ಭಾರತದಲ್ಲಿ ಬಜೆಟ್ ಬೆಲೆ ರೂ.6,999 ಕ್ಕೆ 'ಲೆನೊವೊ ವೈಬ್ ಕೆ5' ಸ್ಮಾರ್ಟ್‌ಫೋನ್‌

By Suneel
|

ಭಾರತದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್‌ ಮತ್ತು ಇತರೆ ದೇಶಿ ಹ್ಯಾಂಡ್‌ಸೆಟ್‌ ತಯಾರಕರ ನಡುವೆ ಹೆಚ್ಚು ನಂಬಿಕಾರ್ಹ ಬ್ರ್ಯಾಂಡ್‌ ಎಂದರೆ ಚೀನಾ ಮೂಲದ ಲೆನೊವೊ. ಬೀಜಿಂಗ್‌ ಮೂಲದ ಹ್ಯಾಂಡ್‌ಸೆಟ್‌ ತಯಾರಕ ಕಂಪನಿ ಲೆನೊವೊ 'ಮೊಟೊ ಝಡ್‌(Moto Z) ಸ್ಮಾರ್ಟ್‌ಫೋನ್‌ ನಂತರ ತನ್ನ 'ಲೆನೊವೊ ವೈಬ್ ಕೆ5 (Lenovo Vibe K5)' ಸ್ಮಾರ್ಟ್‌ಫೋನ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಈ ಹಿಂದೆ ಮಾರ್ಚ್‌ನಲ್ಲಿ ಲೆನೊವೊ 'ವೈಬ್‌ ಕೆ5 ಪ್ಲಸ್‌' ಸ್ಮಾರ್ಟ್‌ಫೋನ್‌ ಅನ್ನು ಬೆಲೆ ರೂ.8,499 ಕ್ಕೆ ಬಿಡುಗಡೆ ಮಾಡಿತ್ತು. ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಬಜೆಟ್‌ ಸ್ಪರ್ಧೆಯನ್ನು ಅರಿತ ಕಂಪನಿ ಈಗ 'ಲೆನೊವೊ ವೈಬ್‌ ಕೆ5' ಅನ್ನು ಕೇವಲ ಬೆಲೆ ರೂ.6,999 ಕ್ಕೆ ಅಮೆಜಾನ್‌ ಇಂಡಿಯಾದಲ್ಲಿ ನೀಡಿದೆ.

ಶ್ಯೋಮಿ ರೆಡ್‌ಮಿ ನೋಟ್‌ 3, ಲಿ 1s ಎಕೊ ಮತ್ತು ಇತರೆ ಸ್ಮಾರ್ಟ್‌ಫೋನ್‌ಗಳೊಂದಿಗೆ ಭಾರತದಲ್ಲಿ ಲೆನೊವೊ ಕಂಪನಿ ನೇರವಾಗಿ 'ವೈಬ್‌ ಕೆ5' ಬಿಡುಗಡೆಯೊಂದಿಗೆ ನೇರವಾಗಿ ಸ್ಪರ್ಧೆಗೆ ಇಳಿದಿದೆ. ಆಕರ್ಷಕವಾಗಿರುವ 'ಲಿನೊವೊ ವೈಬ್‌ ಕೆ5' ಸ್ಮಾರ್ಟ್‌ಫೋನ್‌ ಬೆಲೆ ರೂ 6,999 ಕಡಿಮೆ ಬೆಲೆಯಿಂದ ಎಲ್ಲರನ್ನೂ ಆಕರ್ಷಿಸುತ್ತಿದೆ. ಹಾಗೆಯೇ ತನ್ನ ಆಕರ್ಷಕ ಫೀಚರ್‌ಗಳನ್ನು ಏನನ್ನು ಹೊಂದಿದೆ ಎಂದು ಲೇಖನದ ಸ್ಲೈಡರ್‌ ಓದಿ ತಿಳಿಯಿರಿ.

'ರೊಬೊಹೊನ್' ರೊಬೋಟ್ ಮೊಬೈಲ್‌ ಬಂತೂ: ಮಾತನಾಡುವ ಸ್ಮಾರ್ಟ್‌ಫೋನ್‌

1

1

'ವೈಬ್‌ ಕೆ5' ಸ್ಮಾರ್ಟ್‌ಫೋನ್‌ ಲೆನೊವೊ ಬಿಗ್‌ ಬ್ರದರ್‌ ಸ್ಮಾರ್ಟ್‌ಫೋನ್‌ 'ಲಿನೊವೊ ವೈಬ್‌ ಕೆ5 ಪ್ಲಸ್‌' ಡಿಸೈನ್‌ ಹೊಂದಿದ್ದು, ಪ್ಲಾಸ್ಟಿಕ್‌ ಮತ್ತು ಮೆಟಲ್‌ ಬ್ಲೆಂಡಿಂಗ್ ಗುಣ ಹೊಂದಿದೆ. 'ವೈಬ್‌ ಕೆ5' ಪ್ಲಾಟಿನಂ ಸಿಲ್ವರ್‌, ಷಾಂಪೇನ್ ಗೋಲ್ಡ್, ಮತ್ತು ಗ್ರ್ಯಾಫೈಟ್ ಗ್ರೇ ಬಣ್ಣಗಳಲ್ಲಿ ಬಂದಿದೆ.

2

2

'ವೈಬ್‌ ಕೆ5 ' 5 ಇಂಚಿನ HD ಐಪಿಎಸ್‌ ಡಿಸ್‌ಪ್ಲೇ ಜೊತೆಗೆ 1280*720 ಪಿಕ್ಸೆಲ್‌ ರೆಸಲ್ಯೂಶನ್‌ ಹೊಂದಿದೆ. 180 ಡಿಗ್ರಿ ವೈಡ್‌ ಆಂಗೆಲ್‌ ವೀಕ್ಷಣೆ ನೀಡುತ್ತದೆ.

3

3

'ಲೆನೊವೊ ವೈಬ್‌ ಕೆ5', ಆಕ್ಟಾ ಕೋರ್‌ ಕ್ವಾಲ್‌ಕಂ ಸ್ನಾಪ್‌ಡ್ರಾಗನ್‌ 415 ಪ್ರೊಸೆಸರ್ಸ್‌ ಕ್ಲಾಕ್ಡ್‌ 1.4GHz ಜೊತೆಗೆ ಅಡ್ರೆನೊ 405 ಜಿಪಿಯು ನೊಂದಿಗೆ ರನ್‌ ಆಗುತ್ತದೆ. ಪ್ರೊಸೆಸರ್ಸ್‌ ಶೀಘ್ರ ಚಾರ್ಜ್‌ ಆಗಲು ಅನುಕೂಲವಾಗಿದೆ.

4

4

2GB RAM, 16GB ROM ಹೊಂದಿದ್ದು, ಮೈಕ್ರೋ ಎಸ್‌ಡಿ ಕಾರ್ಡ್‌ ಮೂಲಕ 32GB ಸ್ಟೋರೇಜ್‌ ಸಾಮರ್ಥ್ಯ ಹೆಚ್ಚಿಸಬಹುದು.

5

5

'ಲೆನೊವೊ ವೈಬ್‌ ಕೆ5' 13MP ಹಿಂಭಾಗ ಕ್ಯಾಮೆರಾ ಹೊಂದಿದ್ದು, LED ಫ್ಲ್ಯಾಶ್‌ನೊಂದಿಗೆ 1080p ವೀಡಿಯೊ ರೆಕಾರ್ಡಿಂಗ್‌ ಮಾಡಬಹುದಾಗಿದೆ. 5MP ಮುಂಭಾಗ ಕ್ಯಾಮೆರಾ ಹೊಂದಿದೆ.

6

6

ಆಂಡ್ರಾಯ್ಡ್ 5.1 ಲಾಲಿಪಪ್‌ ಓಎಸ್‌ ಹೊಂದಿದ್ದು, ಮುಂದಿನ ದಿನಗಳಲ್ಲಿ ಆಂಡ್ರಾಯ್ಡ್‌ 6.0 ಮಾರ್ಷ್‌ಮಲ್ಲೋ ಓಎಸ್‌ಗೆ ಅಪ್‌ಗ್ರೇಡ್‌ ಆಗಬಲ್ಲದು.

7

7

4G LTE, ವೈ-ಫೈ 802.11b/g/n, ಬ್ಲೂಟೂತ್‌ 4.1, ಜಿಪಿಎಸ್‌, 3.5mm ಆಡಿಯೋ ಜಾಕ್‌, ಎಫ್‌ಎಂ ರೇಡಿಯೋ ಹೊಂದಿದೆ. ಅಲ್ಲದೇ ಡಾಲ್‌ಬೈ ಆಡಿಯೋ ಜೊತೆಗೆ ಸ್ಟೀರಿಯೊ ಸ್ಪೀಕರ್‌ ಸಹ ಹೊಂದಿದೆ.

8

8

'ಲೆನೊವೊ ವೈಬ್‌ ಕೆ5' 2750mAh ಬ್ಯಾಟರಿ ಹೊಂದಿದ್ದು, ಕ್ವಾಲ್ಕಂ ಕ್ವಿಕ್‌ ಚಾರ್ಜರ್ 2.0 ಸಪೋರ್ಟ್‌ ಮಾಡುತ್ತದೆ.

9

9

'ಲೆನೊವೊ ವೈಬ್ ಕೆ5' Amazon.in ನಲ್ಲಿ ಬೆಲೆ ರೂ. 6,999 ಗೆ ಜೂನ್‌ 22 ರಿಂದ ಖರೀದಿಸಬಹುದಾಗಿದ್ದು, ರಿಜಿಸ್ಟ್ರೇಷನ್‌ ಪ್ರಾರಂಭವಾಗಿದೆ.

10

10

ಶ್ಯೋಮಿ ರೆಡ್‌ಮಿ ನೋಟ್‌ 3, ಲಿ 1s ಎಕೊ, ಮೊಟೊರೊಲಾ ಮೊಟೊ ಜಿ3 ಮತ್ತು ಇತರೆ ಸ್ಮಾರ್ಟ್‌ಫೋನ್‌ಗಳೊಂದಿಗೆ ಮಾರುಕಟ್ಟೆಯಲ್ಲಿ 'ಲೆನೊವೊ ವೈಬ್‌ ಕೆ5' ಸ್ಪರ್ಧೆಗೆ ಇಳಿದಿದೆ.

Best Mobiles in India

English summary
Lenovo Vibe K5 launched at Rs 6,999; first Amazon flash sale on June 22. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X