ದ ಜಂಗಲ್ ಬುಕ್‌ನಲ್ಲಿ ವಿಶುವಲ್ ಇಫೆಕ್ಟ್ ಕೈಚಳಕ
ವಾಲ್ಟ್ ಡಿಸ್ನಿ ಪಿಕ್ಚರ್ಸ್ ಅವರ ದ ಜಂಗಲ್ ಬುಕ್ ಮೂವಿ ವಿಶ್ವದೆಲ್ಲೆಡೆ ಯಶಸ್ವಿ ಪ್ರದರ್ಶನವನ್ನು ಕಾಣುವುದರ ಮೂಲಕ ಪ್ರೇಕ್ಷಕರ ಮನವನ್ನು ಗೆಲ್ಲುತ್ತಿದೆ. ಇದರ ಟ್ರೈಲರ್‌ನಲ್ಲೇ ಚಿತ್ರ ಎಷ್ಟೊಂದು ಅಭೂತಪೂರ್ವವಾದುದು ಎಂಬ ಮಾಹಿತಿ ನಿಮಗೆ ದೊರಕಲಿದ್ದು ಕಂಪ್ಯೂಟರ್ ನಿರ್ಮಿತ ದೃಶ್ಯಾವಳಿಗಳು ನಿಜಕ್ಕೂ ಮೈನವಿರೇಳಿಸುವಂತಿದೆ. ವಿಶುವಲ್ ಇಫೆಕ್ಟ್ಸ್ ಕಾರ್ಯತಂತ್ರವಂತೂ ವಿಸ್ಮಯವಾಗಿದ್ದು 10 ರ ಹರೆಯದ ನಟ ನೀಲ್ ಸೇಥಿ ತಮ್ಮ ಪ್ರಥಮ ಸ್ಕ್ರೀನ್ ಪಾತ್ರವನ್ನು ನಿರ್ವಹಿಸಿದ್ದಾರೆ.
ಓದಿರಿ: ಟೈಮ್ ತಿಳಿಯಲು ವ್ಯಕ್ತಿಯ ನೆರಳು ಬಳಸುವ ""ಶಾಡೊಪ್ಲೇ ಗಡಿಯಾರ"
ಹುಡುಗನ ಪಾತ್ರಕ್ಕಾಗಿ ನಿರ್ದೇಶಕ ಜಾನ್ ಫೇವ್ರು 2,000 ಮಕ್ಕಳ ಆಡಿಶನ್ ಮಾಡಿದ್ದು ಇದರಲ್ಲಿ 2,000 ನೆಯವನೇ ನೀಲ್ ಸೇಥಿಯಾಗಿದ್ದಾನೆ. ಫೆವ್ರೊ ಎಂಬುವವರು ದ ಜಂಗಲ್ ಬುಕ್‌ನ ವಿಶುವಲ್ ಇಫೆಕ್ಟ್ ಮೇಲ್ವಿಚಾರಕರಾಗಿದ್ದು ಬ್ರ್ಯಾಂಡ್ ನ್ಯೂ ಲೇಸರ್ ಪ್ರೊಜೆಕ್ಟ್ ಸಿಸ್ಟಮ್ ಅನ್ನು 3 ಡಿಯೊಂದಿಗೆ ಚಿತ್ರದಲ್ಲಿ ಅಳವಡಿಸಲಾಗಿದೆ. ಫೆವ್ರೊ ಹೇಳುವಂತೆ ಒಮ್ಮೆ ನೀವು ಚಿತ್ರವನ್ನು ನೋಡಿದೆ ಸಾಕು 3ಡಿಯಲ್ಲಿ ದೈನಂದಿನ ಪ್ರೊಜೆಕ್ಶನ್ ಸಿಸ್ಟಮ್ ಅನ್ನು ನೋಡುವುದು ಕಷ್ಟಕರ ಎಂದಿದ್ದಾರೆ. ಈ ಚಿತ್ರದಲ್ಲಿ ಈ ಭಾಗವು ಹೆಚ್ಚು ಆಸಕ್ತಿದಾಯಕವಾಗಿದ್ದು ಕಂಪ್ಯೂಟರ್ ರಚಿತ ಚಿತ್ರಗಳು ನಿಜಕ್ಕೂ ಅರ್ಥಗರ್ಭಿತವಾದುದು. ಫೋಟೋವನ್ನು ನೈಜವಾಗಿ ಚಿತ್ರದಲ್ಲಿ ನಾವು ತಯಾರಿಸಿದ್ದು ಚಿತ್ರದಲ್ಲಿರುವ ಪ್ರಾಣಿಗಳು ಅವುಗಳ ಚಲನೆ ಅವುಗಳು ಮಾತನಾಡುವುದು ಇದು ಕೃತಕ ಎಂಬುದು ಅರಿವಾಗುವುದೇ ಇಲ್ಲ ಎಂದಾಗಿದೆ.
ಓದಿರಿ: ಈ ಸುಂದರಿ ರೊಬೋಟ್ ಎಂದರೆ ನೀವು ಖಂಡಿತ ನಂಬಲಾರಿರಿ!!
ಬನ್ನಿ ಇಂದಿನ ಲೇಖನದಲ್ಲಿ ದ ಜಂಗಲ್ ಬುಕ್ ಕುರಿತಾದ ಇನ್ನಷ್ಟು ರೋಚಕ ಅಂಶಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನೀಡುತ್ತಿದ್ದೇವೆ.

#1
ದ ಜಂಗಲ್ ಬುಕ್‌ನ ವಿಶುವಲ್ ಇಫೆಕ್ಟ್ಸ್ ಅನ್ನು ನಿರ್ವಹಿಸಿರುವಂತಹದ್ದು ವಿಎಫ್‌ಎಕ್ಸ್ ಹೌಸ್ ಆದ ಎಮ್‌ಪಿಸಿಯಾಗಿದೆ. ಇಲ್ಲಿನ ಕ್ರಿಯಾತ್ಮಕ ಕಲಾವಿದರು ಕಾಡಿನ ಬೇರೆ ಬೇರೆ ಪ್ರಾಣಿಗಳನ್ನು ನಿರ್ಮಿಸಿದ್ದಾರೆ.

#2
ಚಿತ್ರದಲ್ಲಿ ಕಂಪ್ಯೂಟರ್ ಅನ್ನು ಪ್ರಮುಖವಾಗಿ ಬಳಸಿದ್ದರೂ ಅದು ಸಿನಿಮಾದಲ್ಲಿ ಬಿಂಬಿತವಾಗಿಲ್ಲ. ಎಲ್ಲವೂ ನೈಜವಾಗಿಯೇ ಮೂಡಿಬಂದಿದೆ. ಪ್ರಾಣಿಗಳ ಧ್ವನಿಯನ್ನು ಕೂಡ ಚಿತ್ರದಲ್ಲಿ ವಿಶಿಷ್ಟವಾಗಿ ರೂಪಿಸಲಾಗಿದೆ.

#3
ಜಾನ್ ಫೆವ್ರುನ 3 ಡಿ ಚಿತ್ರವಾಗಿರುವ ದ ಜಂಗಲ್ ಬುಕ್ ಸಾಹಸಿ ಚಿತ್ರವಾಗಿದ್ದು ಭಾರತದ ಬಾಕ್ಸ್ ಆಫೀಸ್‌ನಲ್ಲಿ ರೂ 45.83 ಕೋಟಿಗಿಂತಲೂ ಅಧಿಕ ಗಳಿಕೆಯನ್ನು ಮೂರು ದಿನಗಳಲ್ಲಿ ಮಾಡಿದೆ.

#4
ಭಾರತದಲ್ಲಿ ಚಿತ್ರವು ನಾಲ್ಕು ಭಾಷೆಗಳಲ್ಲಿ ಬಿಡುಗಡೆಗೊಂಡಿದ್ದು (ಇಂಗ್ಲೀಷ್, ಹಿಂದಿ, ತಮಿಳು ಮತ್ತು ತೆಲುಗು) 1894 ರಲ್ಲಿ ಪ್ರಕಟವಾಗಿರುವ ರುಡ್‌ಯರ್ಡ್ ಕಿಪ್ಲಿಂಗ್ಸ್‌ನ ಟೈಮ್‌ಲೆಸ್ ಕ್ಲಾಸಿಕ್ ಆಧುನಿಕ ಅವತರಣಿಕೆಯಾಗಿದೆ.

#5
ಭಾರತೀಯ ಅಮೇರಿಕನ್ ನಟ ನೀಲ್ ಸೇಥಿ ಚಿತ್ರದಲ್ಲಿ ಮೊಗ್ಲಿ ಪಾತ್ರವನ್ನು ನಿರ್ವಹಿಸಿದ್ದು, ಬಿಲ್ ಮೂರೆ ಬಾಲುವಾಗಿ, ಬಿನ್ ಕಿಂಗ್ಸಲೆ ಬಗೀರನಾಗಿ ಚಿತ್ರದಲ್ಲಿ ಅಭಿನಯಿಸಿದ್ದಾರೆ.

#6
ಚಿತ್ರವು ಹೆಚ್ಚು ರೋಚಕವಾಗಿದ್ದು ಪ್ರೇಕ್ಷಕರಿಗೆ ಮನರಂಜನೆಯನ್ನು ನೀಡುವುದರ ಜೊತೆಗೆ ತಾಂತ್ರಿಕ ಮೆರುಗಿನ ವಿಶೇಷತೆಯನ್ನು ಉಣಬಡಿಸಲಿದೆ.

#7
ಹುಡುಗನ ಪಾತ್ರಕ್ಕಾಗಿ ನಿರ್ದೇಶಕ ಜಾನ್ ಫೇವ್ರು 2,000 ಮಕ್ಕಳ ಆಡಿಶನ್ ಮಾಡಿದ್ದು ಇದರಲ್ಲಿ 2,000 ನೆಯವನೇ ನೀಲ್ ಸೇಥಿಯಾಗಿದ್ದಾನೆ.

#8
ಚಿತ್ರ ನೋಡುವಾಗ ನಿಮ್ಮ ಉಸಿರನ್ನು ಬಿಗಿಹಿಡಿದಿಡುವಂತಹ ಅನುಭವ ನಿಮ್ಮಲ್ಲಿ ಉಂಟಾಗುವುದು ಖಂಡಿತ ಎಂಬುದು ಫೆವ್ರೊ ಮಾತಾಗಿದೆ.

#9
ಚಿತ್ರದಲ್ಲಿ ಕಂಡುಬರುವ ಪ್ರಾಣಿಗಳನ್ನು ಸಾಧ್ಯವಾದಷ್ಟು ನೈಜವಾಗಿಯೇ ತೆರೆಯಲ್ಲಿ ರೂಪಿಸಲಾಗಿದೆ ಅಂತೆಯೇ ಈ ಪ್ರಾಣಿಗಳಿಗೆ ಧ್ವನಿಯನ್ನು ನೀಡಿರುವವರು ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿದಷ್ಟು ಅಭೂತಪೂರ್ಣವಾಗಿ ಅವರುಗಳ ನಟನೆ ಕಂಡುಬಂದಿದೆ.

#10
ಪ್ರಾಣಿಗಳ ಧ್ವನಿಗಳಲ್ಲೇ ನೀವು ಕಲಾಕಾರರನ್ನು ನೋಡಬಹುದಾದ ವಿಶಿಷ್ಟ ತಂತ್ರಗಾರಿಕೆಯನ್ನು ಹೆಣೆದು ಚಿತ್ರವನ್ನು ತಯಾರು ಮಾಡಲಾಗಿದೆ ಎಂಬುದು ಫೆವ್ರೊ ಅಭಿಮತವಾಗಿದೆ.

#11
ನಿರ್ದೇಶಕರು ತಮ್ಮ ಮನದಲ್ಲಿ ಕಂಡುಕೊಂಡ ಚಿತ್ರಗಳಿಗೆ ಜೀವ ನೀಡಿ ಅದನ್ನು ಚಿತ್ರದಲ್ಲಿ ತಂದಿದ್ದಾರೆ. ಅಂತಹ ಕುಶಲತೆ ಚಿತ್ರದ ಪ್ರತೀ ಭಾಗದಲ್ಲೂ ಎದ್ದು ಕಾಣುತ್ತಿದೆ.

#12
ಅಂತೂ ದ ಜಂಗಲ್ ಬುಕ್ ಚಿತ್ರ ರಸಿಕರಿಗೆ ಉತ್ತಮ ಮನರಂಜನೆ ಜೊತೆಗೆ ವಿಶಿಷ್ಟ ಕಥಾಹಂದರದ ಹಬ್ಬವನ್ನೇ ಉಣಬಡಿಸಲಿದ್ದು ಚಿತ್ರ ನೋಡಿದ ಪ್ರೇಕ್ಷಕ ನಿರಾಶರಾಗುವ ಪ್ರಮೇಯವೇ ಇಲ್ಲ.

#13
ಕಂಪ್ಯೂಟರ್ ರಚಿತ ಚಿತ್ರಗಳು ನಿಜಕ್ಕೂ ಅರ್ಥಗರ್ಭಿತವಾದುದು. ಫೋಟೋವನ್ನು ನೈಜವಾಗಿ ಚಿತ್ರದಲ್ಲಿ ನಾವು ತಯಾರಿಸಿದ್ದು ಚಿತ್ರದಲ್ಲಿರುವ ಪ್ರಾಣಿಗಳು ಅವುಗಳ ಚಲನೆ ಅವುಗಳು ಮಾತನಾಡುವುದು ಇದು ಕೃತಕ ಎಂಬುದು ಅರಿವಾಗುವುದೇ ಇಲ್ಲ

#14
ಭಾರತದಲ್ಲಿ ಚಿತ್ರವು ತನ್ನ ಆರಂಭ ದಿನದಂದೇ 10.9 ಕೋಟಿ ಗಳಿಕೆಯನ್ನು ಗಳಿಸಿದ್ದು ಶನಿವಾರ 13.51 ಕೋಟಿಯನ್ನು ಗಳಿಸಿ ಶರವೇಗದಲ್ಲಿ ಮುನ್ನುಗ್ಗುತ್ತಿದೆ.

#15
ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಎರಡನೇ ಅತಿ ಹಿಟ್ ಹಾಲಿವುಡ್ ಚಿತ್ರವಾಗಿ ದ ಜಂಗಲ್ ಬುಕ್ ಅನಾವರಣಗೊಂಡಿದ್ದು ಭಾರತೀಯರಿಗೂ ಚಿತ್ರ ಖಂಡಿತ ಮನರಂಜನೆಯನ್ನು ನೀಡಿದೆ ಎಂಬುದನ್ನು ಅಲ್ಲಗೆಳೆಯುವಂತಿಲ್ಲ.


Click it and Unblock the Notifications








