ಎಚ್ಚರ: ಬ್ಲ್ಯೂಟೂತ್‌ನ ಹೆಚ್ಚು ಬಳಕೆಯಿಂದ ತೂಕ ಏರಿಕೆ

By Shwetha
|

ಇಂದಿನ ತಂತ್ರಜ್ಞಾನ ಯುಗದಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ನಾವು ದೈನಂದಿನ ಜೀವನಕ್ಕಾಗಿ ಬಳಸಿಕೊಳ್ಳುತ್ತಿದ್ದೇವೆ. ಹೆಚ್ಚು ಹೆಚ್ಚು ಇಲೆಕ್ಟ್ರಾನಿಕ್ ಡಿವೈಸ್‌ಗಳ ಬಳಕೆಯನ್ನು ನಾವು ಮಾಡುತ್ತಿದ್ದು ಅದರಿಂದ ಅಪಾಯ ಇದೆ ಎಂಬುದನ್ನು ತಿಳಿದಿದ್ದರೂ ಬಳಕೆಯನ್ನು ಮಾತ್ರ ನಿಲ್ಲಿಸುವುದಿಲ್ಲ. ಒಂದು ರೀತಿಯಲ್ಲಿ ಇಂತಹ ಡಿವೈಸ್‌ಗಳ ಅಡಿಯಾಳಾಗಿ ನಾವು ಮಾರ್ಪಟ್ಟಿದ್ದೇವೆ ಎಂಬುದನ್ನು ನಾವು ಅಲ್ಲಗೆಳೆಯುವಂತಿಲ್ಲ.

ಓದಿರಿ: ಈ ವಾಚ್‌ಗಳು ಬರಿಯ ಸಮಯ ನೋಡಲು ಮಾತ್ರವಲ್ಲ!!!

ನಮ್ಮ ಸ್ಮಾರ್ಟ್‌ಫೋನ್ ಬಳಕೆಯಲ್ಲಿ ಬ್ಲ್ಯೂಟೂತ್ ಅನ್ನು ನಾವು ಅಪರಿಮಿತವಾಗಿ ಬಳಸುತ್ತೇವೆ. ಕಿವಿಯಲ್ಲಿ ಸಲೀಸಾಗಿ ಕೂರುವ ಈ ಪುಟ್ಟ ಯಂತ್ರ ಕರೆ ಸ್ವೀಕರಿಸಲು, ಹಾಡು ಕೇಳಲು ಹೀಗೆ ಬಹುವಿಧದಲ್ಲಿ ನಮಗೆ ಉಪಕಾರಿಯಾಗಿದೆ. ಇನ್ನು ದಿನದ 24 ಗಂಟೆಯೂ ಇದರ ಉಪಯೋಗವನ್ನು ಬಹುವಾಗಿ ಮಾಡುವವರು ಇದ್ದಾರೆ. ಬ್ಲ್ಯೂಟೂತ್ ಇದೆ ಎಂದಾದಲ್ಲಿ ಕರೆ ಬಂದಾಗ ಫೋನ್ ಅನ್ನು ಕಿವಿಗೆ ಹಿಡಿಯಬೇಕಾದ ಕಷ್ಟವಿರುವುದಿಲ್ಲ. ಈ ಯಂತ್ರದಲ್ಲಿರುವ ಗುಂಡಿಯನ್ನು ಅದುಮಿ ಫೋನ್‌ನಲ್ಲಿ ನಿರ್ವಹಿಸುವ ಎಲ್ಲಾ ಕೆಲಸಗಳನ್ನು ಮಾಡಬಹುದು.

ಓದಿರಿ: ನಮ್ಮ ಊರು ಬೆಂಗಳೂರಿಗೆ ವಿಶ್ವದಲ್ಲೇ ಮಾನ್ಯತೆ

ಆದರೆ ಅತಿಯಾದರೆ ಅಮೃತ ಕೂಡ ವಿಷವಾಗುತ್ತದೆ ಎಂಬ ನಾಣ್ಣುಡಿಯಂತೆ ಬ್ಲ್ಯೂಟೂತ್‌ನಿಂದ ಉಪಕಾರ ಎಷ್ಟಿದೆಯೋ ಅಷ್ಟೇ ಅಪಾಯ ಕೂಡ ಇದೆ ಎಂಬುದು ನಿಮಗೆ ತಿಳಿದರೆ ನೀವು ಹೌಹಾರುವುದು ಖಂಡಿತ. ಆ ಅಪಾಯ ಹೇಗೆ ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ತಿಳಿಸಿಕೊಡುತ್ತಿದ್ದು ಕೆಳಗಿನ ಸ್ಲೈಡರ್ ಪರಿಶೀಲಿಸಿಕೊಳ್ಳಿ.

ಬ್ಲ್ಯೂಟೂತ್ ಡಿವೈಸ್

ಬ್ಲ್ಯೂಟೂತ್ ಡಿವೈಸ್

ಬ್ಲ್ಯೂಟೂತ್ ಒಂದು ವೈರ್‌ಲೆಸ್ ತಂತ್ರಜ್ಞಾನವಾಗಿದ್ದು ಇದು ಸಣ್ಣ ಪ್ರಮಾಣದ ರೇಡಿಯೊ ಟ್ರಾನ್ಸ್‌ಮಿಶನ್ ಅನ್ನು ಬಳಸಿಕೊಂಡು ಕಡಿಮೆ ಅಂತರದಲ್ಲಿ ಡೇಟಾದ ವಿನಿಮಯವನ್ನು ಮಾಡುತ್ತದೆ. ಬ್ಲ್ಯೂಟೂತ್‌ನಲ್ಲಿ, ರೇಡಿಯೊ ಅಲೆಗಳ ಮೈಕ್ರೋವೇವ್ ಆವರ್ತನಾ ಶ್ರೇಣಿಯನ್ನು ಬಳಸಲಾಗುತ್ತದೆ.

ಬ್ಲ್ಯೂಟೂತ್ ಹೇಗೆ ಕಾರ್ಯನಿರ್ವಹಿಸುತ್ತದೆ

ಬ್ಲ್ಯೂಟೂತ್ ಹೇಗೆ ಕಾರ್ಯನಿರ್ವಹಿಸುತ್ತದೆ

ಇಲೆಕ್ಟ್ರಾನಿಕ್ ಡಿವೈಸ್‌ಗಳ ನಡುವೆ ಸಂವಹನವನ್ನು ಸಕ್ರಿಯಗೊಳಿಸಲು ಬ್ಲ್ಯೂಟೂತ್ ಸಾಧನಗಳು ಬ್ಲ್ಯೂಟೂತ್ ತಂತ್ರಜ್ಞಾನವನ್ನು ಬಳಸುತ್ತದೆ.

ಕಡಿಮೆ ದರ

ಕಡಿಮೆ ದರ

ಬ್ಲ್ಯೂಟೂತ್ ಡಿವೈಸ್ ತಂತ್ರಜ್ಞಾನ ಜಗತ್ತಿನಲ್ಲಿ ಹೆಚ್ಚಿನ ಪ್ರಯೋಜನಗಳನ್ನು ಒದಗಿಸುತ್ತಿವೆ. ಈ ತಂತ್ರಜ್ಞಾನವನ್ನು ಬಳಸುವುದರಿಂದ ನಮಗೆ ಹೆಚ್ಚುವರಿ ಪ್ರಯೋಜನಗಳಿವೆ. ಇದು ಆರ್ಥಿಕವಾಗಿ ಕಡಿಮೆ ದರದಲ್ಲಿ ಲಭ್ಯವಿದ್ದು ನಮಗೆ ಸಂವಹನದ ನಿರಂತತೆಯನ್ನು ಒದಗಿಸುತ್ತದೆ.

ಆರ್ಎಫ್ ರೇಡಿಯೇಶನ್

ಆರ್ಎಫ್ ರೇಡಿಯೇಶನ್

ಸೆಲ್ ಫೋನ್‌ಗಳು ಆರ್ಎಫ್ ರೇಡಿಯೇಶನ್‌ಗಳನ್ನು ಬೀರುವುದರಿಂದ ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಉಂಟುಮಾಡುತ್ತವೆ. ಈ ಆರ್ಎಫ್ ರೇಡಿಯೇಶನ್‌ಗಳ ಹೆಚ್ಚಿನ ಪ್ರಭಾವವು ಬ್ರೈನ್ ಟ್ಯೂಮರ್ ಅಂತೆಯೇ ತಲೆನೋವು, ಶ್ರದ್ಧಾಹೀನತೆ ಮೊದಲಾದ ಸಮಸ್ಯೆಗಳನ್ನು ಇದು ಉಂಟುಮಾಡುತ್ತದೆ.

ಕಿವಿನೋವು

ಕಿವಿನೋವು

ಬ್ಲ್ಯೂಟೂತ್ ಹೆಡ್‌ಸೆಟ್‌ಗಳನ್ನು ಹೆಚ್ಚು ಬಳಸುವುದರಿಂದ ಕಿವಿನೋವು ಕಾಣಿಸಿಕೊಳ್ಳುತ್ತದೆ.

ಬ್ಲ್ಯೂಟೂತ್ ಹೆಚ್ಚು ಬಳಕೆ

ಬ್ಲ್ಯೂಟೂತ್ ಹೆಚ್ಚು ಬಳಕೆ

ಇದು ಬ್ಲ್ಯೂಟೂತ್‌ನ ಹೆಚ್ಚು ಬಳಕೆ ಉಂಟುಮಾಡುವ ಅಪಾಯವಾಗಿದೆ.

ತೂಕ ಏರಿಕೆ

ತೂಕ ಏರಿಕೆ

ಇನ್ನು ಸಂಶೋಧನೆಗಳು ಹೇಳುವಂತೆ ಬ್ಲ್ಯೂಟೂತ್ ಬೀರುವ ರೇಡಿಯೇಶನ್ ದೇಹದಲ್ಲಿ ನೈಸರ್ಗಿಕ ಶಕ್ತಿಯನ್ನು ಉತ್ಪಾದಿಸುತ್ತವೆ. ಇದರಿಂದ ತೂಕ ಏರಿಕೆ ಉಂಟಾಗುತ್ತದೆ.

ಬ್ಲ್ಯೂಟೂತ್‌ನಿಂದ ತಲೆಗೆ ಅಪಾಯ

ಬ್ಲ್ಯೂಟೂತ್‌ನಿಂದ ತಲೆಗೆ ಅಪಾಯ

ಬ್ಲ್ಯೂಟೂತ್‌ಗಳನ್ನು ಬಳಸುವಾಗ ಇದು ನಮ್ಮ ತಲೆಯ ಬಳಿ ಇರುತ್ತದೆ. ಆದ್ದರಿಂದ ಇದನ್ನು ನಿತ್ಯವೂ ಬಳಸುವವರು ಇದು ಹೊರಬಿಡುವ ರೇಡಿಯೇಷನ್‌ಗೆ ಒಳಗಾಗುವುದು ಖಚಿತ.

ಲ್ಯೂಕಿಮಿಯಾ ಅಪಾಯ

ಲ್ಯೂಕಿಮಿಯಾ ಅಪಾಯ

ಲ್ಯೂಕಿಮಿಯಾ ಬ್ಲ್ಯೂಟೂತ್‌ನ ಬಳಕೆಯಿಂದ ಉಂಟುಮಾಡುವ ಇನ್ನೊಂದು ಅಪಾಯವಾಗಿದೆ ಲ್ಯೂಕಿಮಿಯಾ.

ಜನನ ತೊಂದರೆಗಳು

ಜನನ ತೊಂದರೆಗಳು

ಬ್ಲ್ಯೂಟೂತ್ ಹೊರಬಿಡುವ ಮೈಕ್ರೋವೇವ್ ರೇಡಿಯೇಶನ್‌ಗಳು ಸೆಲ್‌ಫೋನ್‌ಗಳು ಮೆದುಳಿನ ಕಾರ್ಯಾಚರಣೆಯ ಮೇಲೆ ದುಷ್ಪರಿಣಾಮವನ್ನುಂಟು ಮಾಡುತ್ತವೆ ಅಂತೆಯೇ ಶಕ್ತಿಯ ನೈಸರ್ಗಿಕ ವರ್ಗಾವಣೆಗೆ ಕಾರಣವಾಗುತ್ತವೆ. ಜನನ ತೊಂದರೆಗಳು, ಗರ್ಭಪಾತ, ಕೂದಲು ಉದುರುವಿಕೆ, ಕುತ್ತಿಗೆ ನೋವು ಮೊದಲಾದ ತೊಂದರೆಗಳನ್ನು ಬ್ಲ್ಯೂಟೂತ್‌ನ ಅತಿ ಬಳಕೆಯಿಂದ ಉಂಟಾಗುವ ಸಮಸ್ಯೆಗಳು. ಇನ್ನು ಈ ಎಲ್ಲಾ ಅಪಾಯಗಳನ್ನು ನೋಡುವಾಗ ಬ್ಲ್ಯೂಟೂತ್ ಬಳಕೆಯಿಂದ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದು ತಿಳಿದುಬರುತ್ತದೆ.

Best Mobiles in India

English summary
In this article we can see the deeffets of bluetooth headsets here are the 10 reasons why we should impose limitations on Bluetooth using.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X