Subscribe to Gizbot

ಮೊದಲನೇ ಮಹಾಯುದ್ಧ ಸಂದರ್ಭದ ಕಪ್ಪು ಬಿಳುಪು ಫೋಟೋಗಳು

Written By:

ಮೊದಲನೇ ಮಹಾಯುದ್ಧ 1914 ರಿಂದ 1918 ರ ಅವಧಿಯಲ್ಲಿ ನಡೆಯಿತು. ಇತಿಹಾಸ ಪುಸ್ತಕ ಓದಿರುವ ಎಲ್ಲರಿಗೂ ಇದು ಗೊತ್ತೇ ಇದೆ. ಯುದ್ಧ ನಡೆದ ಸಂದರ್ಭ ಗೊತ್ತಿರಬಹುದು. ಆದ್ರೆ ಬಹುಸಂಖ್ಯಾತರಿಗೆ ತಿಳಿದಿರದ ಒಂದು ವಿಷಯವಿದೆ.

ಸುಮಾರು 16 ದಶಲಕ್ಷ ಪ್ರಾಣಿಗಳು ಮೊದಲನೇ ಮಹಾಯುದ್ಧಕ್ಕಾಗಿ ಸೇವೆ ಸಲ್ಲಿಸಿವೆ. ಅವುಗಳಲ್ಲಿ ಕುದುರೆಗಳು, ಕತ್ತೆಗಳು, ಹೇಸರಗತ್ತೆಗಳು ಮತ್ತು ಒಂಟೆಗಳು ಪ್ರಾಥಮಿಕವಾಗಿ ಮನುಷ್ಯರಿಗೆ ಆಹಾರ ಸಾಮಾಗ್ರಿಗಳು, ನೀರು, ವೈದ್ಯಕೀಯ ಸರಬರಾಜನ್ನು ನೀಡಿವೆ.

100 ವರ್ಷಗಳಲ್ಲಿ ಮನುಕುಲ ಅಂತ್ಯ; ಸ್ಟೀಫನ್‌ ಹಾಕಿಂಗ್‌

ಶ್ವಾನಗಳು(ನಾಯಿಗಳು), ಪಾರಿವಾಳಗಳು ಸಂದೇಶ ರವಾನೆಗಳಿಗಾಗಿ ಬಳಕೆಯಾಗುತ್ತಿದ್ದವು. ಶ್ವಾನಗಳನ್ನು ವಿಷಕಾರಿ ಗ್ಯಾಸ್‌ ಅನಿಲವನ್ನು ಪತ್ತೆ ಹಚ್ಚಲು ಮತ್ತು ಬೆಕ್ಕುಗಳನ್ನು ಕಂದಕಗಳಲ್ಲಿ ಇಲಿಗಳನ್ನು ಬೇಟೆ ಆಡಲು ಬಳಸುತ್ತಿದ್ದರು.

ಈ ಇತಿಹಾಸದ ಯಾವುದೇ ಘಟನೆಗಳನ್ನ ಕೇಳಿದರು ಸಹ ಒಂದು ಕಲ್ಪನೆ ಪ್ರತಿಯೊಬ್ಬರಲ್ಲೂ ಉಂಟಾಗುತ್ತದೆ. ಹಾಗೆ ಅಟ್‌ ಲೀಸ್ಟ್ ಆ ಫೋಟೋಗಳನ್ನಾದ್ರೂ ನೋಡಬೇಕು ಎಂದು ಹಲವರಿಗೆ ಅನಿಸುತ್ತದೆ. ಮೊದಲನೇ ಮಹಾಯುದ್ಧದಲ್ಲಿ ಪ್ರಾಣಿಗಳು ಸಹ ಪ್ರಮುಖ ಪಾತ್ರವನ್ನು ನಿರ್ವಹಿಸಿವೆ. ಟೆಕ್ನಾಲಜಿ ಹೆಚ್ಚು ಅಭಿವೃದ್ದಿಯಾಗದ ಯುದ್ಧಕಾಲದಲ್ಲಿ ಸಂದೇಶ ಹೇಗೆ ರವಾನೆಯಾಗುತ್ತಿತ್ತು, ಪ್ರಾಣಿಗಳು ಹೇಗೆ ಯುದ್ಧದಲ್ಲಿ ತೊಡಗಿಕೊಂಡಿದ್ದವು, ಹಾಗೂ ಮೊದಲನೇ ಮಹಾಯುದ್ಧದ ಸಂದರ್ಭದಲ್ಲಿ ಸೆರೆಹಿಡಿಯಲಾದ ಅಪರೂಪದ ಕಪ್ಪು ಬಿಳುಪು ಫೋಟೋಗಳನ್ನು ಮುಂದೆ ನೋಡಿ.
ಚಿತ್ರ ಕೃಪೆ:TheAtlantic

ನೀವು ನೋಡಿರದ ಪ್ರಖ್ಯಾತ ಹಳೆಯ ಸೆಲೆಬ್ರಿಟಿಗಳ ಅಪರೂಪದ ಫೋಟೋಗಳು!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜರ್ಮನ್‌ ಮೆಸೇಂಜರ್ ಶ್ವಾನ

1

ಚಿತ್ರದಲ್ಲಿ ಕಾಣುತ್ತಿರುವ ಜರ್ಮನ್‌ ಮೆಸೇಂಜರ್‌ ಶ್ವಾನ(ನಾಯಿ) 1918 ರಲ್ಲಿ ತನ್ನ ಕಾಲನ್ನು ಕಳೆದುಕೊಂಡಿತು. ಇದನ್ನು ರಕ್ಷಕರು ಸ್ಕೌಟ್ಸ್‌ ಮತ್ತು ಸಂದೇಶ ರವಾನೆಗಾಗಿ ಬಳಸುತ್ತಿದ್ದರು. ಶ್ವಾನವನ್ನು ಚಿತ್ರದಲ್ಲಿ ನೋಡಿ.

ಕುದುರೆ

2

ಜರ್ಮನ್‌ ಸೈನಿಕರು ಕುದುರೆಗೆ ರಷ್ಯಾದ ಮ್ಯಾಕ್ಸಿಮ್‌ ಎಂ1910 ಮಷಿನ್‌ ಗನ್‌ ಅನ್ನು ಅಳವಡಿಸಿರುವುದು.

ಬ್ರಿಟಿಷ್ ಶ್ವಾನ

3

ಯುದ್ಧ ಸಂದರ್ಭದಲ್ಲಿ ಶ್ವಾನವನ್ನು ವೈದ್ಯಕೀಯ ಸೇವೆಗಾಗಿ ಬಳಸುತ್ತಿದ್ದರು ಎಂಬುದಕ್ಕೆ ಸಾಕ್ಷಿ ಇದು. ಬ್ರಿಟಿಷ್‌ ಶ್ವಾನ ಹೊತ್ತಿರುವ ಕಿಟ್‌ನಿಂದ ಬ್ಯಾಂಡೇಜ್‌ ಅನ್ನು ಹೊರತೆಗೆಯುತ್ತಿರುವ ದೃಶ್ಯ ಕಂಡಿದ್ದು 1915 ರಲ್ಲಿ.

ಪಾರಿವಾಳ

4

ಜರ್ಮನ್‌ನ 'ಜೂಲಿಯಸ್‌ ನ್ಯೂಬ್ರೌನರ್‌' ಯುದ್ಧ ಸಂದರ್ಭದಲ್ಲಿ ಸುತ್ತಲ ಪ್ರದೇಶದ ಚಿತ್ರ ಸೆರೆಹಿಡಿಯಲು ಪಾರಿವಾಳಕ್ಕೆ ಸಣ್ಣ ಕ್ಯಾಮೆರಾವನ್ನು ವ್ಯವಸ್ಥೆಗೊಳಿಸಿರುವ ಫೋಟೋ. ಆ ಸಂದರ್ಭದಲ್ಲಿ ಟೈಮರ್‌ ಮೆಕಾನಿಷಮ್‌ ಶಟರ್‌ ಕ್ಲಿಕ್‌ ಮಾಡಲು ಉಪಯೋಗವಾಗುತ್ತಿತ್ತು.

ಹೇಸರಗತ್ತೆ ರಫ್ತು

5

ಈಜಿಪ್ಟ್‌ನ ಅಲೆಕ್ಸಾಂಡ್ರಿಯಾ ಪ್ರದೇಶದಲ್ಲಿ 1915 ರಲ್ಲಿ ಹೇಸರಗತ್ತೆಯನ್ನು ಮತ್ತು ಕುದುರೆಯನ್ನು ಸಮುದ್ರಯಾನದ ಮೂಲಕ ರಫ್ತು ಮಾಡುತ್ತಿರುವ ದೃಶ್ಯ.

ಸಾರ್ಜೆಂಟ್‌ ಸ್ಟಬ್ಬಿ

6

ಫೋಟೋದಲ್ಲಿರುವ ಶ್ವಾನದ ಹೆಸರು 'ಸಾರ್ಜೆಂಟ್‌ ಸ್ಟಬ್ಬಿ'. ಬೋಸ್ಟನ್‌ ಬುಲ್‌ ಟೆರಿಯರ್‌, ಹೆಚ್ಚು ಡೆಕೋರೇಟ್‌ ಆದ ಯುದ್ಧ ನಾಯಿ. ಯುದ್ಧ ಸಮಯದಲ್ಲಿ ಬಡ್ತಿ ಪಡೆದ ಕೇವಲ ಒಂದೇ ಶ್ವಾನವೆಂದರೆ ಇದು.

ಫ್ರಾನ್ಸ್‌ನಲ್ಲಿ ವಿಶ್ರಾಂತಿ ಪಡೆಯುತ್ತಿರುವ ಕುದುರೆಗಳು

7

ರಾಯಲ್‌ ಸ್ಕಾಟ್ಸ್ ಗ್ರೇಸ್ ಅಶ್ವದಳದ ಸದಸ್ಯರು ಮತ್ತು ಅವರ ಕುದುರೆಗಳು ಫ್ರಾನ್ಸ್‌ ರಸ್ತೆ ಬದಿಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ದೃಶ್ಯ.

ತರಬೇತಿ

8

ಸಲೋನಿಕಾದಿಂದ ಮುಂಭಾಗದಲ್ಲಿ ಟರ್ಕಿಷ್ ಅಶ್ವದಳ ಯುದ್ಧಕ್ಕಾಗಿ ತರಬೇತಿ ನಡೆಸುತ್ತಿರುವ ದೃಶ್ಯ 1917 ಮಾರ್ಚ್‌ನಲ್ಲಿ ಸೆರೆಹಿಡಿದಿರುವುದು.

ಸಂದೇಶವಾಹಕ ಶ್ವಾನ

9

ಹೊಸ ವಿದ್ಯುತ್‌ ಲೈನ್‌ ನೀಡಲು ಸಂದೇಶವಾಹಕ ಶ್ವಾನ ಸೆಪ್ಟೆಂಬರ್‌ 1917 ರಲ್ಲಿ ವಿದ್ಯುತ್‌ ತಂತ್ರಿ ಕೊಂಡೋಯ್ಯುತ್ತಿರುವಾಗ ಸೆರೆಹಿಡಿದ ಫೋಟೋ.

ಭಾರತದ ಆನೆ

10

1915 ರಲ್ಲಿ ಜರ್ಮನ್‌ನವರು ಭಾರತದ ಆನೆಯನ್ನು ಮರದ ದಿಮ್ಮಿಗಳನ್ನು ಸಾಗಿಸಲಿಕ್ಕೆ ಬಳಸಿಕೊಂಡಿದ್ದರು. ಅಲ್ಲದೇ ಯುದ್ದಕ್ಕೆ ಬಳಸಿಕೊಳ್ಳಲು ಸರ್ಕಸ್‌ ಮತ್ತು ಮೃಗಾಲಯದ ಪ್ರಾಣಿಗಳಿಗೂ ಸಹ ಬೇಡಿಕೆ ಇಟ್ಟಿದ್ದರಂತೆ.

ಫ್ರಾನ್ಸ್‌ ಸೈನಿಕರನ್ನು ರಕ್ಷಿಸಿದ ಪಾರಿವಾಳ

11

ಫೋಟೋದಲ್ಲಿ ಕಾಣುತ್ತಿರುವ ಈ ಪಾರಿವಾಳ ಮೊದಲನೇ ಮಹಾಯುದ್ಧ ಸಂದರ್ಭದಲ್ಲಿ ಫ್ರಾನ್ಸ್‌ನ ಸೈನಿಕರ ರಕ್ಷಣೆಗೆ ಹೆಚ್ಚು ಸಹಕಾರಿಯಾಗಿತ್ತಂತೆ. ಅಲ್ಲದೇ ಸಂದೇಶ ರವಾನೆಗೆ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿತಂತೆ.

ಬೆಲ್ಜಿಯಂ ಮಿಲಿಟರಿ ಪಾರಿವಾಳಗಳು

12

ಬೆಲ್ಜಿಯಂನ ಹೋಮ್‌ ಪಾರಿವಾಳಗಳು ತಮ್ಮ ಕಾಲಿಗೆ ಸಂದೇಶವನ್ನು ಕಟ್ಟಿಸಿಕೊಂಡು ಬರುತ್ತಿದ್ದವಂತೆ. ಅವುಗಳ ಸ್ಥಳಾಂತರದ ದೃಶ್ಯ.

ಪಾರಿವಾಳ

13

ಪರಿಣಾಮಕಾರಿಯಾಗಿ ಸಂದೇಶ ರವಾನೆಗೆ ಬಳಕೆಯಾಗುತ್ತಿದ್ದ ಪಾರಿವಾಳಗಳನ್ನು ಸೈನಿಕನೊಬ್ಬನು ಇನ್ನೊಬ್ಬ ಸೈನಿಕನ ವಿಕ್ಕರ್‌ ಬಾಸ್ಕೆಟ್‌ಗೆ ಹಾಕುತ್ತಿರುವುದು.

ಸಂದೇಶ ಅಟಾಚ್‌ ಮಾಡುತ್ತಿರುವುದು

14

ಪಶ್ಚಿಮ ಭಾಗದ ಬ್ರಿಟಿಷ್‌ ಟ್ರೂಫ್‌ನವರು 1917 ರಲ್ಲಿ ಪಾರಿವಾಳವೊಂದಕ್ಕೆ ಸಂದೇಶ ಅಟಾಚ್‌ ಮಾಡುತ್ತಿರುವಾಗ ತೆಗೆದ ಫೊಟೋ.

ಕುದುರೆ

15

1916 ರಲ್ಲಿ ಸ್ಫೋಟಗೊಂಡ ಬಾಂಬ್‌ನಿಂದ ಫೋಟೋದಲ್ಲಿರುವ ಕುದುರೆ ತನ್ನ ಪಾಟ್ನರ್‌ ಕುದುರೆಯನ್ನು ಕಳೆದುಕೊಂಡಾಗ ಬೇಸರಗೊಂಡು ಕಂಬಕ್ಕೆ ಗುದ್ದುತ್ತಿರುವುದು.ಇದನ್ನು ಫೋಟೋ ಸೆರೆಹಿಡಿದವರು ಹಾಗೆ ಬರೆದಿದ್ದರು ಎನ್ನಲಾಗಿದೆ.

ಬೆಕ್ಕು

16

6 ಇಂಚಿನ HMAS ಎನ್ಕೌಂಟರ್ ಗನ್‌ ಒಳಗಿಂದ ಬೆಕ್ಕೊಂದು ಇಣುಕಿದ ಚಿತ್ರ. ಯುದ್ಧ ಸಂದರ್ಭದಲ್ಲಿಯೂ ಮುಗ್ಧತೆಯ ಚಿತ್ರ ಸೆರೆ.

ಶ್ವಾನ ವ್ಯಾಗನ್‌ ಎಳೆಯುತ್ತಿರುವುದು

17

1914 ರಲ್ಲಿ ಬೆಲ್ಜಿಯಂ ನಿರಾಶ್ರಿತರ ಸರಕನ್ನು ಶ್ವಾನವೊಂದು ಎಳೆಯುತ್ತಿರುವ ದೃಶ್ಯ.

 ಡಿಸೆಂಬರ್‌ 1917

18

ಆಸ್ಟ್ರೇಲಿಯನ್‌ ಒಂಟೆ ದಳದ ಸೈನಿಕರು 1917 ರಲ್ಲಿ ಬೀರ್‌ಶೆಬಾದ ಶರಿಯಾ ಪ್ರದೇಶಕ್ಕೆ ಯುದ್ಧಕ್ಕೆ ಹೊರಟಿರುವ ದೃಶ್ಯ.

4 ವರ್ಷಗಳಲ್ಲಿ 8 ದಶಲಕ್ಷ ಕುದುರೆಗಳು ಮರಣ

19

ಮೊದಲನೇ ಮಹಾಯುದ್ಧದ ಸಂದರ್ಭದ 4 ವರ್ಷಗಳಲ್ಲಿ 8 ದಶಲಕ್ಷ ಕುದುರೆಗಳು ಮರಣ ಹೊಂದಿದ್ದವು. ಈ ಚಿತ್ರವು ಜರ್ಮನ್‌ ಪಶ್ಚಿಮ ಭಾಗದಲ್ಲಿ ಕುದುರೆಗಳು ಹಾಗೂ ಫಿರಂಗಿ ದಳದವರು ಮರಣ ಹೊಂದಿರುವ ದೃಶ್ಯ.

ಗ್ಯಾಸ್‌ ಮಾಸ್ಕ್‌

20

1918 ರಲ್ಲಿ ಸೈನಿಕನೊಬ್ಬನು ಗ್ಯಾಸ್‌ ಮಾಸ್ಕ್‌ ಹಾಕಿಕೊಂಡು ಕುದುರೆ ಹಿಡಿದು ನಿಂತಿರುವುದನ್ನು ಕ್ಯಾಮೆರಾದಲ್ಲಿ ಸೆರೆಹಿಡಿದ ಫೋಟೋ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
WWI in Photos: Animals That Went to War, Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot