ಮಗು 'ಆಬ್ರಿ' ಫೋಟೋಶೂಟ್ ಹಿಂದೆ ಅಡಗಿದೆ ದುರಂತ ಕಥೆ

By Shwetha
|

ಆಬ್ರಿ ಹೆಸರಿನ ಮೂರು ವಾರಗಳ ಮುದ್ದಾದ ಮಗುವಿನ ಫೋಟೋಗ್ರಾಫ್ ಈಗ ಇಂಟರ್ನೆಟ್‌ನಲ್ಲಿ ಸದ್ದು ಮಾಡುತ್ತಿದೆ. ತನ್ನ ತಂದೆಯ ಮೋಟಾರ್ ಸೈಕಲ್ ಗೇರ್‌ನಲ್ಲಿ ಈ ಕಂದಮ್ಮ ಮಲಗಿ ನಿದ್ದೆಯಲ್ಲೇ ಮುಗುಳ್ನಗುತ್ತಿದೆ. ಮಗುವಿನ ಮುಗ್ಧತೆ, ಫೋಟೋ ತೆಗೆದ ರೀತಿ ಎಂತಹವರಿಗೂ ಕ್ಷಣ ಕಾಲ ಆನಂದವನ್ನು ಉಂಟುಮಾಡುತ್ತದೆ.

ಇಂಟರ್ನೆಟ್ ಪ್ರೇಮಿಗಳನ್ನು ಬೆರಗುಗೊಳಿಸುವ ಈ ಚಿತ್ರದ ಹಿಂದೆ ವಿಷಾದನೀಯ ಕಥೆಯೊಂದು ಅಡಗಿದೆ. ಅದಾಗ್ಯೂ ಈ ಚಿತ್ರ ಇಂಟರ್ನೆಟ್‌ನಲ್ಲಿ 3 ಮಿಲಿಯನ್ ಜನರನ್ನು ತಲುಪಿದ್ದು ಇದು 78 ಸಾವಿರ ಸಲ ಶೇರ್ ಆಗಿದೆ ಮತ್ತು ಒಂದು ವಾರದೊಳಗೆ 349 ಸಾವಿರ ಜನಕ್ಕೂ ಹೆಚ್ಚಿನವರು ಇದನ್ನು ಮೆಚ್ಚಿಕೊಂಡಿದ್ದಾರೆ. ಮಗುವಿನ ತಂದೆಯ ಮೋಟಾರ್ ಸೈಕಲ್ ಗೇರ್ ಅನ್ನು ಬಳಸಿಕೊಂಡು ತೆಗೆದ ಫೋಟೋದಲ್ಲಿರುವ ದುಃಖವೆಂದರೆ ಕಂದಮ್ಮನ ತಂದೆ ತೀರಿಕೊಂಡಿರುವುದು. ಡೇನಿಯಲ್ ಫೆರರ್ ಆಬ್ರಿಯ ತಂದೆ ತನ್ನ ಸ್ನೇಹಿತನಿಂದಲೇ ಗುಂಡಿಗೆ ಬಲಿಯಾದ ನತದೃಷ್ಟ. ಅದೂ ಮಗುವಿನ ಜನನದ ಕೆಲವು ತಿಂಗಳುಗಳ ಮೊದಲು.

ಓದಿರಿ: ಐದು ಮಕ್ಕಳೊಂದಿಗೆ ತಾಯಿಯ ಫೋಟೋಶೂಟ್: ಈಗ ವೈರಲ್

ಸುರಕ್ಷತಾ ಗೇರ್ ಅನ್ನು ಡೇನಿಯಲ್ ನಿತ್ಯವೂ ಧರಿಸುತ್ತಿದ್ದು ತಂದೆಯ ನೆನಪಿಗಾಗಿ ಆಬ್ರಿಯ ತಾಯಿ ಈ ಫೋಟೋಶೂಟ್ ಅನ್ನು ನಡೆಸಿದ್ದಾರೆ. ಡೇನಿಯಲ್ ಇದೇ ರೀತಿ ಫೋಟೋ ತೆಗೆದುಕೊಳ್ಳಬೇಕೆಂಬ ಆಸೆಯನ್ನಿಟ್ಟುಕೊಂಡಿದ್ದು ಈ ಆಸೆಯನ್ನು ಆತನ ಪತ್ನಿ ಇದೀಗ ಪೂರೈಸಿದ್ದಾಳೆ .ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಈ ಫೋಟೋದ ಕುರಿತು ಇನ್ನಷ್ಟು ಮಾಹಿತಿ ಮತ್ತು ಮಗುವಿನ ಬೇರೆ ಬೇರೆ ಭಂಗಿಯುಳ್ಳ ಫೋಟೋಗಳನ್ನು ನಿಮಗೆ ತೋರಿಸಲಿದ್ದೇವೆ.

ಚಿತ್ರಕೃಪೆ: Kim Stone Photography

#1

#1

ಡೇನಿಯಲ್ ಪತ್ನಿಯು ತನ್ನ ನೆರೆಯವರಾದ ಫೋಟೋಗ್ರಾಫರ್ ಕಿಮ್ ಸ್ಟೋನ್ ಅನ್ನು ಭೇಟಿಯಾಗಿ ತಮ್ಮ ಆಸೆಯನ್ನು ಮುಂದಿಟ್ಟಿದ್ದಾರೆ. ತಂದೆಯ ಮೋಟಾರ್ ಸೈಕಲ್ ಗೇರ್ ಅನ್ನು ಬಳಸಿ ಫೋಟೋ ತೆಗೆಯುವ ಆಸೆಯನ್ನು ಆಕೆ ನನ್ನ ಮುಂದಿಟ್ಟಿದ್ದರು. ನನ್ನಿಂದ ಎಷ್ಟು ಉತ್ತಮವಾಗಿ ಇದನ್ನು ಮಾಡಲು ಸಾಧ್ಯವೋ ಹಾಗೆಯೇ ನಾನು ಅದನ್ನು ಮಾಡಿದ್ದೇನೆ ಎಂಬುದು ಕಿಮ್ ನುಡಿಯಾಗಿದೆ.

#2

#2

ಮಗುವಿನ ಫೋಟೋಶೂಟ್ ಮುಗಿದ ಒಡನೆಯೇ, ಸ್ಟೋನ್ ಈ ಚಿತ್ರವನ್ನು ಸಾಮಾಜಿಕ ತಾಣದಲ್ಲಿ ಹಂಚಿದ್ದು ಊಹೆಗೂ ಮೀರಿ ಪ್ರತಿಕ್ರಿಯೆಯನ್ನು ಪಡೆದುಕೊಂಡಿದ್ದಾರೆ.

#3

#3

ಆಬ್ರಿಯ ತಾಯಿ ಕ್ಯಾಥರಿನ್ ವಿಲಿಯಮ್ಸ್, ಫೋಟೋವನ್ನು ನೋಡಿ ಗದ್ಗದಿತರಾಗಿದ್ದು, ತನ್ನ ಮಗುವಿಗಾಗಿ ಈ ಪುಟವನ್ನು ನಾನು ಸ್ಕ್ರೀನ್ ಶಾಟ್ ತೆಗೆದು ಇರಿಸಲಿದ್ದೇನೆ. ಆಕೆ ದೊಡ್ಡದಾದ ನಂತರ ಆಕೆಗಾಗಿ ಪ್ರೀತಿಯನ್ನು ಅರುಹಿದ ಅಸಂಖ್ಯ ಜನರನ್ನು ನಾನು ತೋರಿಸಲಿದ್ದು ಆಕೆಯ ತಂದೆ ತಾಯಿ ಮಗಳಿಗಾಗಿ ಏನೆಲ್ಲಾ ಮಾಡಿದ್ದರು ಎಂಬದನ್ನು ಕಂಡು ಆಕೆ ಖುಷಿಪಡಬೇಕು ಎಂದಿದ್ದಾರೆ.

#4

#4

'ಗೊ ಫಂಡ್ ಮಿ ಪೇಜ್' ಮಗುವಿನ ಭವಿಷ್ಯಕ್ಕಾಗಿ ಡೊನೇಶನ್‌ಗಳನ್ನು ಸ್ವೀಕರಿಸುತ್ತಿದ್ದು ಆಕೆಯ ಮುಂದಿನ ಜೀವನಕ್ಕಾಗಿ ಇದನ್ನು ಬಳಸಿಕೊಳ್ಳಲಾಗುವುದು ಎಂದಾಗಿದೆ.

#5

#5

ಅಬ್ರಿಯ ತಂದೆಯ ಬೈಕ್ ಪ್ರೀತಿ ಎಷ್ಟಿತ್ತೆಂದರೆ ತಮ್ಮ ಸಂರಕ್ಷಕ ಗೇರ್ ಅನ್ನು ಬಿಟ್ಟು ಆತ ಎಲ್ಲಿಗೂ ಹೋಗುತ್ತಿರಲಿಲ್ಲವಂತೆ. ತಾನು ಸುರಕ್ಷಿತನಾಗಿದ್ದೇನೆ ಎಂಬುದು ಇದರಿಂದ ಆತನಿಗೆ ಮನದಟ್ಟಾಗುತ್ತಿತ್ತು.

#6

#6

ಮಗುವಿನ ವಿಷಯದಲ್ಲೂ ಇದೇ ಕಾಳಜಿಯನ್ನು ಆತ ಹೊಂದಿದ್ದ. ಆದರೆ ದುರಾದೃಷ್ಟವಶಾತ್ ಆತನಿಗೆ ತನ್ನ ಆಸೆಯನ್ನು ಈಡೇರಿಸಿಕೊಳ್ಳಲಾಗಲಿಲ್ಲ.

#7

#7

ಮಕ್ಕಳು ನಿದ್ರೆಯಲ್ಲಿರುವಾಗ ದೇವತೆಗಳು ಅವರೊಂದಿಗೆ ಮಾತನಾಡುತ್ತಾರೆ ಎಂದು ಹೇಳುವಂತೆ ಮಗುವಿನ ಮುಗ್ಧ ನಗು ನಮ್ಮ ಮನದಲ್ಲಿ ಸಂತಸದ ಅಲೆಯನ್ನು ವಾತ್ಸಲ್ಯದ ಅಲೆಯನ್ನು ಉಕ್ಕಿಸುವಂತಿದೆ.

Best Mobiles in India

English summary
This photograph of a three-week old baby girl Aubrey, lying between her father's motorcycle gear and smiling in her sleep, is breaking the internet.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X