ಆಪಲ್‌ ಕಂಪೆನಿ ಹಿಂದೆ ಬಿದ್ದಿದ್ದು ಯಾಕೆ ?

Posted By:

ಸ್ಟೀವ್‌ ಜಾಬ್ಸ್‌ ನಿಧನವಾದ ಬಳಿಕ ಆಪಲ್‌ ಕಂಪೆನಿ ಮುಖ್ಯಸ್ಥನಾಗಿ ನೇಮಕವಾದ ವ್ಯಕ್ತಿ ಟಿಮ್ ಕುಕ್‌. ಟಿಮ್‌ ಕುಕ್‌ ಮುಖ್ಯಸ್ಥನ ಪಟ್ಟವೇರಿದ ಬಳಿಕ ಆಪಲ್‌ ಕಂಪೆನಿ ಮತ್ತಷ್ಟು ಅಭಿವೃದ್ಧಿಯಾಗಲಿದೆ ಎನ್ನುವ ಆಶಾಭಾವನೆಯನ್ನು ಆಪಲ್‌ ಅಭಿಮಾನಿಗಳು ಇಟ್ಟುಕೊಂಡಿದ್ದರು. ಆದ್ರೆ ಇವರ ನಿರೀಕ್ಷೆಗಳೆಲ್ಲಾ ಹುಸಿಯಾಗತೊಡಗಿದೆ.ಆಪಲ್‌ ಕಂಪೆನಿ ಸ್ಟೀವ ಜಾಬ್ಸ್‌ ಇಲ್ಲದೇ ಮತ್ತಷ್ಟು ಬಡವಾಗುತ್ತಿದೆ.ಬೇರೆ ಕಂಪೆನಿಗಳು ಆಪಲ್‌ ಕಂಪೆನಿಯನ್ನು ಮೀರಿಸುವ ಮಟ್ಟಕ್ಕೆ ಬೆಳೆಯುತ್ತಿದ್ರೆ, ಆಪಲ್ ಮಾತ್ರ ತನ್ನ ಪ್ರಖ್ಯಾತಿಯನ್ನು ಉಳಿಸಲು ಭಾರೀ ಶ್ರಮಪಡುತ್ತಿದೆ ಎನ್ನುವ ಮಾತು ಕೇಳಿ ಬರುತ್ತಿದೆ.

ಒಟ್ಟಿನಲ್ಲಿ ಆಪಲ್‌ನಲ್ಲಿ ಯಾಕೆ ಹೀಗಾಗುತ್ತಿದೆ ಎಂದು ಪ್ರಶ್ನಿಸಿದ್ರೆ, ಆಪಲ್‌ ಅಭಿಮಾನಿಗಳು ಮತ್ತು ಕೆಲವು ಟೆಕ್‌ ಪಂಡಿತರು ಹೇಳುವ ಪ್ರಕಾರ ಆಪಲ್‌ ಹೀಗಾಗುವುದಕ್ಕೆ ಟಿಮ್‌ ಕುಕ್‌ ಇದಕ್ಕೇ ನೇರ ಹೊಣೆ.ಸರಿಯಾಗಿ ಯೋಚಿಸದೇ ಆತುರಾತುರವಾಗಿ ನಿರ್ಧಾರ ಕೈಗೊಂಡಿದ್ದರಿಂದಲೇ ಆಪಲ್ ಈ ರೀತಿ ಆಗುತ್ತಿದೆ ಎಂದು ಹೇಳುತ್ತಿದ್ದಾರೆ.

ಹಾಗಾದ್ರೆ ನಿಜವಾಗಿ ಟಿಮ್‌ ಕುಕ್‌ ನಿರ್ಧಾರ ಕೈಗೊಳ್ಳುವಲ್ಲಿ ತಪ್ಪು ಮಾಡುತ್ತಿದ್ದಾರಾ?ತಪ್ಪು ನಿರ್ಧಾರ ಮಾಡಿದ್ರೆ ಯಾವುದೆಲ್ಲಾ ನಿರ್ಧಾರ ತಪ್ಪಾಗಿದೆ ಎಂದು ನೀವು ಕೇಳಬಹುದು.ಅದಕ್ಕಾಗಿ ಗಿಜ್ಬಾಟ್‌ ಟಿಮ್‌ ಕುಕ್‌ ಮಾಡಿದ 8 ಮುಖ್ಯ ತಪ್ಪುಗಳನ್ನು ತಂದಿದೆ.ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ಲಿಂಕ್‌ : ಫೇಸ್‌ಬುಕ್‌ನಿಂದ ಬರುತ್ತೆ ಹೊಸ ಫೋನ್‌..!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಟಿಮ್‌ ಕುಕ್‌ ಮಾಡಿದ ದೊಡ್ಡ ತಪ್ಪುಗಳು

ಟಿಮ್‌ ಕುಕ್‌ ಮಾಡಿದ ದೊಡ್ಡ ತಪ್ಪುಗಳು

ಆಪಲ್‌ ಮ್ಯಾಪ್‌ ಈ ವರ್ಷದ ಜನವರಿ 28ರಂದು ಬಿಡುಗಡೆಯಾಗಿದೆ. ಆದ್ರೂ ಈ ಮ್ಯಾಪ್‌ ಪರಿಪೂರ್ಣವಾಗಿ ಎಲ್ಲಾ ಸ್ಥಳದ ಮಾಹಿತಿ ತೋರಿಸಿಲ್ಲ.ಈ ಮ್ಯಾಪ್‌ನ ಅಸ್ಪಷ್ಟತೆಯಿಂದಾಗಿ ಜನರಲ್ಲಿ ಗೊದಲ ಉಂಟಾಗುತ್ತಿದೆ. ಆಪಲ್‌ ಮ್ಯಾಪ್‌ನ್ನು ಪರಿಪೂರ್ಣವಾಗಿ ತಯಾರಿಸದೇ ಅವಸರವಾಗಿ ಬಿಡುಗಡೆ ಮಾಡಿದ್ದು ಟಿಮ್‌ ಕುಕ್‌ ಮಾಡಿದ ಮೊದಲನೇ ತಪ್ಪು.

ಟಿಮ್‌ ಕುಕ್‌ ಮಾಡಿದ ದೊಡ್ಡ ತಪ್ಪುಗಳು

ಟಿಮ್‌ ಕುಕ್‌ ಮಾಡಿದ ದೊಡ್ಡ ತಪ್ಪುಗಳು

ರಿಟೇಲ್‌ ಕ್ಷೇತ್ರದಲ್ಲಿ ಅಷ್ಟೇನು ಪರಿಣಿತಿ ಇಲ್ಲದ ಜಾನ್‌ ಬ್ರೌಟ್‌ನ್ನು ಟಿಮ್‌ ಕುಕ್‌ ರಿಟೇಲ್ ವಿಭಾಗದ ಸಿಇಒವಾಗಿ ನೇಮಕ ಮಾಡಿದ್ದು ಎರಡನೇ ತಪ್ಪು.

ಟಿಮ್‌ ಕುಕ್‌ ಮಾಡಿದ ದೊಡ್ಡ ತಪ್ಪುಗಳು

ಟಿಮ್‌ ಕುಕ್‌ ಮಾಡಿದ ದೊಡ್ಡ ತಪ್ಪುಗಳು

ಹಿಂದಿನಿಂದಲೂ ಟೆಕ್ ಜಾಹೀರಾತುಗಳಲ್ಲಿ ಯಾವಾಗ್ಲೂ ಆಪಲ್‌ ಕಂಪೆನಿಯ ಜಾಹೀರಾತು ಕ್ರಿಯೆಟಿವ್ ಆಗಿ ರೂಪುಗೊಂಡಿರುತ್ತದೆ. ಜಾಹೀರಾತಿನಲ್ಲಿ ಉತ್ಪನ್ನಗಳನ್ನು ಸರಳ,ಸ್ಪಷ್ಟ,ಮತ್ತು ಫನ್ನಿಯಾಗಿ ತೋರಿಸುವುದು ಆಪಲ್‌ ವೈಶಿಷ್ಟ. ಆದ್ರೆ ಕಳೆದ ವರ್ಷಗಳಿಂದ ಬರುತ್ತಿರುವ ಜಾಹೀರಾತುಗಳು ಅಷ್ಟೇನು ಉತ್ತಮವಾಗಿಲ್ಲ ಜೊತೆಗೆ ಕುಕ್‌ ಜಾಹೀರಾತಿನಲ್ಲಿ ಆಪಲ್‌ ಉತ್ಪನ್ನಗಳ ಬಗ್ಗೆ ಹೆಚ್ಚು ಗಮನಹರಿಸುತ್ತಾರೆ. ಹೀಗಾಗಿ ಈ ಜಾಹೀರಾತುಗಳು ಜನರನ್ನು ಆಪಲ್‌ ಕಂಪೆನಿಯತ್ತ ಸೆಳೆಯುವಲ್ಲಿ ವಿಫಲವಾಗಿದೆ.

ಟಿಮ್‌ ಕುಕ್‌ ಮಾಡಿದ ದೊಡ್ಡ ತಪ್ಪುಗಳು

ಟಿಮ್‌ ಕುಕ್‌ ಮಾಡಿದ ದೊಡ್ಡ ತಪ್ಪುಗಳು

ಕಳೆದ ವರ್ಷ ಬಿಡುಗಡೆ ಮಾಡಿದ ಐಮ್ಯಾಕ್‌ ನೋಡಲು ಆಕರ್ಷಕವಾಗಿ,ತೆಳುವಾಗಿರುದರಿಂದ ಪ್ರಾರಂಭದಲ್ಲಿ ಎಲ್ಲರಿಗೂ ಐಮ್ಯಾಕ್‌ನ್ನು ಇಷ್ಟವಾಗಿತ್ತು.ಆದ್ರೆ ಬಳಕೆದಾರರು ಆಪಲ್‌ ಕಂಪೆನಿಯ ಮೇಲೆ ಇಟ್ಟ ನಂಬಿಕೆಯನ್ನು ಇದು ಸುಳ್ಳು ಮಾಡಿದೆ. ಉಳಿದ ಡೆಸ್ಕ್‌ಟಾಪ್‌ ಕಂಪ್ಯೂಟರಿಗೆ ಹೋಲಿಸಿದ್ರೆ ಇದರಲ್ಲಿ ಕೆಲಸ ತುಸು ಕಷ್ಟ ಜೊತಗೆ ಜೊತೆಗೆ ತೆಳು ಐ ಮ್ಯಾಕ್‌ನಿಂದ ಯಾವುದೇ ಲಾಭವಿಲ್ಲ ಎನ್ನುವ ಭಾವನೆ ಬಳಕೆದಾರರಿಗೆ ಬಂದಿದೆ.

ಟಿಮ್‌ ಕುಕ್‌ ಮಾಡಿದ ದೊಡ್ಡ ತಪ್ಪುಗಳು

ಟಿಮ್‌ ಕುಕ್‌ ಮಾಡಿದ ದೊಡ್ಡ ತಪ್ಪುಗಳು

ಆಪಲ್‌ನ ಐಕ್ಲೌಡ್‌ ಕಲ್ಪನೆ ತುಂಬಾ ಒಳ್ಳೆಯದು. ಆದ್ರೆ ಈ ಸೇವೆಯಂದಾಗಿ ಬಹಳಷ್ಟು ಗ್ರಾಹಕರಿಗೆ ಸಮಸ್ಯೆ ತಂದಿದೆ. ಕೆಲವೊಮ್ಮೆ ಇದರ ಸಾಫ್ಟ್‌ವೇರ್‌ ತೊಂದರೆಯಿಂದಾಗಿ ಜನ ಬೇಸತ್ತು ಹೋಗಿದ್ದಾರೆ. ಹಾಗಾಗಿ ಐಕ್ಲೌಡ್‌ ಸಮಸ್ಯೆಯನ್ನು ಬಹಳಷ್ಟು ಸಲ ಆಪಲ್‌ ಸರಿ ಪಡಿಸಿದ್ರು ಶಾಶ್ವತವಾಗಿ ಸಮಸ್ಯೆಯನ್ನು ಪರಿಹಾರ ಮಾಡುವಲ್ಲಿ ಆಪಲ್‌ ವಿಫಲವಾಗಿದೆ.

ಟಿಮ್‌ ಕುಕ್‌ ಮಾಡಿದ ದೊಡ್ಡ ತಪ್ಪುಗಳು

ಟಿಮ್‌ ಕುಕ್‌ ಮಾಡಿದ ದೊಡ್ಡ ತಪ್ಪುಗಳು

ಆಪಲ್‌ನ ಸ್ಪೀಚ್ ರೆಕಗ್ನಿಷನ್ ಸಾಫ್ಟ್‌ವೇರ್‌ ಸಿರಿ ಹೇಳುವಷ್ಟು ಉತ್ತಮವಾಗಿಲ್ಲ.ಜನ ಏನು ನಿರೀಕ್ಷೆ ಮಾಡಿದ್ರೂ ಆ ರೀತಿಯಾಗಿ ಸಿರಿ ವಿನ್ಯಾಸಗೊಂಡಿಲ್ಲ.

ಟಿಮ್‌ ಕುಕ್‌ ಮಾಡಿದ ದೊಡ್ಡ ತಪ್ಪುಗಳು

ಟಿಮ್‌ ಕುಕ್‌ ಮಾಡಿದ ದೊಡ್ಡ ತಪ್ಪುಗಳು

ಮಾರುಕಟ್ಟೆ ತಜ್ಞರ ಪ್ರಕಾರ ಯಾವುದೇ ಕಂಪೆನಿ ತನ್ನ ಉತ್ಪನ್ನಗಳನ್ನು ಒಂದೇ ಭಾರಿಗೆ ಬಿಡುಗಡೆ ಮಾಡಬಾರದಂತೆ. ಬಿಡುಗಡೆಯಾದ ಸ್ವಲ್ಪ ಸಮಯ ಬಿಟ್ಟು ಇನ್ನೊಂದು ಉತ್ಪನ್ನಗಳನ್ನು ಬಿಡುಗಡೆ ಮಾಡಿದ್ರೆ ಕಂಪೆನಿ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುದರಿಂದ ಕಂಪೆನಿ ಲಾಭವಾಗುತ್ತಂತೆ. ಆದ್ರೆ ಟಿಮ್‌ ಕುಕ್‌ ಸಿಇಒ ಆದ ಮೇಲೆ ಉತ್ಪನ್ನಗಳ ಬಿಡುಗಡೆ ಮಾಡುವ ಸಮಯವನ್ನು ಸರಿಯಾಗಿ ನಿರ್ಧಾರ ಮಾಡದೇ ಕೈಗೊಳ್ಳುತ್ತಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಆಪಲ್‌ ಕಂಪೆನಿ ಐಪಾಡ್‌ ಮಿನಿ,ಹೊಸ ಐಮ್ಯಾಕ್‌,ಐಪೋಡ್‌ ಹೊಸ ಐಫೋನ್‌ ಕಳೆದ ವರ್ಷದ ಕೊನೆಗೆ ಬಿಡುಗಡೆ ಮಾಡಿದೆ. ಯಾವುದೇ ಕಂಪೆನಿ ಒಂದೇ ಭಾರಿಗೆ ಈ ರೀತಿ ಎಲ್ಲಾ ತನ್ನ ಉತ್ಪನ್ನಗಳನ್ನು ಬಿಡುಗಡೆ ಮಾಡುದಿಲ್ಲ. ಹೀಗಾಗಿ ಇನ್ನು ಮುಂದೆ ಆಪಲ್‌ ತನ್ನ ಹೊಸ ಉತ್ಪನ್ನವನ್ನು ಜೂನ್‌ ತಿಂಗಳಿನಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಅಲ್ಲಿಯವರಗೆ ಯಾವುದೇ ಉತ್ಪನ್ನಗಳನ್ನು ಬಿಡುಗಡೆ ಮಾಡದೇ ಇರುವುದರಿಂದ ಈ ಸಮಯವನ್ನು ಉಳಿದ ಕಂಪೆನಿಗಳು ಹೆಚ್ಚು ಲಾಭ ಪಡೆದುಕೊಳ್ಳುತ್ತವೆ.

ಟಿಮ್‌ ಕುಕ್‌ ಮಾಡಿದ ದೊಡ್ಡ ತಪ್ಪುಗಳು

ಟಿಮ್‌ ಕುಕ್‌ ಮಾಡಿದ ದೊಡ್ಡ ತಪ್ಪುಗಳು

ಇಂದು ಜನ ಹೆಚ್ಚಾಗಿ ದೊಡ್ಡ ಸ್ಕ್ರೀನ್ ಹೊಂದಿರುವ ಸ್ಮಾರ್ಟ್‌ಫೋನ್‌ಗಳನ್ನೇ ಹೆಚ್ಚಾಗಿ ಖರೀದಿಸುತ್ತಾರೆ.ಆದ್ರೆ ಐಫೋನ್5 ಸ್ಕ್ರೀನ್‌ ಉಳಿದ ಪ್ರಖ್ಯಾತ ಕಂಪೆನಿಗಳ ಫೋನ್‌ಗೆ ಹೋಲಿಸಿದ್ರೆ ಸ್ಕ್ರೀನ್‌ ಸೈಜ್‌ ಕಡಿಮೆಯಾಗಿದೆ. ಹೀಗಾಗಿ ಜನ ಹೆಚ್ಚಾಗಿ 5 ಇಂಚಿನ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಿಲು ಮುಂದಾಗುತ್ತಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot