Subscribe to Gizbot

ವಾಟ್ಸಪ್ಪಿನ ಐದು ಸಾಮಾನ್ಯ ತೊಂದರೆಗಳು ಮತ್ತು ಅದಕ್ಕಿರುವ ಪರಿಹಾರಗಳು.

Written By:

ನಿಮಗೆ ಪದೇ ಪದೇ 'ದುರದೃಷ್ಟವಶಾತ್ ವಾಟ್ಸಪ್ ಸ್ಥಗಿತಗೊಂಡಿತು' ಎಂಬ ಸಂದೇಶ ಬರುತ್ತಿದೆಯಾ? ಅಥವಾ ವಾಟ್ಸಪ್ ಇದ್ದಕ್ಕಿದ್ದಂತೆ ಮುಚ್ಚಿಹೋಗುತ್ತಿದೆಯಾ?

ವಾಟ್ಸಪ್ಪಿನ ಐದು ಸಾಮಾನ್ಯ ತೊಂದರೆಗಳು ಮತ್ತು ಅದಕ್ಕಿರುವ ಪರಿಹಾರಗಳು.

ವಾಟ್ಸಪ್ ಕ್ರ್ಯಾಷ್ ಆಗಲು ಹಲವಾರು ಕಾರಣಗಳಿವೆ. ನೀವು ಉಪಯೋಗಿಸುತ್ತಿರುವ ಸ್ಮಾರ್ಟ್ ಫೋನ್ ಯಾವುದೇ ಇರಬಹುದು, ವಾಟ್ಸಪ್ ಮತ್ತೆ ಮೊದಲಿನಂತೆ ಕಾರ್ಯನಿರ್ವಹಿಸಲು ಹಲವು ಸಾಮಾನ್ಯ ಪರಿಹಾರಗಳಿವೆ.

ಓದಿರಿ: ಏರ್‌ಟೆಲ್‌ ಪ್ರೀಪೇಡ್ ಬಳಕೆದಾರರು 1GB ಡಾಟಾ ಬೆಲೆಗೆ 15GB 4G ಡಾಟಾ ಪಡೆಯುವುದು ಹೇಗೆ?

ವಾಟ್ಸಪ್ಪಿನ ಐದು ಸಾಮಾನ್ಯ ತೊಂದರೆಗಳು ಮತ್ತು ಅದಕ್ಕಿರುವ ಪರಿಹಾರಗಳು.

#1. ಮೆಸೇಜುಗಳನ್ನು ಡಿಲೀಟ್ ಮಾಡಿ.

ನಿಮ್ಮ ವಾಟ್ಸಪ್ಪಿನಲ್ಲಿ ವಿಪರೀತವೆನ್ನಿಸುವಷ್ಟು ಮೆಸೇಜುಗಳು ತುಂಬಿಕೊಂಡಿದ್ದರೆ, ಆ್ಯಪ್ ಕ್ರ್ಯಾಷ್ ಆಗುತ್ತಿರುತ್ತದೆ. ಪ್ರಮುಖವಲ್ಲದ ಮೆಸೇಜುಗಳನ್ನು ಮತ್ತು ಮೀಡಿಯಾ ಕಡತಗಳನ್ನು ಡಿಲೀಟ್ ಮಾಡಿ.

ವಾಟ್ಸಪ್ಪಿನ ಐದು ಸಾಮಾನ್ಯ ತೊಂದರೆಗಳು ಮತ್ತು ಅದಕ್ಕಿರುವ ಪರಿಹಾರಗಳು.

ಓದಿರಿ: ರೂ 1,499 ಕ್ಕೆ ಪಿಟ್ರೋನ್ ಸ್ಮಾರ್ಟ್ ವಾಚ್ ಲಾಂಚ್

#2. ಕ್ಯಾಚೆ ಡಾಟಾ ಅಳಿಸಿರಿ.

ದಿನನಿತ್ಯ ವಾಟ್ಸಪ್ಪಿನಲ್ಲಿ ನಡೆಯುವ ಅಷ್ಟೊಂದು ಸಂದೇಶ ವಿನಿಮಯದ ಕಾರಣದಿಂದಾಗಿ ನಿಮ್ಮ ಫೋನಿನ ಮೆಮೊರಿಯಲ್ಲಿ ತುಂಬ ದೊಡ್ಡ ಪ್ರಮಾಣದಲ್ಲಿ ಬ್ಯಾಕ್ ಗ್ರೌಂಡ್ ಡಾಟಾ ಸಂಗ್ರಹವಾಗಿರುತ್ತದೆ. ಇದರಿಂದಾಗಿ ಆ್ಯಪ್ ಅನಿರೀಕ್ಷಿತವಾಗಿ ಕ್ರ್ಯಾಷ್ ಆಗಿಬಿಡಬಹುದು. ಇದನ್ನು ಸರಿಪಡಿಸಲು ಅಪ್ಲಿಕೇಷನ್ ಮ್ಯಾನೇಜರ್ ಗೆ ಹೋಗಿ ಕ್ಯಾಚೆ ಡಾಟಾವನ್ನು ಅಳಿಸಿ ಹಾಕಿ.

ವಾಟ್ಸಪ್ಪಿನ ಐದು ಸಾಮಾನ್ಯ ತೊಂದರೆಗಳು ಮತ್ತು ಅದಕ್ಕಿರುವ ಪರಿಹಾರಗಳು.

#3. ವಾಟ್ಸಪ್ ಅಪ್ ಡೇಟ್ ಮಾಡಿ.

ವಾಟ್ಸಪ್ ತಂತ್ರಾಂಶದ ಅಪ್ ಡೇಟ್ ಆವೃತ್ತಿ ಇದೆಯಾ ನೋಡಿ. ಲಭ್ಯವಿದ್ದರೆ ತಂತ್ರಾಂಶವನ್ನು ಅಪ್ ಡೇಟ್ ಮಾಡಿಕೊಳ್ಳಿ. ಇದರಿಂದ ಕ್ರ್ಯಾಷ್ ಆಗುವುದು ತಪ್ಪುತ್ತದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾಟ್ಸಪ್ಪಿನ ಐದು ಸಾಮಾನ್ಯ ತೊಂದರೆಗಳು ಮತ್ತು ಅದಕ್ಕಿರುವ ಪರಿಹಾರಗಳು.

#4. ಸಿಮ್ ಕಾರ್ಡ್ ಬದಲಾವಣೆ.

ವಾಟ್ಸಪ್ ಒಂದು ಮೊಬೈಲಿನಲ್ಲಿ ಒಂದೇ ಸಿಮ್ ಕಾರ್ಡ್ ಮೇಲೆ ಕೆಲಸ ಮಾಡುತ್ತದೆ ಎಂದು ನಿಮಗೆ ನೆನಪಿರಬೇಕು. ನಿಮ್ಮ ನಂಬರ್ ಬದಲಾಗಿದ್ದರೆ ವಾಟ್ಸಪ್ ಕೆಲಸ ಮಾಡುವುದಿಲ್ಲ. ಹೊಸ ನಂಬರಿಗೆ ಮತ್ತೆ ರಿಜಿಷ್ಟರ್ ಮಾಡಿಕೊಳ್ಳಿ ಅಥವಾ ನಿಮ್ಮ ಹಳೆಯ ಸಿಮ್ ಕಾರ್ಡ್ ಬಳಸಿಕೊಂಡು ವಾಟ್ಸಪ್ ಕೆಲಸ ಮಾಡುವಂತೆ ಮಾಡಿ.

ವಾಟ್ಸಪ್ಪಿನ ಐದು ಸಾಮಾನ್ಯ ತೊಂದರೆಗಳು ಮತ್ತು ಅದಕ್ಕಿರುವ ಪರಿಹಾರಗಳು.

#5. ಆ್ಯಪ್ ಅನ್ನು ಮತ್ತೆ ಇನ್ಸ್ಟಾಲ್ ಮಾಡಿ.

ಮೇಲೆ ಹೇಳಿದ ಪರಿಹಾರಗಳು ಕೆಲಸ ಮಾಡದೇ ಇದ್ದರೆ, ವಾಟ್ಸಪ್ ಹ್ಯಾಂಗ್ ಆಗುವುದನ್ನು ತಪ್ಪಿಸಲಿರುವ ಏಕೈಕ ಪರಿಹಾರ ವಾಟ್ಸಪ್ ಅನ್ನು ಅನ್ ಇನ್ಸ್ಟಾಲ್ ಮಾಡುವುದು ಮತ್ತು ಪುನಃ ಇನ್ಸ್ಟಾಲ್ ಮಾಡುವುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
If your WhatsApp is crashing frequently your smartphone, check out the list of fixes we have given. It will surely help you to troubleshoot the issue.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot