ಸಂಚಾರಿ ಪೊಲೀಸರು ಹಿಡಿದರೆ ಇನ್ಮುಂದೆ ದುಡ್ಡು ಕೊಡದೆ ಹೋಗೋಕೆ ಆಗಲ್ಲ: ಯಾಕೆ ಅಂದ್ರಾ..?

ಇನ್ನು ಮುಂದೆ ಸಂಚಾರಿ ನಿಯಮ ಉಲ್ಲಂಘನೆ ಮಾಡಿದರೆ ಸ್ಥಳದಲ್ಲೇ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡು ಮೂಲಕ ದಂಡ ಹಣವನ್ನು ಪಾವತಿ ಮಾಡುವ ವ್ಯವಸ್ಥೆ ಜಾರಿಗೆ ಬರುತ್ತಿದೆ.

|

ಈ ಮೊದಲಿನಂತೆ ಬೆಂಗಳೂರಲ್ಲಿ ಟ್ರಾಫಿಕ್ ಪೊಲೀಸರು ಹಿಡಿದರೆ ಸಾರ್ ಸದ್ಯ ಜೇಬಿನಲ್ಲಿ ದುಡ್ಡಿಲ್ಲ ಬಿಟ್ಟು ಬಿಡಿ ಸಾರ್ ಎಂದು ಕೇಳಿಕೊಳ್ಳಲು ಸಾಧ್ಯವೇ ಇಲ್ಲ. ಕಾರಣ ಇನ್ನು ಮುಂದೆ ಸಂಚಾರಿ ನಿಯಮ ಉಲ್ಲಂಘನೆ ಮಾಡಿದರೆ ಸ್ಥಳದಲ್ಲೇ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡು ಮೂಲಕ ದಂಡ ಹಣವನ್ನು ಪಾವತಿ ಮಾಡುವ ವ್ಯವಸ್ಥೆ ಜಾರಿಗೆ ಬರುತ್ತಿದೆ.

ಸಂಚಾರಿ ಪೊಲೀಸರು ಹಿಡಿದರೆ ಇನ್ಮುಂದೆ ದುಡ್ಡು ಕೊಡದೆ ಹೋಗೋಕೆ ಆಗಲ್ಲ

ಓದಿರಿ: ಜಿಯೋ ಸಿಮ್, ಫೋನ್, ಡಿಟಿಹೆಚ್ ನಂತರ ಬರುತ್ತಿದೆ 'ಜಿಯೋ 4G ಲ್ಯಾಪ್‌ಟಾಪ್'

ಸಂಚಾರಿ ಪೊಲೀಸರು ಇಂದಿನ ದಿನಗಳಲ್ಲಿ ಡಿಜಿಟಲ್ ಆಗಿ ಆಪ್‌ಡೇಟ್ ಆಗುತ್ತಿದ್ದು, ಇನ್ನು ಮುಂದೆ ಸಂಚಾರಿ ನಿಯಮ ಉಲ್ಲಂಘನೆಯ ಸಂದರ್ಭದಲ್ಲಿ ವಾಹನ ಚಾಲಕರು ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡುಗಳಿಂದಲೇ ದಂಡವನ್ನು ಪಾವತಿ ಮಾಡಬಹುದಾಗಿದೆ. ಹಾಗಾಗಿ ಸಂಚಾರಿ ಪೊಲೀಸರು ಕ್ಯಾಷ್ ಲೆಸ್ ಆಗುತ್ತಿದ್ದಾರೆ.

ಈ ಹಿಂದೆ ಸಂಚಾರಿ ನಿಯಮ ಉಲ್ಲಂಘಿಸಿ ದಂಡ ಪಾವತಿ ಮಾಡದೆ ಓಡಾಡಿಕೊಂಡವರನ್ನು ಹುಡುಕಿ ದಂಡ ಹಾಕುತ್ತಿದ್ದ ಬ್ಲಾಕ್ ಬೆರ್ರಿ ಸಾಧನದ ಬದಲಿಗೆ ಪೊಲೀಸರ ಕೈಗೆ ಹೊಸ ಸಾಧನ ಬರಲಿದೆ. ಈ ಹೊಸ ಸಾಧನದಲ್ಲಿ ಕಾಮೆರಾ, ಪ್ರಿಂಟರ್, ಟಪ್ ಪಾಡ್ ಮತ್ತು ಕಾರ್ಡ್ ಸ್ವೈಪ್ ಸಹ ಮಾಡಬಹುದಾಗಿದೆ. ಹಾಗಾಗಿ ಜೇಬಿನಲ್ಲಿ ದುಡ್ಡಿಲ್ಲ ಎನ್ನುವ ನಿಮ್ಮ ವಾದ ಇನ್ನು ಮುಂದೆ ನಡೆಯುವುದಿಲ್ಲ.

ಸಂಚಾರಿ ಪೊಲೀಸರು ಹಿಡಿದರೆ ಇನ್ಮುಂದೆ ದುಡ್ಡು ಕೊಡದೆ ಹೋಗೋಕೆ ಆಗಲ್ಲ

ಓದಿರಿ: ಲೀಕ್ ಆಗಿದೆ ಜಿಯೋ ಡಿಟಿಹೆಚ್ ಸೆಟಪ್‌ ಬಾಕ್ಸ್: ಬೆಲೆ ಎಷ್ಟು..? ಇಲ್ಲಿದೇ ಸಂಪೂರ್ಣ ವಿವರ.!!!

ಹಾಗಾಗಿ ಸಂಚಾರಿ ನಿಯಮಗಳನ್ನು ಸರಿಯಾಗಿ ಪಾಲಿಸಿ, ಡಿಜಿಟಲ್ ಟೆಕ್ನಾಲಿಜಿಯ ಸಂಪೂರ್ಣ ಉಪಯೋಗವನ್ನು ಪಡೆಯಲು ಮುಂದಾಗಿರುವ ಸಂಚಾರಿ ಪೊಲೀಸರು ನಿಮ್ಮ ಮೇಲೆ ಯಾವಾಗಲು ಹದ್ದಿನ ಕಣ್ಣು ಇಟ್ಟಿರುತ್ತಾರೆ ಎಂದು ಮರೆಯಬೇಡಿ. ಹೈಟೆಕ್ ಕ್ಯಾಮೆರಾಗಳು ಸಂಚಾರ ಉಲ್ಲಂಘನೆಯ ಮೇಲೆ ಕಣ್ಣಿಟ್ಟಿರಲಿವೆ. ಸುರಕ್ಷಿತ ಚಾಲನೆ ನಿಮ್ಮದಾಗಿಸಿಕೊಳ್ಳಿ.

Best Mobiles in India

Read more about:
English summary
Erring motorists will no longer be able to use the excuse of lack of lower denomination notes to evade fines. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X