Subscribe to Gizbot

ನಾಸಾ ದಿಂದ ನೀವು ನೋಡಲೇಬೇಕಾದ ಲೈವ್ ವಿಡಿಯೋ ಪ್ರಸಾರ..! ಯಾಕೆ ಅಂದ್ರಾ..?

Written By:

ನಾಸಾ ನಾಳೆ ಹೊಸದೊಂದು ಕಾರ್ಯಕ್ಕೆ ಸಾಕ್ಷಿಯಾಗಲಿದೆ. ಇದೇ ಮೊದಲ ಬಾರಿಗೆ ರಾಕೆಟ್ ಲಾಂಚ್ ಮಾಡುವುದನ್ನು ಪ್ರಪಂಚದ ಮೂಲೆ ಮೂಲೆಯಲ್ಲಿ ಇರುವವರು ನೋಡಲಿ ಎನ್ನುವ ಸಲುವಾಗಿ ಯೂಟುಬ್ ಚಾನಲ್‌ನಲ್ಲಿ 360 ಡಿಗ್ರಿ ಲೈವ್ ವಿಡಿಯೋ ಪ್ರಸಾರವನ್ನು ಮಾಡಲಿದೆ. ಇದು ಸ್ಯಾಟಿಲೈಟ್ ಉಡಾವಣೆಯನ್ನು ಲೈವ್ ಮಾಡುತ್ತಿರುವ ಮೊದಲ ವಿಡಿಯೋ ವಾಗಿದೆ.

ನಾಸಾ ದಿಂದ ನೀವು ನೋಡಲೇಬೇಕಾದ ಲೈವ್ ವಿಡಿಯೋ ಪ್ರಸಾರ..! ಯಾಕೆ ಅಂದ್ರಾ..?

ಓದಿರಿ: ಜಿಯೋ DTH ಮೂರು ತಿಂಗಳಲ್ಲ, 6 ತಿಂಗಳು ಫ್ರೀ...!!

ನಾಳೆ ಮುಂಜಾನೆ 11:11ಕ್ಕೆ ಲೈವ್ ಆರಂಭವಾಗಲಿದೆ ಎನ್ನಲಾಗಿದೆ. ಇದು ನೋಡುಗರಿಗೆ ಹೊಸದೊಂದು ಅನುಭವನ್ನು ನೀಡಲಿದೆ. ನಾಸಾ ತನ್ನ ಅಲ್ಟಾಸ್ 5 ರಾಕೆಟ್ ಉಡಾವಣೆಯನ್ನು ಸ್ಮರಣಿಯವಾಗಿಸುವ ಸಲುವಾಗಿ ಈ ಲೈವ್ ಬ್ರಾಡ್ ಕಾಸ್ಟ್ ಮಾಡಲಿದೆ ಎಂದು ತಿಳಿದು ಬಂದಿದೆ.

ಈ ಹಿಂದೆ ಇಸ್ರೋ ರಾಕೆಟ್ ಲಾಂಚ್ ಮಾಡುವ ವೇಳೆಯಲ್ಲಿ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿತ್ತು. ಅದರೆ ಲೈವ್ ವಿಡಿಯೋ ಪ್ರಸಾರವನ್ನು ಮಾಡಿರಲಿಲ್ಲ. ರಾಕೆಟ್ ಕಕ್ಷೆಯನ್ನು ತಲುಪಿದ ನಂತರದಲ್ಲಿ ವಿಡಿಯೋ ಬಿಡುಗಡೆ ಮಾಡಲಾಗಿತ್ತು. ಇದು ಹೊಸ ಅನುಭವನ್ನು ನೀಡಿತ್ತು. ವಿಡಿಯೋ ಸಹ ಹೆಚ್ಚು ಸದ್ದು ಮಾಡಿತ್ತು.

ನಾಸಾ ದಿಂದ ನೀವು ನೋಡಲೇಬೇಕಾದ ಲೈವ್ ವಿಡಿಯೋ ಪ್ರಸಾರ..! ಯಾಕೆ ಅಂದ್ರಾ..?

ಓದಿರಿ: (ವಿಡಿಯೋ) ಹೇಗಿದೆ ಗೊತ್ತಾ ಜಿಯೋ DTH..? ಹೇಗೆ ಕಾರ್ಯನಿರ್ವಹಿಸುತ್ತೆ..? ಇಲ್ಲಿದೇ ಸಂಪೂರ್ಣ ವಿವರ

ಸದ್ಯ ನಾಸಾ ಸಹ ಅದೇ ಹಾದಿಯಲ್ಲಿ ಸಾಗುತ್ತಿದ್ದು, ಲ್ಟಾಸ್ 5 ರಾಕೆಟ್ ಉಡಾವಣೆಯನ್ನು ಲೈವ್ ಪ್ರಸಾರ ಮಾಡಲಿದೆ. ಟೆಕ್ನಾಲಿಜಿಯು ಬೆಳೆಯುತ್ತಿದ್ದಂತೆ ಉಪಯೋಗಗಳು ಹೆಚ್ಚಾಗುತ್ತಿದ್ದು, ಲೈವ್ ವಿಡಿಯೋ ಟೆಕ್ನಾಲಜಿಯ ಮೂಲಕ ಹೊಸದೊಂದು ಅಧ್ಯಾಯಕ್ಕೆ ನಾಸಾ ಮುನ್ನುಡಿ ಹಾಡಿದೆ.

Read more about:
English summary
NASA broadcast an unprecedented 360-degree view of the launch via YouTube, in a debut of new video technology. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot