ವಾಟ್ಸಪ್ ಎಪಿಕೆ ಹೊಸ ಆವೃತ್ತಿಯನ್ನು ಇನ್ಸ್ಟಾಲ್ ಮಾಡುವುದು ಹೇಗೆ?

|

ವಾಟ್ಸಪ್ ಬೀಟಾ ಆವೃತ್ತಿಯ ಹೊಸ ವಿಶಿಷ್ಟತೆಗಳು ವಾಟ್ಸಪ್ ಬಳಕೆದಾರರಲಲ್ಲಿ ಆಸಕ್ತಿ ಮೂಡಿಸಿದೆ. ಅಧಿಕೃತವಾಗಿ ಹೊಸ ಆವೃತ್ತಿ ಬಿಡುಗಡೆಗೊಳ್ಳುವುದಕ್ಕೆ ಮೊದಲೇ ಬಹಳಷ್ಟು ಜನರು ಹೊಸ ಆವೃತ್ತಿಯನ್ನು ಪಡೆದುಕೊಳ್ಳಲು ಹವಣಿಸುತ್ತಿದ್ದಾರೆ. ವಾಟ್ಸಪ್ ಎಪಿಕೆ ಕಡತವನ್ನು ಡೌನ್ ಲೋಡ್ ಮಾಡಿಕೊಳ್ಳುವುದೇ ಇದಕ್ಕಿರುವ ದಾರಿ.

ವಾಟ್ಸಪ್ ಎಪಿಕೆ ಹೊಸ ಆವೃತ್ತಿಯನ್ನು ಇನ್ಸ್ಟಾಲ್ ಮಾಡುವುದು ಹೇಗೆ?

ಆದರೆ ಒಂದು ವಿಷಯ. ಎಪಿಕೆ ಕಡತವನ್ನು ಡೌನ್ ಲೋಡ್ ಮಾಡಿಕೊಳ್ಳಬೇಕಾದರೆ ನಂಬುಗೆಯ ವೆಬ್ ಪುಟದಿಂದಷ್ಟೇ ಡೌನ್ ಲೋಡ್ ಮಾಡಿಕೊಳ್ಳಿ. ಇಲ್ಲವಾದರೆ ಯಾವುದಾದರೂ ಮಾಲ್ ವೇರ್ ನಿಮ್ಮ ಮೊಬೈಲನ್ನು ಸೇರುವ ಸಂಭವವಿರುತ್ತದೆ. ಎಪಿಕೆ ಕಡತವೆಂದರೆ ಏನು ಎಂಬ ಪ್ರಶ್ನೆ ನಿಮ್ಮದಾಗಿದ್ದರೆ, ಅದು .ಇ.ಎಕ್ಸ್.ಇ ಕಡತ, ಇದರಿಂದ ನಿಮಗೆ ಸೋರಿಕೆಯಾಗಿರುವ ಹೊಸ ತಂತ್ರಾಂಶಗಳು ಲಭ್ಯವಾಗುತ್ತದೆ ಮತ್ತು ನಿಮ್ಮ ಆ್ಯಂಡ್ರಾಯ್ಡ್ ನ ಅನುಭವವನ್ನು ನಿಮ್ಮ ಇಷ್ಟಾನಿಷ್ಟಕ್ಕೆ ತಕ್ಕಂತೆ ಬದಲಿಸಿಕೊಳ್ಳಬಹುದು.

ಓದಿರಿ: ಅಮೆಜಾನ್‌ ಸೇಲ್: ಫೋನ್‌, ಕ್ಯಾಮೆರಾ, ಹೆಡ್‌ಫೋನ್ಸ್, ಲ್ಯಾಪ್‌ಟಾಪ್‌ಗಳ ಖರೀದಿಯಲ್ಲಿ ಶೇ.70 ರಿಯಾಯ್ತಿ
ಈ ಲೇಖನದಲ್ಲಿ ನಿಮಗೆ ಹೊಸ ವಾಟ್ಸಪ್ ಎಪಿಕೆ ಕಡತವನ್ನು ಡೌನ್ ಲೋಡ್ ಮಾಡಿಕೊಂಡು ಇನ್ಸ್ಟಾಲ್ ಮಾಡಿಕೊಳ್ಳುವುದರ ಬಗ್ಗೆ ಮಾಹಿತಿ ನೀಡಲಾಗುವುದು.

ವಾಟ್ಸಪ್ ಎಪಿಕೆ ಹೊಸ ಆವೃತ್ತಿಯನ್ನು ಇನ್ಸ್ಟಾಲ್ ಮಾಡುವುದು ಹೇಗೆ?

ಹಂತ 1: ನಿಮ್ಮ ನಂಬಿಕೆಯ ವೆಬ್ ಪುಟದಿಂದ ವಾಟ್ಸಪ್ ಎಪಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಿ. ವಾಟ್ಸಪ್ಪಿನ ಅಧಿಕೃತ ವೆಬ್ ಪುಟದಿಂದಲೇ ಡೌನ್ ಲೋಡ್ ಮಾಡಿಕೊಳ್ಳುವುದು ಉತ್ತಮ.

ಹಂತ 2: ಈಗ ನಿಮ್ಮ ಸ್ಮಾರ್ಟ್ ಫೋನನ್ನು ಕಂಪ್ಯೂಟರ್ ಅಥವಾ ಲ್ಯಾಪ್ ಟಾಪಿಗೆ ಸಂಪರ್ಕಿಸಿ. ಆ್ಯಂಡ್ರಾಯ್ಡ್ ಫೋನಿನ ಆಂತರಿಕ ಮೆಮೊರಿ ಅಥವಾ ಎಸ್ ಡಿ ಕಾರ್ಡಿಗೆ ಎಪಿಕೆ ಕಡತವನ್ನು ಕಾಪಿ ಮಾಡಿಕೊಳ್ಳಿ.

ಹಂತ 3: ಇನ್ಸ್ಟಾಲ್ ಮಾಡುವ ಮೊದಲು ನಿಮ್ಮ ಮೊಬೈಲಿನಲ್ಲಿ ಥರ್ಡ್ ಪಾರ್ಟಿ ತಂತ್ರಾಂಶಗಳಿಗೆ ಅನುಮತಿ ಕೊಡುಬೇಕು. ಸೆಟ್ಟಿಂಗ್ಸ್ ಗೆ ಹೋಗಿ > ಸೆಕ್ಯುರಿಟಿ > ಅನ್ ನೋನ್ ಸೋರ್ಸಸ್ ಅನ್ನು ಆಯ್ದುಕೊಳ್ಳಿ.

ಹಂತ 4: ಈಗ ವಾಟ್ಸಪ್ ಎಪಿಕೆಯನ್ನು ಸೇವ್ ಮಾಡಿರುವ ಫೋಲ್ಡರ್ರಿಗೆ ಹೋಗಿ. ಅದರ ಮೇಲೆ ಕ್ಲಿಕ್ಕಿಸಿ ಇನ್ಸ್ಟಾಲ್ ಮಾಡಿ! ಅಷ್ಟೇ!

ಓದಿರಿ: ರಿಲಾಯನ್ಸ್ ಜಿಯೋ ಪ್ರಭಾವ: ಐಡಿಯಾದಿಂದ 9ಜಿಬಿ ಹೆಚ್ಚುವರಿ 4ಜಿ ಡೇಟಾ

ಸೂಚನೆ: ಕಂಪ್ಯೂಟರ್ ಬಳಸದೆಯೇ ನೇರವಾಗಿ ವಾಟ್ಸಪ್ ಎಪಿಕೆಯನ್ನು ನಿಮ್ಮ ಫೋನಿನಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು. ನೇರವಾಗಿ ಡೌನ್ ಲೋಡ್ ಮಾಡಿಕೊಂಡರೆ ಹಂತ 2ರಿಂದ ನಾಲ್ಕನ್ನು ಪಾಲಿಸಿದರೆ ಆಯಿತು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
The exciting new features in the latest WhatsApp beta version has created enough talk among all the WhatsApp users to grab the version ahead of the official public launch. Here is a way, you can do that by downloading the APK.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X