ಆನ್‌ಲೈನ್‌ ಶಾಪಿಂಗ್‌ನಲ್ಲಿ ಎಚ್ಚರವಹಿಸಲೇಬೇಕಾದ 5 ವಂಚನೆಗಳು

By Suneel
|

ಆನ್‌ಲೈನ್‌ ಶಾಪಿಂಗ್‌ ಇಂದು ವಸ್ತುಗಳನ್ನು ಖರೀದಿಸುವ ವಿಧಾನವನ್ನು ಮಹತ್ತರವಾಗಿ ಬದಲಾವಣೆ ಮಾಡಿದೆ. ಮಾರುಕಟ್ಟೆಗೆ, ಶಾಪಿಂಗ್ ಮಾಲ್‌ಗಳಿಗೆ ನೆಡೆದಾಡುತ್ತಾ ಹೋಗಿ ದಣಿದು ವಸ್ತುಗಳನ್ನು ಹುಡುಕಿ ಖರೀದಿಸುವ ಕಾಲ ಬದಲಾಗಿದೆ. ಈಗ ಕುಳಿತಲ್ಲೇ ನಮಗೆ ಬೇಕಾದ ವಸ್ತುಗಳನ್ನು ನಾವು ತರಿಸಿಕೊಳ್ಳಬಹುದು. ವಿಶೇಷವಾಗಿ ಕೆಲುವು ಪ್ರಾಡಕ್ಟ್‌ಗಳು ಆಫರ್‌ ಮತ್ತು ಡಿಸ್ಕೌಂಟ್‌ಗಳಲ್ಲಿಯೂ ಆನ್‌ಲೈನ್‌ ಶಾಪಿಂಗ್‌ನಲ್ಲಿ ಲಭ್ಯ.

ಆನ್‌ಲೈನ್‌ ಶಾಪಿಂಗ್ ಮಾಡುವವರು ಇಂದು ನಾವು ತಿಳಿಸುವ ಆನ್‌ಲೈನ್‌ ವಂಚನೆಗಳನ್ನು ತಿಳಿಯಲೇಬೇಕು. ಇತ್ತೀಚೆಗೆ ಆನ್‌ಲೈನ್‌ನಲ್ಲಿ ಹಲವು ವಂಚನೆ ಲಿಂಕ್‌ಗಳು ಶಾಪಿಂಗ್‌ನಲ್ಲಿ ಅಟ್ಯಾಚ್‌ ಆಗಿರುತ್ತವೆ. ಅಂತಹ ಲಿಂಕ್‌ಗಳ ಬಗ್ಗೆ ಆನ್‌ಲೈನ್‌ ಖರೀದಿ ಮಾಡುವವರು ಎಚ್ಚರ ವಹಿಸಬೇಕಾಗಿದೆ. ಅಂತಹ ಲಿಂಕ್‌ಗಳು ಯಾವುವು, ಆನ್‌ಲೈನ್ ವಂಚನೆಗಳು ಯಾವುವು ಎಂಬುದನ್ನು ನಾವು ಇಂದು ನಿಮಗೆ ತಿಳಿಸುತ್ತೇವೆ. ಹೇಗೆ ಎಚ್ಚರವಹಿಸಬೇಕು ಎಂದು ಕೆಳಗಿನ ಸ್ಲೈಡರ್‌ಗಳನ್ನು ಓದಿ ತಿಳಿಯಿರಿ.

ಹಬ್ಬದ ಸೀಸನ್‌ನಲ್ಲಿ ಆನ್‌ಲೈನ್‌ ಶಾಪಿಂಗ್ ಮೊದಲು ಓದಿಕೊಳ್ಳಬೇಕಾದ ಮಾಹಿತಿಗಳು!

 ಗ್ರೇ ಮಾರುಕಟ್ಟೆ ಪ್ರಾಡಕ್ಟ್‌ಗಳ ಬಗ್ಗೆ ಎಚ್ಚರದಿಂದಿರಿ

ಗ್ರೇ ಮಾರುಕಟ್ಟೆ ಪ್ರಾಡಕ್ಟ್‌ಗಳ ಬಗ್ಗೆ ಎಚ್ಚರದಿಂದಿರಿ

ಅಂದಹಾಗೆ ಎಲ್ಲಾ ಆನ್‌ಲೈನ್‌ ರೀಟೇಲರ್‌ಗಳು ನಕಲ್ಲಿ(ಗ್ರೇ) ಮಾರುಕಟ್ಟೆ ಉತ್ಪನ್ನಗಳನ್ನು ಮಾರಾಟ ಮಾಡುವುದಿಲ್ಲ. ಆದರೆ ನಕಲಿ ಮಾರುಕಟ್ಟೆ ಉತ್ಪನ್ನಗಳನ್ನು ಕೆಲವು ಆನ್‌ಲೈನ್‌ ಶಾಪ್‌ಗಳು ಮಾರಾಟ ಮಾಡುತ್ತವೆ. ಈ ಪ್ರಾಡಕ್ಟ್‌ಗಳಿಗೆ ವಾರಂಟಿ ಇರುವುದಿಲ್ಲ.

 ವಾರಂಟಿ ವಂಚನೆಗಳು

ವಾರಂಟಿ ವಂಚನೆಗಳು

ಕೆಲವು ಆನ್‌ಲೈನ್‌ ಪ್ರಾಡಕ್ಟ್‌ಗಳು ಮೂರನೇ ವ್ಯಕ್ತಿ ವಾರಂಟಿಯನ್ನು ಹೊಂದಿರುತ್ತವೆ. ಇಂತಹ ಪ್ರಾಡಕ್ಟ್‌ಗಳನ್ನು ಖರೀದಿಸದೇ ಉತ್ಪನ್ನ ತಯಾರಕರ ವಾರಂಟಿ ಚೆಕ್‌ ಮಾಡಿ ಆನ್‌ಲೈನ್‌ ಖರೀದಿ ಮಾಡಿ.

ಹಿಡೆನ್ ಬೆಲೆ ಚೆಕ್‌ ಮಾಡಿ

ಹಿಡೆನ್ ಬೆಲೆ ಚೆಕ್‌ ಮಾಡಿ

ಆನ್‌ಲೈನ್ ಖರೀದಿಯಲ್ಲಿ ಹೆಚ್ಚಿನ ವಂಚನೆಗಳು ಖರೀದಿ ಬೆಲೆಯಲ್ಲಿ ಜರುಗುತ್ತವೆ. ಆದ್ದರಿಂದ ನೀವು ಆನ್‌ಲೈನ್‌ ಖರೀದಿ ಮಾಡುವ ಸಂದರ್ಭದಲ್ಲಿ ಪ್ರಾಡಕ್ಟ್‌ ಕೊನೆಯ ಕಡಿತ ಬೆಲೆಯನ್ನು ಸಹ ಚೆಕ್‌ ಮಾಡಿ, ನಂತರ ಆರ್ಡರ್‌ ಮಾಡಿ.

ಡಿಲಿವರಿ ಚಾರ್ಜ್‌ ಬಗ್ಗೆ ತಿಳಿಯಿರಿ

ಡಿಲಿವರಿ ಚಾರ್ಜ್‌ ಬಗ್ಗೆ ತಿಳಿಯಿರಿ

ಆನ್‌ಲೈನ್‌ ರೀಟೇಲರ್‌ಗಳು ತುಂಬಾ ಸ್ಮಾರ್ಟ್‌. ಯಾಕಂದ್ರೆ ಹೆಚ್ಚಿನ ಡಿಸ್ಕೌಂಟ್ ನೀಡುವುದಾಗಿ ಹೇಳಿ, ಡಿಲಿವರಿ ಚಾರ್ಜ್‌ ಅನ್ನು ಹಾಕಿರುತ್ತಾರೆ. ನಂತರ ನೀವು ಲೆಕ್ಕಹಾಕಿದರೆ ಪ್ರಾಡಕ್ಟ್‌ನ ಬೆಲೆಗಿಂತ ಹೆಚ್ಚಿನ ಬೆಲೆಯನ್ನೇ ನೀಡಿರುತ್ತೀರಿ.

ಸೆಕ್ಯುರಿಟಿ ಹಿನ್ನೆಲೆ

ಸೆಕ್ಯುರಿಟಿ ಹಿನ್ನೆಲೆ

ಆನ್‌ಲೈನ್‌ ಶಾಪಿಂಗ್‌ನ ಇನ್ನೊಂದು ವಂಚನೆ ಎಂದರೆ ಸೆಕ್ಯುರಿಟಿ ಹಿನ್ನೆಲೆ. ಹೆಚ್ಚಿನ ಆನ್‌ಲೈನ್‌ ರೀಟೇಲರ್‌ಗಳು ಸೇಪ್‌ ಅಂಡ್‌ ಸರ್ಟಿಫೈಡ್‌ ಸೈಟ್‌ ಎಂದು ಲೇಬಲ್ ನೀಡಿರುತ್ತಾರೆ. ಆದರೆ ಎಲ್ಲವೂ ಸಹ ಸುರಕ್ಷಿತ ಸೈಟ್‌ಗಳಲ್ಲ. ಆದ್ದರಿಂದ ಆನ್‌ಲೈನ್‌ ಖರೀದಿಗೆ ಮುನ್ನ ವೆಬ್‌ಸೈಟ್‌ ಹ್ಯಾಕರ್ ಮುಕ್ತವೇ ಎಂದು ಪರೀಕ್ಷಿಸಿ.

Best Mobiles in India

English summary
5 Scams of Online Shopping You Should Look for. To know more visit kananda.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X