕೆ ಮಾಡಿ.

ಸ್ಮಾರ್ಟ್ ಫೋನಿನ ಉತ್ತಮ ನಿರ್ವಹಣೆಗೆ ಸೆಕ್ಯುರಿಟಿ ಸೆಂಟರ್.

ಸ್ಮಾರ್ಟ್ ಫೋನಿನ ಉತ್ತಮ ನಿರ್ವಹಣೆಗೆ ಸೆಕ್ಯುರಿಟಿ ಸೆಂಟರ್.

ಶಿಯೋಮಿಯ ಹಾದಿಯಲ್ಲೇ ಸಾಗಿರುವ ಒಪ್ಪೋ ಕೆಲವು ಸೆಕ್ಯುರಿಟಿ ವಿಶೇಷಗಳಾದ 'ಎಪಿಕೆ ವೈಟ್ ಲಿಸ್ಟ್', 'ಕ್ಯಾಚೆ ಫೈಲ್ ವೈಟ್ ಲಿಸ್ಟ್', 'ರೆಸಿಡುಯಲ್ ಫೈಲ್ ವೈಟ್ ಲಿಸ್ಟ್' ಮತ್ತು 'ಸ್ಟಾರ್ಟ್ ಅಪ್ ಆ್ಯಪ್ ವೈಟ್ ಲಿಸ್ಟ್' ಸೌಕರ್ಯವನ್ನು ನೀಡಿದೆ.

ಕ್ಯಾಮೆರಾ ಆ್ಯಪ್ ನಲ್ಲಿದೆ ಡಬಲ್ ಎಕ್ಸ್ ಪೋಷರ್ ಸೌಕರ್ಯ.

ಕ್ಯಾಮೆರಾ ಆ್ಯಪ್ ನಲ್ಲಿದೆ ಡಬಲ್ ಎಕ್ಸ್ ಪೋಷರ್ ಸೌಕರ್ಯ.

ಕ್ಯಾಮೆರಾ ಆ್ಯಪ್ ನಲ್ಲಿ ಡಬಲ್ ಎಕ್ಸ್ ಪೋಷರ್ ಮೋಡ್ ಇದೆ, ಇದರ ಮೂಲಕ ನೀವು ಎರಡು ಚಿತ್ರಗಳನ್ನು ತೆಗೆದು ನಂತರ ಸುಲಭವಾಗಿ ಕೂಡಿಸಬಹುದು. ಡಬಲ್ ಎಕ್ಸ್ ಪೋಷರ್ ಮೋಡನ್ನು ಎನೇಬಲ್ ಮಾಡಿದ ನಂತರ ಚಿತ್ರವನ್ನು ಸೆರೆ ಹಿಡಿಯುವಾಗ ಕ್ಯಾಮೆರಾ ಆ್ಯಪ್ ನಿಮಗೆ ಇನ್ನೊಂದು ಚಿತ್ರವನ್ನು ತೆಗೆಯಬೇಕೆ ಎಂದು ಕೇಳುತ್ತದೆ. ನಂತರ ಎರಡೂ ಚಿತ್ರವನ್ನು ಕೂಡಿಸುತ್ತದೆ.

ಕ್ಯಾಮೆರಾ ಆ್ಯಪ್ ನಲ್ಲೇ ನೀವು ಡಬಲ್ ಎಕ್ಸ್ ಪೋಷರ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು.

ನಿಮ್ಮ ಮೆಸೇಜ್ ಮತ್ತು ಕಾಂಟ್ಯಾಕ್ಟ್ ಗಳನ್ನು ಒ-ಕ್ಲೌಡಿಗೆ ಬ್ಯಾಕ್ ಅಪ್ ಮಾಡಿ.

ನಿಮ್ಮ ಮೆಸೇಜ್ ಮತ್ತು ಕಾಂಟ್ಯಾಕ್ಟ್ ಗಳನ್ನು ಒ-ಕ್ಲೌಡಿಗೆ ಬ್ಯಾಕ್ ಅಪ್ ಮಾಡಿ.

ಒ-ಕ್ಲೌಡ್ ಒಪ್ಪೋದ ಕ್ಲೌಡ್ ವ್ಯವಸ್ಥೆಯಾಗಿದೆ ಮತ್ತು ಇದರಲ್ಲಿ ನೀವು ಮೆಸೇಜುಗಳನ್ನು ಹಾಗೂ ಕಾಂಟ್ಯಾಕ್ಟುಗಳನ್ನು ಬ್ಯಾಕ್ ಅಪ್ ಮಾಡಿಕೊಳ್ಳಬಹುದು. ನಿಮ್ಮ ಫೈಲುಗಳನ್ನು ನಂತರ ಒಪ್ಪೋ ಸಾಧನಕ್ಕೆ ನೀವು ರಿಸ್ಟೋರ್ ಮಾಡಿಕೊಳ್ಳಬಹುದು. ಇದನ್ನು ಉಪಯೋಗಿಸಲು ನೀವೊಂದು ಒಪ್ಪೋ ಖಾತೆಯನ್ನು ತೆರೆಯಬೇಕು. ಸೆಟ್ಟಿಂಗ್ಸ್ ನಲ್ಲಿ ಒ-ಕ್ಲೌಡ್ ಆಯ್ಕೆಯನ್ನು ಕಾಣಬಹುದು.

Best Mobiles in India

English summary
Chinese smartphone company, Oppo, launched the Oppo F1s last week. GizBot already covered the first impressions and hands-on of the smartphone. The Oppo F1s comes with a 16MP front-facing shooter, which we liked.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X