ಪ್ರಪಂಚದಲ್ಲಿರುವ ಅತಿ ಹೆಚ್ಚು ಬೆಲೆಯ ಮೊಬೈಲ್‌ಗಳು ಯಾವುವು ಗೊತ್ತೇ?

By Suneel
|

ಮೊಬೈಲ್‌ ಇಂದು ದಿನ ಬಳಕೆಯ ಅತ್ಯಾವಶ್ಯಕ ವಸ್ತು. ಪ್ರಪಂಚದಾದ್ಯಂತ ಅತಿ ಕಡಿಮೆ ಬೆಲೆಯಿಂದ ಮೊಬೈಲ್‌ ಬೆಲೆ ಇಷ್ಟೊಂದು ಬೆಲೆ ಇರುತ್ತಾ ಅನ್ನೋವಷ್ಟು ಹೆಚ್ಚು ಬೆಲೆಯ ಮೊಬೈಲ್‌ಗಳು ಇವೆ. ಮೊಬೈಲ್‌ಗಳು ಇಂದು ಪ್ರತಿಯೊಬ್ಬರ ಗೇಟ್‌ವೇ ಆಗಿವೆ.

ಒಂದು ಕಂಪ್ಯೂಟರ್‌ ಮಾಡುವ ಎಲ್ಲಾ ಕೆಲಸಗಳನ್ನು ನಿಮ್ಮ ಮೊಬೈಲ್ ಮಾಡುತ್ತಿದೆ ಎಂದಾದಲ್ಲಿ ಮೊಬೈಲ್‌ ಬೆಲೆ ಕಂಪ್ಯೂಟರ್‌ಗಿಂತ ಹೆಚ್ಚಾಗೆ ಇರುತ್ತದೆ. ಕೆಲವರು ಕ್ರೇಜ್‌ಗಾಗಿ ಕಾಸ್ಟ್ಲಿ ಮೊಬೈಲ್‌ ಬಳಕೆ ಮಾಡುವವರು ಇರುತ್ತಾರೆ. ಅಂದಹಾಗೆ ಪ್ರಪಂಚದಾದ್ಯಂತ ಇರುವ ಅತಿಹೆಚ್ಚು ಬೆಲೆಯ ಸ್ಮಾರ್ಟ್‌ಫೋನ್‌ಗಳು ಯಾವುವು ಗೊತ್ತಾ? ಬಹುಶಃ ತಿಳಿದಿರೊಲ್ಲ. ಇಂದಿನ ಲೇಖನದಲ್ಲಿ ಪ್ರಪಂಚದಾದ್ಯಂತ ಇರುವ ಅತಿ ಹೆಚ್ಚು ಬೆಲೆಯ ಮೊಬೈಲ್‌ಗಳು ಯಾವುವು ಎಂದು ತಿಳಿಯಿರಿ.

ಭಾರತದಲ್ಲಿ ಬಜೆಟ್ ಬೆಲೆ ರೂ.6,999 ಕ್ಕೆ 'ಲೆನೊವೊ ವೈಬ್ ಕೆ5' ಸ್ಮಾರ್ಟ್‌ಫೋನ್‌

#10

#10

ವರ್ಚ್ಯು ಮೊಬೈಲ್‌ ಪ್ಲಾಟಿನಂನಿಂದ ತಯಾರಿಸಿದ ಪ್ರಖ್ಯಾತ ಹ್ಯಾಂಡ್‌ಸೆಟ್‌ ಆಗಿದ್ದು, ಅತಿಹೆಚ್ಚು ಬೆಲೆಯ ಸ್ಮಾರ್ಟ್‌ಫೋನ್‌ಗಳ ಪಟ್ಟಿಯಲ್ಲಿದೆ. ವಿಶೇಷ ಅಂದ್ರೆ ವರ್ಚ್ಯು ತಯಾರಿಕೆಗಾಗಿ ಯಾವುದೇ ಮಷಿನ್ ಬಳಸದೇ ಕೈಗಳಿಂದಲೇ ವ್ಯವಸ್ಥೆಗೊಳಿಸಲಾಗಿದೆ. ಮೊಬೈಲ್‌ ಅನ್ನು ಫ್ಯಾನ್ಸಿ ವಜ್ರದಿಂದ ಡೆಕೋರೇಟ್‌ ಮಾಡಲಾಗಿದೆ. ಕೇವಲ 200 ಸೆಟ್‌ಗಳನ್ನು ಮಾತ್ರ ತಯಾರಿಸಲಾಗಿತ್ತು. ಈ ಮೊಬೈಲ್‌ ಮಾರುಕಟ್ಟೆಗೆ ಬಂದಾಗಿನ ಬೆಲೆ $ 88,000

#9

#9

ಐಫೋನ್ ಪ್ರಿನ್ಸೆಸ್ ಪ್ಲಸ್ ಇತರೆ ಆಪಲ್‌ ಮೊಬೈಲ್‌ಗಳಿಗಿಂತ ಹೆಚ್ಚು ವ್ಯತ್ಯಾಸವೇನು ಇಲ್ಲಾ. ಆದರೆ ಇದು ಪ್ರಪಂಚದಾದ್ಯಂತದ ಅತಿ ಹೆಚ್ಚು ಬೆಲೆಯ ಮೊಬೈಲ್‌ ಆಗಿದೆ. ಈ ಐಫೋನ್‌ ಅನ್ನು ಪ್ರಖ್ಯಾತ ವಿನ್ಯಾಸಗಾರ ಆಸ್ಟ್ರಿಯಾದ ಪೀಟರ್‌ ಎಲಾಯ್ಸನ್ ವಿನ್ಯಾಸ ಮಾಡಿದ್ದಾರೆ. ಇದರಲ್ಲಿ 138 ಪ್ರಿನ್ಸೆಸ್‌ ಕಟ್‌ ಮತ್ತು 180 ಬ್ರಿಲಿಯಂಟ್‌ ಕಟ್‌ ಡೈಮೆಂಡ್‌ ಅನ್ನು ಹೊಂದಿದೆ. 'ಐಫೋನ್ ಪ್ರಿನ್ಸೆಸ್ ಪ್ಲಸ್' ಮಾರುಕಟ್ಟೆಗೆ ಬಂದಾಗಿನ ಬೆಲೆ $ 176.400.

#8

#8

ಪ್ರಪಂಚದ ಅತಿ ಹೆಚ್ಚು ಬೆಲೆಯ ಸ್ಮಾರ್ಟ್‌ಫೋನ್‌ಗಳಲ್ಲಿ ಸೋನಿ ಎರಿಕ್ಸನ್ಸ್‌ ಬ್ಲಾಕ್‌ ಡೈಮೆಂಡ್‌ ಸಹ ಒಂದು. 'ಜಾರೆನ್‌ ಘೋ' ಸೋನಿ ಮೊಬೈಲ್‌ಗೆ ಸ್ಟೈಲಿಶ್‌ ವಿನ್ಯಾಸ ನೀಡಿದರು. ಮಿರರ್‌ ಡೀಟೈಲಿಂಗ್‌, ಪಾಲಿಕಾರ್ಬೋನೇಟ್‌ ಮಿರರ್‌, ಆರ್ಗಾನಿಕ್‌ ಎಲ್‌ಇಡಿ ಟೆಕ್ನಾಲಜಿ ಫೀಚರ್ ಹೊಂದಿದೆ. ಮಾರುಕಟ್ಟೆಗೆ ಬಂದಾಗಿನ ಬೆಲೆ $300,000.

#7

#7

ಏಳನೇ ಅತಿ ಹೆಚ್ಚು ಬೆಲೆಯ ಸ್ಮಾರ್ಟ್‌ಫೋನ್‌ 'ವರ್ಚ್ಯು ಸಿಗ್ನೇಚರ್‌ ಕೋಬ್ರಾ'. ಈ ಮೊಬೈಲ್‌ ಅನ್ನು ಫ್ರೆಂಚ್‌ ಆಭರಣ ವಿನ್ಯಾಸಕಾರ ಭೌಛೆರನ್‌ ವಿನ್ಯಾಸಗೊಳಿಸಿದ್ದಾರೆ.

#6

#6

ಗ್ರೆಸ್ಸೋ ಟ್ರೆಡಿಶನಲ್‌ ಹ್ಯಾಂಡ್‌ಸೆಟ್‌ ಅನ್ನು 'ಲಕ್ಸಾರ್ ಲಾಸ್ ವೇಗಾಸ್ ಜಾಕ್ಪಾಟ್' ಎಂತಲೇ ಕರೆಯುತ್ತಾರೆ. 2005 ರಲ್ಲಿ ಸ್ವಿಟ್ಜರ್ಲ್ಯಾಂಡ್‌fನಲ್ಲಿ ಬಿಡುಗಡೆಯಾಯಿತು. 180 ಗ್ರಾಂ ಶುದ್ಧ ವಜ್ರದಿಂದ ಅಭಿವೃದ್ದಿಪಡಿಸಲಾಗಿತ್ತು. 200 ವರ್ಷದ ಹಳೆಯ ಆಫ್ರಿಕ ಬ್ಯಾಕ್‌ವುಡೆನ್‌ನಿಂದ ಹಿಂಭಾಗದ ಪ್ಯಾನೆಲ್‌ ರಚಿಸಲಾಗಿತ್ತು. ಇದರ ಅಂದಿನ ಬೆಲೆ $1 ಮಿಲಿಯನ್.

#5

#5

ಡೈಮಂಡ್ ಕ್ರಿಪ್ಟೋ ಸ್ಮಾರ್ಟ್‌ಫೋನ್‌ ವಿಂಡೋಸ್‌ ಸಿಇ ಆಧಾರಿತವಾಗಿದೆ. ಈ ಸ್ಮಾರ್ಟ್‌ಫೋನ್‌ ಅನ್ನು ಸಹ ಪ್ರಖ್ಯಾತ ವಿನ್ಯಾಸಗಾರ ಪೀಟರ್‌ ಅಲಾಯ್ಸನ್‌ ಡಿಸೈನ್‌ ಮಾಡಿದ್ದಾರೆ. ಮಾರುಕಟ್ಟೆಗೆ ಬಂದ ಬೆಲೆ $1.3 ಮಿಲಿಯನ್‌. ಹೊಳೆಯುವ 50 ವಜ್ರಗಳನ್ನು ಮತ್ತು 10 ನೀಲಿ ವಜ್ರಗಳನ್ನು ಹೊಂದಿಸಲಾಗಿದೆ. ಸ್ಮಾರ್ಟ್‌ಫೋನ್‌ ಕದಿಯುವಿಕೆಯಿಂದ ಸಂಪೂರ್ಣ ಸುರಕ್ಷೆ ಇದೆ.

#4

#4

ಗೋಲ್ಡ್‌ವಿಶ್‌ 'ಲಿ ಮಿಲಿಯನ್‌' ಅನ್ನು ಪ್ರಖ್ಯಾತ ವಿನ್ಯಾಸಗಾರ 'ಎಮ್ಮಾನ್ಯೂಯೆಲ್‌ ಗಿಯಟ್‌' ಅಭಿವೃದ್ದಿಪಡಿಸಿದ್ದಾರೆ. ಗಿನ್ನೆಸ್‌ ವರ್ಲ್ಡ್‌ ರೆಕಾರ್ಡ್‌ ಪ್ರಶಸ್ತಿ ಪಡೆದಿದೆ. 2006 ರಲ್ಲಿ ಅತಿ ಹೆಚ್ಚು ಬೆಲೆಯ ಸ್ಮಾರ್ಟ್‌ಫೋನ್‌ ಎಂದು ಗಿನ್ನೆಸ್ ರೆಕಾರ್ಡ್‌ ಮಾಡಿದ 'ಲಿ ಮಿಲಿಯನ್‌' ಅಂದಿನ ಬೆಲೆ $ 1.3 ಮಿಲಿಯನ್‌. 18K ಬಿಳಿ ವಜ್ರ ಮತ್ತು 20 ಕ್ಯಾರೇಟ್‌ VVS1 ವಜ್ರದಿಂದ ವಿನ್ಯಾಸಗೊಂಡಿದೆ.

#3

#3

ಮೂರನೇ ಅತಿ ಹೆಚ್ಚು ಬೆಲೆಯ ಸ್ಮಾರ್ಟ್‌ಫೋನ್‌ ಎಂಬ ಹೆಗ್ಗಳಿಕೆಗೆ 'ಐಫೋನ್‌ 3G ಕಿಂಗ್ಸ್‌ ಬಟನ್' ಹೆಸರುವಾಸಿಯಾಗಿದೆ. ಐಫೋನ್‌ನಲ್ಲಿ 138 ವಜ್ರಗಳನ್ನು ಇನ್‌ಸ್ಟಾಲ್‌ ಮಾಡಿದ್ದು, ಇದರ ಬೆಲೆ $2.4 ಮಿಲಿಯನ್‌. ಅಲ್ಲದೇ 6.6 ಕ್ಯಾರೇಟ್‌ನ ವಜ್ರವನ್ನು ಸೌಂದರ್ಯವಾಗಿ ಕಾಣಲು ಹೋಮ್‌ ಬಟನ್‌ನಲ್ಲಿ ವ್ಯವಸ್ಥೆಗೊಳಿಸಲಾಗಿದೆ.

#2

#2

'ಸುಪ್ರೀಂ ಐಫೋನ್‌ 3G' ಬೆಲೆ $ 3,200,000. ಪ್ರಪಂಚದಲ್ಲಿಯೇ ಎರಡನೇ ಅತಿ ಹೆಚ್ಚು ಬೆಲೆಯ ಫೋನ್‌ನ ಅತ್ಯುತ್ತಮ ಫೀಚರ್ ಎಂದರೆ 271 ಗ್ರಾಂ 22K ಶುದ್ಧ ವಜ್ರದಿಂದ ಇದನ್ನು ಅಭಿವೃದ್ದಿ ಪಡಿಸಲಾಗಿದೆ. ಸ್ಕ್ರೀನ್‌ ಅನ್ನು 1 ಕ್ಯಾರೇಟ್‌ ವಜ್ರದಿಂದ ಟ್ರಿಮ್‌ ಮಾಡಲಾಗಿದೆ. ಹೋಮ್‌ ಬಟನ್‌ ಅನ್ನು 7.1 ಕ್ಯಾರೇಟ್‌ ವಜ್ರದಿಂದ ಕವರ್‌ ಮಾಡಲಾಗಿದೆ.

#1

#1

ಪ್ರಪಂಚ ಮೊದಲನೇ ಅತಿಹೆಚ್ಚು ಬೆಲೆಯ ಫೋನ್‌ '32GB ಐಫೋನ್'. 4 ಡೈಮೆಂಡ್‌ ರೋಸ್ ವ್ಯವಸ್ಥೆಗೊಳಿಸಲಾಗಿದೆ. ಇದರ ಬೆಲೆ $ 8 ಮಿಲಿಯನ್‌. ಫೋನ್‌ ಅನ್ನು ರೋಸ್‌ನಿಂದ ಮಾಡಲ್ಪಟ್ಟಿದ್ದು, 500 ವಯಕ್ತಿಕ ದೋಷಪೂರಿತ ವಜ್ರಗಳನ್ನು ಅಳವಡಿಸಲಾಗಿದೆ. ನಾವಿಗೇಷನ್‌ ಬಟನ್ ಪ್ರಾಟಿನಂನಿಂದ ಮಾಡಲ್ಪಟ್ಟಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಭಾರತದಲ್ಲಿ ಬಜೆಟ್ ಬೆಲೆ ರೂ.6,999 ಕ್ಕೆ 'ಲೆನೊವೊ ವೈಬ್ ಕೆ5' ಸ್ಮಾರ್ಟ್‌ಫೋನ್‌ಭಾರತದಲ್ಲಿ ಬಜೆಟ್ ಬೆಲೆ ರೂ.6,999 ಕ್ಕೆ 'ಲೆನೊವೊ ವೈಬ್ ಕೆ5' ಸ್ಮಾರ್ಟ್‌ಫೋನ್‌

ಐಫೋನ್ 8 ಅನ್ವೇಷಿಸಿದ್ದು ಸ್ಟೀವ್ ಜಾಬ್ ಅಲ್ಲವಂತೆ! ಏನಿದು ವದಂತಿ ಐಫೋನ್ 8 ಅನ್ವೇಷಿಸಿದ್ದು ಸ್ಟೀವ್ ಜಾಬ್ ಅಲ್ಲವಂತೆ! ಏನಿದು ವದಂತಿ

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
10 Most Expensive Mobile Phones in the World. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X