Subscribe to Gizbot

ನೀವು ನೋಡಿರದ ಪ್ರಖ್ಯಾತ ಹಳೆಯ ಸೆಲೆಬ್ರಿಟಿಗಳ ಅಪರೂಪದ ಫೋಟೋಗಳು!

Written By:

ಸೆಲೆಬ್ರಿಟಿಗಳನ್ನ ಫೋಟೋದಲ್ಲಿ ಆಗಲಿ, ನೇರವಾಗಿ ಆಗಲಿ ನೋಡೋದು ಅಂದ್ರೆ ಯಾರಿಗೆ ತಾನೆ ಇಷ್ಟವಾಗಲ್ಲ.. ಖಂಡಿತ ಇಷ್ಟವಾಗುತ್ತೆ. ಸ್ಮಾರ್ಟ್‌ಫೋನ್‌ ಬಳಕೆ ಹೆಚ್ಚಾದ ನಂತರದಲ್ಲಿ ಇಂಟರ್ನೆಟ್‌ ಬಳಸುವ ಪ್ರತಿಯೊಬ್ಬರು ಸಹ ಇಂದು ದಿನನಿತ್ಯ ಎಲ್ಲಾ ಕ್ಷೇತ್ರದ ಸೆಲೆಬ್ರಿಟಿಗಳನ್ನ ನೋಡುತ್ತಿರುತ್ತಾರೆ. ಆದ್ರೆ ತೀರ ಹಳೆಯ ಸೆಲೆಬ್ರಿಟಿಗಳನ್ನು, ಅವರು ಫೋಟೋ ತೆಗೆಸಿಕೊಂಡ ಚಿತ್ರಗಳನ್ನ ಎಂದಿಗಾದ್ರು ನೋಡಿದ್ದೀರಾ? ಖಂಡಿತ ಇಲ್ಲ ಅನಿಸುತ್ತೆ.

ಐನ್‌ಸ್ಟೈನ್‌, ಚಾರ್ಲಿ ಚಾಪ್ಲಿನ್‌, ಮದರ್‌ ತೆರೆಸಾ ಇಂತಹ ಹಲವು ಪ್ರಖ್ಯಾತ ಸೆಲೆಬ್ರಿಟಿಗಳನ್ನು ಖಂಡಿತ ದೊಡ್ಡ ದೊಡ್ಡ ಸ್ಕ್ರೀನ್‌ಗಳಲ್ಲಂತು ನೋಡಿರುವುದಕ್ಕೆ ಸಾಧ್ಯವಿಲ್ಲ. ಹಾಗೆ ನೋಡೋಕು ಸಾಧ್ಯವಿಲ್ಲ. ಆದ್ರೆ ಇಂತಹ ಹಲವು ಸೆಲೆಬ್ರಿಟಿಗಳ ಅಪರೂಪದ ಹಳೆಯ ಫೋಟೋಗಳನ್ನು, ಆಫ್‌ ಬೀಟ್‌ನಲ್ಲಿ ಕ್ಯಾಪ್ಚರ್‌ ಮಾಡಿದವರು ಇಂದಿನ ಜನತೆ ನೋಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಸ್ಲೈಡರ್‌ ಕ್ಲಿಕ್ಕಸಿ ಪ್ರಖ್ಯಾತ ಸೆಲೆಬ್ರಿಟಿಗಳ ಅಪರೂಪದ ಹಳೆಯ ಫೋಟೋಗಳನ್ನು ನೋಡಿರಿ.

ನ್ಯೂಟನ್‌ ಹೊಸ ಭಾಷೆ ಆವಿಷ್ಕಾರ ಮಾಡಲು ಪ್ರಯತ್ನಿಸಿದ್ದರು!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಐನ್‌ಸ್ಟೈನ್‌

1

ಭಾಷೆಯೇ ಇಲ್ಲದೇ ಹಾಸ್ಯ ಮಾಡುತ್ತ ಪ್ರಖ್ಯಾತ ಹಾಸ್ಯಗಾರ ಎನಿಸಿಕೊಂಡ ಚಾರ್ಲಿ ಚಾಪ್ಲಿನ್‌'ರವರು ಐನ್‌ಸ್ಟೈನ್‌'ರೊಂದಿಗೆ ಇರುವ ಫೋಟೋ.

ಗಾಂಧೀಜಿ

2

ಚಾರ್ಲಿ ಚಾಪ್ಲಿನ್‌'ರೊಂದಿಗೆ ಗಾಂಧೀಜಿ.

ಮರ್ಲಿನ್‌ ಮನ್ರೊ

3

ಹೆಸರಾಂತ ನಟಿ ಮರ್ಲಿನ್‌ ಮನ್ರೊ ನೋಡಿಲ್ಲ ಈ ಫೋಟೋದಲ್ಲಿ ಚೆನ್ನಾಗಿ ನೋಡಿ. ಮರ್ಲಿನ್‌ ಮನ್ರೊ ಸಮ್ಮಿ ಡೇವಿಸ್‌ ಜೊತೆ ಶೂಟಿಂಗ್‌ ಸಮಯದಲ್ಲಿದ್ದಾಗ ತೆಗೆದ ಫೋಟೋ.

ರಾಣಿ 2ನೇ ಎಲಿಜಬೆತ್‌

4

1956 ರಲ್ಲಿ ಮರ್ಲಿನ್‌ ಮನ್ರೊ'ರವರು 2ನೇ ರಾಣಿ ಎಲಿಜಬೆತ್‌ ಜೊತೆ ಇರುವ ಫೋಟೋ.

ಮಾರ್ಟಿನ್‌ ಲೂಥರ್‌ ಕಿಂಗ್‌ ಜೂನಿಯರ್‌

5

ಅಮೆರಿಕದ ಮಾನವ ಹಕ್ಕುಗಳ ಹೋರಾಟಗಾರ ಮಾರ್ಟಿನ್‌ ಲೂಥರ್‌ ಕಿಂಗ್ ಜೂನಿಯರ್‌'ರವರು ಆಫ್ರಿಕಾ ಮೂಲದ ಮುಸ್ಲಿಂ ಮಿನಿಸ್ಟರ್ ಹಾಗೂ ಮಾನವ ಹಕ್ಕುಗಳ ಹೋರಾಟಗಾರರಾದ 'ಮಾಲ್ಕೊಮ್‌ ಎಕ್ಸ್‌' ಜೊತೆಯಲ್ಲಿರುವ ಫೋಟೋ.

ಮಾರ್ಟಿನ್‌ ಲೂಥರ್‌ ಕಿಂಗ್‌ ಜೂನಿಯರ್‌

6

ಅಮೆರಿಕದ ಸಿನಿಮಾ ನಟ ಹಾಗೂ ನಿರ್ದೇಶಕರಾದ ಮರ್ಲನ್‌ ಬ್ರ್ಯಾಂಡೊ ಜೊತೆಯಲ್ಲಿ 'ಮಾರ್ಟಿನ್‌ ಲೂಥರ್‌ ಕಿಂಗ್‌ ಜೂನಿಯರ್‌'ರವರು ಕ್ಯಾಮೆರಾಗೆ ಲುಕ್‌ ಕೊಟ್ಟಿದ್ದು ಹೀಗೆ.

 ಮೈಕೆಲ್‌ ಜಾಕ್ಸನ್‌

7

ಅಮೆರಿಕದ ಪಾಪ್‌ ತಾರೆ ಮೈಕೆಲ್‌ ಜಾಕ್ಸನ್‌'ರೊಂದಿಗೆ ಅಮೆರಿಕದ ಕುಸ್ತಿಪಟು ಹಾಗೂ ನಟರು ಆದ ಮಿಸ್ಟರ್‌ ಟಿ ಕಾಣಿಸಿಕೊಂಡ ಫೋಟೋ ಇದು.

ಮೈಕೆಲ್‌ ಜಾಕ್ಸನ್‌

8

ಅಮೆರಿಕದ ಸ್ಕ್ರೀನ್‌ರೈಟರ್ ಮತ್ತು ಸಿನೆಮಾ ನಿರ್ದೇಶಕರಾದ 'ಫ್ರ್ಯಾನ್ಸಿಸ್‌ ಫಾರ್ಡ್ ಕೊಪ್ಪೊಲ' ಹಾಗೂ ಅಮೆರಿಕದ ಸಿನಿಮಾ ನಿರ್ಮಾಪಕ 'ಜಾರ್ಜ್‌ ಲುಕಾಸ್‌'ರೊಂದಿಗೆ ಪಾಪ್‌ ತಾರೆ ಮೈಕೆಲ್‌ ಕ್ಯಾಮೆರಾಗೆ ಕಾಣಿಸಿದ್ದು ಹೀಗೆ.

ಮದರ್‌ ತೆರೆಸಾ

9

ಮದರ್ ತೆರೆಸಾ'ರವರು ಚಾರ್ಲ್ಸ್‌ನ ಮೊದಲ ಪತ್ನಿ ರಾಣಿ ಡಯಾನಾ ಜೊತೆಯಲ್ಲಿ ಕಾಣಿಸಿಕೊಂಡ ಫೋಟೋ.

ವಾಲ್ಟ್‌ ಡಿಸ್ನಿ

10

ಅಮೆರಿಕದ ಸಿನೆಮಾ ನಿರ್ಮಾಪಕ, ನಟರು ಆದ 'ವಾಲ್ಟ್‌ ಡಿಸ್ನಿ'ಯೊಂದಿಗೆ ಅಮೆರಿಕದ ಸಿನೆಮಾ ಮತ್ತು ಟಿವಿ ನಟಿ 'ಶಿರ್ಲಿ' ಬಾಲ್ಯದಲ್ಲಿದ್ದಾಗ ತೆಗೆದ ಫೋಟೋ.

ಬಾಬ್ ಮಾರ್ಲಿ ಮತ್ತು ಜಾಕ್ಸನ್

11

ಇಬ್ಬರು ಪ್ರಖ್ಯಾತ ಹಾಡುಗಾರರು, ಗಿಟಾರಿಸ್ಟ್‌ಗಳು, ಸಂಗೀತ ರಚನಾ ಕಾರರನ್ನು ಒಂದೇ ಫೋಟೋದಲ್ಲಿ ನೋಡಬಹುದು. ಅವರೇ ಬಾಬ್‌ ಮಾರ್ಲಿ ಮತ್ತು ಜಾಕ್ಸನ್‌ ಫೈವ್‌. ಈ ಫೋಟೋವನ್ನು 1975 ರಲ್ಲಿ ತೆಗೆಯಲಾಗಿದೆ.

ಶಾಕಿಲ್ಲೇ ಓನೀಲ್‌

12

ಅಮೆರಿಕದ ಪ್ರಖ್ಯಾತ ಬಾಸ್ಕೆಟ್‌ ಬಾಲ್‌ ಆಟಗಾರರಾದ ಶಾಕಿಲ್ಲೇ ಓನೀಲ್‌'ರವರು ಆಸ್ಟ್ರೀಯಾ ಮೂಲದ ಅಮೇರಿಕನ್‌ ನಟ, ಸಿನಿಮಾ ನಿರ್ಮಾಪಕ, ಬ್ಯುಸಿನೆಸ್‌ಮೆನ್‌ ಆದ 'ಅರ್ನಾಲ್ಡ್ ಶ್ವಾರ್ಜಿನೆಗ್ಗರ್' ಜೊತೆ ಇದ್ದಾಗ ಕ್ಯಾಪ್ಚರ್‌ ಮಾಡಿದ ಫೊಟೋ.

ಕ್ರಿಸ್ಟಫರ್‌ ರೀವೆ

13

ಸ್ಪೈಡರ್‌ ಮ್ಯಾನ್‌ ಆಗಿ ಕಾಣಸಿಕೊಂಡ ಅಮೇರಿಕದ ನಟ, ನಿರ್ದೇಶಕ, ಸಿನಿಮಾ ನಿರ್ಮಾಪಕದರಾದ ಕ್ರಿಸ್ಟಫರ್‌ ರೀವೆ'ರವರೊಂದಿಗೆ ಅಮೆರಿಕದ ಕಾಮಿಡಿ ನಟ ಡ್ಯಾನಿ ಡೆವಿಟೊ ಬ್ಲಾಕ್‌ ಅಂಡ್‌ ವೈಟ್‌ ಫೋಟೋದಲ್ಲಿ.

ಡೇವ್‌ ಗ್ರೊಲ್‌ ಮತ್ತು ಕರ್ಟ್‌ ಕೊಬೈನ್

14

ಫೇಮಸ್‌ ಮ್ಯೂಜೀಸಿಯನ್ ಎಂದೇ ಹೆಸರಾದ ಅಮೆರಿಕಾದ 'ಕರ್ಟ್ ಡೋನಾಲ್ಡ್‌ ಕೊಬೈನ್‌' 1994 ರಲ್ಲಿ ತೀರಿಕೊಂಡರು. ಇವರು ಮತ್ತೊಬ್ಬ ಫೇಮಸ್‌ ಮ್ಯೂಜೀಸಿಯನ್‌ ಡೇವಿಡ್‌ ಎರಿಕ್ 'ಡೇವ್‌' ರೊಂದಿಗೆ ಕಾಣಿಸಿಕೊಂಡಿದ್ದು ಹೀಗೆ.

ಲೂಯಿಸ್‌ ಆರ್ಮ್ಟ್ರಾಂಗ್

15

1970 ರಲ್ಲಿ ತೀರಿಕೊಂಡ ಪ್ರಖ್ಯಾತ ಸಂಗೀತ ರಚನೆಕಾರ ಮತ್ತು ಹಾಡುಗಾರರಾದ ಲೂಯಿಸ್ ಆರ್ಮ್ಟ್ರಾಂಗ್'ರವರು 'ಫಸ್ಟ್‌ ಲೇಡಿ ಆಫ್‌ ಸಾಂಗ್' ಎಂತಲೇ ಹೆಸರಾದ ಅಮೆರಿಕದ ಸಿಂಗರ್‌ 'ಎಲ್ಲ ಜೇನ್‌ ಫಿಟ್ಜ್‌ಗೆರಾಲ್ಡ್' ಆಡಿಯೋ ಸಮಯದಲ್ಲಿ ಇದ್ದಾಗ ಕ್ಯಾಪ್ಚರ್‌ ಮಾಡಿದ ಫೋಟೋ.

ಟಾಮ್‌ ಜಾನ್ಸ್‌

16

'ಟಾಮ್‌ ಜಾನ್ಸ್‌' ರವರು ವೇಲ್ಸ್‌ನ ಪ್ರಖ್ಯಾತ ಹಾಡುಗಾರ. 1960 ರ ಪ್ರಖ್ಯಾತ ಗಾಯಕರು. ಇವರು ಅಮೆರಿಕದ ಪ್ರಮುಖ ಸಾಂಸ್ಕೃತಿಕ ಐಕಾನ್ ಎನಿಸಿಕೊಂಡ ನಟ ಹಾಗೂ ಗಾಯಕರಾದ ಎಲ್ವಿಸ್‌ ಪ್ರೆಸ್ಲಿ'ಯೊಂದಿಗೆ ತಾವು ಯುವಕರಾಗಿದ್ದಾಗ ತೆಗೆಸಿಕೊಂಡ ಫೋಟೋ.

ಗ್ರೇಸ್‌ ಕೆಲ್ಲಿ

17

ಗ್ರೇಸ್‌ ಕೆಲ್ಲಿ 'ಮೊನಾಕೊ'ದ ರಾಣಿ. 3ನೇ ರೈನಿಯರ್‌ ರಾಜನನ್ನು ಮದುವೆ ಆಗುವ ಮೊದಲು ಅಮೆರಿಕದ ಹೆಸರಾಂತ ನಟಿಯರಲ್ಲಿ ಒಬ್ಬರಾಗಿದ್ದರು. ಗ್ರೇಸ್ ಕೆಲ್ಲಿ ಅಮೆರಿಕದಲ್ಲಿಯ ಪ್ರಖ್ಯಾತ ನಟ, ನಿರ್ಮಾಪಕ, ಮ್ಯೂಜೀಸಿಯನ್'ರೊಂದಿಗೆ ಕ್ಯಾಮೆರಾ ಹಿಡಿದು ನಿಂತಿದ್ದಾಗ ಕ್ಯಾಪ್ಚರ್‌ ಮಾಡಿದ ಫೋಟೊ.

ಜಾರ್ಜ್‌ ಹ್ಯಾರಿಸನ್‌

18

ಸಿನಿಮಾ ಸೆಲೆಬ್ರಿಟಿ ಜಾರ್ಜ್‌ ಹ್ಯಾರಿಸನ್‌ ಜೊತೆ ಬಾಬ್‌ ಮಾರ್ಲೆ ಇರುವ ಫೋಟೋ.

ಇಯಾನ್ ಫ್ಲೆಮಿಂಗ್ ಮತ್ತು ಸೀನ್ ಕಾನರಿ

19

ಇಯಾನ್ ಫ್ಲೆಮಿಂಗ್'ರವರು ' ಇಂಗ್ಲೀಷ್‌ ಲೇಖಕರು, ಪತ್ರಕರ್ತರು ಹಾಗೂ ಕಾದಂಬರಿ ಪರಿಣಿತರು. ಜೇಮ್ಸ್‌ ಬಾಂಡ್‌ ಸೀರೀಸ್‌ನ ಸ್ಪೈ ಕಾದಂಬರಿಗಳಿಗೆ ಹೆಸರುವಾಸಿ. ಇಯಾನ್‌ ಫ್ಲೆಮಿಂಗ್'ರವರು ಸ್ಕಾಟಿಸ್ ಹೆಸರಾಂತ ನಟ ಸೀನ್‌ ಕಾನರಿ'ರವರ ಜೊತೆ ಸಿನಿಮಾ ನಿರ್ಮಾಣ ಸಮಯದಲ್ಲಿದ್ದಾಗ ಕ್ಯಾಪ್ಚರ್‌ ಮಾಡಿದ ಫೋಟೋ.

ಜೇಮ್ಸ್‌ ಬ್ರೌನ್‌ ಮತ್ತು ಮಿಕ್‌ ಜಾಗ್ಗರ್‌

20

ಇಂಗ್ಲೀಷ್‌ ಹೆಸರಾಂತ ಗಾಯಕ 'ಮಿಕ್‌ ಜಾಗ್ಗರ್‌'ನೊಂದಿಗೆ ಮೊತ್ತೊಬ್ಬ ಅಮೆರಿಕದ ಫೇಮಸ್‌ ಸಿಂಗರ್‌ , ಗೀತ ರಚನೆಕಾರ, ರೆಕಾರ್ಡ್‌ ನಿರ್ಮಾಪಕ, ಡ್ಯಾನ್ಸರ್ ಹಾಗೂ ಬ್ಯಾಂಡ್‌ಲೀಡರ್‌ ಆದ ಜೇಮ್ಸ್‌ ಬ್ರೌನ್‌'ರೊಂದಿಗೆ 1964 ರಲ್ಲಿ ಕ್ಯಾಮೆರಾ ಕಣ್ಣಿಗೆ ಕಾರ್ಯಕ್ರಮದಲ್ಲಿ ಕಾಣಿಸಿದ್ದು ಹೀಗೆ.

ಫಿಡೆಲ್‌ ಕಾಸ್ಟ್ರೊ

21

ಕ್ಯೂಬಾದ ರಾಜಕಾರಣಿ ಹಾಗೂ 1959 ರಿಂದ 1976 ರವರೆಗೆ ರಿಪಬ್ಲಿಕ್‌ ಸರ್ಕಾರವನ್ನು ಆಳಿದ ಪ್ರಧಾನ ಮಂತ್ರಿಯೂ ಸಹ ಆಗಿದ್ದವರು ಫಿಡೆಲ್‌ ಕಾಸ್ಟ್ರೊ. ನಂತರ 1976 ರಿಂದ 2008 ರವರೆಗೆ ಕ್ಯೂಬಾದ ಅಧ್ಯಕ್ಚರು ಸಹ ಆಗಿದ್ದರು. ಇವರು ಮಾನವ ಹಕ್ಕುಗಳ ಹೋರಾಟಗಾರ ಮಾಲ್ಕಂ ಎಕ್ಸ್‌'ರೊಂದಿಗೆ ಕಾಣಿಸಿಕೊಂಡ ಫೋಟೋ.

ಜಿಮಿ ಹೆನ್‌ಡ್ರಿಕ್ಸ್‌

22

ಜೇಮ್ಸ್‌ ಮಾರ್ಷಲ್‌ 'ಜಿಮಿ' ಎಂದೇ ಪ್ರಖ್ಯಾತವಾಗಿದ್ದು, ಅಮೆರಿಕನ್‌ ರಾಕ್‌ ಗಿಟಾರಿಸ್ಟ್, ಗಾಯಕ ಹಾಗೂ ಗೀತೆ ರಚನಾಕಾರ. ‌ ಇವರು ಮಿಕ್‌ ಜಾಗ್ಗರ್ ಜೊತೆ ಇರುವ ಫೋಟೋ.

ರೇ ಚಾರ್ಲ್ಸ್‌

23

"The Genius" ಮತ್ತು "The High Priest of Soul" ಎಂದೇ ಹೆಸರು ಪಡೆದ ಹೆಸರಾಂತ ಗಾಯಕ 'ರೇ ಚಾರ್ಲ್ಸ್‌'. ಅವರೊಂದಿಗೆ ಜಾನ್ನಿ ಕ್ಯಾಶ್‌ ಇರುವ ಫೋಟೋ.

ಮಡೋನಾ

24

ಅಮೆರಿಕದ ಸಿಂಗರ್‌ 'ಮಡೋನಾ ಲೂಯಿಸ್ ಸಿಕೋನೆ' ಜೊತೆಯಲ್ಲಿ ರಾಪರ್‌ ಮ್ಯೂಜೀಸಿಯನ್‌ ಟುಪಕ್‌ ಶಕುರ್‌ಮತ್ತು ಸ್ಟಿಂಗ್.

ಇವರು ಯಾರು ?

25

'ಸ್ಟಾರ್ ವಾರ್ಸ್ ಟ್ರೈಲಾಜಿ'ನಲ್ಲಿ ನಟಿಸಿರುವ ಮೂಲ ಪಾತ್ರಧಾರಿಗಳು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

 

English summary
Here Are 31 Rare Old Photos Of Celebrities You Probably Haven’t Seen Yet. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot