ಕ್ಸಿಯೊಮಿ ರೆಡ್ಮಿ ನೋಟ್ 3: ಬಳಕೆದಾರಿಕೆ ಉತ್ತಮಗೊಳಿಸಲು ಮುಚ್ಚಿಟ್ಟ 10 ತಂತ್ರಗಳು ಮತ್ತು ಸಲಹೆಗಳು

By Prateeksha
|

ನಮಗೆಲ್ಲಾ ಗೊತ್ತಿರುವಂತೆ ಕ್ಸಿಯೊಮಿ ರೆಡ್ಮಿ ನೋಟ್ 3 ಕಂಪನಿಯ ಮೊದಲ ಫಿಂಗರ್‍ಪ್ರಿಂಟ್ ಸ್ಕ್ಯಾನರ್ ಮತ್ತು ಯುನಿಬೊಡಿ ಮೆಟಲ್ ಡಿಜೈನ್ ಹೊಂದಿದ ಸ್ಮಾರ್ಟ್‍ಫೋನ್. ಇದರ ಬೆಲೆ ಬೇರೆ ಫೋನ್ ಗಳಿಗೆ ಸ್ಪರ್ಧೆ ಕೊಡುವಂತಹುದು. ಚೈನಿಸ್ ಸ್ಪರ್ಧಾಳು ಆದಂತಹ ಲೆನೊವೊ, ಒನ್‍ಪ್ಲಸ್, ಲಿಇಕೊ ಗಳೆಲ್ಲಾ ಇದರೊಂದಿಗೆ ಸ್ಪರ್ಧಿಸಲು ಕಷ್ಟಪಡುತ್ತಿವೆ.

ಕ್ಸಿಯೊಮಿ ರೆಡ್ಮಿ ನೋಟ್ 3: ಬಳಕೆದಾರಿಕೆ ಉತ್ತಮಗೊಳಿಸಲು ಮುಚ್ಚಿಟ್ಟ 10 ತಂತ್ರಗಳು

ರೆಡ್ಮಿ ನೋಟ್ 3 ಇಂಟರ್ನಲ್ ಸ್ಟೋರೆಜ್ ಕೆಪಾಸಿಟಿ ಮತ್ತು ರ್ಯಾಮ್ ನ ವಿಷಯದಲ್ಲಿ ಬದಲಾವಣೆಯನ್ನು ಹೊಂದಿದ 2 ವಿಧದ ಫೋನ್‍ತಂದಿದೆ. ಒಂದು 2ಜಿಬಿ ರ್ಯಾಮ್ 16ಜಿಬಿ ಇಂಟರ್ನಲ್ ಸ್ಟೋರೆಜ್ ನೊಂದಿಗೆ 9,999 ರೂ. ಬೆಲೆಗೆ , ಇನ್ನೊಂದು 3ಜಿಬಿ ರ್ಯಾಮ್ 32 ಜಿಬಿ ಇಂಟರ್ನಲ್ ಮೆಮೊರಿಯೊಂದಿಗೆ 11,999 ರೂ ಬೆಲೆಗೆ.

ಓದಿರಿ: 39,999 ರುಪಾಯಿಯ ಹುವಾಯಿ ಪಿ9 ಸ್ಮಾರ್ಟ್ ಫೋನಿನ ಬಗ್ಗೆ ನಿಮಗೆ ತಿಳಿದಿರಬೇಕಾದ ಹತ್ತು ಸಂಗತಿಗಳು

ಒಮ್ಮೆ ನೆನಪಿಸಲು, ಈ ಫೋನ್ ಆಲ್-ಮೆಟಲ್ ಯುನಿಬೊಡಿ ಡಿಜೈನ್ ಮತ್ತು 5.5 ಫುಲ್ ಎಚ್‍ಡಿ(1920*1080ಪಿ) ಐಪಿಎಸ್ ಡಿಸ್ಪ್ಲೆ ಅಪ್‍ಫ್ರಂಟ್ ನೊಂದಿಗೆ ಬರುತ್ತದೆ. ಫೋನಿನೊಳಗೆ ಶಕ್ತಿ ಬಂದಿದೆ ಕ್ವ್ಯಾಲ್‍ಕೊಮ್ ಸ್ನಾಪ್‍ಡ್ರಾಗನ್ 650 ಹೆಕ್ಸಾ ಕೋರ್ ಎಸ್‍ಒಸಿ(ಮೊದಲು ಇದಕ್ಕೆ ಸ್ನಾಪ್‍ಡ್ರಾಗನ್ 618 ಎನ್ನಲಾಗುತ್ತಿತ್ತು)ಬೋಸ್ಟಿಂಗ್ ಆಫ್ 2 ಕೊರ್ಟೆಕ್ಸ್ ಎ72 ಕೋರ್ಸ್ ಕ್ಲೊಕ್ಡ್ ಎಟ್ 1.2 ಗಿಗಾ ಹಡ್ಜ್ ಮತ್ತು 4 ಎ53 ಕೋರ್ಸ್ ಎಟ್ 1.8 ಗಿಗಾ ಹಡ್ಜ್.

ಕ್ಸಿಯೊಮಿ ರೆಡ್ಮಿ ನೋಟ್ 3: ಬಳಕೆದಾರಿಕೆ ಉತ್ತಮಗೊಳಿಸಲು ಮುಚ್ಚಿಟ್ಟ 10 ತಂತ್ರಗಳು

ಈ ಫೋನಿನಲ್ಲಿರುವ ಫಿಂಗರ್‍ಪ್ರಿಂಟ್ ಸೆನ್ಸರ್ ನಿರ್ದಿಷ್ಟತೆಗಾಗಿ, ಸುರಕ್ಷತೆಗಾಗಿ ಮತ್ತು ಕಾರ್ಯಕ್ಷಮತೆಯ ವೇಗ ಹೆಚ್ಚಿಸಲು ಪ್ರಾಬಲ್ಯ ಹೊಂದಿದ ಸ್ಕ್ಯಾನಿಂಗ್ತಂತ್ರಜ್ಞಾನವನ್ನು ಬಳಸುತ್ತದೆ. ಫೋನ್ ಕೇವಲ 0.3 ಸೆಕೆಂಡುಗಳಲ್ಲಿ ಅನ್‍ಲೊಕ್ ಆಗುತ್ತದೆ. ಎಮ್‍ಐಯುಐ 7 ನಲ್ಲಿ ಬಹಳಷ್ಟು ಉಪಯುಕ್ತವಾದ ಫಿಂಗರ್‍ಪ್ರಿಂಟ್ ಸೆನ್ಸರ್ ಫೀಚರ್ ಗಳನ್ನು ಒಳಗೊಂಡಿದೆ. ಆಪ್ಸ್ ಲೊಕ್ ಮಾಡುವುದು, ಹಿಡನ್ ಫೋಲ್ಟರ್ ಗಳನ್ನು ಪಡೆಯುವುದು ಮತ್ತು ಫ್ರಂಟ್ ಅಥವಾ ರೇರ್ ಕ್ಯಾಮೆರಾ ಸೆಲ್ಫಿಯನ್ನು ಕೂಡ ಕೇವಲ ನಿಮ್ಮ ಫಿಂಗರ್‍ಪ್ರಿಂಟ್ ನಿಂದ ಮಾಡುವುದನ್ನು ಒಳಗೊಂಡಿದೆ.

ಓದಿರಿ: ಫ್ಲಿಪ್‌ಕಾರ್ಟ್‌ನಲ್ಲಿ ಲೀಕೊ ಸೂಪರ್ ಫೋನ್ಸ್ ಮೇಲೆ ವಿಶೇಷ ಆಫರ್

ಕ್ಸಿಯೊಮಿ ರೆಡ್ಮಿ ನೋಟ್ 3 ಎಮ್‍ಐಯುಐ7 ಇಂಟರ್ಫೇಸ್ ನಲ್ಲಿ ನಡೆಯುತ್ತದೆ ಮತ್ತು ಕೆಲ ತಂತ್ರಗಳೊಂದಿಗೆ ಬರುತ್ತದೆ ಅದು ಹೆಚ್ಚಾಗಿ ಬಳಕೆದಾರರಿಗೆ ಗೊತ್ತಿರುವುದಿಲ್ಲಾ. ಇಲ್ಲಿವೆ 10 ಉಪಯುಕ್ತ ಸಲಹೆಗಳು ಮತ್ತು ತಂತ್ರಗಳು ನಿಮ್ಮ ಸ್ಮಾರ್ಟ್‍ಫೋನನ್ನು ಪರಿಣಾಮಕಾರಿಯಾಗಿ ಉಪಯೋಗಿಸಲು.
ಹೆಚ್ಚಿನ ವಿಷಯಗಳಿಗಾಗಿ ಗಿಜ್‍ಬೊಟ್ ನೊಂದಿಗೆ ಸಂಪರ್ಕದಲ್ಲಿರಿ.

1.

1.

ನಿಮ್ಮ ಎಸ್‍ಎಮ್‍ಎಸ್ ಇನ್‍ಬೊಕ್ಸ್ ನಲ್ಲಿ ನಿರ್ದಿಷ್ಟ ಸಂದೇಶವನ್ನು ಹುಡುಕುವುದು ಕಷ್ಟದಾಯಕ. ವಿಶೇಷವಾಗಿ ಬಹಳಷ್ಟು ಬ್ಯಾಂಕ್,ಟೆಲಿಕೊಮ್ ಒಪರೇಟರ್ಸ್ , ಈ-ಕೊಮರ್ಸ್ ಡೀಲ್ಸ್ ಮತ್ತು ಇನ್ನಿತರ ಪ್ರಮೊಷನಲ್ ಸಂದೇಶಗಳು ಇದ್ದಾಗ. ಇದನ್ನು ಪರಿಹರಿಸಲು ಎಮ್‍ಐಯುಐ 7 ಒಂದು ತಂತ್ರ ಹೊಂದಿದೆ ಸ್ಮಾರ್ಟ್ ಎಸ್‍ಎಮ್‍ಎಸ್ ಫಿಲ್ಟರ್, ಇದು ಪ್ರಮೊಷನಲ್ ಸಂದೇಶಗಳನ್ನು ಪ್ರತ್ಯೇಕ ಕಡತದಲ್ಲಿ ಸಾಣಿಸಿ ಕೆಲಸ ಸುಲಭ ಮಾಡುತ್ತದೆ. ಇದನ್ನು ಚಾಲ್ತಿ ಮಾಡಲು ಫೋನ್ ನಲ್ಲಿ ಹೀಗೆ ಹೋಗಿ ಸೆಟ್ಟಿಂಗ್ಸ್ >> ಸಿಸ್ಟಮ್ ಆಪ್ಸ್ >> ಮೆಸೆಜಿಂಗ್ ಮತ್ತು ನೋಟಿಫಿಕೇಷನ್ ಗ್ರುಪ್ ಅನ್ನು ಚಾಲನೆಗೊಳಿಸಿ.

2.

2.

ಆನ್ಡ್ರೊಯಿಡ್ ಆಪ್ ಸ್ಟೋರ್ ನಲ್ಲಿ ಬಹಳಷ್ಟು ಕಾಲ್ ರೆಕೊರ್ಡರ್ ಆಪ್ಸ್ ಗಳಿವೆ. ಆದರೆ ಎಮ್‍ಐಯುಐ 7 ಬಿಲ್ಟ್-ಇನ್ ಕಾಲ್ ರೆಕೊರ್ಡರ್ ನೊಂದಿಗೆ ಬರುತ್ತದೆ, ಇದು ತನ್ನಿಂದ ತಾನೆ ಇನ್ ಕಮಿಂಗ್ ಮತ್ತು ಔಟ್ ಗೋಯಿಂಗ್ ಕಾಲ್ ಗಳನ್ನು ರೆಕೊರ್ಡ್ ಮಾಡುತ್ತದೆ. ಹೀಗಾಗಿ ನಿಮಗೆ ಮೂರನೆಯವರಿಂದ ಕಾಲ್ ರೆಕೊರ್ಡರ್ ಡೌನ್‍ಲೋಡ್ ಮಾಡಬೇಕಿಲ್ಲಾ. ನೀವು ಕಾಲ್ ನಲ್ಲಿ ಇರುವಾಗ ನಿಮಗೊಂದು ಕಾಲ್ ರೆಕೊರ್ಡ್ ಮಾಡಲು ಐಕೊನ್ ಬರುತ್ತದೆ ಅದನ್ನು ಒತ್ತಿದರೆ ನಿಮ್ಮ ಸಂವಾದ ರೆಕೊರ್ಡ್ ಆಗುತ್ತದೆ.

3.

3.

ಈ ಫೋನ್ ಎಕ್ಸ್‍ಎಕ್ಸ್‍ಎಲ್ ಟೆಕ್ಸ್ಟ್ ಮೋಡ್ ನೊಂದಿಗೆ ಬರುತ್ತದೆ. ಇದನ್ನು ಚಾಲ್ತಿಗೊಳಿಸಲು ಹೀಗೆ ಹೋಗಿ ಸೆಟ್ಟಿಂಗ್ಸ್ >> ಟೆಕ್ಸ್ಟ್ ಸೈಜ್ ಮತ್ತು ನಿಮಗೆ ಬೇಕಾದ ಗಾತ್ರವನ್ನು ಆಯ್ಕೆಮಾಡಿ.

4.

4.

5.5.ಇಂಚಿನ ಡಿಸ್ಪ್ಲೆ ಹೊಂದಿದ್ದರೂ ಕೂಡ ಸುಲಭವಾಗಿ ಕೈಯಲ್ಲಿ ಬರುತ್ತದೆ. ನಿಮಗೆ ಈ ಫೋನ್ ಒಂದು ಕೈಯಲ್ಲಿ ಹಿಡಿಯಲು ದೊಡ್ಡದೆಂದು ಅನಿಸಿದರೆ ಒನ್ ಹ್ಯಾಂಡೆಡ್ ಮೋಡ್ ಚಾಲ್ತಿಗೊಳಿಸಿ. ಅದಕ್ಕಾಗಿ ಸೆಟ್ಟಿಂಗ್ಸ್ >> ಎಡಿಷ್ನಲ್ ಸೆಟ್ಟಿಂಗ್ಸ್ >> ಒನ್ - ಹ್ಯಾಂಡೆಡ್ ಮೋಡ್

5.

5.

ನೋಟಿಫಿಕೇಷನ್ ಪ್ಯಾನೆಲ್ ವೈ-ಫೈ, ಬ್ಲೂಟೂತ್, ಡಾಟಾ ಆನ್/ಆಫ್, ಸ್ಕ್ರೀನ್ ರೊಟೆಷನ್ ಮತ್ತು ಇನ್ನಿತರ ಹಲವು ಶೊರ್ಟ್‍ಕಟ್ಸ್ ಇರುವ ಫೀಚರ್ ಹೊಂದಿದೆ. ನೀವು ನಿಮ್ಮ ಅವಶ್ಯಕತೆಗೆ ತಕ್ಕಂತೆ ಕ್ವಿಕ್ ಸೆಟ್ಟಿಂಗ್ಸ್ ಐಕೊನನ್ನು ಹೊಂದಿಸಬಹುದು. ಇದನ್ನು ಚಾಲ್ತಿಗೊಳಿಸಲು ಸೆಟ್ಟಿಂಗ್ಸ್ >> ನೋಟಿಫಿಕೇಷನ್ >> ಟೊಗಲ್ ಪೊಜಿಷನ್ಸ್ ಮತ್ತು ನಿಮ್ಮ ಅನುಕೂಲತೆಗೆ ತಕ್ಕಂತೆ ಐಕೊನ್ಸ್ ಗಳನ್ನು ಡ್ರಾಗ್ ಮಾಡಿ.

6.

6.

ಕ್ಸಿಯೊಮಿ ರೆಡ್ಮಿ ನೋಟ್ 3 ಎಮ್‍ಐಯುಐ7 ಬಿಲ್ಟ್-ಇನ್ ಆಪ್ ಲೊಕ್ ಜೊತೆ ಬರುತ್ತದೆ. ಬಳಕೆದಾರರು ಸೆಟ್ಟಿಂಗ್ಸ್ >> ಎಡಿಷ್ನಲ್ ಸೆಟ್ಟಿಂಗ್ಸ್ >>ಲೊಕ್ ಇಂಡಿವಿಜುವಲ್ ಆಪ್ಸ್ >> ಮತ್ತು ಸ್ಕ್ರೀನ್ ನಲ್ಲಿ ಕೊಟ್ಟ ಇನ್ಸ್ಟ್ರಕ್ಷನ್ ಪಾಲಿಸಿ. ಒಮ್ಮೆ ನೀವು ಸೆಕ್ಯುರಿಟಿ ಪ್ಯಾಟರ್ನ್ ಸೆಟ್ ಮಾಡಿದರೆ ನಂತರ ಯಾವುದೆಲ್ಲಾ ಆಪ್ಸ್ ಗಳನ್ನು ಸುರಕ್ಷಿತಗೊಳಿಸಬೇಕೆಂದಿದ್ದಿರೋ ಆ ಎಲ್ಲಾ ಆಪ್‍ಗಳನ್ನು ಆಯ್ಕೆ ಮಾಡಿ.

7.

7.

ಮೇಲೆ ತಿಳಿಸಿದಂತೆ, ನೋಟ್ 3 ಕಂಪನಿಯ ಮೊದಲ ಫಿಂಗರ್‍ಪ್ರಿಂಟ್ ಸೆನ್ಸರ್ ಹೊಂದಿದ ಸ್ಮಾರ್ಟ್‍ಫೋನ್. ಇದನ್ನು ಫೋನಿನ ಹಿಂಭಾಗದಲ್ಲಿ ಕ್ಯಾಮೆರಾ ಕೆಳಗೆ ಜೋಡಿಸಲಾಗಿದೆ. ಇದನ್ನು ಸೆಟಪ್ ಮಾಡುವುದು ಸುಲಭ ಮತ್ತು ಬೇಗನೆ ಬೆರಳನ್ನು ಗುರುತಿಸುತ್ತದೆ ಹಾಗು ಅರ್ಧಸೆಕೆಂಡಿನಲ್ಲಿ ಫೋನನ್ನು ಅನ್‍ಲೊಕ್ ಮಾಡುತ್ತದೆ. ಹೀಗೆ ಮಾಡಿ ಸೆಟ್ಟಿಂಗ್ಸ್ >> ಲೊಕ್ ಸ್ಕ್ರೀನ್ & ಫಿಂಗರ್‍ಪ್ರಿಂಟ್ ರೀಡರ್ >>ಪಾಸ್ವರ್ಡ್ ಆಂಡ್ ಫಿಂಗರ್‍ಪ್ರಿಂಟ್ >> ಆಡ್ ಫಿಂಗರ್‍ಪ್ರಿಂಟ್ ಮತ್ತು ಸ್ಕ್ರೀನ್ ನಲ್ಲಿ ಕೊಟ್ಟ ಇನ್ಸ್ಟ್ರಕ್ಷನ್ ಪಾಲಿಸಿ.ಬಹಳಷ್ಟು ಉಪಯುಕ್ತ ಫಿಂಗರ್‍ಪ್ರಿಂಟ್ ಸೆನ್ಸರ್ ಫೀಚರ್‍ಗಳು ಎಮ್‍ಐಯುಐ7 ನಲ್ಲಿ ಒಳಗೊಂಡಿವೆ ಲೊಕ್ ಆಪ್ಸ್, ಆಕ್ಸೆಸ್ ಹಿಡನ್ ಫೋಲ್ಡರ್ಸ್ ಮತ್ತು ಮತ್ತು ಫ್ರಂಟ್ ಅಥವಾ ರೇರ್ ಕ್ಯಾಮೆರಾ ಸೆಲ್ಫಿಯನ್ನು ಕೂಡ ಕೇವಲ ನಿಮ್ಮ ಫಿಂಗರ್‍ಪ್ರಿಂಟ್ ನಿಂದ ಮಾಡುವುದು ಕೂಡ ಇದೆ.

8.

8.

ಗೆಸ್ಟ್ ಮೋಡ್ ಫೀಚರ್ ನಿಂದಾಗಿ ರೆಡ್ಮಿ ಫೋನ್ ಇನ್ನೂ ಹೆಚ್ಚು ಸುರಕ್ಷಿತವಾಗಿದೆ ಇದು ನಿಮ್ಮ ಖಾಸಗಿ ಮಾಹಿತಿಯನ್ನು ಮರೆಮಾಡುತ್ತದೆ. ಇದನ್ನು ಚಾಲ್ತಿ ಗೊಳಿಸಲು ಹೀಗೆ ಮಾಡಿ ಸೆಟ್ಟಿಂಗ್ಸ್ >> ಎಡಿಷ್ನಲ್ ಸೆಟ್ಟಿಂಗ್ಸ್ >> ಪ್ರೈವಸಿ >> ಪ್ರೈವಸಿ ಪ್ರೊಟೆಕ್ಷನ್ ಮತ್ತು ನಂತರ ಗೆಸ್ಟ್ ಮೋಡ್ ಆಯ್ಕೆ ಮಾಡಿ.

9.

9.

ಎಮ್‍ಐಯುಐ7 ನಲ್ಲಿ ಬೇಬಿ ಆಲ್ಬಮ್ ಫೀಚರ್ ಇದೆ, ಅದು ಗ್ಯಾಲರಿಯಲ್ಲಿರುವ ಎಲ್ಲಾ ಮಗುವಿನ ಫೋಟೊಗಳನ್ನು ಕಂಡು ಹಿಡಿದು ತನ್ನಷ್ಟಕ್ಕೆ ತಾನೆ ಎಲ್ಲವನ್ನು ಒಟ್ಟುಗೂಡಿಸುತ್ತದೆ.

10.

10.

ಇದು ಬಳಕೆದಾರರಿಗೆ ಸಹಾಯವಾಗಲು ರಾತ್ರಿಯ ಸಮಯದಲ್ಲಿ ಹಳದಿ ಬಣ್ಣದ ಡಿಸ್ಪ್ಲೆ ಆಗಿ ತಿರುಗುತ್ತದೆ. ಇದನ್ನು ಚಾಲ್ತಿ ಮಾಡಲು ಸೆಟ್ಟಿಂಗ್ಸ್ >> ಡಿಸ್ಪ್ಲೆ >> ರೀಡಿಂಗ್ ಮೋಡ್ ಗೆ ಹೋಗಿ.

Best Mobiles in India

English summary
The Xiaomi Redmi Note 3 runs on popular MIUI 7 interface and comes with some tricks that are usually unknown by many users. Here are 10 useful tips and tricks to use your smartphone effectively.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X